ಅರೇ ಅಕ್ಕಿ, ಬೇಳೆ, ಗೋಧಿ ಹಿಟ್ಟು, ಎಣ್ಣೆ ಮತ್ತು ತರಕಾರಿಗಳ ಬೆಲೆ ಎಲ್ಲವೂ ಗಗನಕ್ಕೇರಿರುವಾಗ ಇದೇನಿದು 1 ರೂಪಾಯಿಗೆ ಹೊಟ್ಟೆ ತುಂಬಾ ಊಟಾನಾ? ಅದೂ ಈಗಿನ ಕಾಲದಲ್ಲಿ? ಸರ್ಕಾರವೇ ನಡೆಸುವ ಇಂದಿರಾ ಕ್ಯಾಂಟೀನ್ ನಲ್ಲಿಯೇ ಪ್ಲೇಟ್ ಊಟ ಒಂದಕ್ಕೆ 10 ರೂಪಾಯಿಗಳು ಇರುವಾಗ, ಕೇವಲ 1 ರೂಪಾಯಿಗೆ ಹೊಟ್ಟೆ ತುಂಬಾ ಊಟ ಹಾಕ್ತಾರೇ ಅಂತಾ ನಂಬುವುದು ಸ್ವಲ್ಪ ಕಷ್ಟವೇ ಅದರೂ ಇದು ದೂರದ ದೆಹಲಿಯಲ್ಲಿ ನಿತ್ಯ ಸತ್ಯವಾದ ಸಂಗತಿಯಾಗಿದೆ.

ದೆಹಲಿಯ ಭೂಟೊ ವಾಲಿ ಗಲ್ಲಿಯಲ್ಲಿರುವ ನಂಗ್ಲೋಯಿ ಅವರ ಶ್ಯಾಮ್ ರಸೊಯಿಯಲ್ಲಿ ಪ್ರತೀ ದಿನವೂ ಬೆಳಿಗ್ಗೆ 11 ರಿಂದ ಮಧ್ಯಾಹ್ನ 1 ರವರೆಗೆ ಸುಮಾರು 1 ಸಾವಿರದಿಂದ 1,100 ಜನರು ಈ ಊಟಕ್ಕಾಗಿ ಸರದಿಯಲ್ಲಿ ಕಾದು ನಿಂತು ಈ ರುಚಿಕವಾದ ಊಟವನ್ನು ಸವಿಯುತ್ತಿದ್ದಾರೆ. ಕಳೆದ ಎರಡು ವರ್ಷದಿಂದ, ಪ್ರವೀಣ್ ಕುಮಾರ್ ಗೋಯಲ್ ಎಂಬುವರು ಈ ಶ್ಯಾಮ್ ರಸೋಯ್ ಹೋಟೆಲ್ ನಡೆಸಿಕೊಂಡು ಬರುತ್ತಿದ್ದಾರೆ. ಅಲ್ಲಿಯೇ ತಿನ್ನಲಿಕ್ಕೆ ಆಗದವರು ಮನೆಯಿಂದ ಪಾತ್ರೆಗಳನ್ನು ತಂದು ಈ ಹೋಟೆಲ್ಲಿನ್ನಿಂದ ಪಾಸರ್ಲ್ ಸಹಾ ತೆಗೆದುಕೊಂಡು ಹೋಗುವುದಲ್ಲದೇ, ಅಲ್ಲಿಯೇ ಹತ್ತಿರದ ಇಂದ್ರಲೋಕ್, ಸಾಯಿ ಮಂದಿರ್‌ನಂತಹ ಪ್ರದೇಶಕ್ಕೆ ಆಟೋ ರಿಕ್ಷಾ ಮೂಲಕವೂ ಆಹಾರವನ್ನು ಸರಬರಾಜು ಮಾಡಲಾಗುತ್ತಿದೆ. ಹೀಗೆ ಪ್ರತೀ ದಿನವೂ ಸುಮಾರು 2000 ಜನರ ಹಸಿವನ್ನು ನೀಗಿಸಿಕೊಳ್ಳುತ್ತಿದ್ದಾರೆ. ಇದಲ್ಲದೇ ಬೆಳಿಗ್ಗೆ 1 ರೂಪಾಯಿಗೆ ಬಿಸಿ ಬಿಸಿಯಾದ ಖಡಕ್ ಚಹಾ ಕೂಡ ಇಲ್ಲಿ ಲಭ್ಯವಿದೆ.

ರಂಜೀತ್ ಸಿಂಗ್ ಎಂಬ ಉದ್ಯಮಿಯವರು ನಡೆಸುತ್ತಿದ್ದ ಎನ್‌ಜಿಟಿ ಕಾರ್ಖಾನೆ ವಿವಿಧ ಕಾರಣಗಳಿಂದ ಮುಚ್ಚಿಹೋಗಿದ್ದರಿಂದ ಆ ಜಾಗ ಖಾಲಿ ಇದ್ದದ್ದನ್ನು ಗಮನಿಸಿದ ಪ್ರವೀಣ್ ಕುಮಾರ್ ಗೋಯಲ್ ತಮ್ಮ ಈ ಮಹತ್ಕಾರ್ಯಕ್ಕೆ ಈ ಜಾಗವನ್ನು ಕೊಡಲು ಸಾಧ್ಯವೇ ಎಂದು ಕೇಳಿದಾಗ ರಂಜೀತ್ ಸಿಂಗ್ ತುಂಬು ಹೃದಯದಿಂದ ಕೊಟ್ಟ ಜಾಗದಲ್ಲಿ ಜನರು ಸರಿಯಾಗಿ ನೆಲದ ಮೇಲೆ ಕುಳಿತು ಊಟ ಮಾಡುವ ಸಾಮಾನ್ಯ ವ್ಯವಸ್ಥೆಯನ್ನು ಮಾಡಿದ್ದಾರೆ. ಸುಮಾರು ಐದಾರು ಸಹಾಯಕರೊಂದಿಗೆ ಆರಂಭಿಸಿದ ಈ ಹೊಟೆಲ್ಲಿಗೆ ಅನೇಕ ಸ್ಥಳೀಯರು ಮತ್ತು ಕಾಲೇಜಿನ ವಿದ್ಯಾರ್ಥಿಗಳು ತಮ್ಮ ಬಿಡುವಿನ ಸಮಯದಲ್ಲಿ ಇವರ ಜೊತೆ ಕೈಜೋಡಿಸಿಕೊಂಡು ಬರುತ್ತಿರುವುದು ಶ್ಲಾಘನೀಯವಾದ ಕೆಲಸವಾಗಿದೆ. ಆರಂಭದಲ್ಲಿ ಕೇವಲ ಬಡ ಜನರು ಮಾತ್ರವೇ ಇಲ್ಲಿಗೆ ಬರುತ್ತಿದ್ದು, ಈ ಹೋಟೆಲ್ಲಿನ ಖ್ಯಾತಿ ಎಲ್ಲೆಡೆಯಲ್ಲಿಯೂ ಹಬ್ಬಿರುವ ಕಾರಣ, ಕೆಲವೊಂದು ಮಧ್ಯಮ ವರ್ಗದ ಜನರು ಮತ್ತು ಶ್ರೀಮಂತರು ಈ ಪ್ರದೇಶವನ್ನು ಹುಡುಕಿಕೊಂಡು ಬಂದು ಊಟ ಮಾಡಿದರೂ ಇನ್ನು ಕೆಲವರು ವಿವಿಧ ಕಾರಣಗಳಿಂದ ಆ ಪ್ರದೇಶಕ್ಕೆ ಹೋಗಿದ್ದಾಗ ಇಲ್ಲಿಯ ಊಟವನ್ನು ಸವಿದು ಬರುವುದು ಗಮನಾರ್ಹವಾದ ಅಂಶವಾಗಿದೆ,

ಕೇವಲ 1 ರೂಪಾಯಿಗಳಿಗೆ ಊಟ ಎಂದರೆ ಅದು ಕಳಪೆಯಾಗಿರದೇ, ಪ್ರತೀ ದಿನವೂ ಬಗೆ ಬಗೆಯ ಭಕ್ಷ ಭೋಜನದೊಂದಿಗೆ, ಸೋಯಾ ಪಲಾವ್, ಅನ್ನ, ರೊಟ್ಟಿ, ಎರಡು ರೀತಿಯ ಪಲ್ಯಗಳು ಮತ್ತು ಹಲ್ವಾ ಇಲ್ಲವೇ ಖೀರ್ ನೊಂದಿಗೆ ಅತ್ಯಂತ ರುಚಿಕರವಾಗಿರುತ್ತದೆ. ಆರಂಭದಲ್ಲಿ, ಈ ಊಟದ ಬೆಲೆ 10 ರೂಪಾಯಿಗಳಿದ್ದು ಈಗ ಹೆಚ್ಚಿನ ಗ್ರಾಹಕರನ್ನು ಆಕರ್ಷಿಸುವ ಸಲುವಾಗಿ 1ರೂಪಾಯಿಗೆ ಇಳಿಸಿದ್ದಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ