ಸ್ವಾರ್ಥಿಗಳೋ ಪುಕ್ಕಲರೋ? : ಕೋವಿಡ್ ವಿರುದ್ಧದ ಹೋರಾಟದಲ್ಲಿ ಭಾರತದಲ್ಲಿ ಕೇವಲ ಸರ್ಕಾರದ ಹೆಸರು ಮಾತ್ರ ಕೇಳಿಬರುತ್ತದೆ. ಅದೊಂದೇ ಅಸಲಿ ಮತ್ತು ಏಕಾಂಗಿ ಕಾಳಜಿದಾರ ಎಂಬಂತೆ. ಕೋವಿಡ್ ಮಹಾಮಾರಿ ವಿರುದ್ಧ ಹೋರಾಡಲು ವಾಲಂಟಿಯರ್ಸ್ ಫೋರ್ಸ್‌ನ ಅತಿ ಅಗತ್ಯವಿದೆ, ಆದರೆ ನಮ್ಮಲ್ಲಿ ಎಲ್ಲರೂ ಸ್ವಾರ್ಥಿಗಳು ಅಥವಾ ಹೆದರುಪಕ್ಕಲರು. ಇಲ್ಲಿ ನಮ್ಮ ಹೆಂಗಳೆಯರು ಕೊರೋನಾ ವಿರುದ್ಧ ತಾವಾಗಿ ಮುಂದೆ ಬಂದು ಏನೂ ಮಾಡಲಿಲ್ಲ, ಅನಗತ್ಯ ಸಂದರ್ಭಗಳಲ್ಲಿ ಆರತಿ ಮಾಡುವಂತೆ..... ವಿಶ್ವದೆಲ್ಲೆಡೆ ಯುನೈಟೆಡ್ ನೇಶನ್ಸ್ ಮತ್ತು ಅದನ್ನು ಸಪೋರ್ಟ್ ಮಾಡುವ ಸಂಸ್ಥೆಗಳು ಇದರ ವಿರುದ್ಧ ಅಹರ್ನಿಶಿ ಹೋರಾಡುತ್ತಲಿವೆ.
ಮುಂದಿನ ಆಡಳಿತ ಯಾರದು? : ಅಮೆರಿಕಾದಲ್ಲಿ ಇತ್ತೀಚೆಗೆ ಬೈಡನ್ ಮತ್ತು ಕಮಲಾ ಹ್ಯಾರಿಸ್‌ರ ಗೆಲುವಿಗಾಗಿ ಎಲ್ಲರೂ ರಸ್ತೆಗಳಲ್ಲಿ ಪಟಾಕಿ ಸಿಡಿಸಿ, ಕುಣಿದು ಕುಪ್ಪಳಿಸಿದ್ದು ನಿಜವಾದರೂ, ಇಡೀ ಅಮೆರಿಕಾ ಇಂದು ಖುಷಿಯಾಗಿದೆ ಎಂದೇನೂ ಅಲ್ಲ. ಅಮೆರಿಕಾ ಸಹ ಇಂದು ಭಾರತದಂತೆಯೇ ತೀರಾ ಭಿನ್ನ ಭಿನ್ನ ಜನರ ಸಮೂಹವಾಗಿದೆ. ಹೀಗಾಗಿ ಅಮೆರಿಕನಿಸಂ ಇಂದು ಟ್ರಂಪಿಸಂ ಆಗಿಹೋಗಿದೆ. ಕರಿಯರು, ಮೆಕ್ಸಿಕನ್ನರು, ವ್ಯಾಟಿನ್ನರು, ಭಾರತೀಯರ ದಂಡು ಇದೆ...... ಕೇವಲ ಸೇವೆಗಾಗಿ ಮಾತ್ರ. ಆದರೆ ಆಡಳಿತ ನಡೆಸುವವರು ಮಾತ್ರ ಪಕ್ಕಾ ಬಿಳಿಯರೇ, ಆ ವೋಟು ಬ್ಯಾಲೆಟ್ ಬಾಕ್ಸ್ ಅಥವಾ ಬುಲೆಟ್‌ನಿಂದಲೇ ದೊರಕಿರಲಿ!
ಸಾಮಾಜಿಕ ಪರಿರ್ತನೆಯ ಮಾಧ್ಯಮ : ಡ್ಯಾನ್ಸ್ ಕೇವಲ ಇತರರನ್ನು ಖುಷಿ ಪಡಿಸಲಿಕ್ಕೆ ಮಾತ್ರವಲ್ಲ, ಇದು ದೇಹದ ಕವಿತೆಯ ಅಭಿವ್ಯಕ್ತಿಯೂ ಹೌದು. ಪ್ರಾಚೀನ ಕಾಲದಿಂದ ಇದು ಧಾರ್ಮಿಕ ಕಂದಾಚಾರಿ ಮತ್ತು ರಾಜರ ಅಧೀನದಲ್ಲೇ ಕಂಟ್ರೋಲ್ ಆಗುತ್ತಿತ್ತು. ಫಿಲಿಪೀನ್ಸ್ ಸಹ ನಮ್ಮಂತೆಯೇ ಹಂಚಿ ಹೋಗಿರುವ ಅರ್ಧಂಬರ್ಧ ಪ್ರಜಾಪ್ರಭುತ್ವ ದೇಶವಾಗಿದೆ. ಒಬ್ಬ ಚಿಂತಕರ ಪ್ರಕಾರ, ಅಲ್ಲಿ ಡ್ಯಾನ್ಸ್ ಸಾಮಾಜಿಕ ಪರಿವರ್ತನೆಯ ಒಂದು ಮಾಧ್ಯಮವಾಗಲಿದೆ, ಒಂದು ಪಕ್ಷ ಜನ ಇದನ್ನು ಸರಿಯಾಗಿ ಪರಿಪಾಲಿಸಿದಲ್ಲಿ, ಇದು ದೇಹ ಮತ್ತು ಆತ್ಮ ಎರಡನ್ನೂ ಲಿಬರೇಟ್ ಮಾಡುತ್ತದೆ. ಹೀಗಾಗಿಯೇ ನಮ್ಮಲ್ಲಿ ಇಂದಿಗೂ ನೃತ್ಯ ಮಾಡುವವರನ್ನು ತುಸು ಕೀಳು ಎಂಬಂತೆ ಅವಮಾನಿಸಲಾಗುತ್ತದೆ.
ಅಭಿಮಾನಿಗಳಿಗೇನೂ ಕೊರತೆ ಇಲ್ಲ : ಅಮೆರಿಕಾದ ಫಿಲೆಡೆಲ್ಛಿಯಾದ ಮ್ಯೂಸಿಕ್ ಗ್ರೂಪ್, ಪಬ್ಲಿಕ್‌ನಲ್ಲಿ ಡ್ಯಾನ್ಸ್ ಪ್ರದರ್ಶನದ ನಿರ್ಬಂಧವಿದ್ದರೂ, ತಮ್ಮ ಮ್ಯೂಸಿಕ್ ಆಲ್ಬಂನ್ನು ರಿಲೀಸ್ ಮಾಡಿದ್ದಾರೆ, ಇದರಲ್ಲಿ ಅನೇಕ ಬಗೆಯ ಮೂಡ್‌ಗೆ ತಕ್ಕಂತೆ ಹಾಡುಗಳಿವೆ. ಈ ಚತುಷ್ಟಯರಂತೂ ಅಲ್ಲಿ ಬಹಳ ಪಾಪ್ಯುಲರ್ ಹಾಗೂ ಇವರುಗಳು ತಮ್ಮ ಹಾಡನ್ನು ರೆಕಾರ್ಡ್ ಮಾಡಿಸಲು ಬಹಳ ತಡ ಮಾಡುತ್ತಾರೆ. ಹೀಗಾಗಿ ಇವರ ಅನಂತಕೋಟಿ ಅಭಿಮಾನಿಗಳು ಇದಕ್ಕಾಗಿ ಸದಾ ಕಾಯುತ್ತಿರುತ್ತಾರೆ.
ಮಾಸ್ಕ್ ಅಂತೂ ಅತ್ಯಗತ್ಯ : ಈ ಅಂತಾರಾಷ್ಟ್ರೀಯ ಖ್ಯಾತಿವೆತ್ತ ಮಾಡೆಲ್ ಹಾಫ್ ವುಮೆನ್ ಹೇಳುತ್ತಾಳೆ, ಫ್ಯಾಷನ್ ಹೇಗೆ ಇರಲಿ ಮಾಸ್ಕ್ ಅಂತೂ ಇರಲೇಬೇಕು! ಇವಳ ಈ ಫ್ಯಾಷನ್ ಸ್ಟೇಟ್‌ಮೆಂಟ್ ಎಲ್ಲರನ್ನೂ ಚಕಿತಗೊಳಿಸಿದೆ. ಇದರಿಂದ ನೀವು, ನಿಮ್ಮ ಎದುರಿನವರೂ ಸುರಕ್ಷಿತರು ಎನ್ನುತ್ತಾಳೆ.