2 ವಾರಗಳಿಂದ ಗೀತಾ ಹಲ್ಲು ನೋವಿನಿಂದ ಹೈರಾಣಾಗಿದ್ದಳು ಅಂತೂ ಜೀವನದಲ್ಲಿ ಮೊದಲ ಸಲ ಡೆಂಟಿಸ್ಟ್ ಬಳಿ ಹೋಗುವ ಕರ್ಮ ಬಂದಿತು. ವಿಧಿಯಿಲ್ಲದೆ ತನ್ನನ್ನು ಹಳಿದುಕೊಳ್ಳುತ್ತಾ, ಕ್ಲಿನಿಕ್‌ ಪ್ರವೇಶಿಸಿದ ಗೀತಾ, ಟೋಕನ್‌ ಪಡೆದು ತನ್ನ ಸರದಿಗಾಗಿ ಕಾಯತೊಡಗಿದಳು. ಅಲ್ಲಿ ಡಾಕ್ಟರ್‌ ಹೆಸರನ್ನು ನೋಡಿ ದಂಗಾದಳು! ಚಂದ್ರ ಮೋಹನ್‌ ಎಂದು ಫೋಟೋ ಸಹ ಇತ್ತು. ಈ ಫಾರಿನ್‌ ರಿಟರ್ನ್ಡ್ ಡಾಕ್ಟರ್‌ ತಾನು ಹೈಸ್ಕೂಲಲ್ಲಿ ಓದುತ್ತಿದ್ದಾಗಿನ ಸಹಪಾಠಿ ಚಂದ್ರು ಎಂದು ಗೊತ್ತಾಯಿತು.

ಎಲ್ಲರಿಗಿಂತ ಸ್ಮಾರ್ಟ್‌ ಆಗಿದ್ದ ಆ ಚಂದ್ರುವನ್ನು ಗೀತಾ ಮನದಲ್ಲೇ ಮೆಚ್ಚಿಕೊಂಡಿದ್ದು, ಹೇಳಲಾರದೇ ಹೋಗಿದ್ದಳು. ಆ ಪ್ರೇಮ ಪುಳಕದಲ್ಲಿ ಮೈ ಮರೆತಿದ್ದವಳಿಗೆ, ಡಾಕ್ಟರ್‌ ಕರೆದು ಪರೀಕ್ಷಿಸಿ, ಚಿಕಿತ್ಸೆ ಮುಗಿಸುವವರೆಗೂ, ಪ್ರೇಮಲೋಕದಲ್ಲೇ ತೇಲುತ್ತಿದ್ದುದರಿಂದ ನೋವೇ ಗೊತ್ತಾಗಲಿಲ್ಲ.

ಫೀಸ್‌ ನೀಡಿ ಹೊರಡುವಾಗ, ಡಾಕ್ಟರ್‌ ಚಂದ್ರ ಮೋಹನ್‌ ಅದೇ ಕಳೆ ಉಳಿಸಿಕೊಂಡಿದ್ದರೂ ಈಗ ಬಾಲ್ಡಿ ಆಗಿ ದಪ್ಪಗಾಗಿ, ಸೋಡಾಬುಡ್ಡಿ ಏರಿಸಿದ್ದ.

``ನೀವು ಗೋವರ್ಧನ್‌ ದಾಸ್‌ ಸ್ಕೂಲಲ್ಲಿ ಹೈಸ್ಕೂಲ್ ‌ಪಾಸ್‌ ಮಾಡಿದ್ದಲ್ಲವೇ?'' ಗೀತಾ ಕೇಳಿದಳು.

``ಹೌದು. ನಿಮಗೆ ಹೇಗೆ ಗೊತ್ತಾಯ್ತು?'' ಡಾಕ್ಟರ್‌ ಕೇಳಿದರು.

``ಹೌದೇ.... 1976 ಅಥವಾ 1977, 10ನೇ ತರಗತಿ ಪಾಸ್‌ ಅಲ್ಲವೇ?''

``ಹೌದು, 1976! ಹೇಗೆ ಹೇಳಿದಿರಿ?''

``ನೀನು ನನ್ನ ಕ್ಲಾಸಿನಲ್ಲೇ ಇದ್ದದ್ದು!''

``ಹೌದಾ ಮೇಡಂ? ಯಾವಾಗ ರಿಟೈರ್‌ ಆದಿರಿ? ನನಗೆ ಯಾವ ಸಬ್ಜೆಕ್ಟ್ ಟೀಚ್‌ ಮಾಡ್ತಿದ್ರಿ?''

ರತ್ನಾ ದೂರದ ಏರಿಯಾದಲ್ಲಿದ್ದ ಮೆಕ್ಯಾನಿಕ್‌ ಮಂಜನಿಗೆ ಫೋನ್‌ ಮಾಡಿದಳು, ``ನೋಡಪ್ಪ, ಇಲ್ಲಿ ಹಂಸಾ ಕಾಲೋನಿಯ ದುರ್ಗಾ ಅಪಾರ್ಟ್‌ ಮೆಂಟ್ಸ್ ಗೆ 11 ಗಂಟೆ ನಂತರ ಬಾ. ನಮ್ಮ ಫ್ಯಾನ್‌ ಮತ್ತು ಟಿವಿ ಕೆಟ್ಟಿದೆ. ಅದನ್ನು ಪೂರ್ತಿ ರಿಪೇರಿ ಮಾಡಬೇಕು. ನಮ್ಮದು 8ನೇ ಮಹಡಿ. ಬಾಗಿಲ ಬಳಿ ಶೂ ಸ್ಟಾಂಡ್‌ ಇದೆ. ಅದರ ಕೆಳಗೆ ಕಿತ್ತುಹೋದ ಶೂನಲ್ಲಿ ಮನೆ ಕೀ ಇಟ್ಟಿರುತ್ತೇವೆ. ಬೇರೆ ಕೋಣೆ ಲಾಕ್‌ಆಗಿರುತ್ತೆ. ಹಾಲ್ ‌ಮಾತ್ರ ತೆರೆದು ನಿನ್ನ ರಿಪೇರಿ ಕೆಲಸ ಮುಗಿಸಿ ತೆಪ್ಪಗೆ ಹೊರಟುಬಿಡು. ಈಗ 500/ ರೂ. ಅಡ್ವಾನ್ಸ್ ಟ್ರಾನ್ಸ್ ಫರ್‌ ಮಾಡ್ತೀನಿ. ಸಂಜೆ ಬಂದು ನೋಡಿದ ತಕ್ಷಣ ಉಳಿದ ಹಣ ಕಳುಹಿಸ್ತೀನಿ. ಸರಿ ತಾನೇ?

``ಹ್ಞಾಂ, ಹಾಲ್ ‌ನಲ್ಲಿ ಒಂದು ದೈತ್ಯ ನಾಯಿ ಇರುತ್ತೆ. ಅದು ನಿನ್ನನ್ನು ಏನೂ ಮಾಡೋಲ್ಲ, ನಿನ್ನ ಪಾಲಿಗೆ ನಿನ್ನ ಕೆಲಸ ಮಾಡಿಕೊ. ಮೂಲೆಯಲ್ಲಿ ಗಿಣಿ ಒಂದು ಪಂಜರದಲ್ಲಿ ಇರುತ್ತೆ. ಅದಕ್ಕೆ ಬಾಯಿ ಜಾಸ್ತಿ. ಅದು ನಿನ್ನನ್ನು ಏನೇ ಅಂದು ಆಡಿಕೊಂಡರೂ ತೆಪ್ಪಗಿರು. ಅದರ ಸಹವಾಸಕ್ಕೆ ಹೋದೆಯೋ ನಡೆಯುವ ಕಥೆಯೇ ಬೇರೆ.... ಎಲ್ಲಾ ಅರ್ಥವಾಯ್ತಾ?''

``ಎಲ್ಲ ತಿಳಿಯಿತು ಬಿಡಿ,'' ಎಂದ ಮಂಜ. ರತ್ನಾ ಹೇಳಿದಂತೆಯೇ 10 ಗಂಟೆಗೆ ಆಫೀಸಿಗೆ ಹೊರಟಳು.

ಮಂಜ 11 ಗಂಟೆಗೆ ಬಂದು ಬಾಗಿಲು ತೆರೆದು ತನ್ನ ಕೆಲಸ ಶುರು ಮಾಡಲು ನೋಡಿದ. ದೈತ್ಯಾಕಾರದ ನಾಯಿ ಇವನ ಕಡೆ ಒಮ್ಮೆ ನೋಡಿ ತನ್ನ ಗೊರಕೆ ಮುಂದುವರಿಸಿತು. ಮಂಜ ಗಿಣಿ ಕಡೆ ನೋಡಿದ. ಅದು ತೆಪ್ಪಗಿರಬೇಕಲ್ಲ?

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ