ಬಹುಮುಖ ಪ್ರತಿಭೆಯ ಮಾನಸಾ ಅಂತಾರಾಷ್ಟ್ರೀಯ ನೃತ್ಯ ಕಲಾವಿದೆ. ಸರ್ವ ಕಲೆಯಲ್ಲೂ ಆಸಕ್ತಿ, ಪರಿಶ್ರಮ, ಸಾಧನೆಯ ಪಥದತ್ತ ಕ್ರಮಿಸುತ್ತಿರುವ ಈಕೆಗೆ ಕಲೋಪಾಸನೆಯೇ ಜೀವನದ ಪರಮ ಗಂತ್ಯ. ಓದುವುದರಲ್ಲೂ ಕಡಿಮೇಯೇನಿಲ್ಲ. ಬಿ.ಎಸ್ಸಿ. ಪದವೀಧರೆ ಮತ್ತು ಎಲೆಕ್ಟ್ರಾನಿಕ್ಸ್ ವಿಷಯದಲ್ಲಿ ಬಿ.ಇ. ಪದವಿಯನ್ನು ಉತ್ತಮ ಅಂಕಗಳಿಂದ ಗಳಿಸಿರುವ ಯಶಸ್ವೀ ಎಂಜಿನಿಯರ್ ಕೂಡ.

ವೇದಿಕೆಯ ಮೇಲೆ ಮೋಹಿನಿ ಭಸ್ಮಾಸುರ ನೃತ್ಯರೂಪಕದಲ್ಲಿ ಮೋಹಿನಿಯಾಗಿ ಸುಮನೋಹರವಾಗಿ ನರ್ತಿಸುತ್ತ, ಶಿಲ್ಪ ಸದೃಶ ಭಾವ ಭಂಗಿಗಳಲ್ಲಿ ಕಣ್ಮನ ತುಂಬುವ ಮಾನಸಾ ಥೇಟ್‌ ಮೋಹಿನಿಯೇ! ಸಪ್ರಮಾಣ ಮೋಹನಾಕಾರವುಳ್ಳ ಸುಂದರಿ ಕೂಡ. ರೂಪಪ್ರತಿಭೆ ಮಿಳಿತವಾದ ಈ ಕಲಾವಿದೆ ಯಾವ ಪಾತ್ರಾಭಿನಯ, ನೃತ್ಯ ಪ್ರಸ್ತುತಿಯಲ್ಲೂ ಜೀವ ತುಂಬಿ ನರ್ತಿಸಬಲ್ಲ, ಪ್ರಬುದ್ಧ ಅಭಿನಯ ನೀಡುವ ಸಾಮರ್ಥ್ಯ ಉಳ್ಳವಳು.

ಸುಸಂಸ್ಕೃತ ಮನೆತನ, ತಂದೆ ತೀರ್ಥಹಳ್ಳಿಯವರು, ಕೋಣಂದೂರು ವೆಂಕಪ್ಪ ಪ್ರೊಫೆಸರ್‌ ಮತ್ತು ಸಾಹಿತಿಗಳು. ತಾಯಿ ನಳಿನಿ ವೆಂಕಪ್ಪ ಕೂಡ ಲೇಖಕಿ. ಕೃಷಿ ವಿಶ್ವವಿದ್ಯಾನಿಲಯದಲ್ಲಿ ಆಡಳಿತಾಧಿಕಾರಿಯಾಗಿದ್ದರು. ಮಗಳ ಬದುಕಿನಲ್ಲಿ ಅವಳ ಬಾಲ್ಯದಿಂದಲೂ ಶಿಸ್ತು, ಸಂಯಮ, ಪ್ರಾಮಾಣಿಕತೆ, ಮೌಲ್ಯಾಧಾರಿತ ಬದ್ಧತೆ, ಆಧ್ಯಾತ್ಮಿಕ ಚಿಂತನೆಗಳ ಪ್ರಾಮುಖ್ಯವನ್ನು ಮನನಗೊಳಿಸಿ ಬೆಳೆಸಿದ ಚಿಂತಕಿ.

ಬಾಲ್ಯದಿಂದಲೇ ನೃತ್ಯಾಸಕ್ತಿ

manasa-k-24

ಮಾನಸಾ ಬಾಲಪ್ರತಿಭೆ, ಚಟುವಟಿಕೆಯ ಚಿಲುಮೆಯಾಗಿದ್ದಳು. ಸರಸ್ವತಿ ವಿದ್ಯಾಮಂದಿರ ಶಾಲೆಯಲ್ಲಿ ಓದುವಾಗ ತರಗತಿಗೆ ಪ್ರಥಮ, ಭಗವದ್ಗೀತೆ, ಅಮರಕೋಶ, ಹಾಡುಗಾರಿಕೆ, ನೃತ್ಯ, ರಂಗೋಲಿ, ಚರ್ಚಾಸ್ಪರ್ಧೆ, ಎಲ್ಲದರಲ್ಲೂ ಮೊದಲು, ನಾಟಕಗಳಲ್ಲಿ ಪ್ರಮುಖ ಪಾತ್ರ ಮತ್ತು ಜಿಲ್ಲಾ ಮಟ್ಟದ ನೃತ್ಯ, ನಾಟಕ ಇತ್ಯಾದಿ ಎಲ್ಲ ಕಲಾ ಸ್ಪರ್ಧೆಗಳಲ್ಲಿ ಬಹುಮಾನಗಳು. ಜೊತೆಗೆ ಜಿಲ್ಲಾ ಮಟ್ಟದ ಕ್ರೀಡಾಸ್ಪರ್ಧೆಗಳಲ್ಲಿ ಬೆಳ್ಳಿ ಹಾಗೂ ಚಿನ್ನದ ಪದಕಗಳನ್ನು ಗಳಿಸಿದ ಅಗ್ಗಳಿಕೆ ಇವಳದು. ಎಸ್‌.ಎಸ್‌.ಎ್‌.ಸಿ.ಯಲ್ಲಿ ಡಿಸ್ಟಿಂಕ್ಷನ್‌ ಮತ್ತು ಕನ್ನಡ ಭಾಷೆಯಲ್ಲಿ ರಾಜ್ಯಕ್ಕೆ ಅತಿ ಹೆಚ್ಚು ಅಂಕಗಳನ್ನು ಪಡೆದ ವೈಶಿಷ್ಟ್ಯ. ಆನಂತರ ಬೆಂಗಳೂರಿನ ಆರ್‌.ವಿ. ಕಾಲೇಜಿನಿಂದ ಎಂಜಿನಿಯರ್‌ ಪದವಿ ಇವೆಲ್ಲಕ್ಕೂ ಕಳಶವಿಟ್ಟಂತೆ ನೃತ್ಯಕ್ಷೇತ್ರದಲ್ಲಿ ಬಾಲ್ಯದಿಂದಲೂ ಕಠಿಣಾಭ್ಯಾಸದ ತರಬೇತಿ. ಐದರ ಎಳವೆಯಲ್ಲೇ ಖ್ಯಾತ ನೃತ್ಯ ಗುರು ಶಾಂತಾ ಪ್ರಶಸ್ತಿ ವಿಜೇತೆ ರಾಧಾ ಶ್ರೀಧರ್‌ ಅವರಲ್ಲಿ ನೃತ್ಯ ಕಲಿಕೆಗೆ ಸೇರ್ಪಡೆ.

ಕರ್ನಾಟಕ ಸರ್ಕಾರದ ಭರತನಾಟ್ಯ ಜೂನಿಯರ್‌, ಸೀನಿಯರ್‌, ವಿದ್ವತ್‌ ಪರೀಕ್ಷೆಗಳಲ್ಲಿ ಡಿಸ್ಟಿಂಕ್ಷನ್‌ ಪಡೆದು ಉತ್ತೀರ್ಣಳಾಗಿ ಅಂದಿನಿಂದ ಇಂದಿನವರೆಗೂ ಸತತ ಮೂರು ದಶಕಗಳಿಗೂ ಮಿಕ್ಕಿ ನೃತ್ಯೋಪಾಸನೆ ಮಾಡುತ್ತ ಬಂದಿರುವ ಬದ್ಧತೆಯ ಕಲಾವಿದೆ.

ತನ್ನದೇ ಆದ ನೃತ್ಯಸಂಸ್ಥೆ `ನಾಟ್ಯ ಸಂಪದ' ಶಾಲೆಯಲ್ಲಿ ಕಳೆದ 25 ವರ್ಷಗಳಿಂದ ನಾಟ್ಯ ಶಿಕ್ಷಕಿಯಾಗಿ ಇದುವರೆಗೂ ನೂರಾರು ಕಲಾವಿದೆಯರನ್ನು ತಯಾರು ಮಾಡಿದ ಸಂತೃಪ್ತಿ ಸಾರ್ಥಕ್ಯ ಭಾವ ಇವರದು.

ಚಿಕ್ಕಂದಿನಲ್ಲೇ ರಂಗಪ್ರವೇಶ

Manasa-Kanti-2

ಚಿಕ್ಕ ವಯಸ್ಸಿನಲ್ಲೇ ಭರತನಾಟ್ಯದಲ್ಲಿ `ರಂಗಪ್ರವೇಶ' ಮಾಡಿದ ಮಾನಸಾ, ಕಲಾ ರಸಿಕರೊಂದಿಗೆ ಮಾಧ್ಯಮಗಳ ವಿಮರ್ಶಕರ ಮೆಚ್ಚುಗೆಯನ್ನೂ ಗಳಿಸಿ ನಿರಂತರ ನೃತ್ಯ ಪ್ರದರ್ಶನ ನೀಡಲಾರಂಭಿಸಿದ್ದು ಅವಳ ಸಾಧನೆಯ ಮಜಲು. ಆನಂತರ ಭರತನಾಟ್ಯದಲ್ಲಿ ಪದ್ಮಭೂಷಣ ಡಾ. ಪದ್ಮಾ ಸುಬ್ರಹ್ಮಣ್ಯಂರವರ ಮಾರ್ಗದರ್ಶನದಲ್ಲಿ ಶಾಸ್ತ್ರ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿಯನ್ನು ಪಡೆದುಕೊಂಡಳು. ಜೊತೆಗೆ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನೂ ಡಾ. ಮೀನಾಕ್ಷಿ ರವಿಯವರಿಂದ ಕಲಿತಿರುವುದಲ್ಲದೆ, ಗುರು ನಾಗರತ್ನಾ ಶಶಿಧರ್‌ರರಲ್ಲಿ ವೀಣಾ ವಾದನದ ಅಭ್ಯಾಸ ಮಾಡಿರುವ ಪ್ರತಿಭಾವಂತೆ, ಭರತನಾಟ್ಯದೊಂದಿಗೆ ಗುರು ಮೈಸೂರು ನಾಗರಾಜ್‌ ಅವರಲ್ಲಿ ಕಥಕ್‌ ನೃತ್ಯ ಶೈಲಿಯಲ್ಲಿಯೂ ತರಬೇತು ಹೊಂದಿದ್ದಾಳೆ. ನೃತ್ಯಜ್ಞೆಯಾದ ಇವಳು ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯ ಪರೀಕ್ಷಕಿಯಾಗಿ ಸೇಲೆ ಸಲ್ಲಿಸುತ್ತಿರುವುದು ಹೆಮ್ಮೆಯ ಸಂಗತಿ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ