ಒಮ್ಮೆ ರಾಜ ತನ್ನ ಸಭೆಯ ಎಲ್ಲ ಗಂಡಂದಿರ ಕುರಿತಾಗಿ ವಿಚಾರಿಸುತ್ತಿದ್ದ.

``ಈ ಸಭೆಯಲ್ಲಿ ಹಾಜರಿರುವ ಎಲ್ಲಾ ಗಂಡಂದಿರೂ, ಹೆಂಡತಿಗೆ ಹೆದರುವವರಾದರೆ ಎಡಗಡೆ ಸಾಲಿನಲ್ಲಿ ನಿಂತುಕೊಳ್ಳಿ. ಯಾರು ಹೆಂಡತಿಗೆ ಹೆದರುವುದಿಲ್ಲವೋ ಅವರು ಬಲಗಡೆ ಸಾಲಿನಲ್ಲಿ ನಿಂತುಕೊಳ್ಳಿ!''

ಅಲ್ಲಿದ್ದ ಎಲ್ಲಾ ಗಂಡಸರೂ ಎಡಗಡೆಯ ಸಾಲಿನಲ್ಲಿ ಹೋಗಿ ನಿಂತರು. ಒಬ್ಬ ಮಾತ್ರ ಹಾಗೇ ಕುಳಿತಿದ್ದ.

ರಾಜ : ಶಭಾಷ್‌! ನೀನು ಒಬ್ಬನಾದರೂ ನಮ್ಮ ರಾಜ್ಯದಲ್ಲಿ ಹೆಂಡತಿಗೆ ಹೆದರದ ಗಂಡನಿದ್ದೀಯಲ್ಲ... ನಿನ್ನ ಧೈರ್ಯಕ್ಕೆ ಮೆಚ್ಚಲೇಬೇಕು. ಈ ಕುರಿತು ಇಲ್ಲಿ ಎಡ ಸಾಲಿನಲ್ಲಿ ನಿಂತಿರುವವರಿಗೆ ಒಂದಿಷ್ಟು ಕಿವಿಮಾತು ವಿವರಿಸು.

ಪ್ರಜೆ : ಸ್ವಾಮಿ, ಅದು ಹಾಗಲ್ಲ. ನಾನು ನನ್ನ ಹೆಂಡತಿಗೆ ಹೆದರಿ ಇಲ್ಲೇ ಕುಳಿತಿದ್ದೇನೆ. ಅವಳನ್ನು ಕೇಳದೆ ಏನೂ ಮಾಡಲಾರೆ. ಈಗ ಇಲ್ಲಿಂದ ಎದ್ದು ಎಡ ಸಾಲಿನಲ್ಲಿ ನಿಲ್ಲಬೇಕೋ ಬೇಡವೋ ಎಂದು ಅವಳನ್ನೇ ಕೇಳಬೇಕು. ಇಷ್ಟು ಹೊತ್ತಿನಲ್ಲಿ ಅವಳು ಗಾಢ ನಿದ್ದೆಯಲ್ಲಿ ಗೊರಕೆ ಹೊಡೆಯುತ್ತಿರುತ್ತಾಳೆ. ಎಬ್ಬಿಸಿದರೆ ನನ್ನ ಕಥೆ ಮುಗಿಯಿತು.... ಏನು ಮಾಡಲಿ ಅಂತ ಯೋಚಿಸುತ್ತಿದ್ದೇನೆ....

ಕೇಳುತ್ತಿದ್ದ ರಾಜ ಹಾಗೇ ಮೂರ್ಛೆ ಹೋದನಂತೆ!

ವಿವಾಹಿತ : ನಮ್ಮಂಥ ಮದುವೆಯಾದ ಗಂಡಂದಿರ ಗೋಳು ಯಾರಿಗೂ ಬೇಡಪ್ಪ.

ಅವಿವಾಹಿತ : ಯಾಕಪ್ಪ? ನಿನಗೆ ಅಂಥ ಕಷ್ಟ ಬಂದಿರುವುದಾದರೂ ಏನು?

ವಿವಾಹಿತ : ಮದುವೆಗೆ ಮೊದಲು ಮನೆಯವರೆಲ್ಲ ಒಂದೇ ಸಮ ಬೈತಿದ್ದರು, `ಅಯ್ಯೋ ಹಾಳಾದವನೆ.... ನಮ್ಮ ಮಾತಂತೂ ಕೇಳೋಲ್ಲ ಬರ್ತಾಳೆ ಇರು ನಿನ್ನ ಹೆಂಡತಿ... ನಿನಗೆ ಬುದ್ಧಿ ಕಲಿಸಿ ಸರಿ ದಾರಿಗೆ ತರ್ತಾಳೆ!'

ಅವಿವಾಹಿತ : ಮತ್ತೆ... ಈಗ ಏನಂತಿದ್ದಾರೆ?

ವಿವಾಹಿತ : ಹಿಂದೇನೇ ವಾಸಿ, ನಮ್ಮ ಮಾತು ಸ್ವಲ್ಪವಾದ್ರೂ ಕೇಳ್ತಿದ್ದ. ಈಗಂತೂ ಕೇವಲ ಹೆಂಡತಿ ಗುಲಾಮ ಆಗಿದ್ದಾನೆ, ಅವಳು ಕೂತ್ಕೋ ಅಂದ್ರೆ ಕೂತ್ಕೋತಾನೆ, ನಿಂತ್ಕೋ ಅಂದ್ರೆ ನಿಂತ್ಕೋತಾನೆ! ಅಂತ ಇರ್ತಾರೆ.

ಸದಾ ಹಗಲೂರಾತ್ರಿ ಕ್ಯಾಶ್‌ ಎಣಿಸುತ್ತಾ, ಲೆಕ್ಕಾಚಾರ ಹಾಕುತ್ತಿದ್ದ ಜುಗ್ಗ ಗಂಡನಿಗೆ ಬುದ್ಧಿ ಕಲಿಸಲು ಹೆಂಡತಿ ನಿರ್ಧರಿಸಿದಳು. ಬ್ಯಾಂಕ್‌ ನೌಕರಿಯಲ್ಲಿದ್ದ ಕ್ಯಾಶಿಯರ್‌ ಗಂಡನಿಗೆ ಆ ಭಾಷೆಯೇ ಸರಿ ಎಂದು ಭಾವಿಸಿದಳು.

ಆ ರಾತ್ರಿ ಹೆಂಡತಿಯನ್ನು ಪ್ರೀತಿಯಿಂದ ಟಚ್‌ ಮಾಡಲು ಬಂದ ಗಂಡನಿಗೆ ಕೂಡಲೇ ಅವಳು ರೇಗಿದಳು, ``ನೋಡ್ರಿ, ಈ ತಿಂಗಳ ನಿಮ್ಮ 4 ಟ್ರಾನ್ಸಾಕ್ಷನ್ಸ್ ಪೂರ್ತಿ ಆಗಿದೆ. ಇದೇನಾದರೂ ಮುಂದುವರಿದರೆ ಪ್ರತಿ ಟ್ರಾನ್ಸಾಕ್ಷನ್‌ ಗೂ 1000/ ರೂ. ದಂಡ ಕಟ್ಟಬೇಕು!''

ಗಂಡ ತೆಪ್ಪಗೆ ಗೊರಕೆಗೆ ಶರಣಾದ.

ಮಹೇಶ : ನಿನಗೆ ಗೊತ್ತೇ, ಈ ವಿಶ್ವದಲ್ಲಿ ಕೇವಲ 2 ಬಗೆಯ ನೆಟ್‌ ವರ್ಕ್‌ ಮಾತ್ರವೇ ಬಲು ಬೇಗ ಡೇಟಾ ಟ್ರಾನ್ಸ್ ಫರ್ ಮಾಡಬಲ್ಲ.

ಸುರೇಶ : ಹೌದಾ? ಅದು ಯಾವುದು ಅಂತೀಯಾ?

ಮಹೇಶ : ಇಮೇಲ್ ‌ಮತ್ತು ಫೀಮೇಲ್‌!

ಟೀಚರ್‌ : ಕನ್ನಡವನ್ನು ನಮ್ಮ ಮಾತೃಭಾಷೆ ಅಂತೀವಿ. ಅದನ್ನೇಕೆ ನಾವು ಪಿತೃಭಾಷೆ ಅನ್ನಬಾರದು?

ಗುಂಡ : ಯಾವ ಮನೆಯಲ್ಲಿ ತಾನೇ ಅಮ್ಮಂದಿರು ಅಪ್ಪಂದಿರನ್ನು ಮಾತನಾಡಲಿಕ್ಕೆ ಬಿಟ್ಟಿದ್ದಾರೆ.... ಹೇಳಿ ಟೀಚರ್‌!

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ