ಬೆಂಗಳೂರು ಎಂದರೆ ಇಂದು ಐಟಿ, ಸ್ಟಾರ್ಟ್‌ಅಪ್‌, ಮಾಲ್‌ಗಳು, ಮೆಟ್ರೋ ಮತ್ತು ಎತ್ತರದ ಕಟ್ಟಡಗಳ ನಗರ. ಆದರೆ ಈ ಆಧುನಿಕ ನಗರದ ಹೃದಯದಲ್ಲಿ ಇನ್ನೂ ಕೆಲವು ಪ್ರದೇಶಗಳು ನೂರಾರು ವರ್ಷಗಳ ವ್ಯಾಪಾರ, ವೃತ್ತಿ, ಸಮುದಾಯ ಮತ್ತು ಸಂಸ್ಕೃತಿಯ ನೆನಪುಗಳನ್ನು ಹೊತ್ತುಕೊಂಡಿವೆ. ಅವುಗಳಲ್ಲಿ ಪ್ರಮುಖವಾದುದು ಅರಳೇಪೇಟೆ—ಇಂದಿನ ಕಾಟನ್‌ಪೇಟೆ. ಇಂದು ಕಾಟನ್‌ಪೇಟೆ ಎಂದರೆ ಕಿರಿದಾದ ರಸ್ತೆಗಳು, ಬಟ್ಟೆ ಮತ್ತು ಸಗಟು ವ್ಯಾಪಾರ, ಸಣ್ಣ ಕೈಗಾರಿಕೆಗಳು, ಹಳೆಯ ಮನೆಗಳು, ಗೋದಾಮುಗಳು, ದೇವಾಲಯಗಳು, ಗರಡಿಮನೆಗಳು ಮತ್ತು ನಿರಂತರ ಜನಜಂಗುಳಿಯ ಪ್ರದೇಶ. ಆದರೆ ಇದೇ ಜಾಗದಲ್ಲಿ ಒಂದು ಕಾಲದಲ್ಲಿ ಹತ್ತಿಯ ದೊಡ್ಡ ದೊಡ್ಡ ಮೂಟೆಗಳು, ಎತ್ತುಬಂಡಿಗಳು, ವ್ಯಾಪಾರಿಗಳ ಕೂಗು, ಗೋದಾಮುಗಳು ಮತ್ತು ಕೈಮಗ್ಗಗಳ ಸದ್ದು ಬೆಂಗಳೂರಿನ ಆರ್ಥಿಕ ಬದುಕಿನ ಒಂದು ಪ್ರಮುಖ ಅಧ್ಯಾಯವನ್ನು ಬರೆದಿದ್ದವು. ಅಂತಹ ಇತಿಹಾಸವನ್ನು ನಮ್ಮ ಬೆಂಗಳೂರಿನ ಇತಿಹಾಸ ಮಾಲಿಕೆಯಲ್ಲಿ ತಿಳಿಯೋಣ ಬನ್ನಿ. ಬೆಂಗಳೂರು ಇತಿಹಾಸದ ಹಿಂದಿನ ಮಾಲಿಕೆಗಳನ್ನು ಓದಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ.

ಅರಳೇಪೇಟೆ ಎಂದರೇನು? ಕಾಟನ್‌ಪೇಟೆ ಎಂಬ ಹೆಸರು ಹೇಗೆ ಬಂತು?

ಇಂದು ಬಹುತೇಕ ಜನರಿಗೆ Cottonpet ಎಂಬ ಹೆಸರು ಪರಿಚಿತ. ಆದರೆ ಅದರ ಹಳೆಯ ಹೆಸರು ಅರಳೇಪೇಟೆ ಎಂದಾಗಿದ್ದು, ಅಚ್ಚಕನ್ನಡದಲ್ಲಿ ಕನ್ನಡದಲ್ಲಿ ಅರಳೆ ಎಂದರೆ ಹತ್ತಿ ಎಂದಾಗಿದ್ದು, ಪೇಟೆ ಎಂದರೆ ಮಾರುಕಟ್ಟೆ ಅಥವಾ ವ್ಯಾಪಾರ ಸ್ಥಳವಾಗಿದ್ದು, ಹತ್ತಿಯನ್ನು ಮಾರುವ ಸ್ಥಳವೇ ಅರಳೇ ಪೇಟೆಗಾಗಿದೆ. ನಂತರ ದಿನಗಳಲ್ಲಿ ಶ್ರೀರಂಗಪಟ್ಟಣದಿಂದ ಬೆಂಗಳೂರಿಗೆ ತಮ್ಮ ವಾಸ್ತವ್ಯವನ್ನು ಬದಲಿಸಿದ ಬ್ರಿಟೀಷರು ಹತ್ತಿ ಪೇಟೆಯನ್ನು ಅಂಗ್ಲ ಭಾಷೆ ತರ್ಜುಮೆ ಮಾಡಿ Cottonpet ಎಂದ ನಂತರ ಜನರ ಮನಸ್ಸಿನಲ್ಲಿ ಅದೇ ಹೆಸರು ಉಳಿದು ಹೋದರೂ, ಇಂದಿಗೆ ಬೆಂಗಳೂರಿನ ಹಿರಿಯ ನಾಗರೀಕರು ಆ ಪ್ರದೇಶವನ್ನು ಆರಳೇ ಪೇಟೆ ಎಂದು ಕರೆಯುವುದನ್ನು ರೂಢಿಯಲ್ಲಿಟ್ಟು ಕೊಂಡಿರುವುದು ಸಂತಸದ ವಿಷಯವಾಗಿದೆ.

ಅರಳೇಪೇಟೆ ಹುಟ್ಟಿದ್ದು ಹೇಗೇ?

ಇದಕ್ಕೆ ಉತ್ತರ ಹುಡುಕಬೇಕಾದರೆ ನಾವು ಸುಮಾರು 16ನೇ ಶತಮಾನದ ಬೆಂಗಳೂರಿಗೆ ಹಿಂದಿರುಗಬೇಕು. 1537ರ ಸುಮಾರಿಗೆ ಕೆಂಪೇಗೌಡರು ಮಣ್ಣಿನ ಕೋಟೆಯನ್ನು ಕೇಂದ್ರವಾಗಿಸಿಕೊಂಡು ಬೆಂಗಳೂರಿನ ಪೇಟೆ ಪಟ್ಟಣವನ್ನು ರೂಪಿಸಿದರು. ಕೋಟೆಯೊಳಗೆ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ವಿವಿಧ ವೃತ್ತಿಗಳ ಜನರು, ವ್ಯಾಪಾರಿಗಳು, ಕುಶಲಕರ್ಮಿಗಳು ಮತ್ತು ಉತ್ಪಾದಕರು ನೆಲೆಸುವಂತೆ ಮಾರುಕಟ್ಟೆ ಪ್ರದೇಶಗಳನ್ನು ರೂಪಿಸಲಾಯಿತು. ಇದು ಇಂದಿನಂತೆ ಎಲ್ಲ ವಸ್ತುಗಳೂ ಒಂದೇ ಮಾರುಕಟ್ಟೆಯಲ್ಲಿ ಸಿಗುವ ವ್ಯವಸ್ಥೆಯಾಗಿರಲಿಲ್ಲ.

ಯಾವ ವಸ್ತು ಬೇಕೋ, ಆ ವಸ್ತುವಿನ ಪೇಟೆಗೆ ಹೋಗಬೇಕು.

  • ಅಕ್ಕಿ – ಅಕ್ಕಿಪೇಟೆ
  • ಧಾನ್ಯ – ತರಗುಪೇಟೆ
  • ಬಳೆ ಮತ್ತು ಸಂಗೀತ ವಾದ್ಯಗಳು – ಬಳೆಪೇಟೆ
  • ಬಟ್ಟೆ – ಚಿಕ್ಕಪೇಟೆ/
  • ಬೆಳ್ಳಿ–ಚಿನ್ನದ ವ್ಯಾಪಾರ – ನಗರ್ತಪೇಟೆ
  • ಉಪ್ಪು – ಉಪ್ಪಾರಪೇಟೆ
  • ಹತ್ತಿ – ಅರಳೇಪೇಟೆ

ಇದು ಆ ಕಾಲದ ಅತ್ಯಂತ ಪರಿಣಾಮಕಾರಿ ವೃತ್ತಿ ಆಧಾರಿತ ನಗರ ಯೋಜನೆಯ ಒಂದು ರೂಪವಾಗಿತ್ತು.ಅಂದಿನ ಬೆಂಗಳೂರಿನ ವಾಣಿಜ್ಯ ನಕ್ಷೆ

ಇಂದಿನ ನಗರದಲ್ಲಿ ಒಂದು ವಸ್ತುವನ್ನು ಖರೀದಿಸಲು ನಗರದ ಯಾವುದೇ ಭಾಗಕ್ಕೆ ಹೋಗಬಹುದು. ಆದರೆ ಹಿಂದಿನ ಪೇಟೆ ಬೆಂಗಳೂರಿನಲ್ಲಿ ವ್ಯಾಪಾರವೇ ನಗರವನ್ನು ರೂಪಿಸಿತ್ತು. ಒಂದೇ ವೃತ್ತಿಯ ವ್ಯಾಪಾರಿಗಳು ಒಂದೇ ಪ್ರದೇಶದಲ್ಲಿ ನೆಲೆಸುತ್ತಿದ್ದರು. ಇದರಿಂದ ವ್ಯಾಪಾರಿಗಳಿಗೆ ಪರಸ್ಪರ ಸಹಕಾರ ಸಿಗುತ್ತಿತ್ತು; ಗ್ರಾಹಕರಿಗೂ ಬೇಕಾದ ವಸ್ತು ಎಲ್ಲಿದೆ ಎನ್ನುವುದು ಸುಲಭವಾಗಿ ಗೊತ್ತಾಗುತ್ತಿತ್ತು.

ಅರಳೇಪೇಟೆಯಲ್ಲಿಯೂ ಇದೇ ರೀತಿಯ ವ್ಯವಸ್ಥೆ ಬೆಳೆದಿತ್ತು. ಹತ್ತಿ, ಹತ್ತಿ ನೂಲು ಮತ್ತು ಸಂಬಂಧಿತ ವಸ್ತುಗಳ ವ್ಯಾಪಾರಕ್ಕೆ ಈ ಪ್ರದೇಶ ಪ್ರಮುಖ ಕೇಂದ್ರವಾಯಿತು. 18ನೇ ಶತಮಾನದಲ್ಲಿಯೇ ಬೆಂಗಳೂರು ಪ್ರಮುಖ ಉತ್ಪಾದನಾ ಮತ್ತು ವ್ಯಾಪಾರ ಕೇಂದ್ರವಾಗಿತ್ತು. ಇಲ್ಲಿನ ಮಾರುಕಟ್ಟೆಗಳ ಸಂಪರ್ಕ ಸುತ್ತಮುತ್ತಲಿನ ಪ್ರದೇಶಗಳಷ್ಟೇ ಅಲ್ಲದೆ ದೂರದ ಪ್ರದೇಶಗಳಿಗೂ ಇತ್ತು.

ಹತ್ತಿಯೇ ಏಕೆ ಇಷ್ಟು ಮುಖ್ಯವಾಗಿತ್ತು?

ಇದು ಅರಳೇಪೇಟೆಯ ಕಥೆಯ ಪ್ರಮುಖ ಭಾಗ. ಆ ಕಾಲದಲ್ಲಿ ಇಂದಿನಂತೆ ಪವರ್‌ಲೂಮ್‌, ಸಿಂಥೆಟಿಕ್ ಫೈಬರ್ ಅಥವಾ ದೊಡ್ಡ ಟೆಕ್ಸ್‌ಟೈಲ್ ಕಾರ್ಖಾನೆಗಳಿರಲಿಲ್ಲ. ಹತ್ತಿ ಕೃಷಿ → ಹತ್ತಿ ಸಂಸ್ಕರಣೆ → ನೂಲು → ಕೈಮಗ್ಗ → ಬಟ್ಟೆ → ವ್ಯಾಪಾರ ಎಂಬ ದೊಡ್ಡ ಆರ್ಥಿಕ ಸರಪಳಿ ಇತ್ತು. ಕರ್ನಾಟಕ ಮತ್ತು ದಕ್ಷಿಣ ಭಾರತದ ವಿವಿಧ ಭಾಗಗಳಿಂದ ಹತ್ತಿ ಮತ್ತು ಹತ್ತಿ ಉತ್ಪನ್ನಗಳು ಬೆಂಗಳೂರಿಗೆ ಬರುತ್ತಿದ್ದವು. ಬೆಂಗಳೂರಿನ ಪೇಟೆಗಳು ಅವುಗಳನ್ನು ಸಂಗ್ರಹಿಸಿ, ಮಾರಾಟ ಮಾಡಿ, ಬೇರೆ ಪ್ರದೇಶಗಳಿಗೆ ಕಳುಹಿಸುವ ಪ್ರಮುಖ ಕೇಂದ್ರಗಳಾಗಿದ್ದವು. ಹಳೆಯ ಬೆಂಗಳೂರಿನ ಕುರಿತು ಅಧ್ಯಯನದಲ್ಲಿ ಅರಳೇಪೇಟೆಯ ಅಂಗಡಿಗಳಲ್ಲಿ ಬೃಹತ್ ಹತ್ತಿಯ ಮೂಟೆಗಳು ತುಂಬಿಕೊಂಡಿರುತ್ತಿದ್ದ ದೃಶ್ಯವನ್ನು ದಾಖಲಿಸಲಾಗಿದೆ.  ಅಂದರೆ, ಇಂದಿನ ಕಾಟನ್‌ಪೇಟೆಯ ಹೆಸರಿನ ಹಿಂದೆ ಕೇವಲ ಒಂದು ಹೆಸರು ಇಲ್ಲ—ಒಂದು ಕಾಲದ ಸಂಪೂರ್ಣ ಹತ್ತಿ ಆರ್ಥಿಕತೆಯ ನೆನಪು ಇದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ