ಒಂದೆಡೆ ಸಹ್ಯಾದ್ರಿ ಪರ್ವತಗಳನ್ನು ಮುತ್ತಿಕ್ಕುವ ಕಪ್ಪು ಮೋಡಗಳು ಮತ್ತು ನೂರಾರು ಅಡಿ ಎತ್ತರದಿಂದ ಧುಮ್ಮಿಕ್ಕುವ ಜಲಪಾತಗಳು ಪ್ರವಾಸಿಗರ ಮನಸೂರೆಗೊಳಿಸುತ್ತವೆ. ಇನ್ನೊಂದೆಡೆ ಆಳವಾದ ಕಣಿವೆಗಳು ಮತ್ತು ಕೋಟೆಗಳ ರಹಸ್ಯ ಕೂಡ ಅರನ್ನು ರೋಮಾಂಚಿತಗೊಳಿಸುತ್ತವೆ.

ಸಹ್ಯಾದ್ರಿ ಪರ್ವತ ಶ್ರೇಣಿ ಎಷ್ಟೊಂದು ವಿಶಾಲವೋ ಅಷ್ಟೊಂದು ಸುಂದರ ಕೂಡ ಆಗಿದೆ. ಪ್ರತಿಯೊಂದು ಹವಾಮಾನದಲ್ಲೂ ಇದು ಮನಸ್ಸನ್ನು ಮೋಹಗೊಳಿಸುತ್ತದೆ. ಚಳಿಗಾಲದಲ್ಲಿ ಇದು ಹಸಿರು ಆಭರಣ ಹೊದ್ದ ಸುಂದರಿಯಂತೆ ಗೋಚರಿಸುತ್ತದೆ. ಅದೇ ವೈಶಾಖ ಮಾಸದಲ್ಲಿ ಮಳೆಯಿಂದ ತೊಯ್ದು ಹೋಗಿರುತ್ತದೆ.

ಈ ಗಿರಿರಾಜನನ್ನು ಧ್ಯಾನ ಮುದ್ರೆಯಿಂದ ಎಬ್ಬಿಸುವ ಕೆಲಸವನ್ನು ಮಾಡುವುದು ಕೇವಲ ಮೋಡಗಳು ಮಾತ್ರ. ಗಿರಿರಾಜ ಮತ್ತು ಮೋಡಗಳ ಈ ಮಿಲನ ಕೇವಲ ಮಿಲನವಾಗಿರದೆ, ಅದು ಭಾರಿ ಸದ್ದಿನಿಂದ ಕೂಡಿರುತ್ತದೆ. ಮೋಡಗಳು ಬಹುಬೇಗ ಮಳೆ ಸುರಿಸುತ್ತಿದ್ದಂತೆ, ಕಾಯ್ದು ಕೆಂಡವಾದ ಸಹ್ಯಾದ್ರಿ ತಂಪಾಗಿ ಖುಷಿಯಿಂದ ನಲಿಯತೊಡಗುತ್ತದೆ.

ವರ್ಷ ಧಾರೆಯಿಂದ ತೃಪ್ತಳಾದ ಸಹ್ಯಾದ್ರಿಯ ಒಡಲಿನಲ್ಲಿರುವ ಜಲಪಾತಗಳು ಧುಮ್ಮಿಕ್ಕಿ ಹರಿಯಲಾರಂಭಿಸುತ್ತವೆ. ಅವುಗಳ ಸೌಂದರ್ಯ ವೀಕ್ಷಿಸಲು ಪ್ರವಾಸಿಗರ ದಂಡೇ ಹರಿದು ಬರಲಾರಂಭಿಸುತ್ತದೆ. ಸಹ್ಯಾದ್ರಿಯ ವಿಶಾಲಕಾಯ ರೂಪ ಎಷ್ಟೊಂದು ಭಯಾನಕ ಎನಿಸುತ್ತದೊ, ಅದು ಮನಸ್ಸಿಗೆ ಅಷ್ಟೇ ಖುಷಿಯನ್ನು ಕೊಡುತ್ತದೆ.

rimjhim-barsat

ಸಹ್ಯಾದ್ರಿ ಪರ್ವತ ಪ್ರದೇಶ ಟ್ರೆಕಿಂಗ್‌ಗೆ ಹೇಳಿ ಮಾಡಿಸಿದ ತಾಣ. ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಯುವತಿಯರು ಕೂಡ ಟ್ರೆಕಿಂಗ್‌ಗೆ ಬರುತ್ತಿದ್ದಾರೆ. ಸಹ್ಯಾದ್ರಿಯ ಆಳ ಕಣಿವೆಗಳು, ಗಗನಚುಂಬಿ ಪರ್ವತಗಳು ಹಾಗೂ ಅದರ ಸೌಂದರ್ಯ ಯುವತಿಯರ ಕಣ್ಮನ ಸೆಳೆಯುತ್ತಿದೆ.

ಸಾಮಾನ್ಯವಾಗಿ ಸಹ್ಯಾದ್ರಿಯ ಶಿಖರಗಳ ಎತ್ತರ 2,500 ಅಡಿಯಿಂದ ಹಿಡಿದು 3,500 ಅಡಿ ತನಕ ಇವುಗಳೆಲ್ಲಕ್ಕೂ ಎತ್ತರದ ಶಿಖರವೆದರೆ ಕಳಸೂಬಾಯಿ. ಅದು 5,000 ಅಡಿ ಎತ್ತರವಿದೆ. ಈ ಶ್ರೇಣಿಯನ್ನು ಬಾಲಾಘಾಟ್‌ ಅಥವಾ ಬಾಲೇಶ್ವರ್‌ ಶ್ರೇಣಿ ಎಂದು ಕರೆಯಲಾಗುತ್ತದೆ. ಮುಸಲಧಾರೆಯ ಮಳೆಯಿಂದ ಮತ್ತು ಕಪ್ಪು ದಟ್ಟ ಮಳೆಯಿಂದ ಈ ಪರ್ವತ ಶ್ರೇಣಿಗಳು ಎಷ್ಟು ರಹಸ್ಯಮಯವಾಗಿ ಕಾಣುತ್ತವೆ, ಅಷ್ಟೇ ಮನೋಹರವಾಗಿಯೂ ಗೋಚರಿಸುತ್ತವೆ. ಹರಿಶ್ಚಂದ್ರ, ಆಜೋಬಾ, ಅಲಂಗ್‌, ಕುಲಂಗ್‌, ಮದನ್‌ ಮುಂತಾದ ಪರ್ವತಗಳು ಮತ್ತು ಭಂಡಾರಧಾರಾ ಜಲಾಶಯ ತನ್ನ ಮಡಿಲಿಗಾಗಿ ಹಾಗೂ ಪರ್ವತ ಶ್ರೇಣಿಗಳು ಟ್ರೆಕಿಂಗ್‌ಗಾಗಿ ಪ್ರಸಿದ್ಧವಾಗಿವೆ.

ಮಾಲಶೇಜ್‌ ಘಾಟ್‌ ಸಹ್ಯಾದ್ರಿಯ ಎರಡೂ ಬದಿಯ ಶಿಖರಗಳಿಂದ ದೃಷ್ಟಿ ಕದಲುವುದೇ ಇಲ್ಲ. ತುಂತುರು ಮಳೆಯಿಂದ ತೊಯ್ದಾಗ ಈ ಶಿಖರಗಳು ಹಸಿರು ಮುತ್ತುಗಳ ರಾಶಿ ಹೊತ್ತಂತೆ ಕಾಣುತ್ತವೆ. ಇಲ್ಲಿನ ರಸ್ತೆ ಕಾಡಿನ ಮಧ್ಯದಿಂದ ಹಾಯ್ದು ಸರೋವರಗಳ ಬಳಿ ತೆರೆದುಕೊಳ್ಳುತ್ತವೆ. ಮುಂಬೈನಿಂದ 140 ಕಿ.ಮೀ. ದೂರದಲ್ಲಿರುವ ಕೊಂಕಣ ಪ್ರದೇಶದ ಕಲ್ಯಾಣ, ಠಾಣೆ ಮತ್ತು ಮುರಬಾಡ್‌. ಈ ಮುಖ್ಯ ಸ್ಥಳಗಳನ್ನು ಜೋಡಿಸುವ ಪ್ರಾಚೀನ ಘಟ್ಟ ಮಾರ್ಗವಾಗಿದೆ. ಅದನ್ನು `ಮಾಲಶೇಜ್‌ ಘಾಟ್‌' ಎಂದು ಕರೆಯಲಾಗುತ್ತದೆ. ಮುರಬಾಡದಿಂದ ಸ್ವಲ್ಪ ಮುಂದೆ ಹೋದಂತೆ ಬಲಬದಿಯಿಂದ ಸಹ್ಯಾದ್ರಿಯ ಮುಗಿಯದ ಸಾಲುಗಳು ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತವೆ. ಈ ಪರ್ವತ ಶ್ರೇಣಿಗಳ ವಿಶೇಷತೆಯೆಂದರೆ, ಸುಮಾರು 3500 ಅಡಿ ಎತ್ತರದ ಈ ಗಗನಚುಂಬಿ ಶಿಖರಗಳನ್ನು ಅಂದಾಗಿ ಕೆತ್ತಿ ಅಣಿಗೊಳಿಸಲಾಗಿದೆ ಎಂಬಂತೆ ಗೋಚರಿಸುತ್ತದೆ. ನಮಗೆ ಮೊದಲು ಸಿದ್ಧಗ್‌, ಗೋರಖ್‌ಗಢ, ಜೀವಧನ್‌ ಮತ್ತು ಎಲ್ಲಕ್ಕೂ ಕೊನೆಗೆ ಹರಿಶ್ಚಂದ್ರಗಢ ಟ್ರ್ಯಾಕ್‌ ನೋಡಲು ಸಿಗುತ್ತದೆ. ದಟ್ಟ ಅರಣ್ಯದ ಕಾರಣದಿಂದ ಮೊಲ, ಕಾಡು ಮೊಸಳೆ, ಚಿರತೆಗಳು ಹೆಚ್ಚಾಗಿ ಕಂಡು ಬರುತ್ತವೆ. ಫ್ಲೆಮಿಂಗೊ ಪಕ್ಷಿಗಳಿಗಂತೂ ಇದು ಅತ್ಯಂತ ಅಚ್ಚುಮೆಚ್ಚಿನ ಸ್ಥಳ. ಪ್ರತಿವರ್ಷದ ಜುಲೈನಿಂದ ಹಿಡಿದು ಸೆಪ್ಟೆಂಬರ್‌ ತನಕ ಆ ಪಕ್ಷಿಗಳು ಇಲ್ಲಿಗೆ ಆಗಮಿಸುತ್ತವೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ