ರವಿ : ಹೆಂಡತಿ ಬಳಿ ವಾದ ಮಾಡುವುದು ಅಥವಾ ಸಾಫ್ಟ್ ವೇರ್‌ ಲೈಸೆನ್ಸ್ ಅಗ್ರಿಮೆಂಟ್‌ ಓದುವುದು ಎರಡೂ ಒಂದೇ ಅಂತೀನಿ.

ಶಶಿ : ಅದು ಹೇಗೆ ಸಾಧ್ಯ?

ರವಿ : ಎಲ್ಲವನ್ನೂ ಇಗ್ನೋರ್‌ ಮಾಡಿ ಕೊನೆಯಲ್ಲಿ `ಐ ಅಗ್ರಿ' ಅಂತ ಕ್ಲಿಕ್‌ ಮಾಡಲೇಬೇಕಾಗುತ್ತೆ!

ಒಮ್ಮೆ ಮೋಹನ್‌ ತನ್ನ ಪ್ರಾಣಸ್ನೇಹಿತ ಕಿಶೋರ್‌ನನ್ನು ಸಂಜೆ 8 ಗಂಟೆ ಹೊತ್ತಿಗೆ ಹೆಂಡತಿಗೆ ಹೇಳದೆ ಕೇಳದೆ ಊಟಕ್ಕೆಂದು ಆಫೀಸ್‌ನಿಂದ ನೇರವಾಗಿ ಮನೆಗೆ ಕರೆತಂದಿದ್ದ.

ಮನೆಯಲ್ಲಿ ಮಕ್ಕಳು ಎಲ್ಲಾ ಕಡೆ ಬುಕ್ಸ್, ಬಟ್ಟೆ, ಆಟಿಕೆ ಹರಡಿದ್ದರು. ಒಟ್ಟಾರೆ ಮನೆ ದೊಡ್ಡಿಯಂತಿತ್ತು. ಹೆಂಡತಿ ರಾಧಾ ತಲೆ ಕೆದರಿಕೊಂಡು, ಹಳೆ ನೈಟಿಯಲ್ಲಿ ಅಡುಗೆಮನೆಯಲ್ಲಿ ಏನೋ ಅರೆಬರೆ ಬೇಯಿಸುತ್ತಿದ್ದಳು.

ಅತಿಥಿಯನ್ನು ಆ ಘಳಿಗೆಯಲ್ಲಿ ಕರೆತಂದ ಗಂಡನನ್ನು ಕಂಡು ಉಗ್ರ ಕಾಳಿಯಾದಳು. ರಾಧಾ : ಏನ್ರಿ ನೀವು... ಮದುವೆಯಾಗಿ 2 ಮಕ್ಕಳಾದರೂ ಯಾವಾಗ ಏನು ಕೆಲಸ ಮಾಡಬೇಕು ಅಂತ ಗೊತ್ತಾಗೋದಿಲ್ಲ. ಮನೆ ನೋಡಿ... ತಿಪ್ಪೆ ಗುಂಡಿ ಆಗಿದೆ. ನಾನು ಎಂಥ ಗೆಟಪ್‌ನಲ್ಲಿದ್ದೀನಿ... ತಲೆ ಬಾಚಿಲ್ಲ, ಮೇಕಪ್‌ ಮಾಡಿಕೊಂಡಿಲ್ಲ, ಅದೆಲ್ಲ ಹಾಳಾಗಲಿ, ಮೊನ್ನೆ ಸಾಂಬಾರು, ನಿನ್ನೆ ಉಳಿದ ಅನ್ನದಲ್ಲಿ ಏನೋ ಅಡ್ಜಸ್ಟ್ ಮಾಡೋಣಾಂತಿದ್ದೆ... ಈಗ ನಾನು ಯಾವ ಹೊಸ ಅಡುಗೆ ಮಾಡಲಿ?

ಮೋಹನ್‌ : ನೀನೇನೂ ಚಿಂತಿಸಬೇಡ... ಇರೋದನ್ನೇ ಹಾಕುವ... ಪೆದ್ದು ಮುಂಡೇದು, ಮದುವೆ ಆಗಬೇಕು ಅಂತ ಹೊರಟಿದೆ. ಪ್ರಾಕ್ಟಿಕಲ್ ಶಾಕ್‌ ಟ್ರೀಟ್‌ಮೆಂಟ್‌ ಕೊಡೋಣ ಅಂತ ಒಂದು ಡೆಮೋ ಕೊಡಲು ಹೀಗೆ ಕರೆತಂದೆ.

ಗಂಗಾಧರ್‌ : ಬೇಗ ಬಡಿಸ್ತೀಯಾ... ಹೊಟ್ಟೆ ತಾಳ ಹಾಕ್ತಿದೆ.

ಯಮುನಾ : ಇದೋ ಬಂದೆ.... ತಗೊಳ್ಳಿ, ಏನು ಅವಸರವಪ್ಪ!

ಗಂಗಾಧರ್‌ : ಅದ್ಸರಿ, ಇವತ್ತು ಇದೇನು ಮಾಡಿದ್ದಿ ಮಹರಾಯ್ತಿ?

ಯಮುನಾ : ಏನೋ ಒಂದು... ಹೆಸರು, ವಿವರ ಬೇಕೇ?

ಗಂಗಾಧರ : ಅಟ್‌ಲೀಸ್ಟ್ ಈ ಹೊಸ ರುಚಿಯ ಹೆಸರು ಗೊತ್ತಾದ್ರೆ... ನಾಳೆ ಎಡವಟ್ಟಾಗಿ ಡಾಕ್ಟರ್‌ ಬಳಿ ಹೋದಾಗ, `ಏನು ತಿಂದಿದ್ರಿ?' ಅಂದರೆ ಹೇಳೋಕ್ಕೆ ಅದರ ಹೆಸರು ಗೊತ್ತಾಗಬೇಕು ತಾನೇ....?

ಗಿರೀಶ್‌ : ಯಾವ ವಿಷಯವನ್ನು ಹೆಂಡತಿ ಎಂದೂ ತನ್ನದು ಎಂದು ಒಪ್ಪಿಕೊಳ್ಳುವುದಿಲ್ಲ?

ಸತೀಶ್‌ : ತಪ್ಪು ಆದದ್ದನ್ನು!

ಗುಂಡ : ಎಲ್ಲಿ ಹಾಳಾಗಿ ಹೋಗಿದ್ಯೆ ಇಷ್ಟು ಹೊತ್ತು?

ಗುಂಡಿ : ಏ.... ಶಾಪಿಂಗ್‌ ಹೋಗಿದ್ದೆ ಕಣ್ರಿ, ಏನೋ 4-5 ಗಂಟೆ ತಡ ಆಯ್ತಪ್ಪ, ಅದಕ್ಕೆ ಹೀಗೆ ಕೂಗಿಕೊಳ್ಳುವುದೇ?

ಗುಂಡ : ಹಾಳಾಗಿ ಹೋಗಲಿ.... ಏನೇನು ತಗೊಂಡೆ?

ಗುಂಡಿ : 2 ಕ್ಲಿಪ್‌ ಹೇರ್‌ಪಿನ್ಸ್.... 4-5 ಸೆಲ್ಛಿ!

ಡಾಕ್ಟರ್‌ : ಐ ಆ್ಯಮ್ ವೆರಿ ಸಾರಿ ಮಹೇಶ್‌..... ಹೆಚ್ಚೆಂದರೆ ನಿಮ್ಮ ಹೆಂಡತಿ ಇನ್ನೊಂದು ವಾರ ಉಳಿಯಬಹುದು ಅಷ್ಟೆ...

ಮಹೇಶ್‌ : ಇದರಲ್ಲಿ ಸಾರಿ ಹೇಳುವುದಕ್ಕೇನಿದೆ ಡಾಕ್ಟರ್‌? 27 ವರ್ಷಗಳ ವೈವಾಹಿಕ ಜೀವನದ ದೀರ್ಘಾವಧಿ ಶಿಕ್ಷೆ ಅನುಭವಿಸಿದ್ದೇನೆ... ಇನ್ನೊಂದು ವಾರ ತಾನೇ...? ಮುಂದೆಲ್ಲ `ಅಚ್ಛೆ ದಿನ್‌' ಅಂತ ಸಹಜವಾಗಿ ತೆಗೆದುಕೊಳ್ತೀನಿ!

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ