ಫ್ಯಾಷನ್ಮಾಡೆಲ್ ಅಲ್ಲ ಗಾಯಕಿ :  ಅಮೆರಿಕಾದಲ್ಲಿ ಗಾಯಕಿಯರು ಕೇವಲ ಸಿರಿಕಂಠದವರಾದರೆ ಸಾಲದು, ಉತ್ತಮ ಪರ್ಸನಾಲಿಟಿ ಸಹ ಹೊಂದಿರಬೇಕು,  ಆಗ ಮಾತ್ರ ಅವರನ್ನು ವೀಕ್ಷಕರು ಸ್ಟೇಜ್‌ ಮೇಲೆ ಸಹಿಸಿಕೊಳ್ಳುತ್ತಾರೆ. ಆಧುನಿಕ ಪಾಶ್ಚಾತ್ಯ ಸಂಗೀತದ ಸರ್ವಶ್ರೇಷ್ಠ ಗ್ರ್ಯಾಮಿ ಅವಾರ್ಡ್‌ ಪಡೆಯಲೆಂದು ಇತ್ತೀಚೆಗೆ ಜಾಯ್‌ ವಿಲಾ ಕ್ಯಾಲಿಫೋರ್ನಿಯಾ ತಲುಪಿದಾಗ ತೋರಿದ ಭಂಗಿ.

ರಂಗುರಂಗಿನ ಮೋಜು ಮಜಾ : ಸ್ಪ್ಯಾನಿಶ್‌ಲೆನೆರಿ ಐರ್ಲೆಂಡ್‌ನಲ್ಲಿ ಸಾಂತಾ ಕ್ರೂಜ್‌ ಕಾರ್ನಿವಾಲ್ ‌ಆದಾಗ, ಇಡೀ ಫೇರಿಲ್ಯಾಂಡ್‌ರಸ್ತೆಗೆ ಇಳಿದುಬಂದಂತೆ ಅನಿಸುತ್ತದೆ. ಇದರಲ್ಲಿ ಮಕ್ಕಳದೇ ಸಿಂಹಪಾಲು. ಅಲ್ಲಿ ತಿಂಗಳಿಡೀ ರಸ್ತೆಗಳು ರಂಗುರಂಗಾಗಿ ಮೋಜು ಮಜಾ ಮಸ್ತಿಗಳಿಂದ ಇಡೀ ವಾತಾವರಣ ಕಳೆಗಟ್ಟುತ್ತದೆ. ಸಹಸ್ರಾರು ತಂಡಗಳು ತಮ್ಮದೇ ನಾನಾ ಬಗೆಯ ಫ್ಯಾನ್ಸಿ ಡ್ರೆಸ್‌ಗಳಿಂದ ಕುಣಿಯುತ್ತಾರೆ. ಇಡೀ ರಾತ್ರಿ ನಗರ ಝಗಮಗಿಸುತ್ತದೆ. ಮೋಜು, ಮಜಾ ಅಂದ್ರೆ ಹೀಗಿರಬೇಕಲ್ಲವೇ?

ಸುರಕ್ಷತೆ ಅರಸುತ್ತಾ ಪೊಲೀಸರ ಬಳಿ ಬಂದಾಗ :  ಇವರು ತಾವಾಗಿ ಪೊಲೀಸರ ಬಳಿ ಬಂದವರಲ್ಲ, ರೈಡ್‌ ನಡೆದಾಗ ವೇಶ್ಯಾ ಗೃಹದಿಂದ ಸಿಕ್ಕಿಬಿದ್ದರು. ಇವರ ಗ್ರಾಹಕರೆಲ್ಲ ಕೋಟ್ಯಧೀಶರಂತೆ! ಅಂಥವರಲ್ಲಿ ವಿಶ್ವಸಂಸ್ಥೆಯ ಫೌ ನ ಮಾಜಿ ಮುಖ್ಯಸ್ಥ ಡಾಮ್ನಿಕ್‌ಸ್ಟ್ರಾ ಸಹ ಒಬ್ಬರು. ಈತನ ಮೇಲೆ ಈಗಾಗಲೇ ನ್ಯೂಯಾರ್ಕಿನ ಒಬ್ಬ ಹೋಟೆಲ್ ‌ಮೆಯ್ಡ್‌ನ್ನು ರೇಪ್‌ ಮಾಡಿದನೆಂಬ ಆರೋಪವಿದೆ. ಈ ವೇಶ್ಯಾಗೃಹ ಫೈವ್ ಸ್ಟಾರ್‌ ಹೋಟೆಲ್‌ನಲ್ಲಿ ನಡೆಯುತ್ತಿತ್ತು. ಈ ಹುಡುಗಿಯರಿಗೂ ಗ್ರಾಹಕರಿಗೂ ನಡುವೆ ತಕರಾರು ಇಲ್ಲದಿರುವಾಗ ಪೊಲೀಸರದೇನಿಲ್ಲಿ ಮೆಹರ್ಬಾನಿ?

samachar-darshan-3

ಮೇರೆ ಮೀರಿದ ಕಸರತ್ತು : ಈಗ ಸರ್ಕಸ್‌ಗಳಲ್ಲಿ ಪ್ರಾಣಿಗಳನ್ನು ಬಳಸುವಂತಿಲ್ಲ. ಆಕರ್ಷಣೆ ಇಲ್ಲದಿದ್ದ ಮೇಲೆ ಜನ ಸರ್ಕಸ್‌ಗೇಕೆ ಬಂದಾರು? ಹೀಗಾಗಿ ಸೆಕ್ಸೀ ಹುಡುಗಿಯರನ್ನು ವಿಭಿನ್ನ ಕಸರತ್ತು ಪ್ರದರ್ಶಿಸಲು ಇದಕ್ಕಾಗಿ ಬಳಸಿಕೊಳ್ಳುತ್ತಾರೆ. ಇತ್ತೀಚೆಗೆ ಫ್ರಾನ್ಸ್ ನ ಪ್ಯಾರಿಸ್‌ನಲ್ಲಿ ಪ್ರದರ್ಶಿಸಲಾದ ಈ ಹುಡುಗಿಯರ ಕಮಾಲ್ ‌ಕಂಡು ಬೇಸ್ತು ಬೀಳದ ಎಂಟೆದೆಯ ಭಂಟರುಂಟೇ? ಇಂಥ ಬಳುಕು, ಭಾವಭಂಗಿಗಳಿಗೆ ಎಂಥ ಪುರುಷ ಪುಂಗನೂ ಕರಗದಿರಲಾರ.

ಪ್ರತಿಭಟನೆಗೆ ಹೀಗೊಂದು ಪರಿ : ಫೆಮೆನ್‌ ಗ್ರೂಪ್‌ನ ವಾಲಂಟಿಯರ್ಸ್‌, ಯೂರೋಪಿನ ಪೊಲೀಸರಿಗೆ ದೊಡ್ಡ ಸವಾಲಾಗಿದ್ದಾರೆ. ಏಕೆಂದರೆ ಈ ಹುಡುಗಿಯರು ಯಾವುದೇ ವಿಷಯಕ್ಕೆ ಪ್ರತಿಭಟನೆ ಸೂಚಿಸಲು ತಕ್ಷಣ ಬಟ್ಟೆ ಕಳಚಿ, ಬೆನ್ನಿನ ಮೇಲೆ ಚಿತ್ರವಿಚಿತ್ರವಾಗಿ ಗೀಚಿಕೊಂಡು ರಸ್ತೆಬದಿ ನಿಂತುಬಿಡುತ್ತಾರೆ. ವಿಡಂಬನೆ ಎಂದರೆ ದಿನೇದಿನೇ ಈ ಸಂಘದ ಸದಸ್ಯೆಯರ ಸಂಖ್ಯೆ ಹೆಚ್ಚುತ್ತಿರುವುದು. ಎಂಥ ಧೀರೋದಾತ್ತ ಗಂಡಸೂ ಹೆಣ್ಣಿನ ಮುಂದೆ ಶರಣೆನ್ನುವಾಗ, ಪಾಪ, ಅಲ್ಲಿನ ಸರ್ಕಾರ ಈ ವಿವಸ್ತ್ರ ಯುವತಿಯರ ಮನವಿ ತಿರಸ್ಕರಿಸೀತೇ.....?

samachar-darshan-6

ಇದೆಂಥ ಪರದೆ :  ಇವಳು ಹಳೆಯ ಹಿಂದಿ ಚಿತ್ರಗಳ ನಾಯಕಿ ಅಲ್ಲ, ಆದರೆ ಮಹಾನ್‌ ಚೆಲುವೆ ಹೌದು! ಹೀಗಾಗಿ ನೆಟೆಡ್‌ ಪರದೆ ಧರಿಸಿ ಚೆಲುವನ್ನು ತುಸು ಮರೆಮಾಚಲು ಯತ್ನಿಸಿದ್ದಾಳೆ. ಪ್ಯಾರಿಸ್‌ನಲ್ಲಿ ನಡೆದ ಫ್ಯಾಷನ್‌ ಶೋ ಒಂದರ ದೃಶ್ಯವಿದು.

ನೋಡಲಿಕ್ಕೋ..... ತಿನ್ನಲಿಕ್ಕೋ :  ಇದು ಕಾರ್ಟೂನ್‌ ಕ್ಯಾರೆಕ್ಟರ್‌ ಅಹುದಾದರೂ ಇದನ್ನು ಸವಿಯಲೂಬಹುದು, ಏಕೆಂದರೆ ಇದು ಚಾಕಲೇಟ್‌ ಬೊಂಬೆ. ಇಂಥ 2 ಜಪಾನಿನ ಕಾರ್ಟೂನ್‌ಗಳನ್ನು 300 ಕೆ.ಜಿ. ಚಾಕಲೇಟ್‌ನಿಂದ ಕಳೆದ ವ್ಯಾಲೆಂಟೈನ್‌ ಡೇಗೆಂದು ಟೋಕಿಯೋದ ಒಂದು ಕನ್‌ಫೆಕ್ಷನರಿ ಕಂಪನಿ ರೂಪಿಸಿತ್ತು. ಜಪಾನಿನಲ್ಲಿ ಕ್ರೈಸ್ತರ ಸಂಖ್ಯೆ ಕಡಿಮೆಯಾದರೂ ಅವರು ತಮ್ಮ ಇತರ ಗೆಳೆಯರ ಜೊತೆಗೂಡಿ ಕ್ರಿಸ್‌ಮಸ್‌, ಈಸ್ಟರ್‌, ವ್ಯಾಲೆಂಟೈನ್‌ ಡೇ ಇತ್ಯಾದಿ ಆಚರಿಸುತ್ತಾರೆ. ಎಲ್ಲರೂ ಖುಷಿಯಿಂದ ಸಂಭ್ರಮಿಸಲು ಯಾವ ಹಬ್ಬ ಆದರೇನಂತೆ?

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ