ಭಾರತದ ಮುಂದಿನ ಒಲಿಂಪಿಕ್ ಚಾಂಪಿಯನ್ನರನ್ನು ಬೆಳೆಸುವ ಉದ್ದೇಶದಿಂದ ನಿರ್ಮಿಸಲಾದ ವಿಶ್ವಮಟ್ಟದ ಹೈ-ಪರ್ಫಾರ್ಮೆನ್ಸ್ ಕೇಂದ್ರ ಇನ್‍ಸ್ಪೈರ್ ಇನ್‍ಸ್ಟಿಟ್ಯೂಟ್ ಆಫ್ ಸ್ಪೋರ್ಟ್ (IIS) ತನ್ನ ಹೊಸ ಡಿಜಿಟಲ್ ಕಲಿಕಾ ವೇದಿಕೆಯನ್ನು ‘IIS Sikhaega’ ಎಂಬ ಹೆಸರಿನಲ್ಲಿ ಪ್ರಾರಂಭಿಸಿದೆ.
ಈ ಯೋಜನೆಯ ಮೂಲಕ ಕ್ರೀಡಾಪಟುಗಳು ತಮ್ಮ ಕೈಬೆರಳ ತುದಿಯಲ್ಲಿ ವಿಶ್ವಮಟ್ಟದ ಕ್ರೀಡಾ ಜ್ಞಾನ ಪಡೆಯಲು ಸಾಧ್ಯವಾಗುತ್ತದೆ.
ಸುಲಭವಾಗಿ ಅರ್ಥವಾಗುವ ಚಿಕ್ಕ-ಚಿಕ್ಕ ವೀಡಿಯೊಗಳ ಮೂಲಕ IIS ನ ತರಬೇತುದಾರರು, ಕೋಚ್‌ಗಳು, ತಜ್ಞರು ಹಾಗೂ ಯುವ ಕ್ರೀಡಾಪಟುಗಳ ಅನುಭವವನ್ನು ಹಂಚಿಕೊಳ್ಳುತ್ತಾರೆ.
ಫಿಟ್‍ನೆಸ್‌ನ ಮೂಲಭೂತಗಳಿಂದ ಹಿಡಿದು ಹೈ-ಪರ್ಫಾರ್ಮೆನ್ಸ್ ಕ್ರೀಡೆಯ ಸೂಕ್ಷ್ಮ ಅಂಶಗಳವರೆಗೂ ತಿಳಿಯಲು IIS Sikhaega ಕ್ರೀಡಾಪಟುಗಳಿಗೆ ಮಾರ್ಗದರ್ಶನ ಒದಗಿಸುತ್ತದೆ. ತಿಂಗಳು ಮೂರು ವೀಡಿಯೊಗಳನ್ನು ಇನ್‍ಸ್ಟಾಗ್ರಾಮ್ ಮತ್ತು ಯೂಟ್ಯೂಬ್‌ನಲ್ಲಿ ಬಿಡುಗಡೆ ಮಾಡಲಾಗುತ್ತಿದ್ದು, ಕ್ರೀಡಾಪಟಗಳಿಗೆ ಇದು ಉಪಯುಕ್ತವಾಗಲಿದೆ.
ಇನ್‍ಸ್ಪೈರ್ ಇನ್‍ಸ್ಟಿಟ್ಯೂಟ್ ಆಫ್ ಸ್ಪೋರ್ಟ್ ಅಧ್ಯಕ್ಷೆ ಮನೀಷಾ ಮಲ್ಹೋತ್ರಾ ಮಾತನಾಡಿ, “ಭಾರತದ ಎಲ್ಲಾ ಕ್ರೀಡಾಪಟುಗಳಿಗೆ IIS ನ ಪರಿಣತಿ ಮತ್ತು ತರಬೇತಿ ತಲುಪುವುದು ನಮ್ಮ ಧ್ಯೇಯದ ಒಂದು ಭಾಗ. IIS Sikhaega ಮೂಲಕ, ನಮ್ಮ ಕೋಚ್‌ಗಳು, ಸೌಲಭ್ಯಗಳು ಹಾಗೂ ತಾಂತ್ರಿಕ ತಿಳುವಳಿಕೆಯನ್ನು IIS ಹೊರಗಿನ ಯುವಕರಿಗೂ ತಲುಪಿಸಲು ಬಯಸುತ್ತೇವೆ” ಎಂದಿದ್ದದಾರೆ.
ಈ ಯೋಜನೆಯ ಮೂಲಕ IIS, ತಂತ್ರಜ್ಞಾನ, ಪರಿಣಿತಿ ಮತ್ತು ಲಭ್ಯತೆಯನ್ನು ಒಟ್ಟುಗೂಡಿಸಿ ಭಾರತದ ಮುಂದಿನ ತಲೆಮಾರಿನ ಕ್ರೀಡಾಪಟುಗಳನ್ನು ಬೆಳೆಸುವ ತನ್ನ ಧ್ಯೇಯವನ್ನು ಮತ್ತಷ್ಟು ಬಲಪಡಿಸುತ್ತಿದೆ. IIS Sikhaega ಕೇವಲ ಡಿಜಿಟಲ್ ಪ್ರಾರಂಭವಲ್ಲ – ಇದು ಭಾರತದ ಕ್ರೀಡಾ ಸಂಸ್ಕೃತಿಯನ್ನು ಬಲಪಡಿಸುವತ್ತ ಒಂದು ಹೆಜ್ಜೆ ಆಗಿರಲಿದೆ.