2012ರ ಡಿಸೆಂಬರ್‌ 16ರಂದು ದೆಹಲಿಯಲ್ಲಿ ನಡೆದ ಗ್ಯಾಂಗ್‌ ರೇಪ್‌ ಅಪರಾಧಿಗಳ ಇಂಟರ್‌ವ್ಯೂ ಸರ್ಕಾರ ಹಾಗೂ ದೇಶಕ್ಕೆ ಕಹಿ ಗುಳಿಗೆಯಾಗಿಬಿಟ್ಟಿದೆ. ಬ್ರಿಟಿಷ್‌ ಡಾಕ್ಯುಮೆಂಟರಿ ಫಿಲ್ಮ್ ನಿರ್ಮಾಪಕ ವೆಸ್ಲಿ ಉಡ್ವಿನ್‌ ಈ ರೇಪ್‌ನ ಅಪರಾಧಿ ಮುಕೇಶ್‌ನನ್ನು ಜೈಲಿನಲ್ಲಿ ಇಂಟರ್‌ವ್ಯೂ ಮಾಡಿದರು. ಅದರಲ್ಲಿ ಅವನು ಅವ್ಯಾಹತವಾಗಿ, ಆ ಹುಡುಗಿಯದೇ ತಪ್ಪು. ಅವಳು ರಾತ್ರಿ ಅಷ್ಟು ಹೊತ್ತಿನವರೆಗೆ ತಿರುಗಾಡುತ್ತಿದ್ದಳು. ಒಂದುವೇಳಿ ಅವಳು ವಿರೋಧಿಸಿರದಿದ್ದರೆ ರೇಪ್‌ ಮಾಡಿದ ನಂತರ ಅವಳನ್ನು ಬಸ್‌ನಿಂದ ತಳ್ಳಿಬಿಡುತ್ತಿದ್ದೆ. ಅವಳು ಉಳಿಯುತ್ತಿದ್ದಳು ಎಂದು ಹೇಳಿದ. ಒಂದುವೇಳೆ ತನಗೆ ಮರಣದಂಡನೆ ವಿಧಿಸಿದರೆ ಮುಂದೆ ರೇಪ್‌ಮಾಡುವವರು ಪ್ರತಿ ಸಂದರ್ಭದಲ್ಲೂ ಹುಡುಗಿಯ ಹತ್ಯೆಯನ್ನೇ ಮಾಡಿಬಿಡುತ್ತಾರೆ. ಏಕೆಂದರೆ ರೇಪ್‌ ಮತ್ತು ಹತ್ಯೆ ಎರಡರಲ್ಲೂ ಶಿಕ್ಷೆ ಒಂದೇ ರೀತಿ ಇದೆ ಎಂದು ಹೇಳಿದ.

ಈ ಡಾಕ್ಯುಮೆಂಟರಿಯಲ್ಲಿ ಇನ್ನೂ ಕೆಲವು ಅತ್ಯಾಚಾರಿಗಳ ಇಂಟರ್‌ವ್ಯೂ ಇದೆ. ಹೆಚ್ಚಿನವರು ಹುಡುಗಿಯರನ್ನೇ ದೋಷಿಗಳೆಂದರು. ಅವರು ಹಾಗಿರುವುದರಿಂದಲೇ ಅವರನ್ನು ರೇಪ್‌ ಮಾಡಲಾಗುತ್ತದೆ. ಅವರು ಮನೆಯಲ್ಲಿ ಮುಚ್ಚಿದ ಕೋಣೆಯಲ್ಲಿರಲಿ, ನಗನಗುತ್ತಾ ಮಾತಾಡದಿರಲಿ, ಮೇಲಿನಿಂದ ಕೆಳಗಿನವರೆಗೆ ವಸ್ತ್ರದಿಂದ ಮುಚ್ಚಿರಲಿ. ಆಗಲೇ ಅವರು ಸುರಕ್ಷಿತರು ಎಂದು. ಅಂದರೆ ಹಿಂದೂ ಇಸ್ಲಾಂ ಧರ್ಮಗಳಿಂದ ಓತ್ರಪ್ರೋತವಾಗಿರುವ ಸಮಾಜ ಪುರುಷರಿಗೆ ಮಹಿಳೆಯರೊಂದಿಗೆ ಹೇಗೆ ವರ್ತಿಸುವುದು ಎಂಬ ಪಾಠವನ್ನೇ ಹೇಳಿಕೊಟ್ಟಿಲ್ಲ. ನಮ್ಮ ಸಮಾಜ ಮಹಿಳೆಯರನ್ನೇ ಅಪರಾಧಿಗಳೆಂದು ತೀರ್ಮಾನಿಸುತ್ತದೆ. ಗಂಡಸರಿಗೆ ಮಹಿಳೆಯರನ್ನು ರೇಗಿಸಲು, ಮುಟ್ಟಲು, ಬೈಯಲು, ಅಶ್ಲೀಲ ಸಂಜ್ಞೆಗಳನ್ನು ಮಾಡಲು, ಅಷ್ಟೇ ಅಲ್ಲ ಬಲಾತ್ಕಾರ ಮಾಡಲು ಸಹ ಒಪ್ಪಿಗೆ ನೀಡುತ್ತದೆ. ಈ ಡಾಕ್ಯುಮೆಂಟರಿಯ ಬಗ್ಗೆ ತಿಳಿದು ಬರುವುದೇನೆಂದರೆ ಅಪರಾಧಿಗಳು ಇದನ್ನು ಫಂಡಮೆಂಟಲ್ ರೈಟ್ ಎಂದು ಭಾವಿಸುತ್ತಾರೆ.

ಇದಂತೂ ನಾಚಿಕೆಗೇಡಿನ ವಿಷಯವಾಗಿದೆ. ಆದರೆ ಇದಕ್ಕಿಂತ ಹೆಚ್ಚು ನಾಚಿಕೆಗೇಡು ಗೃಹಮಂತ್ರಿ ರಾಜನಾಥ್‌ ಸಿಂಗ್‌ರಿಂದ ಹಿಡಿದು ಜೈಲರ್‌ ಮತ್ತು ಕೋರ್ಟ್‌ಗಳು ಅಪರಾಧಿಗಳ ಮನೋವೃತ್ತಿಯನ್ನು ಅಡಗಿಸಿಡಲು ಇಚ್ಛಿಸುತ್ತಿರುವುದು. ಏಕೆಂದರೆ ದೇಶ ಹಾಗೂ ಸಮಾಜದ ಪೊಳ್ಳುತನ ಬಯಲಾಗಬಾರದೆಂದು. ಈ ದೇಶದಲ್ಲಿ ಮಹಿಳೆಯರ ಅಸ್ತಿತ್ವ ಹಸುಗಳು ಹಾಗೂ ಮೇಕೆಗಳಂತಿವೆ. ಅವನ್ನು ಪೂಜಿಸುತ್ತಾರೆ. ನಂತರ ನಿರ್ಲಕ್ಷಿಸುತ್ತಾರೆ, ಉಪವಾಸವಿಡುತ್ತಾರೆ, ಕೊನೆಗೆ ಕತ್ತರಿಸುತ್ತಾರೆ. ನಮ್ಮ ಸಮಾಜಕ್ಕೆ ಮಹಿಳೆಯರು ಪ್ರಾಣಿಗಳ ತರಹ. ಗಂಡಸರ ಸೇವೆಗಾಗಿ ಮೀಸಲಾಗಿದ್ದಾರೆ. ಸೇವೆ ಮಾಡದಿದ್ದರೆ ಅವರನ್ನು ಕೊಲ್ಲಲೂ ಯಾವುದೇ ಅಡ್ಡಿಯಿಲ್ಲ.

ಗೃಹ ಸಚಿವಾಲಯ ಈಗ ಅಪರಾಧಿಗಳ ಅಸಹ್ಯಕರ ಮಾನಸಿಕತೆಯನ್ನು ಎದುರಿಸಲು ಯಾವುದೇ ಪ್ರಯತ್ನ ಮಾಡುತ್ತಿಲ್ಲ. ಬದಲಾಗಿ ವೆಸ್ಲಿ ಉಡ್ವಿನ್‌ ಜೈಲಿನಲ್ಲಿ ಹೇಗೆ ಡಾಕ್ಯುಮೆಂಟರಿ ಚಿತ್ರೀಕರಿಸಿದರು? ಯಾರು ಯಾವ ಷರತ್ತುಗಳನ್ನು ವಿಧಿಸಿ ಅನುಮತಿ ನೀಡಿದರು ಎಂದು ಚಿಂತಿಸುತ್ತಿದೆ. ಗೃಹ ಸಚಿವಾಲಯ ಈ ಡಾಕ್ಯುಮೆಂಟರಿಯನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದೆ. ಇದು ಹೇಗಿದೆಯೆಂದರೆ ನರೇಂದ್ರ ಮೋದಿಯವರ ಸ್ವಚ್ಛ ಭಾರತ ಯೋಜನೆಗೆ ಉತ್ತರವಾಗಿ ಕೊಳಕು ಜಾಗಗಳಿಗೆ ವಿದೇಶೀಯರು ಹೋಗಲು ನಿರ್ಬಂಧಪಡಿಸಬೇಕು ಹಾಗೂ ಕಮ್ಯೂನಿಸ್ಟ್ ದೇಶಗಳಂತೆ ಅವರಿಗೆ ಬರೇ ಒಳ್ಳೊಳ್ಳೆಯ ಜಾಗಗಳನ್ನು ತೋರಿಸಬೇಕು.

ಅತ್ಯಾಚಾರಗಳು ಎಲ್ಲ ದೇಶಗಳಲ್ಲಿ, ಎಲ್ಲ ಸಮಾಜಗಳಲ್ಲಿ ಆಗುತ್ತವೆ. ಮಹಿಳೆಯರಿಗೆ ಉಂಟಾಗುವ ಯಾತನೆ ಅತ್ಯಂತ ಅಸಹನೀಯ ಹಾಗೂ ಅವರ್ಣನೀಯ ಆಗಿದೆ. ಆದರೆ ಅದರ ಬಗ್ಗೆ ಚರ್ಚೆಯನ್ನೇ ಮಾಡಬಾರದೆಂದು ಅರ್ಥವಲ್ಲ. ಚರ್ಚೆ ಬಹಳ ಅಗತ್ಯ. ಅದರಿಂದ ಸಮಾಜಕ್ಕೂ ಅರ್ಥವಾಗಬೇಕು. ಮಹಿಳೆಯರಿಗೆ ಪುರುಷರಿಗೆ ಸಮಾನವಾದ ಹಕ್ಕಿದೆ. ಸಮಾಜ, ಸರ್ಕಾರ ಕೋರ್ಟುಗಳು ಮತ್ತು ಪೊಲೀಸರು ಏನೇ ಆಗಲಿ ಅಪರಾಧಿಗಳಿಗೆ ಶಿಕ್ಷೆಯಾಗುವೆತೆ ನೋಡಿಕೊಳ್ಳಬೇಕು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ