ದುಬೈನಿಂದ ಟೆಲ್ ಅವಿವ್ ನಗರಕ್ಕೆ ಪ್ರಯಾಣಿಸುತ್ತಿದ್ದ ಫ್ಲೈದುಬೈ ವಿಮಾನದಲ್ಲಿ ಕಾಕ್‌ಪಿಟ್ ಒಳಗೆ ನಡೆದ ಭೀಕರ ಸಂಘರ್ಷ ಮತ್ತು ವಿಮಾನ ಪತನದ ಸಂಚನ್ನು ವಿಫಲಗೊಳಿಸಿದ ಪೈಲಟ್ ಹಾಗೂ ಇಸ್ರೇಲಿ ಪ್ರಯಾಣಿಕನನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

ವೈಟ್‌ಹೌಸ್‌ನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, “ಇದು ನಂಬಲಾಗದ ಕಥೆ ಎಂದು ನಾನು ಭಾವಿಸುತ್ತೇನೆ” ಎಂದಿದ್ದಾರೆ.

ದುಬೈಯಿಂದ ಟೆಲ್ ಅವೀವ್‌ಗೆ ತೆರಳುತ್ತಿದ್ದ ವಿಮಾನದ ಘಟನೆ ಕುರಿತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ತಮ್ಮೊಂದಿಗೆ ಮಾಹಿತಿ ಹಂಚಿಕೊಂಡಿದ್ದಾರೆ. ಈ ಘಟನೆ ಬಗ್ಗೆ ಅವರೊಂದಿಗೆ ಸುದೀರ್ಘವಾಗಿ ಮಾತನಾಡಿದ್ದೇನೆ. ಸಹ ಪೈಲಟ್ ಬಹುಶಃ ಭಯೋತ್ಪಾದಕನಾಗಿರಬಹುದು ಅಥವಾ ವಿವೇಚನೆಯಿಲ್ಲದೆ ವ್ಯಕ್ತಿಯಾಗಿರಬಹುದು ಎಂದು  ಅವರು ಹೇಳಿದ್ದಾರೆ.

ವಿಮಾನದಲ್ಲಿದ್ದ ಇಸ್ರೇಲಿ ಮೂಲದ ಪ್ಲಂಬರ್‌ವೊಬ್ಬರಿಗೆ ವಿಮಾನ ಹಾರಿಸುವ ಯಾವುದೇ ಅನುಭವವಿರಲಿಲ್ಲ. ಆದರೆ, ಕಾಕ್‌ಪಿಟ್‌ನಿಂದ ಗದ್ದಲ ಕೇಳಿಬಂದ ಹಿನ್ನೆಲೆಯಲ್ಲಿ ಅವರು ಮಧ್ಯಪ್ರವೇಶಿಸಿದ್ದಾರೆ. ಕಾಕ್‌ಪಿಟ್‌ನಿಂದ ಕಿರುಚಾಟ ಕೇಳಿಸಿಕೊಂಡು ಪರಿಸ್ಥಿತಿ ಸರಿಯಿಲ್ಲ ಎಂಬುದನ್ನು ಅರಿತ ಪ್ಲಂಬರ್ ವಿಮಾನದ ಕಾಕ್‌ಪಿಟ್‌ಗೆ ತೆರಳಿದ್ದಾರೆ. “ವಿಮಾನವನ್ನು ಎಂದಿಗೂ ಹಾರಿಸದಿದ್ದರೂ, ಅವರು ನಿಯಂತ್ರಣದ ಕಂಬಿಯನ್ನು ಹಿಡಿದು ಮೇಲಕ್ಕೆ ಎತ್ತಿ ವಿಮಾನವನ್ನು ಸಮತಟ್ಟಾಗಿ ತಂದಿದ್ದಾರೆ. ಹೀಗೆ ವಿಮಾನ ಪತನಗೊಳ್ಳುವುದನ್ನು ತಡೆದಿದ್ದಾರೆ. ಎಂಬುದು ಬಿಬಿಯಿಂದ ನನಗೆ ಸಿಕ್ಕ ಮಾಹಿತಿ ಎಂದು ಹೇಳಿದ್ದಾರೆ.

ತುರ್ತು ಪರಿಸ್ಥಿತಿಯಲ್ಲಿ ಪ್ಲಂಬರ್‌ಗೆ ವಿಮಾನವನ್ನು ಹೇಗೆ ನಿಯಂತ್ರಿಸಬೇಕು ಎಂಬುದು ಹೇಗೆ ತಿಳಿಯಿತು ಎಂಬುದಕ್ಕೆ ನೆತನ್ಯಾಹು ನೀಡಿದ ವಿವರಣೆಯನ್ನೂ ಟ್ರಂಪ್ ಹಂಚಿಕೊಂಡಿದ್ದಾರೆ.

ಟಿವಿಯಲ್ಲಿ ‘ಏರ್ ಡಿಸಾಸ್ಟರ್ಸ್’ (Air Disasters) ಕಾರ್ಯಕ್ರಮವನ್ನು ನಿಯಮಿತವಾಗಿ ನೋಡುತ್ತಿದ್ದ ಕಾರಣ ತಮಗೆ ಇದು ಸಾಧ್ಯವಾಗಿದೆ ಎಂದು ತಿಳಿಸಿದ್ದಾರೆ.

ಇದೇ ವೇಳೆ ಗಂಭೀರವಾಗಿ ಇರಿತಕ್ಕೊಳಗಾಗಿಯೂ ನೂರಾರು ಪ್ರಯಾಣಿಕರ ಪ್ರಾಣ ಉಳಿಸಿದ ಭಾರತೀಯ ಪೈಲಟ್‌ ಸ್ಮಿತ್​ ಮಚ್ಚಾರ್​ ಅವರನ್ನು ನಿಜವಾದ “ಹೀರೋ” ಎಂದು ಬಣ್ಣಿಸಿದ್ದಾರೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ