`ಕಲಾದೇವತೆ ಎಲ್ಲರಿಗೂ ಒಲಿಯುವುದಿಲ್ಲ' ಎಂಬುದು ಜಗಜ್ಜನಿತವಾದ ಮಾತು. ಅದರೊಟ್ಟಿಗೆ ಅದೃಷ್ಟ ಇರಬೇಕು. ಸತತ ಪರಿಶ್ರಮ, ಗುರಿಮುಟ್ಟುವ ಅಚಲವಾದ ನಂಬಿಕೆ, ದೈವಾನುಗ್ರಹವಿದ್ದರೆ ಸಾಧನೆ ಕಠಿಣವಲ್ಲ. ಅಪ್ಪನ ಬೈಗುಳಗಳ ನಡುವೆಯೂ ಇಂದು ಕರ್ನಾಟಕವಲ್ಲದೆ ದೇಶ ವಿದೇಶಗಳಲ್ಲೂ ಹೆಸರು ಮಾಡಿರುವ ಅಚ್ಚ ಕನ್ನಡದ ನೆಚ್ಚಿನ ಮಗಳಿವಳು. ವೇದಿಕೆಗೆ ಬಂದರೆಂದರೆ ಸಾಕು ಅಭಿಮಾನಿಗಳ ಹುರಿದುಂಬಿಸುವಂತಹ ಚಪ್ಪಾಳೆ ವಿಷಿಲ್ ಗಳ ಸುರಿಮಳೆ. ಇವರ ಸಿಗ್ನೇಚರ್‌ ಡೈಲಾಗ್ ಹೇಳಿದರೆ ಬಹುಶಃ ನಿಮಗೆಲ್ಲ ಇವರು ಯಾರೆಂದು ತಿಳಿದೇ ಬಿಡುತ್ತದೆ......

`ದೇವಾ, ಚಿಕ್ಕ ವಯಸ್ಸಿನಲ್ಲೇ ನನ್ನ ಬಾಲ್ಯ ಕಳ್ಕೊಂಡೆ, ಆಮೇಲೆ ನನ್ನಾಟ ಸಾಮಾನ್‌ ಕಳ್ಕೊಂಡೆ, ಲೈಫ್ಲೀ ನನ್ನ ಯೌವನನ್ ಕಳ್ಕೊಂಡೆ, ಈಗ್‌ ನನ್‌ ಬಾಯ್‌ ಫ್ರೆಂಡನ್ನೂ ಕಳ್ಕೊಂಡಿದ್ದೀನಿ. ನನ್ನತ್ತೆ ಇನ್ನೂ ಕಣ್ಣಿಗ್‌ ಬಿದ್ದಿಲ್ವಾ ಗೋವಿಂದಾ.... ಗೋವಿಂದಾ....' ಗೊತ್ತಾಗಿರಲೇಬೇಕು ಇಷ್ಟೊತ್ತಿಗೆ, ಹೌದು ಇದು ನೀವೆಣಿಸಿದಂತೆ ಕಾಮಿಡಿ ಕಿಲಾಡಿಗಳು ಖ್ಯಾತಿಯ, ಅಪ್ಪಟ ದೇಸೀ ಪ್ರತಿಭೆ, ಅರಳು ಹುರಿದಂತೆ ಮಾತನಾಡುವ ಕಾಮಿಡಿ ಶೋಗಳ ಹೀರೋಯಿನ್‌ ನಯನಾ ಶರತ್‌ ರ ಡೈಲಾಗ್‌ ಗಳೇ!

ಅದ್ಭುತ ಪ್ರತಿಭೆ ಮಾತಿನ ಮಲ್ಲಿ ಹಾಸ್ಯಭರಿತ ಡೈಲಾಗ್‌ ಗಳ ಕ್ವೀನ್‌!

IMG-20181225-WA0019

ತಾಯಿ ಹಾಸನದ ಕುಸುಮಾ, ತಂದೆ ಹುಬ್ಬಳ್ಳಿಯ ಹನುಮಂತಪ್ಪ. ಚಿಕ್ಕಪ್ಪನ ಹೆಂಡತಿ ಮಡಿಕೇರಿಯರಾದರೆ ಅಣ್ಣನ ಹೆಂಡತಿ ಮಂಗಳೂರಿನವರು ಇನ್ನು ಪತಿದೇವರು ಮಂಡ್ಯದವರು. ಹಾಗಾಗಿ ವಿಭಿನ್ನ ಕನ್ನಡ ಭಾಷೆಗಳ ಸಂಗಮ ಇವರ ಕುಟುಂಬ, ಆದರೂ ನೆಲೆಸಿರೋದು ಮಾತ್ರ ಮಹಾನಗರಿ ಬೆಂಗಳೂರಿನಲ್ಲೇ! ರಾಷ್ಟ್ರೀಯ ವಿದ್ಯಾಲಯ ಶಾಲೆಯ ಪ್ರತಿಭಾವಂತ ವಿದ್ಯಾರ್ಥಿನಿ!

ಎ.ಪಿ.ಎಸ್‌ ಕಾಲೇಜಿನ ಪ್ರಾಡಕ್ಟ್! ಬಿ.ಕಾಂ ಪದವೀಧರೆ.

ಬಾಲ್ಯ

ತಾಯಿ ಕೃಷಿ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರು. ತಂದೆ ಪೇಂಟ್‌ ಕಂಟ್ರಾಕ್ಟರ್‌ಆಗಿದ್ದರೂ ಅಂತಹ ಸ್ಥಿತಿತರೇನಿರಲಿಲ್ಲ. ಈ ದಂಪತಿಗಳಿಗೆ ಇಬ್ಬರೇ ಮಕ್ಕಳು. ತಂದೆಯ ಬಾಸಿಂಗ್‌ ಆಡಳಿತ, ಕುಟುಂಬದಲ್ಲಿ ಗಟ್ಟಿಯಾಗಿತ್ತು. ಕೂಡು ಕುಟುಂಬವಾದ್ದರಿಂದ ಜನರೂ ಹೆಚ್ಚು, ಕೆಲಸ ಹೆಚ್ಚು! ತಂದೆ ರಾಜ್‌ ಕುಮಾರರ ಕಟ್ಟಾಭಿಮಾನಿ. `ಸಿಲ್ಲಿ ಲಲ್ಲಿ' ಸೀರಿಯಲ್ ತುಂಬಾ ಇಷ್ಟಪಟ್ಟು ನೋಡುತ್ತಿದ್ದರು. ಹಾಗೇ ರಾಜ್‌ ಅಭಿನಯದ ಚಿತ್ರಗಳನ್ನು ನೋಡಲು ಹುರಿದುಂಬಿಸುತ್ತಿದ್ದರು.

ತಂದೆಯವರು, ಚಿಂದೋಡಿ ಲೀಲಾ ಮನೆಯಲ್ಲೇ ಬೆಳೆದವರು. ಆ ಕುಟುಂಬವೇ ಕಲಾಕ್ಷೇತ್ರಕ್ಕೆ ಸೀಮಿತವಾಗಿದ್ದ ಕುಟುಂಬ. ಆಗೆಲ್ಲ ಲೀಲಾ ಮೇಡಂ, ಪಾತ್ರ ಮಾಡುವಂತೆ ಬಹಳವೇ ಪ್ರೋತ್ಸಾಹ ನೀಡುತ್ತಿದ್ದರಾದರೂ ಇವರು ಸ್ಟೇಜ್‌ ಹತ್ತಲು ಹಿಂದೇಟು ಹಾಕುತ್ತಿದ್ದರು.

ಆಗೊಮ್ಮೆ ಈಗೊಮ್ಮೆ ಪಾತ್ರ ಮಾಡಿದ್ದು ಉಂಟು. ಅದನ್ನೆ ಜೀವನನ್ನಾಗಿಸಿಕೊಳ್ಳಲಿಲ್ಲ ಅಷ್ಟೇ! ಈ ಕ್ಷೇತ್ರವೇ ಬೇಡವೆಂದು ದೂರ ನಿಂತುಬಿಟ್ಟರು. ಅದೇಕೋ ಅವರಿಗೆ ಬಣ್ಣ ಹಚ್ಚೋದಂದರೆ ಇಷ್ಟವಿರಲಿಲ್ಲ. ಹಾಗಾಗಿ ಮಕ್ಕಳಿಗೆ ಆಸಕ್ತಿಯಿದ್ದರೂ ಪ್ರೋತ್ಸಾಹಿಸದೆ, ಓದಿ ಬೆಳೆಯಲಿ ಎಂಬ ಆಸೆ ಹೊತ್ತಿದ್ದರು.

IMG-20190306-WA0042

ನಯನಾ ಮೂರು ನಾಲ್ಕನೇ ತರಗತಿಯವರಿದ್ದಾಗಲೇ ಮಿಮಿಕ್ರಿಯಲ್ಲಿ ಪ್ರವೀಣರಾಗಿದ್ದರು. ವಿಲ್ಸನ್‌ ಗಾರ್ಡನ್ನಿನ ನರ್ಮದಾ ಶಾಲೆಯಲ್ಲಿದ್ದಾಗ ಧೀರೇಂದ್ರ ಗೋಪಾಲ್, ವಿಷ್ಣು, ಅಂಬರೀಷ್‌, ದಿನೇಶ್‌, ಕಲ್ಪನಾ, ರಾಜ್‌ರವರುಗಳ ಮಿಮಿಕ್ರಿ ಮಾಡುತ್ತಾ ಶಹಭಾಷ್‌ ಗಿರಿ ಪಡೆಯುತ್ತಿದ್ದರು. ಓದಿನ ಜೊತೆಗೆ, ಶಾಲೆಯ ಇತರೆ ಚಟುವಟಿಕೆಗಳಲ್ಲಿ ಬಹಳವೇ ಆಸಕ್ತಿಯಿಂದ ಭಾಗವಹಿಸುತ್ತಿದ್ದರಾದರೂ, ಕೊಂಚ ಭಯ, ಕಾರಣ ತಂದೆ ಬಹಳ ಸ್ಟ್ರಿಕ್ಟ್ ಆಗಿದ್ದರು. ಓದು ಬಿಟ್ಟು ಬೇರೆ ಕ್ಷೇತ್ರ ಬೇಡವೇ ಬೇಡ ಎಂದಿದ್ದರು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ