ರಾಮಮಂದಿರದಿಂದ  ಬುಲ್ಡೋಜರ್ ವರೆಗೆ 2027ರ ಚುನಾವಣೆ ಯೋಗಿಗೆ ನಿಜವಾದ ಪರೀಕ್ಷೆ

ರಾಮಮಂದಿರದ ಹುಂಡಿ ಕಳ್ಳತನ ಆಗುವುದಕ್ಕೆ ಒಂದು ತಿಂಗಳ ಮುಂಚೆ ಉತ್ತರ ಪ್ರದೇಶದ ತೀರ್ಥಕ್ಷೇತ್ರಕ್ಕೆ ಹೋಗಿದ್ದಾಗ, ಸಹಜವಾಗಿಯೇ, ಅಲ್ಲಿನ ಆಟೋವಾಲಗಳ ಬಳಿ, ಪಾನ್ ವಾಲ ಮತ್ತು ಪಾನೀ ಪೂರಿ ಮತ್ತು ವಿವಿಧ ವ್ಯಾಪಾರಿಗಳು ಮತ್ತು ಹೋಟೆಲ್ಲಿನ ಕೆಲಸಗಾರರನ್ನು ಹಾಗೇಯೇ ಮಾನಾಡಿಸುತ್ತಾ, 2027ರ ಚುನಾವಣೆಯಲ್ಲಿ ಯೋಗಿ ಸರ್ಕಾರ ಗೆಲ್ಲಬಲ್ಲದೇ ಎಂದು ಕೇಳಿದಾಗ, ಬಹುತೇಕರ ಉತ್ತರ ಹಿಂದಿನಂತೆ ಅಭೂತ ಪೂರ್ವ ಜಯವಿಲ್ಲದಿದ್ದರೂ ಸರಳ ಬಹುಮತಕ್ಕೆ ತೊಂದರೆ ಇಲ್ಲಾ ಎಂದಿದ್ದರು.

ಆದರೆ ನಂತರದ ದಿನಗಳಲ್ಲಿ ಬೆಳಕಿಗೆ ಬಂದ ರಾಮಮಂದಿರದ ಹುಂಡಿ ಕಳ್ಳತನದಿಂದಾಗ 2027ರ ಮಾರ್ಚ್-ಏಪ್ರಿಲ್ ತಿಂಗಳಿನಲ್ಲಿ ನಡೆಯಲಿರುವ ಉತ್ತರ ಪ್ರದೇಶದ ಚುನಾವಣೆಯಲ್ಲಿ ಭಾರೀ ಪರಿಣಾಮ ಬೀರಲಿದೆ ಎಂದೇ ಭಾವಿಸಲಾಗಿತ್ತು. ಉತ್ತರಪ್ರದೇಶದ ರಾಜಕೀಯವನ್ನು ಕೇವಲ ಒಂದು ಘಟನೆ, ಒಂದು ಘೋಷಣೆ ಅಥವಾ ಒಂದು ಧಾರ್ಮಿಕ ವಿಚಾರದ ಆಧಾರದ ಮೇಲೆ ಅರ್ಥಮಾಡಿಕೊಳ್ಳುವುದು ಕಷ್ಟ. 2027ರ ವಿಧಾನಸಭಾ ಚುನಾವಣೆ ಯೋಗಿ ಆದಿತ್ಯನಾಥ್ ನೇತೃತ್ವದ ಭಾರತೀಯ ಜನತಾ ಪಕ್ಷದ ಸರ್ಕಾರಕ್ಕೆ ಮೂರನೇ ಅವಧಿಯ ಪರೀಕ್ಷೆಯಾಗಲಿದೆ. ಪ್ರಶ್ನೆ ಕೇವಲ ಬಿಜೆಪಿ ಗೆಲ್ಲುತ್ತದೆಯೇ?ಎಂಬುದಲ್ಲ 2017 ಮತ್ತು 2022ರಲ್ಲಿ ಜನರು ಬಿಜೆಪಿಗೆ ನೀಡಿದ ರಾಜಕೀಯ ಆದೇಶವನ್ನು 2027ರಲ್ಲಿ ಪುನರಾವರ್ತಿಸುವಷ್ಟು ಬಲವಾದ ಆಡಳಿತಾತ್ಮಕ ಮತ್ತು ರಾಜಕೀಯ ಕಾರಣಗಳು ಇನ್ನೂ ಇವೆಯೇ? ಎಂಬುದಾಗಿದೆ ಉತ್ತರ ಪ್ರದೇಶ ವಿಧಾನಸಭೆಯ ಅವಧಿ 22 ಮೇ 2027ಕ್ಕೆ ಮುಕ್ತಾಯಗೊಳ್ಳಲಿದೆ. 403 ಸದಸ್ಯರ ವಿಧಾನಸಭೆಯಲ್ಲಿ ಬಹುಮತಕ್ಕೆ 202 ಸ್ಥಾನಗಳ ಅಗತ್ಯವಿದೆ.

2017ರ ಬದಲಾವಣೆಯಿಂದ 2022ರ ಪುನರಾಗಮನದವರೆಗೆ

2017ರ ಚುನಾವಣೆಯಲ್ಲಿ ಬಿಜೆಪಿ 312 ಸ್ಥಾನಗಳನ್ನು ಗೆದ್ದು ಭರ್ಜರಿ ಬಹುಮತ ಪಡೆದಿತ್ತು. ಎಸ್‌ಪಿ 47 ಮತ್ತು ಬಿಎಸ್‌ಪಿ 19 ಸ್ಥಾನಗಳಿಗೆ ಕುಸಿದಿದ್ದವು.  ಐದು ವರ್ಷಗಳ ಆಡಳಿತದ ನಂತರವೂ 2022ರಲ್ಲಿ ಬಿಜೆಪಿ ತನ್ನ ಬಹುಮತವನ್ನು ಉಳಿಸಿಕೊಂಡಿತು. ಬಿಜೆಪಿ 255 ಸ್ಥಾನಗಳನ್ನು ಗೆದ್ದರೆ, ಅದರ ಮಿತ್ರಪಕ್ಷಗಳೊಂದಿಗೆ ಎನ್‌ಡಿಎ 273 ಸ್ಥಾನಗಳನ್ನು ಪಡೆದಿತ್ತು. ಎಸ್‌ಪಿ 111 ಸ್ಥಾನಗಳೊಂದಿಗೆ ಪ್ರಮುಖ ಪ್ರತಿಪಕ್ಷವಾಗಿ ಹೊರಹೊಮ್ಮಿತು.  ಇದು ಒಂದು ಪ್ರಮುಖ ರಾಜಕೀಯ ಸಂದೇಶ ನೀಡುತ್ತದೆ  2017ರ ಬಿಜೆಪಿಯ ಗೆಲುವು ಕೇವಲ ಮೋದಿ ಅಲೆ ಅಥವಾ ರಾಮಮಂದಿರದ ಪರಿಣಾಮ ಮಾತ್ರವಲ್ಲ. ಐದು ವರ್ಷಗಳ ನಂತರವೂ ಮತದಾರರು ಸರ್ಕಾರಕ್ಕೆ ಮತ್ತೊಂದು ಅವಕಾಶ ನೀಡಿದ್ದರು. ಆದರೆ 2027ರ ಚಿತ್ರಣವನ್ನು 2022ರ ಅಂಕಿ-ಅಂಶಗಳಿಂದ ಮಾತ್ರ ಊಹಿಸುವುದು ಅಪಾಯಕಾರಿ.

ಏಕೆಂದರೆ 2024ರ ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ ರಾಜಕೀಯ ಸಮೀಕರಣ ಗಮನಾರ್ಹವಾಗಿ ಬದಲಾಗಿತ್ತು. ಎಸ್‌ಪಿ 37 ಲೋಕಸಭಾ ಸ್ಥಾನಗಳನ್ನು ಗೆದ್ದರೆ ಬಿಜೆಪಿ 33ಕ್ಕೆ ಇಳಿಯಿತು. ಕಾಂಗ್ರೆಸ್ 6 ಸ್ಥಾನಗಳನ್ನು ಗೆದ್ದಿತು. ಎನ್‌ಡಿಎ ಮಿತ್ರಪಕ್ಷಗಳಾದ ಆರ್‌ಎಲ್‌ಡಿ ಮತ್ತು ಅಪ್ನಾ ದಳ್ ಸೇರಿ 36 ಸ್ಥಾನಗಳನ್ನು ಪಡೆದವು.  ಅಂದರೆ, 2024ರ ಫಲಿತಾಂಶವು 2027ರಲ್ಲಿ ಬಿಜೆಪಿ ಎದುರಿಸುವ ಅಪಾಯದ ಮೊದಲ ದೊಡ್ಡ ಎಚ್ಚರಿಕೆಯ ಗಂಟೆ.

 ರಾಮಮಂದಿರ ದೇಣಿಗೆ ಪ್ರಕರಣ  ಎಷ್ಟು ದೊಡ್ಡ ಚುನಾವಣಾ ವಿಷಯ?

ಅಯೋಧ್ಯೆಯ ರಾಮಮಂದಿರಕ್ಕೆ ಸಂಬಂಧಿಸಿದ ದೇಣಿಗೆ ಮತ್ತು ಕಾಣಿಕೆಗಳ ಅಕ್ರಮದ ಆರೋಪಗಳನ್ನು ಲಘುವಾಗಿ ತೆಗೆದುಕೊಳ್ಳಲು ಸಾಧ್ಯವಿಲ್ಲ. ರಾಮಮಂದಿರ ಟ್ರಸ್ಟ್‌ನಲ್ಲಿ ನಡೆದಿರುವುದಾಗಿ ಆರೋಪಿಸಲಾದ ಅಕ್ರಮವನ್ನು ನೇರವಾಗಿ ಯೋಗಿ ಸರ್ಕಾರವೇ ದೇಣಿಗೆ ಕದ್ದಿದೆ ಎಂದು ನೇರವಾಗಿ ಯಾರೂ ಸಹಾ ಹೇಳುತ್ತಿಲ್ಲ. ಅದರೆ ಇಡೀ ಪ್ರಕರಣವನ್ನು ಯೋಗಿ ನಿಭಾಯಿಸಿದ ರೀತಿ ಅತ್ಯದ್ಭುತವಾಗಿದ್ದು. ಪ್ರಕರಣದ ತನಿಖೆಗೆ ಉತ್ತರ ಪ್ರದೇಶ ಸರ್ಕಾರ ಎಸ್‌ಐಟಿ ರಚಿಸಿತು. ಎಸ್‌ಐಟಿ ಪ್ರಾಥಮಿಕ ವರದಿ ಸಲ್ಲಿಸಿದ ನಂತರ ಎಂಟು ಮಂದಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ.   ಸ್ವತಃ ತಾವೇ ನಿಂತು ತನಿಖೆ ನಡೆಸಲು ಆಜ್ಞಾಪಿಸಿ ,ನಂತರದ ತನಿಖೆಯಲ್ಲಿ ಆಡಳಿತಾತ್ಮಕ ಮತ್ತು ಮೇಲ್ವಿಚಾರಣಾ ಲೋಪಗಳ ಬಗ್ಗೆ ಪ್ರಶ್ನೆಗಳು ಎದ್ದವು. ದೇವಾಲಯದ ದೇಣಿಗೆ ನಿರ್ವಹಣೆಯಲ್ಲಿ ಪಾರದರ್ಶಕತೆ ಹೆಚ್ಚಿಸಲು ಟ್ರಸ್ಟ್ ತಂತ್ರಜ್ಞಾನ ಆಧಾರಿತ ಹೊಸ ವ್ಯವಸ್ಥೆಯತ್ತ ಸಾಗುತ್ತಿದೆ.  ತಪ್ಪಿತಸ್ಥರನ್ನು ಕೂಡಲೇ ಕಂಡು ಹಿಡಿದು ಅವರಿಂದ ಆದಷ್ಟೂ ಹಣವನ್ನು ವಸೂಲಿ ಮಾಡಿದ್ದಲ್ಲದೇ, ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟೃಸ್ಟಿಗೆ ನಿವೃತ್ತ ಸೇನಾಧಿಕಾರಿಗಳನ್ನು ಆಡಳಿತಾಧಿಕಾರಿಯನ್ನಾಗಿಸಿ, ವಿರೋಧ ಪಕ್ಷಗಳು ಕೆಮ್ಮದೇ ಹಾಗೆ ಮಾಡಿರುವುದು ಮತ್ತೆ ಪರಿಸ್ಥಿತಿಯನ್ನು ಬದಲಿಸಿದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ