ಭಾರತ ಸರ್ಕಾರದ ಅಂಕಿಸಂಖ್ಯೆ ಸಚಿವಾಲಯ ವಿಚಿತ್ರ ಸಮೀಕ್ಷೆ ನಡೆಸಿತ್ತು. ಮನೆಯಲ್ಲಿ ಯಾರು, ಎಷ್ಟು ಸಮಯ, ಯಾವ ಕೆಲಸದಲ್ಲಿ ಮಗ್ನರಾಗಿರುತ್ತಾರೆ? ಎನ್ನುವುದೇ ಈ ಸಮೀಕ್ಷೆ. 2019ರಲ್ಲಿ ನಡೆಸಿದ ಈ ಸಮೀಕ್ಷೆಯಲ್ಲಿ 1,38,799 ಮನೆಗಳ ಡೇಟಾದಿಂದ ಗೊತ್ತಾದ ಸಂಗತಿಯೇನೆಂದರೆ, ಅಲ್ಲಿ ಪ್ರತಿಯೊಬ್ಬ ಮಹಿಳೆ 299 ನಿಮಿಷಗಳಷ್ಟು ಸಮಯ ಮನೆಗೆಲಸದಲ್ಲಿ ತೊಡಗಿರುತ್ತಾಳೆ. ಅದಕ್ಕೆ ಆಕೆಗೆ ಯಾವುದೇ ಹಣ ಸಂದಾಯವಾಗುವುದಿಲ್ಲ. ಅದೇ ಪುರುಷ ಕೇವಲ 97 ನಿಮಿಷಗಳಷ್ಟು ಸಮಯ ಮನೆಗೆಲಸಕ್ಕೆ ಕೊಡುತ್ತಾನೆ.

ಮಹಿಳೆಯೊಬ್ಬಳು 134 ನಿಮಿಷ ಇತರೆ ಸದಸ್ಯರ ಯೋಗಕ್ಷೇಮಕ್ಕಾಗಿ ಹಾಗೂ ಪುರುಷ 76 ನಿಮಿಷ ಮೀಸಲಿಡುತ್ತಾನೆ. `ಟೈಮ್ ಯೂಸ್‌ ಇನ್‌ ಇಂಡಿಯಾ 2019' ಹೆಸರಿನಿಂದ ಜಾರಿಗೊಳಿಸಲಾದ ಈ ವರದಿಯನ್ನು  ಈಗ ನ್ಯಾಯಾಲಯಗಳು ಇನ್ಶೂರೆನ್ಸ್ ಕ್ಲೇಮ್ ಗಳಲ್ಲಿ ಬಳಸಲಾರಂಭಿಸಿವೆ. ಅಪಘಾತದಲ್ಲಿ ತಾಯಿ ಅಥವಾ ಹೆಂಡತಿ ಸತ್ತಾಗ ಇನ್ಶೂರೆನ್ಸ್ ಕಂಪನಿಗಳು ಥರ್ಡ್‌ ಪಾರ್ಟಿ ಇನ್ಶೂರೆನ್ಸ್ ಕ್ಲೇಮ್ ಕೊಡದಿರುವ ಅಭ್ಯಾಸದ ಮೇಲೆ ನಿಯಂತ್ರಣ ಹೇರುತ್ತವೆ.

ವಾಸ್ತವದಲ್ಲಿ ಮಹಿಳೆಯರನ್ನು ಗುಲಾಮರೆಂದು ಭಾವಿಸುವುದು ಧರ್ಮದ ಉಡುಗೊರೆಯೇ ಆಗಿದೆ. ಎಲ್ಲಿಯವರೆಗೆ ಜನರು ಕಾಡಿನಲ್ಲಿ ವಾಸಿಸುತ್ತಿದ್ದರೊ, ಅಲ್ಲಿಯವರೆಗೆ ಪುರುಷ ಹಾಗೂ ಮಹಿಳೆ ಇಬ್ಬರೂ ಸಮನವಾಗಿ ದುಡಿಯುತ್ತಿದ್ದರು. ಆಹಾರ ಶೋಧ ಮಾಡುತ್ತಿದ್ದರು. ಅಷ್ಟೇ ಅಲ್ಲ, ತಮ್ಮ ಉಸ್ತುವಾರಿಯನ್ನು ತಾವೇ ಮಾಡಿಕೊಳ್ಳುತ್ತಿದ್ದರು. ನಾಗರಿಕತೆ ಅವರಿಗೆ ಹೇಗಿರಬೇಕು ಎಂದು ಕಲಿಸಿತು, ಕೆಲಸಗಳನ್ನು ವರ್ಗೀಕರಿಸಿತು. ಇಬ್ಬರಿಗೂ ಸಮಾನ ಜವಾಬ್ದಾರಿಗಳು ದಕ್ಕಿದವು. ಪುರುಷ ಮಹಿಳೆ ಜೊತೆ ಜೊತೆಗೆ ಇರಬೇಕಾದರೆ ಯಜಮಾನ ಗುಲಾಮ ಎಂಬ ವರ್ಗೀಕರಣ ತರಲಾಯಿತೇ?

ಶತ ಶತಮಾನಗಳಿಂದ ಮಹಿಳೆಯರು ಈ ಒಂದು ಅಸಮಾನತೆಯ ಭೂತವನ್ನು ಎದುರಿಸಬೇಕಾಗಿ ಬರುತ್ತಿದೆ. ತಾಯಂದಿರು ತಮ್ಮ ಪುತ್ರಿಯರಿಗೆ ಗಲಾಮಗಿರಿಯ ಹೊರೆ ಹೊರೆಸಿ ಕಳಿಸುತ್ತಿದ್ದಾರೆ. ಗಂಡನ ಸೇವೆ ಮಾಡಬೇಕು, ಅವರ ಮನೆಯವರ ಕೆಲಸ ಮಾಡಬೇಕು, ನಿನ್ನ ಹಕ್ಕಿನ ಬಗ್ಗೆ ಪ್ರಶ್ನಿಸಬೇಡ ಎಂದೆಲ್ಲ ಧರ್ಮಗ್ರಂಥಗಳು ಬೋಧಿಸುತ್ತವೆ.

ಹಿಂದೂ ಧರ್ಮದಲ್ಲಿ ಮಹಿಳೆಯರಿಗೆ ಪಾಪವೋನಿಯ ಬಗ್ಗೆ ಹೇಳಲಾಗಿದೆ ಹಾಗೂ ಮುಟ್ಟಿನಂತಹ ನೈಸರ್ಗಿಕ ಪ್ರಕ್ರಿಯೆಗೂ ಕೂಡ ಬ್ರಾಹ್ಮಣ ಹತ್ಯೆಯ ದೋಷಿ ಎಂದು ಹೇಳಲಾಗಿದೆ. ಗಂಡನ ಸಾವಿಗೆ ಹೆಂಡತಿಯನ್ನು ತಪ್ಪಿತಸ್ಥೆ ಎಂದು ತಿಳಿಸಲಾಗಿದೆ ಮತ್ತು ಆಕೆಯನ್ನು ಜೀವಂತ ದಹಿಸುವುದರಿಂದ ಹಿಡಿದು ಗುಲಾಮ ಅಥವಾ ಭಿಕ್ಷುಕಿತನಕ ಮಾಡಲಾಗಿದೆ ವಾಸ್ತವದಲ್ಲಿ ಆಕೆ ತನ್ನ ಜೀವಿತಾವಧಿಯಲ್ಲಿ ಪುರುಷರಿಗಿಂತ ಹೆಚ್ಚು ಕೆಲಸ ಮಾಡುತ್ತಿರುವಂತೆ ಮಾಡಿದೆ.

ಪುರುಷ ಮನೆಯಿಂದ ಹೊರಗೆ ಹೋಗಿ ಕೆಲಸ ಮಾಡುತ್ತಾನೆ ಎಂಬ ತರ್ಕ ಸುಳ್ಳು. ಒಂದು ವೇಳೆ ಆ ಸರ್ವೆ ನಿಖರವಾಗಿದ್ದರೆ, ಮಹಿಳೆ ಒಂದು ದಿನದ 1440 ನಿಮಿಷಗಳಲ್ಲಿ 433 ನಿಮಿಷಗಳಷ್ಟೆ ಮನೆಗೆಲಸದಲ್ಲಿ ತೊಡಗಿರುತ್ತಾಳೆ. ಉಳಿದ ಸಮಯನ್ನು ಆಕೆ ಪುರುಷರ ಹಾಗೆ ಗಳಿಸಲು ತೊಡಗಿಸಬಹುದು. ಆದರೆ ಆಕೆ ಹಾಗೆ ಮಾಡದಂತೆ ತಡೆಯಲಾಗುತ್ತದೆ.

ಪರಪುರುಷರನ್ನು ಭೇಟಿ ಆಗದಿರಲೆಂದು ಆಕೆಯನ್ನು ಮನೆಯಿಂದ ಹೊರಹೋಗಲು ಬಿಡುವುದಿಲ್ಲ. ಬುರ್ಖಾ ಹಾಗೂ ಸೆರಗಿನ ಹಿಂದೆ ಬಂಧಿಸಿಡಲಾಗುತ್ತದೆ. ಆಕೆಗೆ ಓದಲು ಅವಕಾಶ ಕೊಡಲಿಲ್ಲ, ಸ್ಕಿಲ್ ‌ಕಲಿಸಲಿಲ್ಲ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ