Sj*

*ಪಿ.ಎಂ.ಜಿ ಫಿಲಂ ಫ್ಯಾಕ್ಟರಿ ನಿರ್ಮಾಣದ ಈ ಚಿತ್ರಗಳ ಮೂಲಕ ಶಾಸಕ ಸಿ.ಪಿ.ಯೋಗೀಶ್ವರ್ ಪುತ್ರ ಧ್ಯಾನ್ ಯೋಗೀಶ್ವರ್ ನಾಯಕನಾಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ. ಈ ಎರಡು ಚಿತ್ರಗಳಲ್ಲೂ 25 ವರ್ಷಗಳ ನಂತರ ಸಿ.ಪಿ.ಯೋಗೀಶ್ವರ್ ನಟನೆ* .

40 ವರ್ಷಗಳಿಂದ ಕನ್ನಡ ಚಿತ್ರರಂಗದೊಂದಿಗೆ ನಂಟಿರುವ ಹಾಗೂ 25 ವರ್ಷಗಳ ಹಿಂದೆ "ಸೈನಿಕ" ಎಂಬ ಜನಪ್ರಿಯ ಚಿತ್ರದ ಮೂಲಕ ಎಲ್ಲರ ಮನೆಮಾತಾಗಿರುವ ಸಿ.ಪಿ.ಯೋಗೀಶ್ವರ್ ಅವರ ಪುತ್ರ ಧ್ಯಾನ್ ಯೋಗೀಶ್ವರ್ "ಕರ್ಣಾಟಬಲಂ ಅಜೇಯಂ" ಹಾಗೂ "ಸೈನಿಕ ೨" ಚಿತ್ರಗಳಲ್ಲಿ ನಾಯಕನಾಗಿ ನಟಿಸುವ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಈ ಎರಡು ಚಿತ್ರಗಳಲ್ಲಿ ಯೋಗೀಶ್ವರ್ ಅವರು ಸಹ ಅಭಿನಯಿಸುತ್ತಿದ್ದು, 25 ವರ್ಷಗಳ ನಂತರ ನಟನೆಗೆ‌ ಮರಳಿ ಬಂದಿದ್ದಾರೆ. ಈ ಪೈಕಿ "ಕರ್ಣಾಟಬಲಂ ಅಜೇಯಂ" ಚಿತ್ರವನ್ನು ಹಿರಿಯ ನಿರ್ದೇಶಕ ನಾಗಣ್ಣ ಅವರು ನಿರ್ದೇಶಿಸುತ್ತಿದ್ದು, "ಸೈನಿಕ‌ ೨" ಚಿತ್ರವನ್ನು ಪುನೀತ್ ರುದ್ರನಾಗ್ ನಿರ್ದೇಶಿಸಲಿದ್ದಾರೆ. ಇತ್ತೀಚೆಗಷ್ಟೇ ಈ ಎರಡು ಚಿತ್ರಗಳ ಮುಹೂರ್ತ ಸಮಾರಂಭ ಅದ್ದೂರಿಯಾಗಿ ನೆರವೇರಿತು. ಕರ್ನಾಟಕದ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಡಿ.ಕೆ.ಶಿವಕುಮಾರ್ ಅವರು "ಕರ್ಣಾಟಬಲಂ ಅಜೇಯಂ" ಚಿತ್ರಕ್ಕೆ ಆರಂಭ ಫಲಕ ತೋರಿಸುವ ಮೂಲಕ ಚಾಲನೆ ನೀಡಿದರು. ಕೇಂದ್ರ ಸಚಿವರಾದ ಶ್ರೀ ವಿ.ಸೋಮಣ್ಣ "ಸೈನಿಕ ೨" ಚಿತ್ರಕ್ಕೆ ಆರಂಭ ಫಲಕ ತೋರಿಸುವ ಮೂಲಕ ಚಾಲನೆ ನೀಡಿದರು. ಬೆಮುಲ್ ಅಧ್ಯಕ್ಷರಾದ ಶ್ರೀ ಡಿ.ಕೆ.ಸುರೇಶ್ ಕ್ಯಾಮೆರಾ ಚಾಲನೆ ಮಾಡಿದರು. ಮಾಜಿ ಸಚಿವರಾದ ಸುಧಾಕರ್, ಶಾಸಕರಾದ ಉದಯ್, ರವಿ, ಮೋಹನ್ ಸಾ.ರಾ.ಗೋವಿಂದು, ವಿಶ್ವಪ್ರಸಾದ್ (ಪೀಪಲ್ ಮೀಡಿಯಾ ಫ್ಯಾಕ್ಟರಿ), ನಿರ್ಮಾಪಕ ರಾಕ್ಲೈನ್ ವೆಂಕಟೇಶ್, ಲಹರಿ ವೇಲು, ನಿರ್ದೇಶಕ ಸಂತೋಷ್ ಆನಂದರಾಮ್ ಮುಂತಾದವರು ಮುಹೂರ್ತ ಸಮಾರಂಭಕ್ಕೆ ಆಗಮಿಸಿ ಶುಭ ಕೋರಿದರು. ಈ ಎರಡು ಚಿತ್ರಗಳನ್ನು ಶೀಲಾ ಯೋಗೀಶ್ವರ್ ಅವರು ನಿರ್ಮಿಸುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಎರಡು ಚಿತ್ರಗಳ ಫಸ್ಟ್ ಲುಕ್ ಟೀಸರ್ ಸಹ ಅನಾವರಣವಾಯಿತು. ನಂತರ ಚಿತ್ರತಂಡದ ಸದಸ್ಯರು ಹಾಗೂ ಗಣ್ಯರು ಮಾತನಾಡಿದರು.

ನಾನು ಸಾಮಾನ್ಯವಾಗಿ ಯಾವುದೇ ಮುಹೂರ್ತ ಸಮಾರಂಭಗಳಿಗೆ ಹೋಗುವುದಿಲ್ಲ. ಶಾಸಕ ಮಿತ್ರ ಯೋಗೀಶ್ವರ್ ಅವರ ಪ್ರೀತಿಯ ಆಹ್ವಾನದ ಮೇರೆಗೆ ಬಂದಿದ್ದೇನೆ. "ಕರ್ಣಾಟಬಲಂ ಅಜೇಯಂ" ಚಿತ್ರದ ಮೂಲಕ ಯೋಗೀಶ್ವರ್ ಅವರ ಪುತ್ರ ಧ್ಯಾನ್, ನಾಯಕನಾಗಿ ಚಿತ್ರರಂಗ ಪ್ರವೇಶಿಸುತ್ತಿದ್ದಾರೆ. ಟೀಸರ್ ನೋಡಿದಾಗ ಧ್ಯಾನ್ ನಟನೆಯನ್ನು ಕಲಿತು ಬಂದು ಅಭಿನಯಿಸುತ್ತಿದ್ದಾರೆ ಎಂದು ತಿಳಿಯುತ್ತದೆ. ಯೋಗೀಶ್ವರ್ ಅವರು ಸಹ ಈ ಹಿಂದೆ ನಟರಾಗಿ ಜನಪ್ರಿಯರಾದವರು. ಅವರು ಸಹ ಈಗ ಅಭಿನಯಕ್ಕೆ ಮರಳಿ ಬಂದಿದ್ದಾರೆ. ಧ್ಯಾನ್ ನನ್ನ ಮಗ ಇದ್ದ ಹಾಗೆ. ಅವನ ಚಿತ್ರರಂಗದ ಭವಿಷ್ಯ ಉಜ್ವಲವಾಗಿರಲಿ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಹಾರೈಸಿದರು.

ajeyam

ಸಿ.ಪಿ.ಯೋಗೀಶ್ವರ್ ಅವರು ನನ್ನ ಬಹ ವರ್ಷಗಳ ಸ್ನೇಹಿತರು ಅವರ ಮಗ ಹಾಗೂ ಅವರು ಇಬ್ಬರು ನಟಿಸುತ್ತಿರುವ "ಸೈನಿಕ ೨" ಚಿತ್ರಕ್ಕೆ ಚಾಲನೆ ನೀಡಿದ್ದು, ಬಹಳ ಖುಷಿಯಾಗಿದೆ. ಚಿತ್ರ ಯಶಸ್ವಿಯಾಗಲೆಂದು ಕೇಂದ್ರ ಸಚಿವ ವಿ.ಸೋಮಣ್ಣ ಅವರು ಶುಭ ಕೋರಿದರು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ