ಇತ್ತೀಚೆಗೆ ನನಗೆ ನ್ಯೂಯಾರ್ಕ್‌ ನಗರಕ್ಕೆ ಹೋಗುವ ಅವಕಾಶ ದೊರೆತಿತ್ತು. ಈ ನಗರ ಹಡ್ಸನ್‌ ನದಿಯ ದಂಡೆಯ ಮೇಲಿರುವ ಸುಂದರ ನಗರ. ಅಲ್ಲಿಗೆ ಹೋದ ಬಳಿಕ ನನಗೆ `ಸ್ಟ್ಯಾಚ್ಯೂ ಆಫ್‌ ಲಿಬರ್ಟಿ' ನೋಡುವ ಅವಕಾಶ ದೊರೆಯಿತು. ಅಲ್ಲಿಯತನಕ ನಾನು ಅದರ ಬಗ್ಗೆ ಕೇವಲ ಕೇಳಿದ್ದೆ ಹಾಗೂ ಓದಿದ್ದೆ.

ನನ್ನ ಕಣ್ಮುಂದೆ ಇದ್ದ `ಸ್ವಾತಂತ್ರ್ಯ ದೇವತೆಯ ಪ್ರತಿಮೆ' ಜಗತ್ತಿನ ಅತಿ ದೊಡ್ಡ ಪ್ರತಿಮೆಯಾಗಿತ್ತು. ನೀವು ಅಮೆರಿಕಕ್ಕೆ ಹೊರಡುವವರಿದ್ದಲ್ಲಿ ಸ್ಟ್ಯಾಚ್ಯೂ ಆಫ್‌ ಲಿಬರ್ಟಿ ನೋಡಲು ಮರೆಯಬೇಡಿ. ಅದನ್ನು  ನೋಡದ ಹೊರತು ನಿಮ್ಮ ಅಮೆರಿಕ ಪ್ರವಾಸ ಅಪೂರ್ಣವಾಗುತ್ತದೆ.

ಈ ಅದ್ಭುತ ಪ್ರತಿಮೆ ತಾಮ್ರದಿಂದ ನಿರ್ಮಾಣವಾಗಿದೆ. ಕೈಯಲ್ಲಿರುವ ಜ್ಯೋತಿಯ ಎತ್ತರ ಸೇರಿದಂತೆ ಪ್ರತಿಮೆ 305 ಅಡಿ ಎತ್ತರವಾಗಿದೆ. ಕೇವಲ ಪ್ರತಿಮೆಯ ಎತ್ತರ 151 ಅಡಿ. ಈ ಪ್ರತಿಮೆಯ ಹೊರ ಪದರದ ದಪ್ಪ 2 ನಾಣ್ಯಗಳನ್ನು ಒಟ್ಟುಗೂಡಿಸಿದಾಗ ಎಷ್ಟಿದೆಯೋ ಅಷ್ಟಿದೆ. ತಾಮ್ರದ ಪದರವನ್ನು ಉಕ್ಕಿನ ಸರಳುಗಳೊಂದಿಗೆ ಪರಸ್ಪರ ಜೋಡಿಸಲಾಗಿದೆ. ಈ ಕಾರಣದಿಂದ ಮೂರ್ತಿಗೆ ಗಟ್ಟಿತನ ಬಂದಿದೆ.

ಅದಕ್ಕೆ 1811ರಲ್ಲಿಯೇ ಅಡಿಪಾಯ ಹಾಕಲಾಯಿತು. ಇಂದು ಲಿಬರ್ಟಿ ಐಲ್ಯಾಂಡ್‌ ಎಂದು ಕರೆಯುವ ಪ್ರದೇಶ ಹಿಂದೆ `ಬೆಡ್‌ ಲೋಯ್‌' ಎಂದು ಕರೆಯಲ್ಪಡುತ್ತಿತ್ತು.

ಅಲ್ಲಿ ಆಗ ನಕ್ಷತ್ರಾಕಾರದ ಒಂದು ಕೋರ್ಟ್‌ನ್ನು ನಿರ್ಮಿಸಲಾಯಿತು. 54 ವರ್ಷದ ಬಳಿಕ ಅಂದರೆ 1865ರಲ್ಲಿ ಫ್ರಾನ್ಸ್ನ ಕಲಾವಿದರ ತಂಡವೊಂದರ ನೇತೃತ್ವವನ್ನು ಎಡ್ವರ್ಡ್‌ ಲೆಬೊಯೀರಾ ವಹಿಸಿದ್ದರು. ಅವರ ತಲೆಯಲ್ಲಿಯೇ ಲಿಬರ್ಟಿ ಪ್ರತಿಮೆಯ ಬಗ್ಗೆ ಮೊದಲ ಬಾರಿಗೆ ವಿಚಾರವೊಂದು ಬಂತು. ಬಳಿಕ ಅದಕ್ಕೆ ಮೂರ್ತರೂಪ ಕೊಡಲು ಕಲಾವಿದರ ಜೊತೆಗೆ ಚರ್ಚಿಸಿದರು. ಅವರು ಇದನ್ನು ಅಮೆರಿಕಕ್ಕೆ ಲಿಬರ್ಟಿ ಅಂದರೆ ಸ್ವಾತಂತ್ರ್ಯದ ಪ್ರತೀಕವಾಗಿ ಉಡುಗೊರೆಯಾಗಿ ನೀಡಲು ಬಯಸಿದ್ದರು. ಏಕೆಂದರೆ ಅದೇ ಸಮಯದಲ್ಲಿ ನಾಗರಿಕ ಯುದ್ಧ ಮುಗಿದು, ದಾಸ್ಯ ಸಂಪ್ರದಾಯ ಕೊನೆಗೊಂಡಿತ್ತು.

ದೇಶವನ್ನು ಪ್ರಗತಿ ಪಥದಲ್ಲಿ ಕೊಂಡೊಯ್ಯಲು ಯೋಚಿಸಲಾಗುತ್ತಿತ್ತು. ಸ್ಮಾರಕಗಳು ಹಾಗೂ ಕಟ್ಟಡಗಳನ್ನು ನಿರ್ಮಿಸುವ ಹೊಸ ಹೊಸ ವಿಧಾನಗಳನ್ನು ಕಂಡುಹಿಡಿಯಲಾಗುತ್ತಿತ್ತು.

1871ರಲ್ಲಿ ಎಡ್ವರ್ಡ್‌ ಡಿ. ಬಾತೋಲ್ಡಿ ಅಮೆರಿಕವನ್ನು ಸುತ್ತಾಡಿ ಬಂದ ಹಾಗೂ ನ್ಯೂಯಾರ್ಕ್‌ ಬಂದರಿನಲ್ಲಿ ಅದಕ್ಕಾಗಿ ಸ್ಥಳ ನಿಗದಿ ಮಾಡಿದ. 1877ರಲ್ಲಿ ಈ ಸ್ಥಳದ ಆಯ್ಕೆಗೂ ಕಾಂಗ್ರೆಸ್‌ಗೆ ಅಧಿಕಾರ ನೀಡಲಾಯಿತು. ಸರ್ಕಾರದ ಬಳಿ ಹಣದ ಕೊರತೆ ಇತ್ತು. ಹೀಗಾಗಿ ಖಾಸಗಿಯಾಗಿ ಹಣ ಸಂಗ್ರಹಿಸಿ ಈ ಸ್ಮಾರಕವನ್ನು ಸ್ಥಾಪಿಸಲು ಒಂದು ದೊಡ್ಡ ಅಭಿಯಾನವನ್ನೇ ನಡೆಸಲಾಯಿತು.

1879ರಲ್ಲಿ ಅಲೆಗ್ಸಾಂಡರ್‌ ಗೋಸ್ಪೆಲ್ ಐಫೆಲ್ ‌ಅವರು ಮೂರ್ತಿಯ ಆಂತರಿಕ ಭಾಗದ ಡಿಸೈನ್‌ ಸಿದ್ಧಪಡಿಸಿದರು ಈ ಐಫೆಲ್ ಬೇರಾರೂ ಅಲ್ಲ, ಐಫೆಲ್ ‌ಟವರ್‌ನ ನಿರ್ಮಾಣ ಕರ್ತೃ. 1881ರಿಂದ 1884ರಲ್ಲಿ ಪ್ಯಾರಿಸ್‌ನಲ್ಲಿ ಪ್ರತಿಮೆಯ ಅಸೆಂಬಲ್ ಕಾರ್ಯ ನಡೆಯಿತು. ಬಳಿಕ 1884ರಲ್ಲಿ ರಿಚರ್ಡ್‌ ಮೋರಿಸ್‌ ಅವರು ಪೀಠದ ವಿನ್ಯಾಸ ಮಾಡಿದರು.

ಆಕರ್ಷಣೆಯ ಕೇಂದ್ರ 1885ರಲ್ಲಿ ಪ್ರತಿಮೆಯನ್ನು ಬಿಡಿ ಬಿಡಿ ರೂಪದಲ್ಲಿ ನ್ಯೂಯಾರ್ಕ್‌ಗೆ ಹಡಗಿನ ಮೂಲಕ ತರಲಾಯಿತು. ಅದೇ ಸಮಯದಲ್ಲಿ ಪ್ರತಿಮೆಯನ್ನು ನಿಲ್ಲಿಸುವ ಪೀಠದ ನಿರ್ಮಾಣಕ್ಕಾಗಿ ದೇಶಾದ್ಯಂತ ಹಣ ಸಂಗ್ರಹ ನಡೆಯುತ್ತಿತ್ತು. ಇನ್ನೊಂದೆಡೆ ಅದನ್ನು ಪುನರ್‌ಜೋಡಣೆ ಮಾಡುವ ಕೆಲಸ ಆರಂಭವಾಗಿತ್ತು. 1886ರ ಅಕ್ಟೋಬರ್‌ರಂದು ಜೋಡಣೆ ಕಾರ್ಯ ಮುಗಿದು ಸ್ಥಾಪನೆ ಕಾರ್ಯ ನೆರವೇರಿತು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ