ಸಾಮನ್ಯವಾಗಿ ಪ್ರತಿಯೊಬ್ಬರ ಮನೆಗಳಲ್ಲಿಯೂ ಬೆಳಗ್ಗೆ ಶುಚಿರುಚಿಯಾಗಿ ಅವರ ಕುಟುಂಬಕ್ಕೆ ಅವಶ್ಯಕತೆ ಇದ್ದಷ್ಟು ಅಡುಗೆಗಳನ್ನು ಮಾಡಿಕೊಂಡು ಬಿಸಿ ಬಿಸಿಯಾಗಿ ತಿನ್ನಲು ಬಯಸುತ್ತಾರೆ. ಎಷ್ಟೇ ಕಟ್ಟೆಚ್ಚೆರ ವಹಿಸಿದರೂ ಬಹುತೇಕ ಎಲ್ಲರ ಮನೆಗಳಲ್ಲಿಯೂ ಮಾಡಿದ ಆಹಾರ ಮಿಕ್ಕಿಬಿಡುತ್ತದೆ. ಹಾಗೆ ಮಿಕ್ಕಿ ಹೋದ ಆಹಾರವನ್ನು ತಂಗಳು ಆಹಾರ ಎಂದು ಅದನ್ನು ಮಾರನೆಯ ದಿನ ಉಪಯೋಗಿಸಿದೇ ಅದನ್ನು ಹೊರಗೆ ಚೆಲ್ಲುವ ಇಲ್ಲವೇ ಮನೆಯ ಸಾಕುಪ್ರಾಣಿಗಳಿಗೆ ಹಾಕುವ ಪದ್ದತಿಯು ಎಲ್ಲ ಕಡೆಯಲ್ಲಿಯೂ ರೂಢಿಯಲ್ಲಿದೆ. ಇನ್ನೂ ಕೆಲವರು ಆ ರೀತಿಯಾಗಿ ಚೆಲ್ಲಲು ಮನಸ್ಸು ಬಾರದೇ ಮಾರನೆಯ ದಿನ ಆ ಅನ್ನಕ್ಕೆ ಒಗ್ಗರಣೆ ಹಾಕಿ ಚಿತ್ರಾನ ಮಾಡಿ ಸೇವಿಸುವುದೂ ಉಂಟು.

ಸುಮಾರು ವರ್ಷಗಳ ಹಿಂದೇ, ಅಮ್ಮಾ ತಾಯೀ.. ಕವಳ ಇದ್ರೇ ಕೊಡ್ರವ್ವಾ.. ಎಂದು ಮನೆ ಮನೆಗಳ ಮುಂದೆ ಪಾತ್ರೆಗಳನ್ನು ಹಿಡಿದುಕೊಂಡು ಬಂದು ಕೂಗಿ ಭಿಕ್ಷೇ ಬೇಡುತ್ತಿದ್ದದ್ದನ್ನು ನೋಡಿದ್ದೆವು. ಆದರೆ ಇತ್ತೀಚಿನ ದಿನಗಳಲ್ಲಿ ಆಹಾರದ ಹಾಹಾಕಾರವು ಕಡಿಮೆಯಾಗಿ ಅಂದಿನಂತೆ ಯಾರೂ ಸಹಾ ತಂಗಳನ್ನವನ್ನು ತಿನ್ನಲು ಬಯಸದ ಕಾರಣ ಅವುಗಳನ್ನು ತೆಗೆದುಕೊಳ್ಳುವುದಿಲ್ಲ. ಬದಲಾಗಿ ಹತ್ತುರೂಪಾಯಿ ಕೊಟ್ಟು ಬಿಡಿ ಹೋಟೆಲ್ನಲ್ಲಿ ಬಿಸಿ ಬಿಸಿ ಆಹಾರವನ್ನೇ ಸೇವಿಸುತ್ತೇವೆ ಎನ್ನುವವರೇ ಹೆಚ್ಚು.

ಇನ್ನು ಇತ್ತೀಚಿನ ದಿನಗಳಲ್ಲಿ ಆಹಾರ ಧಾನ್ಯಗಳ ಬೆಲೆಯು ಅಧಿಕವಾಗಿರುವ ಕಾರಣ, ಬಹುತೇಕರ ಮನೆಗಳಲ್ಲಿ ಆಹಾರವನ್ನು ಚೆಲ್ಲಲು ಬಯಸುವುದಿಲ್ಲ. ಆಹಾರ ಹೆಚ್ಚಾಗಿ ಉಳಿದುಬಿಟ್ಟರೆ,ಅದನ್ನು ಫ್ರಿಜ್ ನಲ್ಲಿ ಇರಿಸಿ ಅಗತ್ಯಕ್ಕೆ ತಕ್ಕಂತೆ ಆ ಆಹಾರಗಳನ್ಮು ಪುನಃ ಬಿಸಿ ಮಾಡಿ ತಿನ್ನುವುದನ್ನು ರೂಢಿ ಮಾಡಿಕೊಂಡಿದ್ದಾರೆ. ಆಯುರ್ವೇದದ ಪ್ರಕಾರ ಈ ರೀತಿಯಾಗಿ ತಂಗಳು ಪದಾರ್ಥಗಳನ್ನು ಬಿಸಿ ಮಾಡಿಕೊಂಡು ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದಲ್ಲ ಅದರಿಂದ ನಾನಾರೀತಿಯ ಖಾಯಿಲೆಗಳಿಗೆ ತುತ್ತಾಗಬಹುದು ಎಂಬುದಾಗಿಯೂ ಹೇಳುತ್ತಾರೆ. ಅದರೇ ಅದೇ ತಂಗಳನ್ನವನ್ನು ಸೂಕ್ತವಾದ ರೀತಿಯಲ್ಲಿ ಸಂಗ್ರಹಿಸಿಟ್ಟು ಸೇವಿಸಿದಲ್ಲಿ ನಮ್ಮ ದೇಹಕ್ಕೆ ಹಲವು ಪ್ರಯೋಜನಗಳನ್ನು ನೀಡುತ್ತದೆ ಎಂದರೆ ಎಲ್ಲರಿಗೂ ಆಶ್ಚರ್ಯವಾಗಬಹುದು. ತಂಗಳನ್ನದ ಅಚ್ಚರಿಯ ಪ್ರಯೋಜನಗಳೇನು ಎಂಬುದನ್ನು ತಿಳಿಯೋಣ ಬನ್ನಿ.

ಹೌದು ನಿಜ ಆಹಾರವನ್ನು ಹಾಗೆಯೇ ಇಟ್ಟಲ್ಲಿ ಅಥವಾ ಫ್ರಿಜ್ ನಲ್ಲಿ ಇಟ್ಟು ಪದೇ ಪದೇ ಬಿಸಿ ಮಾಡಿ ಸೇವಿಸುವುದು ಆರೋಗ್ಯಕ್ಕೆ ಹಾನಿಕರವಾದರೂ ಅದೇ ಅನ್ನವನ್ನು ಒಂದು ಮಣ್ಣಿನ ಮಡಕೆಯಲ್ಲಿ ನೀರಿನೊಂದಿಗೆ ರಾತ್ರಿಯಿಡೀ ನೆನೆಸಿಟ್ಟು ಮರುದಿನ ನೀರನ್ನು ಬಸೆದು ಆ ಅನ್ನವನ್ನು ಬೆಳಿಗಿನ ಉಪಹಾರವಾಗಿ ಸೇವಿಸಿದಲ್ಲಿ ಆರೋಗ್ಯಕ್ಕೆ ಬಹಳಷ್ಟು ಉಪಯೋಗವಿದೆ. ಹಾಗಾಗಿಯೇ ನೂರಾರು ವರ್ಷಗಳಿಂದಲೂ ತಮಿಳುನಾಡಿನ ಅನೇಕ ಹಳ್ಳಿಗಳಲ್ಲಿ ಕೂಳು ಎಂಬ ಹೆಸರಿನಲ್ಲಿ ಈ ಪದ್ದತಿಯು ರೂಢಿಯಲ್ಲಿದೆ.

ಈ ರೀತಿಯ ಅನ್ನವನ್ನು ಕಡೆದ ಮಜ್ಜಿಗೆಯೊಂದಿಗೆ ಕಲಸಿಕೊಂಡು ಅದರ ಜೊತೆಗೆ ಸ್ವಲ್ಪ ಉಪ್ಪನ್ನು ಬೆರಸಿ, ಹಸೀಮೆಣಸಿನಕಾಯಿ ಈರುಳ್ಳಿ ಜೊತೆಗೆ ಸೇವಿಸಿದರೆ ಇನ್ನೂ ಕೆಲವರು, ರುಚಿಕರ ಉಪ್ಪಿನ ಕಾಯಿಯೊಂಡಿಗೆ ಸೇವಿಸಿ ನಂತರ ತಮ್ಮ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ಈ ರೀತಿ ಸೇವಿಸುವುದರಿಂದ ದೇಹ ತಂಪಾಗಿದ್ದು ಇಡೀ ದಿನ ಚುರುಕಾಗಿ ಕೆಲಸವನ್ನು ಮಾಡಬಹುದಾಗಿದೆ ಎಂದು ಅಲ್ಲಿನ ಸ್ಥಳೀಯರು ಹೇಳುತ್ತಾರೆ. ತಂಗಳನ್ನ ನೈಸರ್ಗಿಕವಾಗಿ ಶೀತವಾಗಿದೆ. ಅದನ್ನು ನೀರಿನಲ್ಲಿ ನೆನೆಸಿಟ್ಟು ಪ್ರತಿದಿನ ತಂಗಳನ್ನ ಸೇವಿಸುವುದರಿಂದ ಅದು ನಮ್ಮ ದೇಹದ ಶಾಖವನ್ನು ತಗ್ಗಿಸುವುದಲ್ಲದೇ, ಏರುತ್ತಿರುವ ಉಷ್ಣಾಂಶ ಮತ್ತು ಬಿಸಿಲಿನ ಬೇಗೆಯಿಂದ ನಮ್ಮ ದೇಹವನ್ನು ಸಂರಕ್ಷಿಸುತ್ತದೆ ಎಂದೂ ಹೇಳುತ್ತಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ