ಸಾಮಾನ್ಯವಾಗಿ ಬಹುತೇಕ ಮಧ್ಯಮವರ್ಗದ ಜನರು ಹೋಟೇಲ್ಲಿಗೆ ಹೋದ ತಕ್ಷಣ ಸರ್ವರ್ ಮೆನು ಕಾರ್ಡ್ ಕೈಗೆ ಕೊಟ್ಟೊಡನೆಯೇ ಅದರಲ್ಲಿ ಯಾವ ಯಾವ ಖಾದ್ಯಗಳಿವೆ ಎಂಬುದನ್ನು ನೋಡುವುದಕ್ಕಿಂತಲೂ ಯಾವುದರ ಬೆಲೆ ಎಷ್ಟಿದೆ? ನಮ್ಮಬಳಿ ಇರುವ ಬೆಲೆಗೆ ಯಾವ ತಿಂಡಿ ಸರಿ ಹೊಂದಬಹುದು ಎಂದೇ ಲೆಖ್ಖಾಚಾರ ಹಾಕುವುದು ಸರ್ವೇ ಸಾಮಾನ್ಯ. ಕೆಲವು ವರ್ಷಗಳ ಹಿಂದೆ ನಮ್ಮ ಮಕ್ಕಳನ್ನು ಒಂದು ದೊಡ್ಡ ಹೊಟೇಲ್ ಒಂದಕ್ಕೆ ಕರೆದುಕೊಂಡು ಹೋಗಿದ್ದಾಗ ನಮ್ಮ ಮಗಳು ಆ ಹೋಟೇಲ್ಲಿನ ಖಾದ್ಯಗಳ ಬೆಲೆಯನ್ನು ನೋಡಿದ ಕೂಡಲೇ ಅಪ್ಪಾ, ಈ ಹೋಟೇಲ್ ಬೇಡಾ, ಬೇರೇ ಯಾವುದಾದರೂ ಹೋಟೆಲ್ಲಿಗೆ ಹೋಗೋಣ ನಡೀರಿ ಎಂದಾಗಾ, ಯಾಕೋ ಪುಟ್ಟಾ ಎಂದು ಕೇಳಿದ್ದಕ್ಕೇ, ಅಯ್ಯೋ ರಾಮ ಇಲ್ಲಿನ ಒಂದು ತಿಂಡಿಯ ಬೆಲೆಯಲ್ಲಿಯೇ ಹೊರಗಡೇ, ನಾವೆಲ್ಲರೂ ಹೊಟ್ಟೇ ತುಂಬಾ ತಿನ್ನಬಹುದು ಎಂದು ತನ್ನ ಕಕ್ಕುಲತಿಯನ್ನು ತೋರಿದ್ದಳು. ಊಟಕ್ಕೆ ಬಂದಾಗ ಬೆಲೆಯನ್ನೆಲ್ಲಾ ನೋಡಬಾರದು. ಇಲ್ಲಿಯ ಬೆಲೆಯೆಲ್ಲಾ ತಿಳಿದೇ, ಇಲ್ಲಿಗೆ ಕರೆದುಕೊಂಡು ಬಂದಿದ್ದೀನಿ. ಸುಮ್ಮನೇ ಉತ್ತಮವಾದ ಆಹಾರ ಸವಿಯಿರಿ ಎಂದಿದ್ದೆ.

ಇಷ್ಟೆಲ್ಲಾ ಪೀಠಿಕೆ ಯಾಕಪ್ಪಾ ಅಂದ್ರೇ, ದೂರದ ಸಿಂಗಾಪುರದಲ್ಲಿರುವ ಅನ್ನಲಕ್ಷ್ಮಿ ಎಂಬ ಭಾರತೀಯರ ಹೋಟೇಲ್, ಅದರಲ್ಲೂ ದಕ್ಷಿಣ ಭಾರತೀಯ ತಿಂಡಿ ತಿನಿಸುಗಳ ಈ ಹೋಟೇಲ್ಲಿನಲ್ಲಿ ಈ ಲೇಖನ ಶೀರ್ಷಿಕೆಯಂತೆ ಹೊಟ್ಟೇ ತುಂಬಾ ಊಟ ಮಾಡಿ ಮನಸ್ಸಿಗೆ ಇಷ್ಟ ಬಂದಷ್ಟು ಹಣ ಕೊಡುಬಹುದಾಗಿದೆ. ಆ ಹೋಟೇಲ್ ಬಗ್ಗೆಯೇ ನಾನಿಂದು ನಿಮಗೆ ತಿಳಿಸಿಕೊಡಲು ಇಚ್ಚಿಸುತ್ತಿದ್ದೇನೆ.

ಅನ್ನಲಕ್ಷ್ಮಿ ಎಂಬ ಸಸ್ಯಾಹಾರಿ ರೆಸ್ಟೋರೆಂಟ್‌ಗಳು ಒಂದು ಅಂತರರಾಷ್ಟ್ರೀಯ ಹೋಟೆಲ್ಲುಗಳ ಸರಪಳಿಯಾಗಿದ್ದು, ಮಾನವೀಯತೆಯ ಮೇಲಿನ ನಂಬಿಕೆಗಳ ಮೇಲೆ ಮತ್ತು ಅನ್ನದಾತೋ ಸುಖೀಭವ ಎಂಬ ಅಸಾಮಾನ್ಯ ತತ್ತ್ವದ ಮೇಲೆ ಕಾರ್ಯನಿರ್ವಹಿಸುವ ಲಾಭರಹಿತ ಸಂಸ್ಥೆಯಾದ ಟೆಂಪಲ್ ಆಫ್ ಫೈನ್ ಆರ್ಟ್ಸ್ (ಟಿಎಫ್‌ಎ)ನ ಪಾಕಶಾಲೆಯ ಒಂದು ವಿಭಾಗವಾಗಿದೆ. 1984ರಲ್ಲಿ ಮಲೇಷ್ಯಾದಲ್ಲಿ ಮೊತ್ತ ಮೊದಲಬಾರಿಗೆ ಈ ಅನ್ನಲಕ್ಷ್ಮಿ ಹೋಟೇಲ್ ಆರಂಭವಾಗಿ ನಂತರ ಆಸ್ಟ್ರೇಲಿಯಾ, ಸಿಂಗಾಪುರದಲ್ಲಿ ಆರಂಭವಾದ ನಂತರ ಭಾರತದ ಕೊಯಮತ್ತೂರಿನಲ್ಲಿ 1989 ರಲ್ಲಿ ಪ್ರಾರಂಭವಾಗಿ, ಚೆನ್ನೈ ಸೇರಿದಂತೆ ಅನೇಕ ಕಡೆ ಇದರ ಶಾಖೆಗಳು ಆರಂಭವಾಗಿವೆ.

ಈ ಹೋಟೆಲ್ಲಿನ ಇನ್ನೂ ಒಂದು ಮಹತ್ವದ ವಿಷಯವೇನೆಂದರೆ, ಇಲ್ಲಿನ ಅಹಾರ ಪದ್ದತಿ ಶುದ್ಧ ಭಾರತೀಯ ಸಸ್ಯಹಾರವಾದರೂ ಈ ಹೋಟೆಲ್ಲಿನ ಪರಿಸರ ಮಾತ್ರಾ ಆಯಾಯಾ ಪ್ರದೇಶದ ಕಲಾವಿದರುಗಳನ್ನು ಬಳಸಿಕೊಂಡು ಪ್ರಾದೇಶಿಕ ಲಲಿತಕಲೆಗಳನ್ನು ಬೆಂಬಲಿಸುತ್ತಾ ಬಂದಿದೆ. ಇದೇ ಕಾರಣಕ್ಕಾಗಿ 2013 ರಲ್ಲಿ, ಚೆನ್ನೈ ಶಾಖೆಯು ಅತ್ಯುತ್ತಮ ದಕ್ಷಿಣ ಭಾರತೀಯ ರೆಸ್ಟೋರೆಂಟ್ (ಸ್ಟ್ಯಾಂಡ್-ಅಲೋನ್) ವಿಭಾಗದಲ್ಲಿ ಟೈಮ್ಸ್ ಫುಡ್ ಅಂಡ್ ನೈಟ್ ಲೈಫ್ ಪ್ರಶಸ್ತಿಯನ್ನೂ ಪಡೆದು ಕೊಂಡಿರುವುದು ಗಮನಾರ್ಹವಾದ ವಿಷಯವಾಗಿದೆ.

ಇನ್ನು ಶೀರ್ಷಿಕೆಯಲ್ಲಿ ತಿಳಿಸಿರುವಂತೆ ಸಿಂಗಾಪುರದ ಅನ್ನಲಕ್ಷ್ಮಿ ಹೋಟೆಲ್ಲಿನ ಬಗ್ಗೆ ಹೇಳಬೇಕೆಂದರೆ, ಇಲ್ಲಿ ಇತರೇ ಹೋಟೆಲ್ಲಿನಂತೆ ಯಾವುದೇ ಮೆನುವನ್ನು ನೀಡುವುದಿಲ್ಲ. ಬದಲಾಗಿ ಇಲ್ಲಿ ಆಹಾರವನ್ನು ಬಫೆ-ಶೈಲಿಯಲ್ಲಿ ಬಡಿಸಲಾಗುತ್ತದೆ. ಒಂದು ಕಡೆಯಲ್ಲಿ ಸ್ನೇಹಪರ ಬಾಣಸಿಗರು ನಮ್ಮ ಕಣ್ಣ ಮುಂದೆಯೇ ಬಿಸಿ ಬಿಸಿಯಾದ ಗರಿ ಗರಿಯಾದ ಅಷ್ಟೇ ರುಚಿ ರುಚಿಯಾದ ದೋಸೆಗಳನ್ನು ಮಾಡಿಕೊಡಲು ಸಿದ್ದರಿರುತ್ತಾರೆ. ಖಾಲೀ ದೋಸೆ, ತುಪ್ಪದ ದೋಸೆ, ಮಸಾಲಾ ದೋಸೆಯ ಜೊತೆಗೆ ಜಾಫ್ನಾ ದೋಸೆ (ಶ್ರೀಲಂಕಾ ರೀತಿಯದ್ದು) ಹೀಗೆ ನಾಲ್ಕೈದು ರೀತಿಯ ದೋಸೆಗಳನ್ನು ಎರಡು ಮೂರು ರೀತಿಯ ಚಟ್ನಿ ಮತ್ತು ಸಾಂಬಾರ್ ಒಟ್ಟಿಗೆ ಸವಿಯ ಬಹುದಾಗಿದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ