ಮಹಿಳೆಯರು ಈಗ ಸಾಮರ್ಥ್ಯದ ಬಲದ ಮೇಲೆ ಪುರುಷರಿಗೆ ಸರಿಸಮಾನವಾಗಿ ಹೆಗಲಿಗೆ ಹೆಗಲು ಕೊಟ್ಟು ದುಡಿಯುತ್ತಿದ್ದಾರೆ. ಆದರೆ ಸಮಾಜದಲ್ಲಿ ಅವರ ಓವರ್‌ ಆಲ್ ಕಂಡೀಶನ್‌ ನೋಡಿದರೆ, ಬಹಳಷ್ಟು ಮಹಿಳೆಯರು ತಮ್ಮನ್ನು ತಾವು ಸಾಲಿನಲ್ಲಿ ಅತ್ಯಂತ ಕಟ್ಟಕಡೆಯಲ್ಲಿ ಕಾಣುತ್ತಾರೆ. ಅವಳು ಮುಂದೆ ಸಾಗಬಹುದು. ಆದರೆ ಸಾಗುತ್ತಿಲ್ಲ. ತಮ್ಮದೇ ವಿಷಯ ಮಂಡಿಸಲು ಅಥನೈ ತಮ್ಮ ಇಚ್ಛೆಯನ್ನು ಹೇಳಿಕೊಳ್ಳಲು ಹಿಂದೇಟು ಹಾಕುವುದಿಲ್ಲ.

ಕೆಲವು ತಿಂಗಳುಗಳ ಹಿಂದೆ ಪಾಂಡ್ಸ್ ಮುಖಾಂತರ ನಡೆಸಿದ ಒಂದು ಸಮೀಕ್ಷೆಯ ಪ್ರಕಾರ, ಮಹಿಳೆಯರು ದೀರ್ಘಕಾಲದ ತನಕ ತಮ್ಮನ್ನು ತಾವು ತಡೆಯುತ್ತಿದ್ದಾರೆ. 10ರಲ್ಲಿ ನಾಲ್ವರು ಮಹಿಳೆಯರು ಹೇಳುವುದೇನೆಂದರೆ, ತಾವು ತಮ್ಮ ಇಚ್ಛೆಯ ಮಾತು ಹೇಳಲು ಅಥವಾ ತಮ್ಮಿಚ್ಛೆಯಂತೆ ಕೆಲಸ ಮಾಡಲು ತಮ್ಮನ್ನು ತಾವು ತಡೆಯುತ್ತಾರೆ.

ತಮ್ಮನ್ನು ತಾವು ತಡೆಯಲು ಕಾರಣ?

ಶೇ.59ರಷ್ಟು ಮಹಿಳೆಯರಿಗೆ ತಮ್ಮನ್ನು ಪರೀಕ್ಷಿಸಲ್ಪಡುತ್ತಾರೆ ಎಂಬ ಭಯವಿರುತ್ತದೆ.

ಶೇ.58ರಷ್ಟು ಮಹಿಳೆಯರು ತಮಗೆ ಬೇರೆಯವರು ಏನು ಪ್ರತಿಕ್ರಿಯೆ ಕೊಡುತ್ತಾರೆಂಬ ಅನಿಶ್ಚಿತತೆ ಕಾಣುತ್ತಿರುತ್ತದೆ.

10ರಲ್ಲಿ 5 ಜನ ಮಹಿಳೆಯರಿಗೆ ಯಾವ ಚಿಂತೆ ಕಾಡುತ್ತಿರುತ್ತದೆ ಅಂದರೆ, ಬೇರೆ ಮಹಿಳೆಯರು ತಮ್ಮ ಬಗ್ಗೆ ಸಕಾರಾತ್ಮಕವಾಗಿ ಏನು ಯೋಚಿಸಬಹುದು ಎಂದು ಸಮಾಜ ಅಥವಾ ಕುಟುಂಬದವರು ಏನು ಯೋಚಿಸುತ್ತಾರೆ ಎಂಬ ಹೆದರಿಕೆ, ಅವರು ಏನು ಪ್ರತಿಕ್ರಿಯೆ ಕೊಡುತ್ತಾರೆ ಎಂಬ ಆತಂಕಗಳು ಮಹಿಳೆಯರಿಗೆ ತಮ್ಮ ಮನಸ್ಸಿನ ಕೆಲಸ ಮಾಡಲು ಅವಕಾಶ ಕೊಡುವುದಿಲ್ಲ.

ತಮ್ಮನ್ನು ತಾವು ತಡೆಯುವ ಈ ಸಂಕೋಚಕ್ಕೆ ಅನೇಕ ಹೆಸರುಗಳಿವೆ. ಇದನ್ನು ಮಹಿಳೆಯರು ಆಂತರಿಕ ಧ್ವನಿ ಎಂದು ಕರೆಯಬಹುದು. ಆದರೆ ಇದು ಒಂದು ರೀತಿಯ ನಕಾರಾತ್ಮಾಕ ಯೋಚನೆಯಾಗಿದೆ. ಈ ಯೋಚನೆ ಮಹಿಳೆಯರ ಮುಂದೆ ಸಾಗುವ ಮಾರ್ಗಕ್ಕೆ ದೊಡ್ಡ ಅಡಚಣೆಯಾಗಿದೆ. ಈ ಯೋಚನೆ ಒಂದೇ ರಾತ್ರಿಯಲ್ಲಿ ಜನ್ಮತಳೆಯುವಂಥದ್ದಲ್ಲ. ಇದೇ ವರ್ಷಾನುವರ್ಷಗಳಿಂದ ಸಮಾಜದ ಮುಖಾಂತರ ನಡೆಯುತ್ತಿರುವ ಬ್ರೇನ್‌ ವಾಷ್‌ ಹಾಗೂ ಸಮಾಜದ ಪರಂಪರಾಗತ ನಿಯಮಗಳಲ್ಲಿ ಅವರನ್ನು ಸಿಲುಕಿಸಿ, ಇಂಥದ್ದನ್ನು ಮಾಡಬೇಕು, ಇಂಥದ್ದನ್ನು ಮಾಡಬಾರದು ಎಂದು ಹೇಳುವುದರ ಫಲವಿದು.

ಇದರ ಪರಿಣಾಮವೇನೆಂದರೆ ಅವರು ತಮ್ಮ ಮನಸ್ಸಿನಿಂದ ಕೆಲಸ ಮಾಡುವ ಉತ್ಸಾಹವನ್ನು ಒಗ್ಗೂಡಿಸಲು ಆಗುವುದೇ ಇಲ್ಲ.

ಸುಮಾರು ಅರ್ಧದಷ್ಟು ಅಂದರೆ ಶೇ.47ರಷ್ಟು ಮಹಿಳೆಯರು ದೊಡ್ಡ ಸಮಾರಂಭದಲ್ಲಿ ಪ್ರಶ್ನೆ ಕೇಳಲು ಸಂಕೋಚಪಡುತ್ತಾರೆ. ಅದೇ ರೀತಿ ಶೇ.40ರಷ್ಟು ಮಹಿಳೆಯರು ಬಾಸ್‌ಗೆ `ಇಲ್ಲ’ ಎಂದು ಹೇಳಲು ತಮ್ಮನ್ನು ತಾವು ತಡೆಯುತ್ತಾರೆ.

ವೈಯಕ್ತಿಕ ಜೀವನದಲ್ಲಿ 10ರಲ್ಲಿ 4 ಮಹಿಳೆಯರು ಬಾಯ್‌ ಫ್ರೆಂಡ್‌ ಜೊತೆ ಹೋಗಲು ಹಿಂದೇಟು ಹಾಕುತ್ತಾರೆ. ಬೇರೆಯವರು ಏನೆನ್ನುತ್ತಾರೆ ಎಂಬ ಆತಂಕ  ಅವರಿಗೆ ಇರುತ್ತದೆ.

ತಮ್ಮನ್ನು ತಾವು ಏಕೆ ತಡೆಯುತ್ತಾರೆ?

ತಾವು ದೊಡ್ಡ ಸಮೂಹದಲ್ಲಿ ಪ್ರಶ್ನೆ ಕೇಳಿದರೆ, ಆ ಕೆಲಸ ಆಗುತ್ತೊ ಇಲ್ಲವೋ ಎನ್ನುವ ಸಂದೇಹ ಬಹಳಷ್ಟು ಮಹಿಳೆಯರಿಗೆ ಇರುತ್ತದೆ. ಯಾರಾದರೂ ತಮ್ಮನ್ನು ತಮಾಷೆ ಮಾಡಿದರೆ ಏನು ಗತಿ ಎಂಬ ಭೀತಿ ಅವರಿಗೆ ಇರುತ್ತದೆ.

ತಾವು ಯೋಚಿಸಲು ಬಹಳ ಸಮಯ ತೆಗೆದುಕೊಳ್ಳುತ್ತೇವೆ ಎಂದು ಅನೇಕ ಮಹಿಳೆಯರು ಹೇಳುತ್ತಾರೆ. ಅದರಿಂದಾಗಿ ಕೆಲಸ ಮಾಡುವ ಅವಕಾಶ ಕೈ ತಪ್ಪಿ ಹೋಗುತ್ತದೆ, ತಮ್ಮನ್ನು ಯಾರೊ ಗಮನಿಸುತ್ತಿರುತ್ತಾರೆ ಎಂದು ಅವರಿಗೆ ಅನ್ನಿಸುತ್ತಿರುತ್ತದೆ.

`ಇನ್‌ ಪೇಸ್‌’ ಎಂಬ ಸ್ವಾತಂತ್ರ ಕಂಪನಿಯೊಂದು ಆನ್‌ ಲೈನ್‌ನಲ್ಲಿ ನಡೆಸಿದ ಸರ್ವೆಯಲ್ಲಿ ಮೇಲ್ಕಂಡ ಸಂಗತಿಗಳು ಬಹಿರಂಗವಾದವು.

ಈ ಸಮೀಕ್ಷೆಯನ್ನು ಭಾರತದಲ್ಲಿ 18-35 ವರ್ಷದೊಳಗಿನ ಮಹಿಳೆಯರಲ್ಲಿ ನಡೆಸಲಾಯಿತು. ಚೆನ್ನೈ, ಬೆಂಗಳೂರು, ಮುಂಬೈ, ಕೊಲ್ಕತಾ, ಚಂಡೀಗರ್‌, ಮದುರೈ, ದೆಹಲಿಯಲ್ಲಿ ನಡೆಸಲಾಯಿತು.

ವಾಸ್ತವ ಸಂಗತಿ ಏನೆಂದರೆ ಬಟ್ಟೆಗಳ ಆಧಾರದಲ್ಲಿ ವರ್ತನೆಯ ಆಧಾರದಲ್ಲಿ ಹುಡುಗರ ಜೊತೆ ಮಾತನಾಡುವುದನ್ನು ಗಮನಿಸಿ ತಮ್ಮನ್ನು ಜಜ್‌ ಮಾಡಲಾಗುತ್ತದೆ ಎನ್ನುವುದು ಅನೇಕ ಹುಡುಗಿಯರ ಅಭಿಪ್ರಾಯ. ಬಿಂದಾಸ್‌ ಹುಡುಗಿಯರಿಗೆ ಯಾವುದರ ಗೊಡವೆಯೂ ಇರುವುದಿಲ್ಲ. ಆದರೆ ಸಾಮಾನ್ಯ ಹುಡುಗಿಯರ ಬಾಬತ್ತಿನಲ್ಲಿ ಮಾತ್ರ ಸಂಕೋಲೆಗಳು ಬಂಧಿಸಲ್ಪಡುತ್ತವೆ.

10ನೇ ಹಾಗೂ ಪಿಯುಸಿ ಪರೀಕ್ಷೆ ಪರಿಣಾಮದ ಸಂದರ್ಭದಲ್ಲಿ ಸುದ್ದಿ ಪತ್ರಿಕೆಗಳಲ್ಲಿ ಹುಡುಗಿಯರದ್ದೇ ಪ್ರಾಬಲ್ಯ ಕಂಡುಬರುತ್ತದೆ. ಆದರೆ ಉನ್ನತ ಹುದ್ದೆಗಳನ್ನು ಅಲಂಕರಿಸುವ ಪ್ರಸಂಗ ಬಂದಾಗ ಮಾತ್ರ ಅವರ ಸಾಧನೆ ಬೆರಳೆಣಿಕೆಯಷ್ಟು ಮಾತ್ರವೇ ಇರುತ್ತದೆ.

ಆನ್‌ಲೈನ್‌ ಕೆರಿಯರ್‌ ಮತ್ತು ರಿಕ್ರೂಟ್‌ಮೆಂಟ್‌ ಸಲ್ಯೂಷನ್‌ ಮಾಸ್ಟರ್‌ ಇಂಡಿಯಾದ ಒಂದು ಸರ್ವೆ ಪ್ರಕಾರ, ಮಹಿಳೆಯರ ಸಂಬಳ ಪುರುಷರಿಗೆ ಹೋಲಿಸಿದರೆ ಶೇ.27ರಷ್ಟು ಕಡಿಮೆ ಎನ್ನುವುದು ತಿಳಿದುಬರುತ್ತದೆ. ಸರ್ಕಾರಿ ನೌಕರಿ ಹೊರತುಪಡಿಸಿದರೆ ಉಳಿದ ಕ್ಷೇತ್ರದಲ್ಲಿ ಅಸಮಾನತೆ ಇನ್ನೂ ಹಾಗೆಯೇ ಇದೆ.

ಮಹಿಳೆಯರಿಗೆ ಬಾಲ್ಯದಿಂದಲೇ ಪುರುಷರಿಗೆ ಸರಿಸಮಾನವಾಗಿ ನಿಲ್ಲಬೇಡ ಎಂದು ಕಲಿಸಿಕೊಡಲಾಗುತ್ತದೆ. ನಿನಗೆಷ್ಟು ಸಿಗುತ್ತೊ ಅಷ್ಟರಲ್ಲಿಯೇ ಸಂತೋಷಪಡು, ಹೊರಗಿನವರ ಎದುರು ಕೊಚ್ಚಿಕೊಳ್ಳಬೇಡ. ನಿನಗಿಂತ ಹಿರಿಯರ ಎದುರು ಅಥವಾ ಯಾರನ್ನು ಅವಲಂಬಿಸಿರುತ್ತೇವೋ ಅವರೆದುರು ಬಾಯೆತ್ತಿ ಮಾತಾಡಬೇಡ ಎಂದು ಹೇಳಲಾಗುತ್ತದೆ.

ಇದರ ಪರಿಣಾಮ ಎಂಬಂತೆ ಅದೇ ಸಂಗತಿ ಅವರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿಯುತ್ತದೆ. ಅದರ ಪ್ರಕಾರವೇ ಅವರು ಮುನ್ನಡೆಯುತ್ತಿರುತ್ತಾರೆ. ತಮ್ಮ ಬಾಯನ್ನೆಂದೂ ತೆರೆಯುವುದಿಲ್ಲ.

ತಮ್ಮ ಮನಸ್ಸಿನಂತೆ ಮಾಡಲಾಗದು

ಒಬ್ಬ ಪುರುಷ ತಾನೆಂತಹ ನೌಕರಿ ಮಾಡಬೇಕೆಂದು ತನ್ನ ಮನೆಯವರ ಎದುರು ಅಥವಾ ಹೆಂಡತಿಯ ಎದುರು ಅಭಿಪ್ರಾಯ ಹಂಚಿಕೊಳ್ಳಲು ಹೋಗುವುದಿಲ್ಲ. ಅವನು ತನ್ನ ಇಚ್ಛೆಯ ಮೇರೆಗೆ ನೌಕರಿ ಮಾಡುತ್ತಾನೆ. ಅವನಿಗೆ ಯಾರದ್ದೇ ಅನುಮತಿ ಬೇಕಿರುವುದಿಲ್ಲ. ಇನ್ನೊಂದೆಡೆ ಮಹಿಳೆಯರಿಗೆ, ಯುವತಿಯರಿಗೆ ತಮ್ಮ ಇಚ್ಛೆಯ ಮೇರೆಗೆ ಏನನ್ನು ಮಾಡಲು ಆಗುವುದಿಲ್ಲ. ಓದಲು, ಕೆಲಸ ಮಾಡಲು, ಉದ್ಯೋಗಕ್ಕೆ ಸೂಕ್ತ ಕೌಶಲ ಕಲಿಯಲು ತಂದೆ ಅಣ್ಣನ ಅನುಮತಿ ಪಡೆಯಬೇಕಾಗುತ್ತದೆ.

ಉಷಾ ಒಂದು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಾಳೆ. ಅವಳ ಮದುವೆ ನೌಕಾಪಡೆಯಲ್ಲಿ ಕೆಲಸ ಮಾಡುವ ಒಬ್ಬ ಹುಡುಗನ ಜೊತೆ ನಿಶ್ಚಿತವಾಗಿತ್ತು. ಆ ಹುಡುಗನಿಗೆ ಅವಳ ನೌಕರಿಯ ಬಗ್ಗೆ ಯಾವುದೇ ಆಕ್ಷೇಪ ಇಲ್ಲ, ಅದು ಅವಳು ಸರ್ಕಾರಿ ನೌಕರಿಯಲ್ಲಿ ಕೆಲಸ ಮಾಡುತ್ತಿದ್ದರೆ ಮಾತ್ರ.

ಉಷಾ ಹೇಳುತ್ತಾಳೆ, ನಾನು ಸರ್ಕಾರಿ ನೌಕರಿ ಪಡೆಯಲು ಪ್ರಯತ್ನಿಸುತ್ತಿದ್ದೇನೆ. ಆದರೆ ಸರ್ಕಾರಿ ನೌಕರಿ ಪಡೆಯುವುದು ಅಷ್ಟು ಸುಲಭವಲ್ಲ. ಮದುವೆಗೂ ಮುಂಚೆ ನಾನು ನೌಕರಿಗೆ ರಾಜೀನಾಮೆ ಕೊಡುತ್ತೇನೆ.

ಏಕೆಂದರೆ ಅದು ನನ್ನ ಮದುವೆಯಾಗಲಿರುವ ಹುಡುಗನ ಅಪೇಕ್ಷೆ.

ಇದೇ ಸ್ಥಿತಿ ಎಲ್ಲ ಅವಿವಾಹಿತ ಹುಡುಗಿಯರು ಹಾಗೂ ವಿವಾಹಿತ ಮಹಿಳೆಯರದ್ದಾಗಿದೆ. ಅವರ ಮೊದಲ ಆದ್ಯತೆ ಗಂಡ ಹಾಗೂ ಕುಟುಂಬವಾಗಿರುತ್ತದೆ. ಉದ್ಯೋಗ ಹಾಗೂ ಕೆರಿಯರ್‌ ಅವರ ಆದ್ಯತೆ ಎರಡನೇ ಸ್ಥಾನದಲ್ಲಿರುತ್ತದೆ. ಕೆಲವು ಹುಡುಗಿಯರು ಟೈಮ್ ಪಾಸ್‌ಗೆ ಕೆಲಸ ಮಾಡುತ್ತಾರೆ. ಉದ್ಯೋಗದಲ್ಲಿ ಏನನ್ನಾದರೂ ಸಾಧಿಸಬೇಕು, ಲೀಡರ್‌ ಆಗಬೇಕು ಎನ್ನುವುದು ಅವರ ಭವಿಷ್ಯದ ಯೋಜನೆಯಲ್ಲಿ ಸೇರಿರುವುದೇ ಇಲ್ಲ.

ಮಹಿಳೆಯರಲ್ಲಿ ಅರ್ಹತೆಯ ಕೊರತೆ ಇರುತ್ತದೆ ಎನ್ನುವುದು ಇದರರ್ಥವಲ್ಲ. ಅಮೆರಿಕಾದ ವಾಷಿಂಗ್ಟನ್‌ ವಿವಿಯ ವಿಜ್ಞಾನಿಗಳ ಪ್ರಕಾರ, ಮಹಿಳೆಯರ ಮೆದುಳು ಅವರ ಸಮಾನ ಮನಸ್ಕ ಪುರುಷರಿಗೆ ಹೋಲಿಸಿದರೆ 3 ವರ್ಷಗಳಷ್ಟು ಯಂಗ್‌ ಆಗಿರುತ್ತದೆ. ಇದೇ ಕಾರಣದಿಂದ ಅವರ ಮೆದುಳು ದೀರ್ಘಾವಧಿಯ ತನಕ ಚೆನ್ನಾಗಿ ಕೆಲಸ ಮಾಡುತ್ತಿರುತ್ತದೆ.

ಈ ಅಧ್ಯಯನದಲ್ಲಿ 20-84 ವಯಸ್ಸಿನ 121 ಮಹಿಳೆಯರು ಹಾಗೂ 84 ಪುರುಷರು ಪಾಲ್ಗೊಂಡಿದ್ದರು. ಅವರ ಮೆದುಳಿನಲ್ಲಿ ಗ್ಲೂಕೋಸ್‌ ಹಾಗೂ ಆಕ್ಸಿಜನ್‌ನ ಪ್ರವಾಹವನ್ನು ಅರಿತುಕೊಳ್ಳಲು ಅವರ ಪಿಇಟಿ ಸ್ಕ್ಯಾನ್‌ ಮಾಡಲಾಯಿತು. ಅಂದಹಾಗೆ ಅವರು ಬೌದ್ಧಿಕವಾಗಿ 3 ವರ್ಷಗಳಷ್ಟು ಯಂಗ್‌ ಆಗಿರುವುದು ತಿಳಿದು ಬಂತು.

ಆರ್ಥಿಕ ನಿರ್ಧಾರಗಳಲ್ಲಿ ಅವಲಂಬನೆ

ಯಾವ ಮಹಿಳೆಯರು ಹೂಡಿಕೆಯ ನಿರ್ಧಾರ ಕೈಗೊಳ್ಳುತ್ತಾರೊ ಅವರಿಗೆ ಗಂಡ ಹಾಗೂ ಕುಟುಂಬದವರ ಪ್ರೋತ್ಸಾಹ ಪ್ರಮುಖ ಪಾತ್ರವಹಿಸುತ್ತದೆ. ಶೇ.13 ರಷ್ಟು ಮಹಿಳೆಯರು ಮಾತ್ರ ಗಂಡನ ಸಾವು ಅಥವಾ ವಿಚ್ಛೇದನದ ನಿರ್ಧಾರದ ಬಳಿಕ ಹೂಡಿಕೆಯ ನಿರ್ಧಾರ ಕೈಗೊಳ್ಳುವಂತಾಯಿತು ಎನ್ನುತ್ತಾರೆ. ಶೇ.30ರಷ್ಟು ಮಹಿಳೆಯರು ತಾವೇಕೆ ಹೂಡಿಕೆಯ ನಿರ್ಧಾರ ಕೈಗೊಳ್ಳಲು ಸಾಧ್ಯವಾಯಿತು ಎನ್ನುವುದರ ಬಗ್ಗೆ ಹೇಳುತ್ತಾ ತಾವೇ ಆ ನಿರ್ಧಾರ ಕೈಗೊಂಡೆ ಎನ್ನುತ್ತಾರೆ.

ಹೂಡಿಕೆ ಅಥವಾ ಅವಶ್ಯಕತೆಯ ಉದ್ದೇಶದ ಪ್ರಸ್ತಾಪ ಬಂದಾಗ ಒಂದೇ ರೀತಿಯ ಪರಿಸ್ಥಿತಿ ಕಂಡುಬರುತ್ತದೆ. ಮಕ್ಕಳ ಓದುಬರಹ, ಮನೆ ಖರೀದಿ, ಮಕ್ಕಳ ಮದುವೆ, ಒಳ್ಳೆಯ ಲೈಫ್‌ ಸ್ಟೈಲ್ ‌ಮುಂತಾದವು ಮುಖ್ಯ ಉದ್ದೇಶಗಳಾಗಿ ಕಂಡಬಂದವು. ಪುರುಷರಿಗೆ ಹೋಲಿಸಿದರೆ ಮಹಿಳೆಯರು ತಮ್ಮ ಮಕ್ಕಳ ಬಗೆಗಿನ ಗುರಿಗಳತ್ತ ಹೆಚ್ಚು ವಾಲಿರುವುದು ಕಂಡುಬಂತು.

ಪುರುಷರು ಕಾರು ಅಥವಾ ಮನೆ ಖರೀದಿಯ ಬಗ್ಗೆ ಹೆಚ್ಚು ಆಸಕ್ತಿ ತೋರಿಸುತ್ತಾರಾದರೆ ಮಹಿಳೆಯರು ಜ್ಯೂವೆಲರಿ, ದೈನಂದಿನ ಅವಶ್ಯಕತೆಗಳು ಹಾಗೂ ಟಿವಿ, ಫ್ರಿಜ್‌ ಖರೀದಿಯ ಬಗ್ಗೆ ಆಸಕ್ತಿ ತೋರಿಸುವುದು ಕಂಡು ಬಂತು.

ಮಹಿಳೆಯರು ಹಾಗೂ ಪುರುಷರು ಸೇರಿ ಹಣಕಾಸು ಯೋಜನೆಗಳನ್ನು ರೂಪಿಸಬೇಕು. ಕೇವಲ ಹಣಕಾಸು ಯೋಜನೆಗಳಲ್ಲಷ್ಟೇ ಅಲ್ಲ, ಜೀವನದ ಎಲ್ಲ ಮುಖ್ಯ ನಿರ್ಧಾರಗಳಲ್ಲಿ ಮಹಿಳೆಯರು ತಮ್ಮ ಪಾಲುದಾರಿಕೆ ತೋರಿಸಬೇಕು. ತಮಗನಿಸಿದ ಸಲಹೆ ಕೊಡಬೇಕು. ಈ ರೀತಿ ಮಾಡುವುದರ ಮೂಲಕ ಅವರು ತಮ್ಮ ಕುಟುಂಬ ಹಾಗೂ ಗಂಡನಿಗಾಗಿ ಏನಾದರೂ ಒಳ್ಳೆಯದನ್ನು ಮಾಡಲು ಸಾಧ್ಯವಾಗುತ್ತದೆ.

– ಗಿರಿಜಾ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ