ಪ್ರಯಾಣದ ಖುಷಿ ಹೆಚ್ಚಿಸಲು ಮಕ್ಕಳ ಬೇಸಿಗೆಯ ರಜೆ ದಿನಗಳು ಇಡೀ ಕುಟುಂಬಕ್ಕೆ ಎಲ್ಲಿಯಾದರೂ ಹೊರಗೆ ಸುತ್ತಾಡುವ ಅವಕಾಶವನ್ನು ತಂದುಕೊಡುತ್ತವೆ. ಆದರೆ ಈ ಎಲ್ಲದರ ಖುಷಿ ನಿಮಗೆ ದೊರೆಯುವುದು ನಿಮ್ಮ ಸಿದ್ಧತೆಗಳೆಲ್ಲ ಅಚ್ಚುಕಟ್ಟಾಗಿ ಪೂರ್ಣಗೊಂಡಾಗಲೇ. ನಿಮ್ಮ ಸಿದ್ಧತೆಗಾಗಿ ಕೆಳಕಂಡ ಸಂಗತಿಗಳನ್ನೊಮ್ಮೆ ಗಮನಿಸಿ.

ಬಟ್ಟೆಗಳಲ್ಲಿ ಜೀನ್ಸ್, ಟಾಪ್ಸ್, ಕುರ್ತಾ ಇವನ್ನು ಒಂದೆರಡು ಹೆಚ್ಚಾಗಿಯೇ ಇಟ್ಟುಕೊಳ್ಳಿ.

ಮೊಬೈಲ್‌ನಲ್ಲಿ ಕಾಂಟ್ಯಾಕ್ಟ್ ನಂಬರ್‌ ಇರುವುದರ ಜೊತೆ ಜೊತೆಗೆ ಪರ್ಸ್‌ನಲ್ಲಿ ಒಂದು ಪುಟ್ಟ ಡೈರಿ ಕೂಡ ಇರಲಿ. ಅದರಲ್ಲಿ ನಿಮ್ಮ ಮನೆಯವರ, ಸ್ನೇಹಿತರ, ಸಂಬಂಧಿಕರ ಮುಖ್ಯವಾದ ಫೋನ್‌ ನಂಬರ್‌ಗಳನ್ನು ಬರೆದಿಡಿ. ಬ್ಯಾಟರಿ ಸಮಸ್ಯೆಯಿಂದ ಮೊಬೈಲ್ ‌ಸ್ವಿಚ್‌ ಆಫ್‌ ಆದರೂ ಆಪತ್ಕಾಲದಲ್ಲಿ ಇದು ನಿಮ್ಮ ನೆರವಿಗೆ ಬರುತ್ತದೆ.

ನೀರಿನ ಬಾಟಲ್, ಎನರ್ಜಿ ಡ್ರಿಂಕ್ಸ್ ಮತ್ತು ಕೆಲವು ಬಗೆಯ ಡ್ರೈ ಫ್ರೂಟ್ಸ್ ಗಳನ್ನು ಜೊತೆಗೆ ಇಟ್ಟುಕೊಳ್ಳಿ.

ಚಿಕ್ಕ ಮಕ್ಕಳಿಗಾಗಿ ಗೇಮ್ಸ್, ಪೋರ್ಟೆಬಲ್ ಮ್ಯೂಸಿಕ್‌ ಸಿಸ್ಟಮ್, ಐಪಾಡ್‌, ಮೊಬೈಲ್ ‌ಡೌನ್‌ಲೋಡ್ಸ್ ಜೊತೆಗೆ ಇಟ್ಟುಕೊಳ್ಳಿ.

ಚಿಕ್ಕ ಟಾರ್ಚ್‌, ಬಿಸಿಲಿನಿಂದ ಕಣ್ಣಿಗೆ ರಕ್ಷಣೆ ನೀಡುವ ಕನ್ನಡಕಗಳು, ಕ್ಯಾಪ್ಸ್, ಕಾಟನ್‌ ಸ್ಕಾರ್ಫ್‌ನ ಜೊತೆಗೆ ಮೊಬೈಲ್ ‌ಹಾಗೂ ಲ್ಯಾಪ್‌ಟಾಪ್‌ನ ಚಾರ್ಜರ್‌ ಕೂಡ ಜೊತೆಗಿಟ್ಟುಕೊಳ್ಳಿ.

ಬೇರೊಂದು ಪೌಚ್‌ನಲ್ಲಿ ಪೇಪರ್‌ ಸೋಪ್‌, ಬಾಚಣಿಗೆ, ಪುಟ್ಟ ಟೂಥ್‌ ಪೇಸ್ಟ್, ಬ್ರಶ್‌, ಶೇವಿಂಗ್‌ ಕಿಟ್‌ ಮತ್ತು ಅಗತ್ಯಕ್ಕನುಗುಣವಾದ ಮೇಕಪ್‌ ಸಾಮಗ್ರಿ ಇಟ್ಟುಕೊಳ್ಳಿ.

ನೀವು ಯಾವುದಾದರೂ ಗಿರಿ ಪ್ರದೇಶಗಳಿಗೆ ಹೋಗುತ್ತಿದ್ದರೆ ಬೆಚ್ಚಗಿನ ಬಟ್ಟೆಗಳು, ಶಾಲು ಮುಂತಾದವು ಕೂಡ ಇರಲಿ.

ಫಸ್ಟ್ ಏಡ್‌ ಕಿಟ್‌ ಸಹ ಜೊತೆಗಿಟ್ಟುಕೊಂಡರೆ ಒಳ್ಳೆಯದು.

ಪ್ರವಾಸದ ಟಿಕೆಟ್‌, ಏಜೆಂಟ್‌ರ ಕಾಂಟ್ಯಾಕ್ಟ್ ನಂಬರ್‌, ಬುಕಿಂಗ್‌ ರಸೀದಿ, ನಿಮ್ಮ ಐಡಿ ಪ್ರೂಫ್‌ನ ಝೆರಾಕ್ಸ್ ಪ್ರತಿ ಇಟ್ಟುಕೊಳ್ಳಿ.

-  ವಿನುತಾ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ