ದಕ್ಷಿಣದ ಕಾಶಿ – ಗೋಕರ್ಣ

ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣ, ಕುಮಟಾದಿಂದ ಸುಮಾರು 33 ಕಿ.ಮೀ. ಹಾಗೂ ಅಂಕೋಲಾದಿಂದ 27 ಕಿ.ಮೀ. ದೂರದಲ್ಲಿದೆ. ಇಲ್ಲಿರುವ ಶ್ರೀ ಮಹಾಬಲೇಶ್ವರ ದೇವಾಲಯಕ್ಕೆ ಸುಮಾರು 1,500 ವರ್ಷಗಳ ಇತಿಹಾಸವಿದ್ದು, ಇದು “ದಕ್ಷಿಣದ ಕಾಶಿ” ಎಂಬ ಹೆಸರಿನಿಂದ ಪ್ರಸಿದ್ಧವಾಗಿದೆ. ಕಾಶಿಯ ವಿಶ್ವನಾಥನಷ್ಟೇ ಪವಿತ್ರ ಕ್ಷೇತ್ರವೆಂದು ಭಕ್ತರು ಇದನ್ನು ಪರಿಗಣಿಸುತ್ತಾರೆ. ಮಹಾಭಾರತ ಮತ್ತು ರಾಮಾಯಣದಲ್ಲಿಯೂ ಈ ಕ್ಷೇತ್ರದ ಉಲ್ಲೇಖವಿದೆ ಎಂದು ನಂಬಲಾಗುತ್ತದೆ. ದೇವಾಲಯದ ಶಿವಲಿಂಗವು ಸುಮಾರು ಆರು ಅಡಿ ಎತ್ತರ ಹೊಂದಿದ್ದು, ದೇವಾಲಯ ನಿರ್ಮಾಣದಲ್ಲಿ ಬಿಳಿ ಗ್ರಾನೈಟ್ ಕಲ್ಲು ಬಳಸಲಾಗಿದೆ. ಇಂದಿಗೂ ಭಕ್ತರು ಮೊದಲು ಗೋಕರ್ಣ ಕಡಲತೀರದಲ್ಲಿ ಪವಿತ್ರ ಸ್ನಾನ ಮಾಡಿ, ಬಳಿಕ ಮಹಾಗಣಪತಿಯ ದರ್ಶನ ಪಡೆದು, ನಂತರ ಮಹಾಬಲೇಶ್ವರ ಆತ್ಮಲಿಂಗದ ದರ್ಶನ ಪಡೆಯುವುದು ಸಂಪ್ರದಾಯವಾಗಿದೆ.

ರಾವಣ, ಆತ್ಮಲಿಂಗ ಮತ್ತು ಗಣಪತಿಯ ಪೌರಾಣಿಕ ಕಥೆ

ಗೋಕರ್ಣದ ಮಹಾಗಣಪತಿ ದೇವಸ್ಥಾನದ ಮಹತ್ವವು ಶ್ರೀ ಮಹಾಬಲೇಶ್ವರ ದೇವಸ್ಥಾನದ ಆತ್ಮಲಿಂಗದ ಪೌರಾಣಿಕ ಕಥೆಯೊಂದಿಗೆ ಅವಿನಾಭಾವವಾಗಿ ಬೆಸೆದುಕೊಂಡಿದೆ. ಪುರಾಣಗಳ ಪ್ರಕಾರ, ರಾವಣನು ಪರಮೇಶ್ವರನಿಂದ ಆತ್ಮಲಿಂಗವನ್ನು ಪಡೆದು ಲಂಕೆಗೆ ಕೊಂಡೊಯ್ಯುತ್ತಿದ್ದಾಗ, ದೇವತೆಗಳು ಅವನ ಶಕ್ತಿ ಅಪಾರವಾಗುವುದನ್ನು ತಡೆಯಲು ಗಣಪತಿಯನ್ನು ಬಾಲ ಬ್ರಹ್ಮಚಾರಿಯ ರೂಪದಲ್ಲಿ ಕಳುಹಿಸಿದರು. ಸಂಧ್ಯಾವಂದನೆಗಾಗಿ ಆತ್ಮಲಿಂಗವನ್ನು ಕ್ಷಣಮಾತ್ರ ಹಿಡಿದುಕೊಳ್ಳುವಂತೆ ರಾವಣ ಗಣಪತಿಗೆ ನೀಡಿದಾಗ, ಗಣಪತಿ ಅದನ್ನು ಗೋಕರ್ಣದಲ್ಲೇ ಭೂಮಿಗೆ ಪ್ರತಿಷ್ಠಾಪಿಸಿದನು. ಇದರಿಂದ ಕೋಪಗೊಂಡ ರಾವಣನು ಗಣಪತಿಯ ತಲೆಗೆ ಬಲವಾಗಿ ಹೊಡೆದನೆಂದು ಪುರಾಣಗಳು ಹೇಳುತ್ತವೆ. ಆ ಹೊಡೆತದ ಗುರುತು ಇಂದಿಗೂ ಮಹಾಗಣಪತಿ ವಿಗ್ರಹದ ತಲೆಯ ಮೇಲೆ ಕಾಣಬಹುದಾಗಿದೆ.

ಈ ದೇವಾಲಯದ ವಿಶೇಷತೆ ಏನು?

ಇತಿಹಾಸಕಾರರ ಅಭಿಪ್ರಾಯದಂತೆ, ಈ ದೇವಾಲಯವು ಕ್ರಿ.ಶ. 3ನೇ ಅಥವಾ 4ನೇ ಶತಮಾನದಲ್ಲಿ ನಿರ್ಮಾಣಗೊಂಡಿರಬಹುದು. ಇಂದಿಗೂ ಇಲ್ಲಿ ಪೂಜಿಸಲ್ಪಡುವ ಮಹಾಗಣಪತಿ ವಿಗ್ರಹವು ಕದಂಬರ ಕಾಲಕ್ಕೆ ಸೇರಿದ ಅಪರೂಪದ ದ್ವಿಭುಜ ಗಣಪತಿ ಮೂರ್ತಿಯಾಗಿದೆ. ಸಾಮಾನ್ಯವಾಗಿ ನಾಲ್ಕು ಭುಜಗಳ ಗಣಪತಿ ವಿಗ್ರಹಗಳು ಬೇರೆ ಕಡೆ ಹೆಚ್ಚು ಕಂಡುಬರುವುದಾದರೂ, ಇಲ್ಲಿ ನಿಂತ ಭಂಗಿಯಲ್ಲಿರುವ ಎರಡು ಕೈಗಳ ಗಣಪತಿ ವಿಶೇಷ ಆಕರ್ಷಣೆಯಾಗಿದೆ.

ಸವಕಳಿಗೆ ಕಾರಣವೇನು?

ಸಾಮನ್ಯವಾಗಿ ದಕ್ಷಿಣ ಭಾರತದ ಬೆರಳೆಣಿಕೆಯ ದೇವಾಲಯದ ಹೊರತಾಗಿ ಭಾರತಾದ್ಯಂತ ಇರುವ ಬಹುತೇಕ ದೇವಾಲಯಗಳಲ್ಲಿ ಸ್ಪರ್ಶ ದರ್ಶನದ ವ್ಯವಸ್ಥೆ ಇದ್ದು, ಆ ರೀತಿಯ ಸ್ಪರ್ಶದರ್ಶನ ಇರುವ ಬಹುತೇಕ ದೇವಾಲಯಗಳು ಶಿವನ ದೇವಾಲಯವಾಗಿದ್ದು ಅವುಗಳೆಲ್ಲವೂ ಲಿಂಗಾಕಾರದಲ್ಲಿರುವುದು ವಿಶೇಷವಾಗಿದೆ. ಗೋಕರ್ಣಕ್ಕೆ ಬರುವ ಪ್ರತಿಯೊಬ್ಬ ಭಕ್ತರೂ ಸಹಾ ಯಾವುದೇ ಶುಭ ಕಾರ್ಯ ಮಾಡುವ ಮುನ್ನಾ ಗಣಪತಿಯನ್ನು ಪೂಜಿಸಬೇಕು ಎಂಬ ಹಿಂದೂ ಸಂಪ್ರದಾಯದಂತೆ, ಸಾವಿರಾರು ಭಕ್ತರು ಪ್ರತಿದಿನ ಮೊದಲು ಮಹಾಗಣಪತಿ ದೇವಸ್ಥಾನಕ್ಕೆ ಬಂದು ಇಲ್ಲಿರುವ ದ್ವಿಭುಜ ಮಹಾಗಣಪತಿಯ ಶಿಲಾಮೂರ್ತಿಯನ್ನು ಸ್ಪರ್ಶಿಸಿ ಪ್ರಾರ್ಥನೆ ಸಲ್ಲಿಸಿ ಆ ನಂತರ ಮಹಾಬಲೇಶ್ವರ ದೇವಸ್ಥಾನದ ಆತ್ಮಲಿಂಗ ದರ್ಶನ ಮಾಡುವ ಸಂಪ್ರದಾಯವಿದೆ.

ಮಹಾಗಣಪತಿ ದೇವಸ್ಥಾನದ ಪ್ರಾಚೀನ ಶಿಲಾ ವಿಗ್ರಹವು ನಿತ್ಯ ಸಾವಿರಾರು ಕೈಗಳ ಸ್ಪರ್ಶದಿಂದ ಪ್ರಾಚೀನ ಶಿಲಾ ವಿಗ್ರಹದ ಕೈ, ಭುಜ ಹಾಗೂ ಎದೆ ಭಾಗಗಳು ಗಣನೀಯವಾಗಿ ಸವೆದಿರುವುದು ತಜ್ಞರ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ, ಪುರಾತನ ಮೂರ್ತಿಯ ಸಂರಕ್ಷಣೆಗೆ ಆದ್ಯತೆ ನೀಡುವ ನಿರ್ಧಾರದ ಕೈಗೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು, ದೇವಸ್ಥಾನದ ಅರ್ಚಕರು ಹಾಗೂ ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಅಧಿಕಾರಿಗಳು ನಡೆಸಿದ ಸಭೆಯಲ್ಲಿ ಸರ್ವಾನುಮತದಿಂದ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದಲ್ಲಿರುವ ಪೌರಾಣಿಕ ಪ್ರಸಿದ್ಧ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಇನ್ನು ಮುಂದೆ ಸ್ಪರ್ಶ ಪೂಜೆ (ಸ್ಪರ್ಶ ದರ್ಶನ) ಸೇವೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲು ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.  

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ