ಗುಂಜನ್‌ ಗೌಡ್‌ರನ್ನು ಭೇಟಿಯಾದಾಗ ಮನಸ್ಸಿಗೆ ಹೊಳೆಯುವ 2 ಶಬ್ದಗಳೆಂದರೆ, ಆತ್ಮವಿಶ್ವಾಸ ಮತ್ತು ಲವಲವಿಕೆ. ದೆಹಲಿಯಲ್ಲಿ ಹುಟ್ಟಿ ಬೆಳೆದ ಗುಂಜನ್‌ ಪ್ರಸ್ತುತ ಬ್ಯೂಟಿ ಹಾಗೂ ಫ್ಯಾಷನ್‌ ಜಗತ್ತಿನ ಚಿರಪರಿಚಿತ ಹೆಸರಾಗಿದ್ದಾರೆ.

ತಮ್ಮ ಕ್ರಿಯಾಶೀಲತೆ, ಶ್ರದ್ಧೆ ಮತ್ತು ಕಠಿಣ ಪರಿಶ್ರಮದ ಬಲದಿಂದ ಅವರು ಪರ್ಮನೆಂಟ್‌ ಬ್ಯೂಟಿ ಎಕ್ಸ್ ಪರ್ಟ್‌ ಹಾಗೂ ಆ್ಯಪ್ಸ್ ಕಾಸ್ಮೆಟಿಕ್‌ ಕ್ಲಿನಿಕ್‌ ಅಂಡ್‌ ಅಕಾಡೆಮಿಯ ಎಗ್ಸಿಕ್ಯೂಟಿವ್ ‌ಡೈರೆಕ್ಟರ್‌ ಆಗಿದ್ದಾರೆ.ಈ ಹಂತದ ತನಕ ಅವರು ಹೇಗೆ ತಲುಪಿದರು, ಅವರ ಜೀವನ ಹೇಗಿದೆ ಎಂಬುದರ ಬಗ್ಗೆ ಹೀಗೆ ವಿವರಿಸುತ್ತಾರೆ, ``ನನ್ನ ತವರೂರು ದೆಹಲಿ. ಹೋಲಿ ಚೈಲ್ಡ್ ಶಾಲೆಯಲ್ಲಿ ನನ್ನ ಶಿಕ್ಷಣ ಶುರುವಾಗಿ ಲೇಡಿ ಇರ್ವಿನ್‌ ಕಾಲೇಜಿನಲ್ಲಿ ಮುಂದಿನ ಶಿಕ್ಷಣ ಪೂರೈಸಿದೆ. ಮದುವೆಗೂ ಮುನ್ನ ನನ್ನ ಕುಟುಂಬದಲ್ಲಿ 4 ಜನರಿದ್ದರು. ಮದುವೆಯ ಬಳಿಕ 7 ಜನರಾದೆವು.

``ಮದುವೆಗೆ ಮುನ್ನ ನನಗೆ ಒಬ್ಬಳೇ ತಂಗಿ ಇದ್ದಳು. ಮದುವೆ ಬಳಿಕ ನಾದಿನಿಯರ ರೂಪದಲ್ಲಿ ನನಗೆ 3 ಜನ ತಂಗಿಯರು ದೊರೆತರು. ಎಲ್ಲರಿಗಿಂತ ದೊಡ್ಡವಳಾದ ಕಾರಣದಿಂದ ನಾನು ನನ್ನ ಕರ್ತವ್ಯ ನಿಭಾಯಿಸಿದೆ. ಮೂವರಿಗೂ ಒಳ್ಳೆಯ ಮನೆತನ ನೋಡಿ ಮದುವೆಯ ಕಾರ್ಯ ಪೂರೈಸಿದೆ. ಕೊನೆಯ ನಾದಿನಿಯನ್ನು ನನ್ನ ಮಗಳ ಹಾಗೆ ಭಾವಿಸಿ ಮದುವೆಯಲ್ಲಿ ಕನ್ಯಾದಾನ ಕೂಡ ಮಾಡಿದೆ.''

ಸರಳತೆ ನನ್ನ ಗುರುತು

ಯಶಸ್ಸಿನ ಬಗ್ಗೆ ನಮಗೆ ಅಹಂಕಾರ ಇದ್ದರೆ ಅದು ನಮ್ಮ ಬಳಿ ಹೆಚ್ಚು ದಿನ ನಿಲ್ಲುವುದಿಲ್ಲ ಎಂದು ಹೇಳುವ ಗುಂಜನ್‌, ಎಷ್ಟೇ ಉನ್ನತ ಯಶಸ್ಸಿನ ಶಿಖರ ತಲುಪಿದರೂ, ಸರಳತೆಯೆಂಬ ಸೂತ್ರವನ್ನು ಮರೆಯಲಿಲ್ಲ.

``ಒಂದು ಮರ ಎಷ್ಟು ಹೆಚ್ಚು ಹಣ್ಣುಗಳಿಂದ ತುಂಬಿರುತ್ತೋ, ಅದು ಭೂಮಿಯ ಕಡೆಗೇ ಹೆಚ್ಚು ವಾಲಿರುತ್ತೆ, ಎಂಬುದನ್ನು ನಾನು ಚಿಕ್ಕವಳಿದ್ದಾಗಿನಿಂದ ಕೇಳುತ್ತ ಬಂದಿರುವೆ. ಅದು ನನ್ನ ಮನಸ್ಸಿನ ಮೇಲೆ ಅಗಾಧ ಪರಿಣಾಮ ಬೀರಿದೆ. ಅದರಂತೆಯೇ ನಾನು ಪಾಲಿಸುತ್ತಾ ಬಂದಿರುವೆ. ನಾನು ಎಷ್ಟೇ ಉನ್ನತ ಶಿಖರ ತಲುಪಿದರೂ ನನ್ನ ಕಾಲುಗಳು ಮಾತ್ರ ನೆಲದ ಮೇಲೆಯೇ ಇರುತ್ತವೆ. ಸರಳತೆಯೇ ನನ್ನ ಹೆಗ್ಗುರುತು.''

ಉದ್ಯಮಿಯಾದದ್ದು ಹೀಗೆ....

ಗುಂಜನ್‌ಗೆ  ಬಾಲ್ಯದಿಂದಲೇ ಏನನ್ನಾದರೂ ಹೊಸತನ್ನು ಮಾಡಬೇಕೆಂಬ ಉತ್ಸಾಹ ಇತ್ತು. ಬಿಡುವಿದ್ದಾಗ ಅವರು ಯಾವುದಾದರೂ ಕಲಾತ್ಮಕ ಚಟುವಟಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದರು. ಇದೇ ನಡೆ ಅವರನ್ನು ಮುಂದೆ ಬ್ಯೂಟಿ  ಬಿಸ್‌ನೆಸ್‌ನತ್ತ ಬರುವಂತೆ ಮಾಡಿತು. ಈ ಕುರಿತಂತೆ ಅವರು ಹೇಳುವುದು ಹೀಗೆ, ``ನನ್ನನ್ನು ನಾನು ಯಾವಾಗಲೂ ಕ್ರಿಯಾಶೀಲಳಾಗಿಟ್ಟುಕೊಳ್ಳಲು ಪ್ರಯತ್ನಿಸಿದೆ. ಆ ನನ್ನ ಆಕಾಂಕ್ಷೆಯೇ ಈ ಹಂತದ ತನಕ ಮುಟ್ಟಲು ಸಾಧ್ಯವಾಯಿತು. ಇದರ ಹೊರತಾಗಿ ಓದುವುದು ಹಾಗೂ ಕಲಿಸುವುದು ನನ್ನ ಬಾಲ್ಯದ ಹವ್ಯಾಸ. ಅದನ್ನು ನಾನು ಈಗಲೂ ವೃತ್ತಿಪರಳಾಗಿಯೂ ನಿಭಾಯಿಸುತ್ತ ಬಂದಿರುವೆ.

``ಉದ್ಯಮಿಯಾಗಲು ವಯಸ್ಸಿನ ಯಾವುದೇ ನಿರ್ಬಂಧವಿಲ್ಲ. ವಿದ್ಯಾಭ್ಯಾಸದ ಬಳಿಕ ಅಮ್ಮನ ಜೊತೆ ಕೆಲಸ ಮಾಡ್ತಾ ಮಾಡ್ತಾ ನನಗೆ ಆತ್ಮವಿಶ್ವಾಸ ಹಾಗೂ ಅನುಭವ ಎರಡೂ ಏಕಕಾಲಕ್ಕೆ ದೊರೆತ. ಕಂಪನಿಯೊಂದನ್ನು ನಡೆಸಲು ಬೇಕಾಗುವ ಅರ್ಹತೆಗಳು ನನಗೆ ಬಾಲ್ಯದಿಂದಲೇ ದೊರೆಯುತ್ತ ಬಂದವು. ಈ ಎಲ್ಲ ಸಂಗತಿಗಳನ್ನು ಗಮನದಲ್ಲಿಟ್ಟುಕೊಂಡು ನಾನು ಪ್ರತಿಯೊಂದು ಹಂತದಲ್ಲಿ ಕೆಲಸ ಮಾಡಿದೆ.''

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ