ಡಾ. ವೀಣಾಮೂರ್ತಿ ವಿಜಯ್

ನೃತ್ಯ ಜಗತ್ತಿನಲ್ಲಿ ಡಾ. ವೀಣಾಮೂರ್ತಿ ಹೆಸರು ಅತ್ಯಂತ ಸುಪ್ರಸಿದ್ಧ, ಅಷ್ಟೇ ಜನಪ್ರಿಯ ಕೂಡ. ಇವರ ಬಹುಮುಖ ಪ್ರತಿಭೆ ಅನನ್ಯ ಅಮೋಘ, ಅಪಾರ! ಇವರ ಬಗ್ಗೆ ಸವಿವರವಾಗಿ ತಿಳಿದುಕೊಳ್ಳೋಣವೇ.....?

ನೃತ್ಯ ಜಗತ್ತಿನಲ್ಲಿ ಡಾ. ವೀಣಾಮೂರ್ತಿ ಹೆಸರು ಅತ್ಯಂತ ಸುಪ್ರಸಿದ್ಧ, ಅಷ್ಟೇ ಜನಪ್ರಿಯ ಕೂಡ. ವರ್ಷವಿಡೀ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ಕ್ರಿಯಾಶೀಲೆಯಾದ ಇವರ, ವಿಶ್ವಮಟ್ಟದಲ್ಲಿ ಗಮನ ಸೆಳೆದ ಪ್ರಯೋಗಿಕ ನೃತ್ಯ ಪರಿಕಲ್ಪನೆಗಳು ಎಂದೂ ವಿಶಿಷ್ಟವಾಗಿರುತ್ತವೆ. ನೂರಾರು ಉದಯೋನ್ಮುಖ ಮತ್ತು ನುರಿತ ಕಲಾವಿದರಿಗೆ ಅಪರಿಮಿತ ಉತ್ತೇಜನ, ಸದವಕಾಶ ಮತ್ತು ಪ್ರತಿಷ್ಠಿತ ವೇದಿಕೆಗಳನ್ನು ಒದಗಿಸುತ್ತಾ ಬಂದಿರುವುದು ಅವರ ಅಸ್ಮಿತೆ.

ಯಾವುದೇ ದೊಡ್ಡ ನೃತ್ಯೋತ್ಸವವಾಗಲಿ ಬಹು ಅಚ್ಚುಕಟ್ಟಾಗಿ, ಅಷ್ಟೇ ಸುಲಭದಲ್ಲಿ ಸಂಘಟಿಸುವ ಇವರ ಲೋಕಪ್ರಿಯತೆ, ಕಲಾವಿದರ ಸಂಪರ್ಕ, ಸಾಂಗತ್ಯ, ಕಾರ್ಯಚತುರತೆ, ಕ್ಷಮತೆ ಅವರು ಆಯೋಜಿಸುವ ನೃತ್ಯ ಹಬ್ಬ ಉತ್ಸವಗಳನ್ನು ನೋಡಿದವರಿಗೆ ಸ್ವಯಂ ವಿಧಿತ. ಎಂಥ ಸಣ್ಣಪುಟ್ಟ, ಉದಯೋನ್ಮುಖ ಕಲಾವಿದರ ಕಾರ್ಯಕ್ರಮ ಎಂದರೂ ತಾರತಮ್ಯ ಮಾಡದೆ ಸಮಾನ ಆದ್ಯತೆ ನೀಡಿ ಕಲಾಪೋಷಣೆ ನೀಡುವ ಔದಾರ್ಯ ಅವರ ಸರಳತೆಗೆ ಹಿಡಿದ ಕೈಗನ್ನಡಿ.

ಇಂಥ ಹಿರಿಯ ಪ್ರತಿಭಾನ್ವಿತ ಕೂಚ್ಚುಪುಡಿ ನೃತ್ಯ ಕಲಾವಿದೆ ವೀಣಾಮೂರ್ತಿರವರ ಚಟುವಟಿಕೆಗಳನ್ನು ಗಮನಿಸಿದರೆ ಅಚ್ಚರಿಯುಂಟಾಗುತ್ತದೆ. ಇವರ ಬಹಮುಖ ಪ್ರತಿಭೆಯ ಹಿನ್ನೆಲೆ, ಸಾಧನೆಗಳ ಯಾದಿ ಅಗಾಧ. ಸಕಲ ಕಲಾಪೂರ್ಣೆಯಾದ ಇವರ ನೃತ್ಯಯಾನವೇ ಕುತೂಹಲ ವಿಸ್ಮಯಗಳ ಆಗರ!

veena-murthy-23

ನನಸಾದ ತಂದೆಯ ಕನಸು

ವೀಣಾರಿಗೆ `ನಾಟ್ಯ' ಬಾಲ್ಯದ ಆಸಕ್ತಿಯೇನಲ್ಲಾದರೂ ತಂದೆ ಪಿ.ಎನ್‌.ಎಸ್‌ ಮೂರ್ತಿಯರಿಂದ. ದೊಡ್ಡ ಕಲಾಪೋಷಕರು, ಸಂಗೀತ ನೃತ್ಯಗಳ ಬಗ್ಗೆ ಅತೀವ ಆಸಕ್ತಿಯಿದ್ದ ಅವರಿಗೆ, ಮಗಳನ್ನು ನೃತ್ಯ ಕಲಾವಿದೆಯನ್ನಾಗಿ ರೂಪಿಸಲೇಬೇಕು ಎನ್ನುವ ಕನಸಿತ್ತು.

ಅದಮ್ಯ ಆಕಾಂಕ್ಷೆ, ಚುರುಕಾಗಿದ್ದ ಮಗಳ, ಆರನೇ ವಯಸ್ಸಿಗೆ ಗುರು ನಾಗಭೂಷಣ್‌ ರಿಂದ ಪ್ರತಿದಿನ ತಪ್ಪದೆ, ಭರತನಾಟ್ಯ  ಶಿಕ್ಷಣದ ಆರಂಭಕ್ಕೆ ಬೆಂಬಲವಾದರು. ಅನಂತರ ನಾಟ್ಯ ಗುರು ಲೋಕಯ್ಯನವರಿಂದ ಕಲಿತು 10ನೇ ವಯಸ್ಸಿಗೆ `ರಂಗಪ್ರವೇಶ' ಮಾಡಿದ ಅತ್ಯಂತ ಕಿರಿಯ ವಯಸ್ಸಿನ ನೃತ್ಯಗಾರ್ತಿ ಎಂಬ ಅಗ್ಗಳಿಕೆ ವೀಣಾರದು.

ಕಥಕ್ನೃತ್ಯ ಕಲಿಕೆ

ಅನಂತರ ಲಚ್ಚು ಮಹಾರಾಜ್‌ ಶಿಷ್ಯ ಮುಕಂದರಾವ್ ‌ರಿಂದ `ಕಥಕ್‌' ನೃತ್ಯ ಕಲಿತು 13 ವರ್ಷಕ್ಕೆ `ರಂಗಮಂಚ್‌' ಪೂರೈಸಿ, ಡಾ. ಕೊರಾಡ ನರಸಿಂಹರಾಯ ಅವರಿಂದ ಎಂಟು ವರ್ಷಗಳ ಕಾಲ ಕೂಚ್ಚುಪುಡಿ ನೃತ್ಯ ಕಲಿತ ವೀಣಾ, ತಮ್ಮ ಆಸಕ್ತಿಯನ್ನು `ಕೂಚ್ಚುಪುಡಿ' ನೃತ್ಯ ಪ್ರಕಾರದಲ್ಲಿ ಗುರುತಿಸಿಕೊಂಡು ಗಂಭೀರ ಸಾಧನೆಗೆ ತೊಡಗಿದರು. 14 ವರ್ಷಕ್ಕೇ ಕೂಚ್ಚುಪುಡಿಯ `ರಂಗಪ್ರವೇಶ'ವನ್ನೂ ಮುಗಿಸಿಕೊಂಡ ವಿಶೇಷತೆ ಇವರದು. ಹೀಗೆ ಮೂರು ನೃತ್ಯ ಶೈಲಿಗಳಲ್ಲೂ ತುಂಬಾ ಎಳವೆಯಲ್ಲೇ ರಂಗ್ರಪ್ರವೇಶಗಳ `ತ್ರಿವಿಕ್ರಮ' ಸಾಧಿಸಿದ ಹಿರಿಮೆ ಇವರದು.

WhatsApp-Image-2025-04-01-at-13.34.23

ನೃತ್ಯದಲ್ಲಿ ಉನ್ನತ ಶಿಕ್ಷಣ

ಅನಂತರ ಗುರು ಸಿ.ಆರ್‌. ಆಚಾರ್ಯಲುರವರಿಂದ ಉನ್ನತ ಶಿಕ್ಷಣ. ಪದ್ಮಭೂಷಣ ಡಾ. ವೆಂಕಟಲಕ್ಷ್ಮಮ್ಮನವರಿಂದ `ಅಭಿನಯ ಕಲೆ'ಯಲ್ಲಿ ತರಬೇತಿ. ಡಾ. ಆರ್‌. ಸತ್ಯನಾರಾಯಣ, ಡಾ. ವೆಂಪಟಿ ಚಿನ್ನಸತ್ಯಂರಿಂದ ಹೆಚ್ಚಿನ ಮಾರ್ಗದರ್ಶನ, ಡಾ. ಮಾಯಾರಾವ್ ‌ರವರಲ್ಲಿ ನೃತ್ಯ ಸಂಯೋಜನೆ ಕಲಿಕೆ ಬಗ್ಗೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ