ಹದಿಹರೆಯಕ್ಕೆ ಕಾಲಿಡುತ್ತಿರುವ ಪ್ರತಿಯೊಬ್ಬ ಹುಡುಗಿಗೂ ತನ್ನ ಅತಿ ನಿಕಟವರ್ತಿಯಿಂದ, ಅವಳು 100% ನಂಬಿಕೆ ಇರಿಸಬಹುದಾದ ವಿಶ್ವಾಸಾರ್ಹ ಮಾಹಿತಿ ಅತ್ಯಗತ್ಯ ಬೇಕು. ಇಂಥ ವಿಷಯವನ್ನು ಹಿರಿಯಕ್ಕ, ತಾಯಿ ಮುಂತಾದವರು ಮಾತ್ರವೇ ಗೈಡ್‌ ಮಾಡಲು ಸಾಧ್ಯ. ಅದರಲ್ಲೂ ತಾಯಿಯ ಜವಾಬ್ದಾರಿ ಮಹತ್ವಪೂರ್ಣವಾದುದು.

ಎಷ್ಟೋ ಸಲ ಮನೆಯ ಹಿರಿಯ ಹೆಂಗಸರಾದ ಇಂಥವರಿಗೇ ಈ ಕುರಿತು ಸಲಹೆ ನೀಡುವಷ್ಟು ತಿಳಿವಳಿಕೆ ಇರುವುದಿಲ್ಲ. ಅವರು ಹೊರಗಿನ ಮೂಲದಿಂದ ಈ ಕುರಿತು ಮಾಹಿತಿ ಪಡೆಯಲಿಕ್ಕೂ ಯತ್ನಿಸುವುದಿಲ್ಲ. ಕೆಲವರಿಗೆ ಬೇರೆ ಭಾಷೆಯಾದ ಕಾರಣ, ಇನ್ನಾವುದೋ ಕಾರಣದಿಂದ, ಸಾಮಾನ್ಯವಾಗಿ ಸೂಕ್ತ ಮಾಧ್ಯಮದ ಕೊರತೆಯಿಂದ ದೊಡ್ಡ ಸಮಸ್ಯೆಯಾಗಿ ಕಾಡುತ್ತದೆ.

ಹೀಗಾಗಿಯೇ ಕಿಶೋರಾವಸ್ಥೆಗೆ ಕಾಲಿಡುತ್ತಿರುವ ಹದಿಹರೆಯದ ಹೆಣ್ಣುಕ್ಕಳಿಗೆಂದೇ ಅವರ ಸಮಸ್ಯೆಗಳನ್ನು ಪರಿಹರಿಸಲು ಮುಂದಾಗಿದ್ದಾರೆ ಅದಿತಿ ಗುಪ್ತಾ. ಆಕೆ ಮೆನ್‌ಸ್ಟ್ರುಪೀಡಿಯಾ ಎಂಬ ವೆಬ್‌ಸೈಟ್‌ ಲಾಂಚ್‌ ಮಾಡಿದ್ದಾರೆ. ಇದರಲ್ಲಿ ಮುಟ್ಟಿನ ಕುರಿತಾದ ಸಮಸ್ತ ಮಾಹಿತಿಗಳು, ಆರೋಗ್ಯ ಸ್ವಚ್ಛತೆಯ ಕುರಿತಾಗಿ ಸಮಾಜಕ್ಕೆ ಶಿಕ್ಷಣ ನೀಡುವ ಪ್ರಯಾಸದಲ್ಲಿದ್ದಾರೆ. ನಮ್ಮ  ಸಮಾಜದಲ್ಲಿ ಇದರ ಕುರಿತಾಗಿ ಇರುವ ಮೂಢನಂಬಿಕೆ, ಕಂದಾಚಾರದ ಪದ್ಧತಿಗಳು ತಪ್ಪಬೇಕೆಂಬುದೇ ಅವರ ಗುರಿ.

ಜಾರ್ಖಂಡ್‌ ರಾಜ್ಯದ ಸಣ್ಣ ಊರಾದ ಗಢ್ವಾದ ಮೂಲದವರಾದ ಅದಿತಿ, ಪ್ರಾಥಮಿಕ ಶಿಕ್ಷಣವನ್ನು ಗಢ್ವಾ, ರಾಂಚಿಗಳಲ್ಲಿ ಪಡೆದರು. ನಂತರ ಆಕೆ ಆಗ್ರಾದಲ್ಲಿ ಎಲೆಕ್ಟ್ರಾನಿಕ್ಸ್ ನಲ್ಲಿ ಎಂಜಿನಿಯರಿಂಗ್‌ ಮಾಡಿದರು. ನಂತರ ಅಹಮದಾಬಾದ್‌ನಲ್ಲಿ `ದಿ ನ್ಯಾಷನಲ್ ಇನ್‌ಸ್ಟಿಟ್ಯೂಟ್‌ ಆಫ್‌ ಡಿಸೈನ್‌' ವಿಷಯದಲ್ಲಿ ಪಿ.ಜಿ. ಮುಗಿಸಿದರು.

ಈ ಸಂಸ್ಥೆಯನ್ನು ಸ್ಥಾಪಿಸಲು ಈಕೆಗಿದ್ದ ಮುಖ್ಯ ಉದ್ದೇಶವೆಂದರೆ, ಎಲ್ಲಾ ಹುಡುಗಿಯರು ಹಾಗೂ ಅವರ ಮನೆಯ ಹಿರಿಹೆಂಗಸರಿಗೆ ಮುಟ್ಟಿನ ಕುರಿತಾಗಿ ಸಂಪೂರ್ಣ ಮಾಹಿತಿ ಒದಗಿಸುವುದು ಹಾಗೂ ಎಲ್ಲಾ ಹೆಂಗಸರೂ ಆ 3 ದಿನಗಳನ್ನು ಯಮಯಾತನೆಯಾಗಿ ಭಾವಿಸದೆ, ಸಹಜವಾಗಿ ಎದುರಿಸಬೇಕು ಎಂಬುದು. ಆಕೆ ಹೇಳುವುದೆಂದರೆ, ಈ ವೆಬ್‌ಸೈಟ್‌ ಮೂಲಕ ನಾವು ಇಡೀ ಭಾರತೀಯ ಸಮಾಜದಲ್ಲಿ ಜಾಗೃತಿ ಮೂಡಿಸುತ್ತಿದ್ದೇವೆ. ಹೀಗಾಗಿ ಈ ವಿಷಯದ ಕುರಿತು ಅತ್ಯಧಿಕ ಮಾಹಿತಿಯನ್ನು ಎಲ್ಲರಿಗೂ ತಲುಪಿಸುತ್ತೇವೆ.

ಅದರಿಂದ ಜನ ಇದರ ಕುರಿತು ಕೂಲಂಕಷವಾಗಿ ತಿಳಿದುಕೊಂಡು ತಮ್ಮ ಸಂಸ್ಥೆಯವರೊಂದಿಗೆ ಮಾತನಾಡಿ ಸಂದೇಹ ನಿವಾರಿಸಿಕೊಂಡು ಅದನ್ನು ಬೇರೆಯವರಿಗೂ ತಿಳಿಸಿಕೊಡಬೇಕೆಂಬುದು.ಅದಿತಿ ಹೇಳುತ್ತಾರೆ, ``ಪ್ರತಿ ತಿಂಗಳೂ ನಮ್ಮ ವೆಬ್‌ಸೈಟ್‌ನ್ನು ಕನಿಷ್ಠ 2 ಲಕ್ಷ ಮಂದಿ ಗಮನಿಸುತ್ತಾರೆ. ಈ ವೆಬ್‌ಸೈಟ್‌ನಲ್ಲಿ 3 ಮುಖ್ಯ ಅನುಕೂಲಗಳಿವೆ. ಕ್ವಿಕ್‌ ಗೈಡ್‌, ಪ್ರಶ್ನೆ ಉತ್ತರ ಮತ್ತು ಬ್ಲಾಗ್‌. ಇದರ ಮೂಲಕ ಜನ ಮುಟ್ಟಿಗೆ ಸಂಬಂಧಿಸಿದ ಎಲ್ಲಾ ವಿಷಯಗಳನ್ನೂ ತಿಳಿಯಬಹುದಾಗಿದೆ. ಪ್ರಶ್ನೆ ಕೇಳಿ ಸಂದೇಹ ನಿವಾರಿಸಿಕೊಳ್ಳಬಹುದು. ವ್ಯಾವಹಾರಿಕ ಲೇಖನಗಳನ್ನೂ ಬರೆಯಬಹುದು. ನಾವು 90 ಪುಟಗಳ ಒಂದು ಕಾಮಿಕ್ಸ್ ಸಹ ಮಾಡಿದ್ದೇವೆ, ಇದು ಹಿಂದಿ, ಆಂಗ್ಲ ಭಾಷೆಗಳಲ್ಲಿ ಲಭ್ಯ. ಇಷ್ಟರಲ್ಲಿ ಇತರ ಎಲ್ಲಾ ಭಾರತೀಯ ಭಾಷೆಗಳಿಗೂ ಅನುವಾದ ಆಗಲಿದೆ.''

ಮೂಲ ಪ್ರೇರಣೆ

ಈ ಕುರಿತಾಗಿ ಅದಿತಿ, ``ನಾನು ನನ್ನ ಜೀವನದಲ್ಲಿ ಮುಟ್ಟಿನ ಕುರಿತಾಗಿ ಅನೇಕ ಹಿಂಸೆಗಳನ್ನು ಅನುಭವಿಸಿದ್ದೇನೆ, ಒಂದೊಂದಾಗಿ ಪರಿಹಾರ ಕಂಡುಕೊಂಡಿದ್ದೇನೆ. ಆದರೆ ಈ ಕುರಿತಾಗಿ ನನಗೆ ಹೆಚ್ಚಿನ ಮಾಹಿತಿ ಸಿಗುವುದಕ್ಕಿಂತ, ಬರೀ ಕಾಲ್ಪನಿಕ ಕಥೆಗಳೇ ಸಿಕ್ಕವು. ಅನೇಕ ಅಡ್ಡಿ ಅಡಚಣೆಯ ಸೀಮಾರೇಖೆಗಳಿದ್ದವು. ಇದೆಲ್ಲವನ್ನೂ ತಿಳಿದು ನನ್ನ ಆತ್ಮವಿಶ್ವಾಸ ಹಾಗೂ ಸ್ವಾಭಿಮಾನಕ್ಕೆ ಆಳವಾದ ಪರಿಣಾಮ ಉಂಟಾಯಿತು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ