ಈದ್ ಮಿಲಾದ್ ಅಥವಾ ಮೀಲಾದ್-ಉನ್-ನಬಿ ಇಸ್ಲಾಮಿಕ್ ಪರಂಪರೆಯಲ್ಲಿ ಪ್ರವಾದಿ ಮುಹಮ್ಮದ್ ಅವರ ಜನ್ಮವನ್ನು ಸ್ಮರಿಸುವ ಪ್ರಮುಖ ಧಾರ್ಮಿಕ ಆಚರಣೆಯಾಗಿದೆ. ಸಾಮಾನ್ಯವಾಗಿ ಪ್ರಾರ್ಥನೆ, ಕುರಾನ್ ಪಠಣ, ಧಾರ್ಮಿಕ ಪ್ರವಚನ, ದಾನಧರ್ಮ ಹಾಗೂ ಸಮುದಾಯದ ಕಾರ್ಯಕ್ರಮಗಳ ಮೂಲಕ ಈ ದಿನವನ್ನು ಆಚರಿಸಲಾಗುತ್ತದೆ. ಆದರೆ ಯಾವುದೇ ಧಾರ್ಮಿಕ ಹಬ್ಬದ ಮೂಲ ಉದ್ದೇಶವನ್ನೇ ಮೀರಿಸುವ ರೀತಿಯಲ್ಲಿ ಪ್ರಚೋದನಕಾರಿ ಘೋಷಣೆಗಳು, ವಿವಾದಾತ್ಮಕ ಬ್ಯಾನರ್‌ಗಳು, ರಾಜಕೀಯ ಅಥವಾ ವಿದೇಶಿ ಸಂಘರ್ಷಗಳಿಗೆ ಸಂಬಂಧಿಸಿದ ಸಂಕೇತಗಳು ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಚೋದನಕಾರಿ ವಿಷಯಗಳು ಕಾಣಿಸಿಕೊಂಡಾಗ, ಸಹಜವಾಗಿಯೇ ಕಾನೂನು ಸುವ್ಯವಸ್ಥೆ ಮತ್ತು ಕೋಮು ಸೌಹಾರ್ದದ ಕುರಿತು ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ. 2026ರ ಆಗಸ್ಟ್ 26ರಂದು ಆಚರಿಸಲಾದ ಈದ್ ಮಿಲಾದ್ ಸಂದರ್ಭದಲ್ಲಿ ಅನಗತ್ಯವಾಗಿ ನಡೆದಿರುವ ಕೆಲವು ಅಹಿತಕರ ಘಟನೆಗಳಿಂದ ಕರ್ನಾಟಕ ರಾಜ್ಯದ ಶಾಂತಿ ಮತ್ತು ಸೌಹಾರ್ದತೆಗೆ ಧಕ್ಕೆಯಾಗಿರುವುದು ಆಘಾತಕಾರಿ ಹಾಗೂ ಆತಂಕಕಾರಿ ಬೆಳವಣಿಗೆಯಾಗಿದೆ.

ಚಿಕ್ಕಮಗಳೂರಿನ 40 ಅಡಿ ಟಿಪ್ಪು ಸುಲ್ತಾನ್ ಕಟೌಟ್ ವಿವಾದ

ಚಿಕ್ಕಮಗಳೂರಿನ ಟಿಪ್ಪುನಗರದಲ್ಲಿ ಈದ್ ಮಿಲಾದ್ ಆಚರಣೆಯ ಹಿನ್ನೆಲೆಯಲ್ಲಿ ಸುಮಾರು 40 ಅಡಿ ಎತ್ತರದ ಟಿಪ್ಪು ಸುಲ್ತಾನ್ ಕಟೌಟ್ ಅಳವಡಿಸಲಾಗಿತ್ತು. ಈ ಕಟೌಟ್‌ನ ಹಿನ್ನೆಲೆಯಲ್ಲಿರುವ ವಿಡಿಯೋವೊಂದಕ್ಕೆ ಪಾಕಿಸ್ತಾನ ಮತ್ತು ಮುಜಾಹಿದೀನ್ ಎಂಬ ಉಲ್ಲೇಖಗಳಿರುವ ಹಾಡನ್ನು ಸೇರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿದ್ದು, ಈ ವಿಚಾರ ಎಲ್ಲೆಡೆ ಸುದ್ದಿಯಾಗಿತ್ತು. ಚಿಕ್ಕಮಗಳೂರು ನಗರ ಠಾಣೆಯ PSI ಧನರಾಜ್ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು BNS ಸೆಕ್ಷನ್ 196 ಮತ್ತು 299 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ವಿಡಿಯೋವನ್ನು ಮೊದಲು ಯಾರು ಸೃಷ್ಟಿಸಿದರು, ಯಾರು ಸಾಮಾಜಿಕ ಜಾಲತಾಣಕ್ಕೆ ಅಪ್‌ಲೋಡ್ ಮಾಡಿದರು ಮತ್ತು ನಂತರ ಯಾರು ಅದನ್ನು ಹಂಚಿಕೊಂಡರು ಎಂಬುದರ ಕುರಿತು ತನಿಖೆ ಆರಂಭಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 23 ವರ್ಷದ ಯುವಕನೊಬ್ಬನನ್ನು ಬಂಧಿಸಲಾಗಿದ್ದು, ಆತ ವಿಡಿಯೋವನ್ನು WhatsApp status, Instagram ಹಾಗೂ ಇತರರಿಗೆ ಕಳುಹಿಸುವ ಮೂಲಕ ಹರಡಿದ್ದಾನೆ ಎಂಬ ಆರೋಪವೂ ವರದಿಯಾಗಿದೆ. ವಿಡಿಯೋವನ್ನು ಮೂಲತಃ ಸೃಷ್ಟಿಸಿದ ವ್ಯಕ್ತಿಯನ್ನು ಪತ್ತೆಹಚ್ಚಲು Metaಗೆ IP ವಿವರಗಳನ್ನು ಕೇಳಲಾಗಿದೆ.

‘I Love Mohammad’ ಬ್ಯಾನರ್ ಮತ್ತೆ ಚರ್ಚೆಗೆ

ಟಿಪ್ಪು ಬ್ಯಾನರ್ ಕುರಿತಾದ ವಿವಾದಾತ್ಮಕ ಅಂಶಗಳು ಇನ್ನೂ ಹಚ್ಚಹಸಿರಾಗಿರುವಾಗಲೇ, ಈದ್ ಮಿಲಾದ್ ಮೆರವಣಿಗೆಯ ಸಂದರ್ಭದಲ್ಲಿ ಚಿಕ್ಕಮಗಳೂರಿನ ಟಿಪ್ಪುನಗರದಲ್ಲಿ ಮತ್ತು ಇನ್ನಿತರೆಡೆಯಲ್ಲಿ I Love Mohammad ಎಂಬ ಬ್ಯಾನರ್‌ಗಳು ಕಾಣಿಸಿಕೊಂಡಿರುವುದು ಮತ್ತೊಂದು ವಿವಾದಕ್ಕೆ ಕಾರಣವಾಗಿದೆ.

I Love Mohammad ಎಂಬ ಘೋಷಣೆ ಸ್ವತಃ ಪ್ರವಾದಿಯ ಮೇಲಿನ ಧಾರ್ಮಿಕ ಪ್ರೀತಿಯನ್ನು ವ್ಯಕ್ತಪಡಿಸುವ ಪದಗಳಾಗಿರಬಹುದು. ಆದರೆ ಮೆರವಣಿಗೆಯ ಸಂದರ್ಭದಲ್ಲಿ ಅದನ್ನು ಎಲ್ಲಿ, ಯಾವ ರೀತಿಯಲ್ಲಿ ಮತ್ತು ಯಾವ ಸಂದರ್ಭದಲ್ಲಿಟ್ಟು ಪ್ರದರ್ಶಿಸಲಾಗಿದೆ ಎಂಬುದರ ಆಧಾರದ ಮೇಲೆ ಸ್ಥಳೀಯವಾಗಿ ವಿವಾದ ಉಂಟಾಗುವ ಸಾಧ್ಯತೆಯೂ ಇದೆ. 2025ರಲ್ಲಿ ಉತ್ತರ ಪ್ರದೇಶದ ಕಾನ್ಪುರದಲ್ಲಿ ಇದೇ ರೀತಿಯ ಬ್ಯಾನರ್ ವಿಚಾರ ವಿವಾದಕ್ಕೆ ಕಾರಣವಾಗಿತ್ತು. ನಂತರ ಈ ವಿಷಯ ಹಲವು ರಾಜ್ಯಗಳಿಗೆ ವಿಸ್ತರಿಸಿ ಪ್ರತಿಭಟನೆಗಳು ಮತ್ತು ಪೊಲೀಸ್ ಪ್ರಕರಣಗಳಿಗೆ ಕಾರಣವಾಗಿತ್ತು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ