ರಾಧಾ : ಏನ್ರಿ.... ನಾಳೆ ನೆಂಟರು ಬರ್ತಿದ್ದಾರೆ, ಆದರೆ ಮನೆಯಲ್ಲಿ ಬೇಳೆ ಬಿಟ್ಟರೆ ಏನೂ ಇಲ್ಲ.

ಮೋಹನ್‌ : ಅಷ್ಟೇ ತಾನೇ? ಅತಿಥಿಗಳು ಬಂದು ಅರ್ಧ ಗಂಟೆ ಆಗುವಷ್ಟರಲ್ಲಿ ನೀನು ಅಡುಗೆಮನೆಯಲ್ಲಿ 1 ಪಾತ್ರೆ ಬೀಳಿಸಿ `ಅಯ್ಯೋ!' ಅನ್ನು. ಏನಾಯ್ತು ಅಂತ ನಾನು ಕೇಳಿದಾಗ, `ಛೇ....ವೆಜಿಟೆಬಲ್ ಕುರ್ಮ ಪೂರ್ತಿ ಚೆಲ್ಲಿ ಹೋಯ್ತು,' ಅನ್ನು. ಆಮೇಲೆ ಸ್ವಲ್ಪ ಹೊತ್ತಿಗೆ ಇನ್ನೊಂದು ಪಾತ್ರೆ ಬೀಳಿಸು. ಏನಾಯ್ತು ಅಂತ ಕೇಳಿದಾಗ, `ಘೀ ರೈಸ್‌ ಬಿದ್ದು ಚೆಲ್ಲಿಹೋಯ್ತು,' ಅನ್ನು. ಆಗ ನಾನು `ಸರಿ, ಅನ್ನ ಬೇಳೆ ಸಾರು ತಗೊಂಬಾ,' ಅಂತೀನಿ. ಆಯ್ತಾ? ಹೇಗೋ ಮ್ಯಾನೇಜ್‌ ಮಾಡೋಣ.

ಮರೆಗುಳಿ ಸ್ವಭಾವದ ರಾಧಾ ಏನು ಮಾಡಿಬಿಡ್ತಾಳೋ ಎಂದು ಮೋಹನನಿಗೆ ಅಂಜಿಕೆ ಇತ್ತು. ಅತಿಥಿಗಳು ಬಂದ ನಂತರ 2 ಸಲ ಪಾತ್ರೆ ಬಿದ್ದು, ಮೋಹನ್‌ ಪ್ರಶ್ನೆ ಕೇಳಿದ್ದಾಯ್ತು. ಸ್ವಲ್ಪ ಹೊತ್ತಿನ ನಂತರ 3ನೇ ಪಾತ್ರೆಯೂ ಬೀಳಬೇಕೇ!

ಮೋಹನ್‌ : ಈಗೇನೇ ಆಯ್ತು?

ರಾಧಾ : ಈಗ ನಿಜವಾಗ್ಲೂ ಸಾರಿನ ಪಾತ್ರೆ ಬಿದ್ದುಹೊಯ್ತು!

 

ಸೆಕೆಂಡ್‌ ಶಿಫ್ಟ್ ಕೆಲಸ ಮುಗಿಸಿಕೊಂಡು ಪ್ರಸನ್ನ ಸೈಕಲ್ ಮೇಲೆ ಮನೆಗೆ ಹೋಗುತ್ತಿದ್ದ. ಆ ದಿನ ಸಂಬಳ ಬಂದಿತ್ತು. ಖುಷಿಯಲ್ಲಿ ಹಾಡುತ್ತಾ ಹೊರಟವನನ್ನು ರಾತ್ರಿ 11 ಗಂಟೆಯಲ್ಲಿ ಕಳ್ಳನೊಬ್ಬ ಅಡ್ಡಗಟ್ಟಿದ. ಇವನಿಗೆ ಭಾರಿ ಚೂರಿ ತೋರಿಸುತ್ತಾ ಕಳ್ಳ ಹೇಳಿದ, ``ಮರ್ಯಾದೆಯಾಗಿ ನಿನ್ನ ಜೇಬಿನಲ್ಲಿರುವ ಹಣ ಕೊಡು.... ಇಲ್ಲದಿದ್ದರೆ....''

``ಅಯ್ಯೋ ಹಾಗೆ ಮಾಡಬೇಡಪ್ಪ.... ಹಣ ಇಲ್ಲದೆ ಮನೆಗೆ ಹೋದರೆ ನನ್ನ ಹೆಂಡತಿ ನನ್ನನ್ನು ಅಡ್ಡಡ್ಡ ನುಂಗಿಬಿಡ್ತಾಳೆ....'' ಎಂದ ಪ್ರಸನ್ನ.

``ಈಗ ಏನೂ ಸಂಪಾದಿಸದೆ ನಿನ್ನ ಹಾಗೆ ಬಿಟ್ಟರೆ, ನನ್ನ ಹೆಂಡತಿ ಮಾತ್ರ ನನ್ನನ್ನು ಸುಮ್ಮನೆ ಬಿಟ್ಟುಬಿಡ್ತಾಳಾ?'' ಎಂದ ಆ ಅಸಹಾಯಕ ಕಳ್ಳ.

 

ವರುಣ್‌ : ನಾನು ಯಾವ ಕೆಲಸ ಮಾಡಲು ಹೋದರೂ ನನ್ನ ಹೆಂಡತಿ ಮಧ್ಯದಲ್ಲಿ ಅಡ್ಡ ಬರ್ತಾಳೆ.

ಕಿರಣ್‌ : ಯಾವುದಕ್ಕೂ ಒಂದು ಸಲ ಬುಲ್ಡೋಝರ್‌ ಓಡಿಸಿ ನೋಡು, ಆಗ ಈ ದುರಭ್ಯಾಸ ಬಿಡಬಹುದು.

 

ಪತ್ನಿ : ಕಳೆದ ವರ್ಷ ನನ್ನ ಹುಟ್ಟಿದ ಹಬ್ಬಕ್ಕೆ ಕಬ್ಬಿಣದ ಮಂಚವನ್ನು ಉಡುಗೊರೆಯಾಗಿ ಕೊಟ್ಟಿದ್ದಿರಿ, ಈ ಸಲ ಏನು ಕೊಡ್ತೀರಿ?

ಪತಿ : ಈ ಸಲ ಅದಕ್ಕೆ ಕರೆಂಟ್‌ ಕೊಟ್ಟುಬಿಡೀ ಅಂತ ನೋಡ್ತಿದ್ದೀನಿ.

 

ಸುರೇಶ್‌ : ಯಾರಿಗಾದರೂ ಕೆಟ್ಟ ಕಾಲ ಬಂದಾಗ, ಅವರ ಮನೆಯವರೆಲ್ಲ ಖಂಡಿತಾ ಅವರ ಹಿಂದೆ ನಿಲ್ಲುತ್ತಾರೆ.

ಸತೀಶ್‌ : ಯಾವುದನ್ನು ಆಧರಿಸಿ ಹೀಗೆ ಹೇಳುತ್ತಿದ್ದೀಯಾ?

ಸುರೇಶ್‌ : ನಂಬಿಕೆ ಇಲ್ಲ ಅಂದ್ರೆ ಯಾರದಾದ್ರೂ ಮದುವೆ ಫೋಟೋಗಳನ್ನು ನೋಡು.

 

ಒಮ್ಮೆ ಶ್ರೀಮಂತೆ ಅರವಿಂದಮ್ಮ ತಮ್ಮ ಮೂವರು ಅಳಿಯಂದಿರಲ್ಲಿ ಯಾರು ತಮ್ಮನ್ನು ಹೆಚ್ಚು ಆದರಿಸಿ, ಗೌರವಿಸುತ್ತಾರೆ ಎಂದು ತಿಳಿಯಲು ಬಯಸಿದರು. ಇದಕ್ಕಾಗಿ ಆಕೆ ಹಿರಿಯ ಅಳಿಯ ರಾಜೇಶನ ಎದುರು ಬೇಕುಬೇಕೆಂದೇ ಕಾಲು ಜಾರಿ ನದಿಗೆ ಬಿದ್ದುಬಿಟ್ಟರು. ಇದನ್ನು ನೋಡಿ ರಾಜೇಶ್‌ ಹಿಂದುಮುಂದು ಯೋಚಿಸದೆ ಕೂಡಲೇ ತಾನೂ ನದಿಗೆ ಬಿದ್ದು ಅತ್ತೆಮ್ಮನನ್ನು ಕಾಪಾಡಿದ. ಮಾರನೇ ದಿನ ರಾಜೇಶ್‌ ಮನೆ ಮುಂದೆ ಒಂದು ಹೊಸ ಹೋಂಡಾಸಿಟಿ ಕಾರು ನಿಂತಿತ್ತು. ಅದರ ಕನ್ನಡಿಯಲ್ಲಿ ಹೀಗೊಂದು ಸ್ಟಿಕರ್‌ ಸಿಗಿಸಲಾಗಿತ್ತು. `ಥ್ಯಾಂಕ್ಸ್, ಇದು ನಿನ್ನ ಅತ್ತೆಯ ಜೀವ ಉಳಿಸಿದ್ದಕ್ಕೆ ಪ್ರೀತಿಯ ಉಡುಗೊರೆ.'

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ