ಅನ್ನಂ ಪರಬ್ರಹ್ಮ ಸ್ವರೂಪಂ ಎಂದು ನಮ್ಮ ಸಂಸ್ಕೃತಿ ಹೇಳುತ್ತದೆ. ಅನ್ನವು ಕೇವಲ ಆಹಾರವಲ್ಲ; ಅದು ದೇವರ ಪ್ರಸಾದ, ರೈತನ ಪರಿಶ್ರಮ, ಪ್ರಕೃತಿಯ ಕೃಪೆ ಮತ್ತು ನಮ್ಮ ಜೀವನದ ಆಧಾರವಾಗಿದೆ. ಆದ್ದರಿಂದಲೇ ಭಾರತೀಯ ಸಂಸ್ಕೃತಿಯಲ್ಲಿ ಅನ್ನವನ್ನು ವ್ಯರ್ಥ ಮಾಡುವುದನ್ನು ಮಹಾಪಾಪವೆಂದು ಪರಿಗಣಿಸಲಾಗಿದೆ ಹಾಗಾಗಿ ಊಟವಾದ ನಂತರರ ತಟ್ಟೆಯಲ್ಲಿ ಅನ್ನವನ್ನು ಏಕೆ ಬಿಡಬಾರದು? ಎಂಬ ಕುರಿತಾಗಿ ತಿಳಿದಿಕೊಳ್ಳೋಣ ಬನ್ನಿ

ನಮ್ಮ ಪೂರ್ವಜರ ಆಚರಣೆ

ನಮ್ಮ ಹಿರಿಯರು ಊಟ ಮುಗಿದ ನಂತರ ತಟ್ಟೆಗೆ ಸ್ವಲ್ಪ ನೀರು ಹಾಕಿ, ಉಳಿದ ಅನ್ನದ ಕಣಗಳನ್ನು ಕಲಸಿ ಕುಡಿಯುತ್ತಿದ್ದರು. ಅದರ ಹಿಂದಿನ ಸಂದೇಶ ಏನೆಂದರೆ:

  • ಅನ್ನದ ಒಂದು ಕಣವೂ ವ್ಯರ್ಥವಾಗಬಾರದು.
  • ಅನ್ನದಾತನ ಪರಿಶ್ರಮಕ್ಕೆ ಗೌರವ ನೀಡಬೇಕು.
  • ಆಹಾರವನ್ನು ದೇವರ ಪ್ರಸಾದವೆಂದು ಸ್ವೀಕರಿಸಬೇಕು.

ಇಂದು ಈ ಆಚರಣೆ ಬಹುತೇಕ ಮರೆಯಾಗುತ್ತಿದ್ದರೂ, ಅದರ ಹಿಂದೆ ಇರುವ ಜೀವನ ಮೌಲ್ಯಗಳು ಇಂದಿಗೂ ಪ್ರಸ್ತುತವಾಗಿವೆ.

ರಾಮಾಯಣದಲ್ಲಿ ಉಲ್ಲೇಖವಾಗಿರುವ ಸಂದೇ

ರಾಮಾಯಣದ ಒಂದು ಪ್ರಸಂಗದ ಪ್ರಕಾರ, ಸೀತಾಮಾತೆಯ ಹುಡುಕಾಟದ ವೇಳೆ ಹನುಮಂತನು ಲಂಕೆಗೆ ಪ್ರವೇಶಿಸಿ ರಾವಣನ ಅರಮನೆಯ ಅಡುಗೆಮನೆಗೆ ಹೋಗುತ್ತಾನೆ. ಅಲ್ಲಿ ರಾವಣ ಮತ್ತು ಅವನ ಕುಟುಂಬದವರು ಊಟದ ತಟ್ಟೆಗಳಲ್ಲಿ ತಿನ್ನದೆ ಬಿಟ್ಟಿದ್ದ ಆಹಾರವನ್ನು ಕಂಡು, ಆ ರಾಜ್ಯದ ನಾಶ ಸಮೀಪಿಸಿದೆ ಎಂದು ಹನುಮಂತನಿಗೆ ಅರಿವಾಗುತ್ತದೆ. ಏಕೆಂದರೆ ಯಾವ ಮನೆ ಅಥವಾ ರಾಜ್ಯ ಅನ್ನಕ್ಕೆ ಗೌರವ ಕೊಡದೆ ಆಹಾರವನ್ನು ವ್ಯರ್ಥ ಮಾಡುತ್ತದೆಯೋ, ಆ ಮನೆ ಮತ್ತು ಸಮಾಜದ ಮೇಲೆ ದುರಂತದ ನೆರಳು ಬೀಳುತ್ತದೆ ಎಂಬ ನಂಬಿಕೆ ಪ್ರಾಚೀನ ಕಾಲದಿಂದಲೂ ಇದೆ

ಧಾರ್ಮಿಕ ನಂಬಿಕೆಗಳ ಪ್ರಕಾರ

  1. ಅನ್ನಪೂರ್ಣೇಶ್ವರಿ ಮತ್ತು ಲಕ್ಷ್ಮೀ ದೇವಿಯ ಅವಮಾನ

ತಟ್ಟೆಯಲ್ಲಿ ಆಹಾರವನ್ನು ವ್ಯರ್ಥ ಮಾಡುವುದು ಅನ್ನಪೂರ್ಣೇಶ್ವರಿ ಮತ್ತು ಮಹಾಲಕ್ಷ್ಮಿಗೆ ಮಾಡುವ ಅಪಮಾನವೆಂದು ಪರಿಗಣಿಸಲಾಗುತ್ತದೆ. ಹೀಗೆ ಮಾಡುವುದರಿಂದ:

  • ಮನೆಯಲ್ಲಿ ಆರ್ಥಿಕ ಸಂಕಷ್ಟಗಳು ಎದುರಾಗಬಹುದು.
  • ಸಂಪತ್ತಿನ ಸ್ಥಿರತೆ ಕಡಿಮೆಯಾಗಬಹುದು.
  • ಲಕ್ಷ್ಮೀ ಕಟಾಕ್ಷ ಕಡಿಮೆಯಾಗುತ್ತದೆ ಎಂಬ ನಂಬಿಕೆ ಇದೆ.
  1. ಮಕ್ಕಳಿಗೆ ಅನ್ನದ ಮೌಲ್ಯ ಕಲಿಸಿ

ಅನ್ನದ ಬೆಲೆ ತಿಳಿಯದಿದ್ದರೆ, ಎಷ್ಟೇ ಸಂಪತ್ತಿದ್ದರೂ ಅದರ ಸಾರ್ಥಕತೆ ಇರುವುದಿಲ್ಲ. ಮಕ್ಕಳಿಗೆ ಬಾಲ್ಯದಿಂದಲೇ ಆಹಾರದ ಮಹತ್ವವನ್ನು ತಿಳಿಸಬೇಕು.

ಜ್ಯೋತಿಷ್ಯದ ದೃಷ್ಟಿಯಿಂದ

ಕೆಲವು ಸಂಪ್ರದಾಯಗಳ ಪ್ರಕಾರ:

  • ಆಹಾರವನ್ನು ವ್ಯರ್ಥ ಮಾಡುವುದರಿಂದ ಶನಿ ದೇವರ ಅಸಮಾಧಾನ ಉಂಟಾಗುತ್ತದೆ.
  • ಚಂದ್ರನ ಅಶುಭ ಪ್ರಭಾವದಿಂದ ಮನಸ್ಸಿನ ಅಶಾಂತಿ ಮತ್ತು ಒತ್ತಡ ಹೆಚ್ಚಾಗಬಹುದು.

ಇವು ನಂಬಿಕೆಗಳಾಗಿದ್ದರೂ, ಅದರ ಮೂಲ ಸಂದೇಶ ಒಂದೇ – ಅನ್ನವನ್ನು ಗೌರವಿಸಿವ್ಯರ್ಥ ಮಾಡಬೇಡಿ.

ಮದುವೆ ಸಮಾರಂಭಗಳಲ್ಲಿ ನಾವು ಏಕೆ ಹೆಚ್ಚು ವ್ಯರ್ಥ ಮಾಡುತ್ತೇವೆ?

ನಮ್ಮದೇ ಹಣದಲ್ಲಿ:

  • ಪಾನಿಪುರಿಯ ನೀರನ್ನೂ ವ್ಯರ್ಥ ಮಾಡುವುದಿಲ್ಲ.
  • ಐಸ್ ಕ್ರೀಮ್‌ನ ಮುಚ್ಚಳವನ್ನೂ ನೆಕ್ಕಿ ತಿನ್ನುತ್ತೇವೆ.
  • ಕಡಲೆಕಾಯಿಯ ಸಿಪ್ಪೆಯೊಳಗಿನ ಕೊನೆಯ ಬೀಜವನ್ನೂ ಹುಡುಕಿ ತಿನ್ನುತ್ತೇವೆ.

ಆದರೆ ಮತ್ತೊಬ್ಬರ ಮದುವೆ ಮುಂಜಿ ಮುಂತಾದ ಶುಭ ಸಮಾರಂಭಗಳಲ್ಲಿ,

  • ತಟ್ಟೆ ತುಂಬ ಆಹಾರ ತೆಗೆದುಕೊಳ್ಳುತ್ತೇವೆ.
  • ಅರ್ಧಕ್ಕೂ ಹೆಚ್ಚು ಆಹಾರವನ್ನು ಕಸದ ಬುಟ್ಟಿಗೆ ಹಾಕುತ್ತೇವೆ.

ಒಬ್ಬ ತಂದೆ ತನ್ನ ಮಗಳ ಮದುವೆಗಾಗಿ ಜೀವನಪೂರ್ತಿ ದುಡಿದ ಹಣವನ್ನು ಖರ್ಚು ಮಾಡಿರಬಹುದು. ಆ ಆಹಾರವೂ ಅವನ ಪರಿಶ್ರಮದ ಫಲವೇ ಆಗಿರುತ್ತದೆ.

ಆದ್ದರಿಂದ: ತಿನ್ನಿ ಬೇಕಾದಷ್ಟುದರೆ ಬಿಡಬೇಡಿ ಕಣದಷ್ಟು.”

ಅನ್ನದ ಮಹತ್ವ

ಒಂದು ಕಣ ಅನ್ನವನ್ನು ಉತ್ಪಾದಿಸಲು:

  • ರೈತನ ಪರಿಶ್ರಮ,
  • ಪ್ರಕೃತಿಯ ಮಳೆ,
  • ಸೂರ್ಯನ ಬೆಳಕು,
  • ಸಾವಿರಾರು ಜನರ ದುಡಿಮೆ ಸೇರಿರುತ್ತದೆ.

ಆದ್ದರಿಂದ ಪ್ರತಿಯೊಬ್ಬರೂ ತಮ್ಮ ತಟ್ಟೆಯಲ್ಲಿ:

✔ ಎಷ್ಟು ಬೇಕೋ ಅಷ್ಟು ಮಾತ್ರ ಹಾಕಿಕೊಳ್ಳಬೇಕು.
✔ ಆಹಾರವನ್ನು ಸಾಧ್ಯವಾದಷ್ಟು ವ್ಯರ್ಥವಾಗದಂತೆ ನೋಡಿಕೊಳ್ಳಬೇಕು.
✔ ಉಳಿದಿದ್ದರೆ ಅಗತ್ಯವಿರುವವರಿಗೆ ನೀಡಬೇಕು.

ಆದರೆ ಶ್ರಾದ್ಧ ಅಥವಾ ತಿಥಿ ಸಂದರ್ಭದಲ್ಲಿ  ಬ್ರಾಹ್ಮಣರು   ಎಲೆಯಲ್ಲಿ ಸ್ವಲ್ಪ ಅನ್ನವನ್ನು ಉದ್ದೇಶಪೂರ್ವಕವಾಗಿ ಬಿಡುವುದು ನಮ್ಮ ಹಿಂದೂ ಸಂಪ್ರದಾಯದಲ್ಲಿ ಒಂದು ವಿಶೇಷ ಆಚರಣೆಯಾಗಿದೆ. ಸಾಮಾನ್ಯ ದಿನಗಳಲ್ಲಿ ತಟ್ಟೆಯಲ್ಲಿ ಅನ್ನವನ್ನು ಬಿಡಬಾರದು ಎಂದು ಹೇಳಿದರೂ, ಶ್ರಾದ್ಧ ಮತ್ತು ತಿಥಿಯ ಸಂದರ್ಭದಲ್ಲಿ ಇದಕ್ಕೆ ಭಿನ್ನವಾದ ಧಾರ್ಮಿಕ ಅರ್ಥವಿದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ