ಫುಲ್ ಟೈಂ ಮಸ್ತಿ ! : ಈ ಕಾಲದಲ್ಲಿ ಮೋಜು ಮಸ್ತಿ ಮಾಡಲು ಯಾವುದೇ ನೆಪ ಸಲ್ಲುತ್ತದೆ. ದ. ಅಮೆರಿಕಾದ ಗ್ವಾಟೆಮಾಲಾ ದೇಶದಲ್ಲಿ ಹೀಗೊಂದು ಹುಚ್ಚು ಪೆರೇಡ್‌ ನಡೆಯುತ್ತದೆ. ಇದರಲ್ಲಿ ನೂರಾರು ಬೆಲೂನುಗಳಿಂದ ಕಲಾಕೃತಿಗಳನ್ನು ರೂಪಿಸಿ ರಸ್ತೆಗಿಳಿದು ಮೆರವಣಿಗೆ ಹೊರಡುತ್ತಾರೆ. ಪ್ರೇಕ್ಷಕರು ಸೂಜಿಯಿಂದ ಇವನ್ನು ಚುಚ್ಚಬಾರದಷ್ಟೆ!

ಗೋಡೆ ಏರಿದ ವ್ಯಕ್ತಿ ಚಿತ್ರಗಳು :  ಹೌದು, ಬೇಕಾದಷ್ಟು ಸುಖ ಸೌಲಭ್ಯಗಳಿಗೇನೂ ಕೊರತೆ ಇಲ್ಲ. ಆದರೆ ಇಲ್ಲಿ ಇದನ್ನು ಸೂಕ್ಷ್ಮವಾಗಿ ಗಮನಿಸಿದರೆ ಪ್ರತಿಯೊಬ್ಬರೂ ಗೇಣಿಗೇರಿದಂತಿದೆ. ಫ್ರಾನ್ಸಿನ ಕಲಾವಿದ ಮಿಶೆಲ್‌ ನೇಝರ್‌ ತನ್ನ ಒಂದು ಪ್ರದರ್ಶನದಲ್ಲಿ ಇದನ್ನೇ ಪ್ರತಿಪಾದಿಸಿದ್ದಾನೆ. ನಿಮ್ಮ ಚಿತ್ರ ಹೀಗೆಯೇ ಗೋಡೆ ಮೇಲೇರಿದೆ.

ಏನು? ಯಾವ ಚಿಟ್ಟೆ ಹೆಚ್ಚು ಅಂದ? :  ಇಂಗ್ಲೆಂಡ್‌ನ ಒಂದು ಪಬ್ಲಿಕ್‌ ಗಾರ್ಡನ್‌ ಗ್ಲಾಸ್‌ಹೌಸ್‌ನಲ್ಲಿ ಸಾವಿರಾರು ತರಹದ ಚಿಟ್ಟೆಗಳು ಒಂದೇ ಕಡೆ ಸೇರುತ್ತವೆ. ಇದರ ಉದ್ಘಾಟನೆಯ ದಿನದಂದು ಈ ಚಿಟ್ಟೆಗಳು ಮಾನವ ಚಿಟ್ಟೆಯನ್ನು ಹೀಗೆ ಮುತ್ತಿಕೊಳ್ಳುವುದೇ? ಮಾನವ ಚಿಟ್ಟೆಯ ಹಿಂದೆ ಮಾನವ ಭ್ರಮರಗಳಿಗೇನೂ ಕೊರತೆ ಇರದೆಂದು ಪಾಪ, ಅವಕ್ಕೇನು ಗೊತ್ತು? ಈಗ ಮಾನವ ಚಿಟ್ಟೆ ಯಾರ ಸ್ನೇಹಕ್ಕೆ ಮಹತ್ವ ಕೊಡಬೇಕು.... ಅಸಲಿ ಚಿಟ್ಟೆಗೋ.... ಮಾನವ ಭ್ರಮರಕ್ಕೋ.....?

ನಾಟಕವಲ್ಲ... ಇದುವೇ ಫ್ಯಾಷನ್‌ ಶೋ : ಸದಾ ಕ್ಯಾಟ್‌ವಾಕ್‌ ಮಾಡುತ್ತಾ ವೇದಿಕೆಯೇರಿ ನಲಿಯುವ ಮಾಡೆಲ್ಸ್ ಕಂಡು ಬೇಸತ್ತ ವೀಕ್ಷಕರಿಗೆ ಒಂದಿಷ್ಟು ಮನರಂಜನೆ. ಇವರಿಂದ ಇದೀಗ ಕೆಲವು ಫ್ಯಾಷನ್‌ ಶೋಗಳು ಇಂಥ ನಾಟಕೀಯ ತಿರುವು ಪಡೆದಿವೆ. ಹೀಗಾಗಿ ಹೊಸ ಹೊಸ ಉಡುಗೆಗಳು ಇನ್ನಷ್ಟು ರೋಚಕ ಎನಿಸುತ್ತವೆ.

ನಮಗೆ ನಮ್ಮ ಹಕ್ಕು ನೀಡಿ : ಈಗ ವಿಶ್ವವಿಡೀ ಮಹಿಳೆಯರು ತಮ್ಮ ಹಕ್ಕಿಗಾಗಿ ಹೋರಾಟಕ್ಕಿಳಿದಿದ್ದಾರೆ. ಪೂರ್ವ ಸೋವಿಯಟ್‌ ಯೂನಿಯನ್ನಿನ 60 ವರ್ಷಗಳ ಕಮ್ಯುನಿಸ್ಟ್ ಆಡಳಿತದಲ್ಲಿ ಎಂದೂ ಮಹಿಳೆಯರಿಗೆ ಸಮಾನ ಅವಕಾಶಗಳು ಸಿಕ್ಕಿರಲಿಲ್ಲ. ನಮ್ಮ ದೇಶವೇ ಇರಲಿ, ಉತ್ಥಾನಗೊಂಡ ಫ್ರಾನ್ಸ್ ಇರಲಿ ಅಥವಾ ಕೊಸೋವಾ.... ಮಹಿಳೆಯರು ಹೀಗೆ ತಮ್ಮ ಸಮಾನತೆಯ ಹಕ್ಕುಗಳಿಗಾಗಿ ಬೀದಿಗಿಳಿಯಬೇಕಾದ ಪ್ರಮೇಯ ಇಂದಿಗೂ ತಪ್ಪಿಲ್ಲ.

ಕಲೆಯಲ್ಲಿ ಧರ್ಮದ ಗೊಡವೆ ಏಕೆ? : ಇಲ್ಲ, ಇದು ಗೋರಕ್ಷಕರ ಕೆಲಸವಲ್ಲ. ಇದೊಂದು ಸ್ಪೇನಿನ ಗೋವಿನಾಕೃತಿಯಾಗಿದ್ದು, ಪ್ರಸಿದ್ಧ ಕಲಾವಿದ ಪಾಬ್ಲೋ ಪಿಕಾಸೋನ ಅಮರ ಕಲಾಕೃತಿ ಗುರ್ನಿಕಾ ತರಹದ್ದೇ. ಹಲವು ನಗರಗಳಲ್ಲಿ ಇಂಥ ಹಸುವಿನ ಪೇಂಟಿಂಗ್ಸ್ ಕಾಣಿಸುತ್ತವೆ. ನೀವು ಯೂರೋಪಿನಲ್ಲಿ ಇಂಥ ಪೇಂಟಿಂಗ್ಸ್ ನ್ನು ಎಲ್ಲೆಲ್ಲೂ ಕಾಣಬಹುದು, ನಮ್ಮಲ್ಲಿ ಪೇಪರ್‌ ಪ್ಲಾಸ್ಟಿಕ್‌ ಮೇಯುವ ಹಸುಗಳಿಗೆ ಪೂಜೆ ಇದೆಯೇ ಹೊರತು, ದಯೆ ತೋರಿಸುವವರಿಲ್ಲ.

ಇನ್ನು ಮಾತಾಡುವಂತಿಲ್ಲ... ಗಪ್‌ಚುಪ್‌ ! : ರೀ ಸ್ವಾಮಿ, ಫ್ರಾಂಕಾಯ್ಸ್ ಆಲಾಂದ್‌ ಸಾಹೇಬರೆ... ಸ್ವಲ್ಪ ಗಪ್‌ಚುಪ್‌ ಆಗಿರಿ! ನಿಮ್ಮ ಜಾಗದಲ್ಲೀಗ ಫ್ರಾನ್ಸಿನ ಹೊಸ ರಾಷ್ಟ್ರಪತಿ ಇಮ್ಯಾನುಯೆಲ್ ಮೈಕ್ರೋ ಸ್ಥಾಪಿತಗೊಂಡಿದ್ದಾರೆ. ಅವರಂತೂ ಮಹಾ ಪ್ರಚಂಡರು! ಫ್ರಾನ್ಸಿನ ಮಾಜಿ ರಾಷ್ಟ್ರಪತಿ ಇದೀಗ ಹಾಸ್ಯ ಕಲಾವಿದರ ಕೈಲಿ ಸಿಲುಕಿ ಹೀಗೆ ನಾನಾ ಅವಸ್ಥೆ ಪಡುತ್ತಿದ್ದಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ