ಇಂಡಿಯನ್ ರೇಸಿಂಗ್ ಫೆಸ್ಟಿವಲ್ (IRF) 2026ರ ಉಳಿದ ಸುತ್ತುಗಳ ವೇಳಾಪಟ್ಟಿ ಪ್ರಕಟಿಸಿದೆ.

ಗ್ರೇಟರ್ ನೋಯ್ಡಾದ ಬುದ್ಧ ಅಂತರರಾಷ್ಟ್ರೀಯ ರೇಸಿಂಗ್ ಸರ್ಕ್ಯೂಟ್‌ನಲ್ಲಿ 4ನೇ ಸುತ್ತು ಅಕ್ಟೋಬರ್ 31–ನವೆಂಬರ್ 1ರಂದು ಹಾಗೂ 5ನೇ ಸುತ್ತು ನವೆಂಬರ್ 28–29ರಂದು ನಡೆಯಲಿದೆ. ಇದಾದ ಬಳಿಕ, ಡಿಸೆಂಬರ್ 5–6ರಂದು ನವಿ ಮುಂಬೈ ಸ್ಟ್ರೀಟ್ ಸರ್ಕ್ಯೂಟ್‌ನಲ್ಲಿ ನಡೆಯಲಿರುವ ನೈಟ್ ರೇಸ್‌ನೊಂದಿಗೆ 2026ರ ಸೀಸನ್‌ಗೆ ತೆರೆ ಬೀಳಲಿದೆ.

2026ರ ಇಂಡಿಯನ್ ರೇಸಿಂಗ್ ಫೆಸ್ಟಿವಲ್‌ನ 4ನೇ ಮತ್ತು 5ನೇ ಸುತ್ತುಗಳು ಬುದ್ಧ ಅಂತರರಾಷ್ಟ್ರೀಯ ರೇಸಿಂಗ್ ಸರ್ಕ್ಯೂಟ್‌ನಲ್ಲಿ ಇದೇ ಮೊದಲ ಬಾರಿಗೆ ನಡೆಯಲಿವೆ. ಈ ಹಿಂದೆ ಫಾರ್ಮುಲಾ ಒನ್ ಇಂಡಿಯನ್ ಗ್ರ್ಯಾಂಡ್ ಪ್ರಿಕ್ಸ್‌ಗೆ ಆತಿಥ್ಯ ವಹಿಸಿದ್ದ ಈ ಐತಿಹಾಸಿಕ ರೇಸಿಂಗ್ ಸರ್ಕ್ಯೂಟ್‌ನಲ್ಲಿ 13 ವರ್ಷಗಳ ಬಳಿಕ ಎಫ್‌ಐಎ ಮಟ್ಟದ ರೇಸಿಂಗ್ ಮರಳಲಿದೆ.

ಪಾಮ್ ಬೀಚ್ ರಸ್ತೆಯ ಸಮೀಪ ನಿರ್ಮಿಸಲಾಗಿರುವ 3.69 ಕಿ.ಮೀ ಉದ್ದದ ಈ ವಿಶೇಷ ಸ್ಟ್ರೀಟ್ ಸರ್ಕ್ಯೂಟ್‌ನಲ್ಲಿ ದೀಪಗಳ ಬೆಳಕಿನಲ್ಲಿ ರೇಸ್ ನಡೆಯಲಿದೆ. ಸಾಂಪ್ರದಾಯಿಕ ರೇಸಿಂಗ್ ಸರ್ಕ್ಯೂಟ್‌ಗಳಿಗಿಂತ ವಿಭಿನ್ನವಾಗಿ, ಸಿಟಿ ಸೆಂಟರ್‌ನಲ್ಲಿ ವೇಗ ಮತ್ತು ರೋಮಾಂಚನದ ಅನುಭವ ನೀಡಲಿರುವ ಈ ರೇಸ್, ಚಾಂಪಿಯನ್‌ಶಿಪ್ ಅನ್ನು ನೇರವಾಗಿ ನಗರದ ಪ್ರೇಕ್ಷಕರ ಬಳಿಗೆ ಕೊಂಡೊಯ್ಯಲಿದೆ. 2024ರಲ್ಲಿ ಚೆನ್ನೈನಲ್ಲಿ ನಡೆದ ಮೊದಲ ನೈಟ್ ರೇಸ್ ಬಳಿಕ, ಇದು ಇಂಡಿಯನ್ ರೇಸಿಂಗ್ ಫೆಸ್ಟಿವಲ್‌ನ ಎರಡನೇ ನೈಟ್ ರೇಸ್ ಆಗಿರಲಿದೆ.ಈ ಬಗ್ಗೆ ಮಾತನಾಡಿದ ರೇಸಿಂಗ್ ಪ್ರಮೋಷನ್ಸ್ ಪ್ರೈವೇಟ್ ಲಿಮಿಟೆಡ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಅಖಿಲೇಶ್ ರೆಡ್ಡಿ, “2026ರ ಇಂಡಿಯನ್ ರೇಸಿಂಗ್ ಫೆಸ್ಟಿವಲ್‌ನ ವೇಳಾಪಟ್ಟಿಯು ಭಾರತೀಯ ಮೋಟಾರ್‌ಸ್ಪೋರ್ಟ್ ಅನ್ನು ಹೊಸ ಪ್ರದೇಶಗಳಿಗೆ ಕೊಂಡೊಯ್ಯುವ ಹಾಗೂ ರೇಸಿಂಗ್‌ನ ಗುಣಮಟ್ಟ ಮತ್ತು ಅಭಿಮಾನಿಗಳ ಅನುಭವವನ್ನು ಮತ್ತಷ್ಟು ಉತ್ತಮಗೊಳಿಸುವ ನಮ್ಮ ಉದ್ದೇಶವನ್ನು ಪ್ರತಿಬಿಂಬಿಸುತ್ತದೆ. ಬುದ್ಧ ಅಂತರರಾಷ್ಟ್ರೀಯ ರೇಸಿಂಗ್ ಸರ್ಕ್ಯೂಟ್ ಮತ್ತು ನವಿ ಮುಂಬೈನಲ್ಲಿ ರೇಸ್ ಆಯೋಜಿಸುವುದು ನಮ್ಮ ಬಹುಕಾಲದ ಕನಸಾಗಿತ್ತು. ಇದನ್ನು ಸಾಕಾರಗೊಳಿಸಲು ಹಲವು ಪ್ರಯತ್ನಗಳನ್ನು ನಡೆಸಿದ ಬಳಿಕ, ಅಂತಿಮವಾಗಿ ಈ ಮಾಹಿತಿಯನ್ನು ನಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಳ್ಳಲು ಸಂತೋಷವಾಗುತ್ತಿದೆ,” ಎಂದರು.

ಇಂಡಿಯನ್ ರೇಸಿಂಗ್ ಫೆಸ್ಟಿವಲ್ ತನ್ನ 2026ರ ಸೀಸನ್‌ನ ಮುಂದಿನ ಹಂತಕ್ಕೆ ಪ್ರವೇಶಿಸುತ್ತಿರುವ ಸಂದರ್ಭದಲ್ಲಿ ಈ ಘೋಷಣೆ ಹೊರಬಿದ್ದಿದೆ. ಎಫ್4 ಇಂಡಿಯನ್ ಚಾಂಪಿಯನ್‌ಶಿಪ್ ಈಗಾಗಲೇ ಕೊಯಮತ್ತೂರಿನ ಕರಿ ಮೋಟಾರ್ ಸ್ಪೀಡ್‌ವೇಯಲ್ಲಿ ತನ್ನ ಆರಂಭಿಕ ಎರಡು ಸುತ್ತುಗಳನ್ನು ಪೂರ್ಣಗೊಳಿಸಿದ್ದು, ಇಂಡಿಯನ್ ರೇಸಿಂಗ್ ಲೀಗ್ ಈ ತಿಂಗಳ ಕೊನೆಯಲ್ಲಿ ಸ್ಪರ್ಧೆಗೆ ಕಣಕ್ಕಿಳಿಯಲಿದೆ.

ಮೊದಲ ಸುತ್ತಿನಲ್ಲಿ ಅರಿಸ್ ಕಿರಿಯಾಕೋ ಎರಡು ಬಾರಿ ದ್ವಿತೀಯ ಸ್ಥಾನ ಗಳಿಸುವುದರ ಜೊತೆಗೆ ಒಂದು ರೇಸ್‌ನಲ್ಲಿ ಗೆಲುವು ಸಾಧಿಸಿ ವಾರಾಂತ್ಯದ ಪ್ರಮುಖ ಚಾಲಕರಾಗಿ ಹೊರಹೊಮ್ಮಿದರು. ಮೂರು ರೇಸ್‌ಗಳಲ್ಲಿ ಒಟ್ಟು ಏಳು ವಿಭಿನ್ನ ಚಾಲಕರು ಪದಕ ವೇದಿಕೆಯ ಸ್ಥಾನಗಳನ್ನು ಪಡೆದರು.

ಎರಡನೇ ಸುತ್ತಿನಲ್ಲಿ ಗೋವಾ ಏಸಸ್ ಜೆಎ ರೇಸಿಂಗ್‌ನ ಲುವಿವೆ ಸಾಂಬುಡ್ಲಾ ಎರಡು ರೇಸ್‌ಗಳಲ್ಲಿ ಗೆಲುವು ಸಾಧಿಸಿದರೆ, ಹೈದರಾಬಾದ್ ಬ್ಲ್ಯಾಕ್‌ಬರ್ಡ್ಸ್‌ನ ಭುವನ್ ಬೋನು ಮತ್ತೊಂದು ರೇಸ್‌ನಲ್ಲಿ ಜಯ ದಾಖಲಿಸಿದರು. ನಿರಂತರವಾಗಿ ಪದಕ ವೇದಿಕೆಯ ಸ್ಥಾನಗಳನ್ನು ಗಳಿಸಿರುವ ಕಿರಿಯಾಕೋ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದು, ಎರಡು ಸುತ್ತುಗಳ ಬಳಿಕ 93 ಅಂಕಗಳೊಂದಿಗೆ ಸಾಂಬುಡ್ಲಾ ಅವರ 88 ಅಂಕಗಳಿಗಿಂತ ಮುಂದಿದ್ದಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ