- ರಾಘವೇಂದ್ರ ಅಡಿಗ ಎಚ್ಚೆನ್.
ಅಧಿಕೃತ ಸ್ವಾದಗಳು, ಕಾಫಿ ಮತ್ತು ಅತ್ಯುತ್ತಮ ಆತಿಥ್ಯಕ್ಕಾಗಿ ನೂತನ ತಾಣ
ಬೆಂಗಳೂರಿನ ಕೋರಮಂಗಲದಲ್ಲಿ ನೂತನವಾದ ಶ್ರೀ ರಾಮ್ ಕೆಫೆಯನ್ನು ಇಂದು ಅದ್ಧೂರಿಯಾಗಿ ಉದ್ಘಾಟಿಸುವುದಾಗಿ ಎಸ್‌ಆರ್‌ಎಸ್ ಗ್ರೂಪ್ ಆಫ್ ಹೋಟೆಲ್ಸ್ ಪ್ರಕಟಿಸಿದೆ. ಇದು ಅಧಿಕೃತ ಸ್ವಾದಗಳು, ಬೆಚ್ಚಗಿನ ಆತಿಥ್ಯ ಮತ್ತು ಉತ್ತಮ ಆಹಾರ ಮತ್ತು ಕಾಫಿಯ ಮೂಲಕ ಜನರನ್ನು ಒಂದುಗೂಡಿಸುತ್ತದೆ.

#53, 17 ನೇ ಎ ಮುಖ್ಯ ರಸ್ತೆ, ಕೆಎಚ್‌ಬಿ ಬ್ಲಾಕ್, ಕೋರಮಂಗಲ 5 ನೇ ಬ್ಲಾಕ್, ಬೆಂಗಳೂರು - 560095 ರ ವಿಳಾಸದಲ್ಲಿ ಆರಂಭಗೊAಡಿರುವ ಈ ಕೆಫೆ, ಶನಿವಾರ, 29 ಆಗಸ್ಟ್ 2026 ರಂದು ಬೆಳಿಗ್ಗೆ 10:30 ರಿಂದ ತನ್ನ ಬಾಗಿಲು ತೆರೆಯಲಿದೆ.
ಉದ್ಘಾಟನಾ ಸಮಾರಂಭವನ್ನು ಕರ್ನಾಟಕ ಸರ್ಕಾರದ ಅರಣ್ಯ, ಜೈವಿಕ ತಂತ್ರಜ್ಞಾನ ಮತ್ತು ಪರಿಸರ ಸಚಿವರಾದ ಶ್ರೀ ರಾಮಲಿಂಗಾ ರೆಡ್ಡಿ ಅವರು ಉದ್ಘಾಟಿಸಲಿದ್ದಾರೆ.

ಆಹಾರ ಮತ್ತು ಸಂಪರ್ಕ ಬೆಳೆಸಿಕೊಳ್ಳುವುದರ ಸುತ್ತಲೂ ರೂಪಿಸಲಾದ ನೆರೆಹೊರೆಯ ಕೆಫೆ
ಶ್ರೀ ರಾಮ್ ಕೆಫೆಯನ್ನು ಸ್ವಾಗತಾರ್ಹ ಮತ್ತು ನೆಚ್ಚಿನ ನೆರೆಹೊರೆಯ ತಾಣವಾಗಿ ರೂಪಿಸಲಾಗಿದೆ. ಇದು ಗುಣಮಟ್ಟದ ಆಹಾರ, ತಾಜಾ ಪಾನೀಯಗಳನ್ನು ಸಾದರಪಡಿಸುತ್ತದೆ. ಕೆಫೆ ಗುಣಮಟ್ಟ, ಆತಿಥ್ಯ, ಸ್ಥಿರತೆಯ ಮೌಲ್ಯಗಳನ್ನು ಒಟ್ಟುಗೂಡಿಸುತ್ತದೆ, ಅತಿಥಿಗಳು ಭೇಟಿಯಾಗಲು, ವಿಶ್ರಾಂತಿ ಪಡೆಯಲು ಮತ್ತು ಉತ್ತಮ ಆಹಾರ ಮತ್ತು ಕಾಫಿಯೊಂದಿಗೆ ದೈನಂದಿನ ಕ್ಷಣಗಳನ್ನು ಆನಂದಿಸಲು ಮೌಲ್ಯವರ್ಧಕ ಆರಾಮದಾಯಕ ಸ್ಥಳವನ್ನು ಸೃಷ್ಟಿಸುತ್ತದೆ.

ಎಸ್‌ಆರ್‌ಎಸ್ ಗ್ರೂಪ್ ಆಫ್ ಹೋಟೆಲ್‌ಗಳಿಗೆ ಹೊಸ ಅಧ್ಯಾಯ
ಎಸ್‌ಆರ್‌ಎಸ್ ಗ್ರೂಪ್ ಆಫ್ ಹೋಟೆಲ್ಸ್ ಈ ಶ್ರೀ ರಾಮ್ ಕೆಫೆಯೊಂದಿಗೆ, ನೆರೆಹೊರೆಯ ನೆಚ್ಚಿನ ಕೆಫೆ ಕ್ಷೇತ್ರÀಕ್ಕೆ ತನ್ನ ಆತಿಥ್ಯದ ಕೊಡುಗೆ ವಿಸ್ತರಿಸುತ್ತದೆ. ಅಲ್ಲದೇ ಸುಲಭ ಸಂಪರ್ಕದಲ್ಲಿರುವ ಊಟ ಮತ್ತು ನೈಜ ಆತಿಥ್ಯದಲ್ಲಿ ಬೇರೂರಿರುವ ಅತಿಥಿ ಅನುಭವಗಳ ಮೇಲೆ ಗಮನ ಕೇಂದ್ರೀಕರಿಸುತ್ತದೆ. ಗುಣಮಟ್ಟದ ಆಹಾರ, ತಾಜಾ ಪಾನೀಯಗಳು ಮತ್ತು ಶಾಂತ ವಾತಾವರಣವನ್ನು ಹುಡುಕುತ್ತಿರುವ ಅತಿಥಿಗಳಿಗೆ ದೈನಂದಿನ ತಾಣ ಸೃಷ್ಟಿಸುವುದು ನಮ್ಮ ಗುರಿಯಾಗಿದೆ.
ಉದ್ಘಾಟನೆಯ ಕುರಿತು ಪ್ರತಿಕ್ರಿಯೆ
“ಶ್ರೀ ರಾಮ್ ಕೆಫೆ ನಮಗೆ ಒಂದು ನೂತನ ರೋಮಾಂಚಕ ಅಧ್ಯಾಯವಾಗಿದ್ದು, ಎಸ್‌ಆರ್‌ಎಸ್ ಆತಿಥ್ಯ ಅನುಭವವನ್ನು ಬೆಚ್ಚಗಿನ ಮತ್ತು ಸ್ವಾಗತಾರ್ಹ ನೆರೆಹೊರೆಯ ನೆಚ್ಚಿನ ಕೆಫೆ ಸ್ವರೂಪಕ್ಕೆ ನಾವು ಸೇರಿಸಿದ್ದೇವೆ. ಅತಿಥಿಗಳು ಅಧಿಕೃತ ಸ್ವಾದ, ಗುಣಮಟ್ಟದ ಆಹಾರ ಮತ್ತು ಪಾನೀಯಗಳು ಮತ್ತು ಒಟ್ಟಿಗೆ ಸಮಯ ಕಳೆಯುವ ಸರಳ ಆನಂದ ಅನುಭವಿಸಬಹುದಾದ ಸ್ಥಳವನ್ನು ಸೃಷ್ಟಿಸುವುದು ನಮ್ಮ ಗುರಿಯಾಗಿದೆ. ಅತಿಥಿಗಳನ್ನು ಸ್ವಾಗತಿಸಲು ಅಲ್ಲದೇ ಕೋರಮಂಗಲ ಸಮುದಾಯದ ಭಾಗವಾಗುವುದನ್ನು ನಾವು ಎದುರು ನೋಡುತ್ತಿದ್ದೇವೆ.”

— ಶ್ರೀ ರಮಣಮೂರ್ತಿ ಎಂ.ಎಸ್. ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರು ಎಸ್‌ಆರ್‌ಎಸ್ ಗ್ರೂಪ್ ಆಫ್ ಹೋಟೆಲ್ಸ್ & ಎಸ್‌ಆರ್‌ಎಸ್ ಗ್ರೂಪ್ ಆಫ್ ಕಂಪನೀಸ್
ಪ್ರಾರAಭದ ವಿವರಗಳು
ಸ್ಥಳ : ಶ್ರೀ ರಾಮ್ ಕೆಫೆ
ವಿಳಾಸ : #53, 17ನೇ ಎ ಮುಖ್ಯ ರಸ್ತೆ, ಕೆಎಚ್‌ಬಿ ಬ್ಲಾಕ್, ಕೋರಮಂಗಲ 5ನೇ ಬ್ಲಾಕ್, ಬೆಂಗಳೂರು – 560095





