ನಮ್ಮ ಜೀವನದ ಪಯಣದಲ್ಲಿ ಎದುರಾಗುವ ಕೆಲವು ಅದ್ಭುತ ಗಳಿಗೆಗಳನ್ನು ಸೆರೆಹಿಡಿದು ನಮ್ಮ ಜೀವನದ ಉದ್ದಕ್ಕೂ ನೆನಪಿರುವಂತೆ ಕಾಪಾಡಿಕೊಳ್ಳುವ ಪ್ರಕ್ರಿಯೆಯೇ ಛಾಯಾಗ್ರಹಣ. ಪ್ರತಿಯೊಬ್ಬರ ಜೀವನದಲ್ಲಿಯೂ ಮಹತ್ವದ ಘಟ್ಟಗಳು ಬರುತ್ತವೆ. ಅಂತಹ ಘಟ್ಟಗಳಲ್ಲಿ ನಾವೆಲ್ಲರೂ ಅದನ್ನು ಎಂದಿಗೂ ಮರೆಯದಂತೆ ಇರಲು ಛಾಯಾಗ್ರಹಣ ನೆರವಿಗೆ ಬರಲಿದೆ, ಎನ್ನುತ್ತಾರೆ ಅಂತಾರಾಷ್ಟ್ರೀಯ ಖ್ಯಾತಿಯ ಛಾಯಾಗ್ರಾಹಕಿ ಹೇಮಾ ನಾರಾಯಣ್‌.

ಸ್ಟ್ರೀಟ್‌ ಫೋಟೋಗ್ರಫಿ, ಲ್ಯಾಂಡ್‌ಸ್ಕೇಪ್‌ ಫೋಟೋಗ್ರಫಿ, ವೈಲ್ಡ್‌ ಲೈಫ್‌ ಫೋಟೋಗ್ರಫಿ, ಆ್ಯಸ್ಟ್ರೋ ಫೋಟೋಗ್ರಫಿ.... ಹೀಗೆ ನಾನಾ ವಿಧದ ಛಾಯಾಚಿತ್ರ ತೆಗೆಯುವುದರಲ್ಲಿ ಸಿದ್ಧಹಸ್ತರಾದ ಹೇಮಾ ನಾರಾಯಣ್‌ ಛಾಯಾಗ್ರಹಣದ ವಿವಿಧ ಮಜಲುಗಳ ಅನುಭವ ಹೊಂದಿದವರು. ಇವರು ದೇಶ ವಿದೇಶಗಳ ನಾನಾ ಜಾಲತಾಣಗಳಿಗೆ, ನಿಯತಕಾಲಿಕೆಗಳಿಗೆ, ಟಿ.ವಿ ಡಾಕ್ಯುಮೆಂಟರಿಗಳಿಗೆ ತಮ್ಮ ಕ್ಯಾಮೆರಾದ ಮೂಲಕ ಉತ್ತಮ ಗುಣಮಟ್ಟದ ಚಿತ್ರಗಳನ್ನು ಒದಗಿಸುತ್ತಾರೆ. ಇದುವರೆಗೂ ದೇಶ ವಿದೇಶಗಳಲ್ಲಿ ಸಾಕಷ್ಟು ಛಾಯಾಚಿತ್ರ ಪ್ರದರ್ಶನಗಳನ್ನು ನೀಡಿರುವ ಇವರನ್ನು ಗೃಹಶೋಭಾ ಮಾತಿಗೆ ಆಹ್ವಾನಿಸಿದಾಗ, ಆತ್ಮೀಯವಾಗಿ ಮಾತಿಗಿಳಿದ ಹೇಮಾ, ತಮ್ಮ ಬದುಕಿನ ಚಿತ್ರವನ್ನು ತೆರೆದಿಟ್ಟಿದ್ದು ಹೀಗೆ :

ನಾನು ಓದಿದ್ದು ಎಂಜಿನಿಯರಿಂಗ್‌. ಅದರಲ್ಲಿ ಮಾಸ್ಟರ್ಸ್‌ ಮುಗಿಸಿದಾಗ ನನಗೆ ಐಟಿ ಸಂಸ್ಥೆಯಲ್ಲಿ ಕೆಲಸ ದೊರಕಿತು. ಆಗೆಲ್ಲಾ ನಾನು ಕೆಲಸದ ಸಲುವಾಗಿ ದೂರದ ಊರುಗಳಿಗೆ, ವಿದೇಶಕ್ಕೆ ಪ್ರವಾಸ ಹೋಗಬೇಕಾಗುತ್ತಿತ್ತು. ಆಗೆಲ್ಲಾ ನನ್ನೊಂದಿಗೆ ಕ್ಯಾಮೆರಾ ಕೊಂಡೊಯ್ಯುತ್ತಿದ್ದೆ. ನಾನು ಭೇಟಿ ನೀಡಿದ ಸ್ಥಳದ ಸುಂದರ ದೃಶ್ಯಗಳನ್ನು ಸೆರೆಹಿಡಿದು ಅದನ್ನು ನನ್ನ ಸಂಗ್ರಹದಲ್ಲಿರಿಸಿಕೊಳ್ಳುತ್ತಿದ್ದೆ.

A-Soul-Tribute_Hi_Res

ಆಗೆಲ್ಲಾ ಕ್ಯಾಮೆರಾ ಬಗ್ಗೆ ಹೆಚ್ಚು ತಿಳಿದಿರಲಿಲ್ಲ. ಆದರೂ ಆಗ ತೆಗೆದ ಚಿತ್ರಗಳು ಉತ್ತಮವಾಗಿ ಮೂಡಿಬಂದಿದ್ದವು. 2005ರಲ್ಲಿ ಇನ್ನೂ ಐವರು ಛಾಯಾಗ್ರಾಹಕರೊಡನೆ ಸೇರಿ ಕರ್ನಾಟಕದ ವಿವಿಧ ಪ್ರಸಿದ್ಧ ಸ್ಮಾರಕಗಳ ಛಾಯಾಚಿತ್ರ ತೆಗೆದೆ. ಈ ಪ್ರಾಜೆಕ್ಟ್ ನನ್ನ ಆತ್ಮವಿಶ್ವಾಸ ಹೆಚ್ಚಿಸಿತು. ನನಗೆ ಪ್ರಾಯೋಗಿಕವಾದ ಅನುಭವ ನೀಡಿತು. ಕ್ರಮೇಣ ಕ್ಯಾಮೆರಾದ ಕುರಿತು ಅನೇಕ ವಿಚಾರಗಳನ್ನು ಕಲಿತೆ. ಕಲಿಯುತ್ತಲೇ ಅದರಲ್ಲಿನ ಆಸಕ್ತಿ ಹೆಚ್ಚುತ್ತಾ ಸಾಗಿತು. ಕಡೆಗೆ 2009ರಲ್ಲಿ ಐಟಿ ಉದ್ಯೋಗ ಕೈಬಿಟ್ಟು ಪೂರ್ಣ ಪ್ರಮಾಣದಲ್ಲಿ ಛಾಯಾಗ್ರಹಣ ಮತ್ತು ಫೋಟೋಗ್ರಫಿ ಬರವಣಿಗೆಯಲ್ಲಿ ತೊಡಗಿಸಿಕೊಂಡೆ.

ಇಂದು ಹಲವಾರು ಪತ್ರಿಕೆಗಳಿಗೆ, ನಿಯತಕಾಲಿಕೆಗಳಿಗೆ ಬರಹಗಾರ್ತಿಯಾಗಿ ಕೆಲಸ ಮಾಡುತ್ತಿರುವ ಹೇಮಾ, ನ್ಯಾಷನಲ್ ಜಿಯೋಗ್ರಾಫಿಕ್‌ನ ಟ್ರಾವೆಲರ್‌ ಇಂಡಿಯಾ ಕಾರ್ಯಕ್ರಮದಲ್ಲಿಯೂ ತೊಡಗಿಸಿಕೊಂಡಿದ್ದಾರೆ.

ಇದೆಲ್ಲದರೊಡನೆ `ವೈಡರ್‌ ಆ್ಯಂಗಲ್ಸ್' ಎನ್ನುವ ಸಂಸ್ಥೆಯನ್ನು ಸ್ಥಾಪಿಸಿ ಇದರ ಮೂಲಕವಾಗಿ ಫೋಟೋಗ್ರಫಿ ವರ್ಕ್‌ಶಾಪ್‌ಗಳನ್ನು ಸಹ ನಡೆಸುತ್ತಿದ್ದಾರೆ. ಜೊತೆಗೆ ಅನೇಕ ಬಾರಿ ಭಾರತ ಪ್ರವಾಸವನ್ನು ಆಯೋಜಿಸಿ ಫೋಟೋಗ್ರಫಿ ಕುರಿತಾಗಿ ಪ್ರಾತ್ಯಕ್ಷಿಕೆ ಏರ್ಪಡಿಸುತ್ತಾರೆ. ಇದರೊಡನೆ ಫೋಟೋಗ್ರಫಿಯಲ್ಲಿರುವ ನಾನಾ ಸಾಧ್ಯತೆಗಳನ್ನು ಸಹ ತಿಳಿಸಿ ಹೇಳುತ್ತಾರೆ. ದಿ ಇಂಟರ್‌ನ್ಯಾಷನಲ್ ಸ್ಕೂಲ್‌ ಆಫ್‌ ಬೆಂಗಳೂರು ವಿದ್ಯಾರ್ಥಿಗಳಿಗೆ ಫೋಟೋಗ್ರಫಿ ಕುರಿತಂತೆ ಶಿಕ್ಷಣವನ್ನು ನೀಡುತ್ತಿರುವ ಹೇಮಾ, ಇದುವರೆಗೆ ಇಂಟೀರಿಯರ್ಸ್‌, ಲೈಫ್‌ಸ್ಟೈಲ್‌, ಟ್ರಾವೆಲರ್‌, ಹೋಮ್ ಡೆಕೋರ್‌, ಫುಡ್‌ ಫೋಟೋಗ್ರಫಿಗಳಂತಹಾ ಹೊಸ ವಿಧದ ಫೋಟೋಗ್ರಫಿ ವಿಭಾಗಗಳಲ್ಲೂ ತಮ್ಮ ಹೆಜ್ಜೆ ಗುರುತನ್ನು ಮೂಡಿಸಿದ್ದಾರೆ.

 

Moonscapes_of_Ladakh_Hema_MG_1908_hi_Res

ನ್ಯೂಯಾರ್ಕ್‌ ಇನ್‌ಸ್ಟಿಟ್ಯೂಟ್‌ ಆಫ್‌ ಫೋಟೋಗ್ರಫಿ ಸಂಸ್ಥೆಯಲ್ಲಿ ಪದವಿ ಪಡೆದಿರುವ ಹೇಮಾರಿಗೆ ನ್ಯಾಷನಲ್ ಜಿಯೋಗ್ರಫಿ ಮತ್ತು ಜೆಟ್‌ ಏರ್‌ ವೇಸ್‌ ಜಂಟಿಯಾಗಿ ನಡೆಸುವ ಮಹಿಳಾ ಛಾಯಾಗ್ರಾಹಕಿಯರ ವಿಶೇಷ ಸ್ಪರ್ಧೆಯಲ್ಲಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ಫೋಟೋಗ್ರಫಿ ಕುರಿತಂತೆ ನಡೆಯುವ ರಾಷ್ಟ್ರೀಯ, ಅಂತಾರಾಷ್ಟ್ರೀಯ ಕಾರ್ಯಾಗಾರ, ಉಪನ್ಯಾಸ ಕಾರ್ಯಕ್ರಮಗಳಲ್ಲಿ ಭಾಗಹಿಸುವ ಹೇಮಾ, ಅಲ್ಲಿ ತಮ್ಮ ಪ್ರಬಂಧ, ಭಾಷಣಗಳನ್ನು ಮಂಡಿಸಿ ಅಪಾರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ