ಜೀವ ಹೋದೀತಷ್ಟೆ! : ಜರ್ಮನಿಯ ಡಲಾಸ್ ‌ಡಾರ್ಫ್‌ ನಗರದ ವಾರ್ಷಿಕ ರೋಸನ್‌ ವೋಂಟಾಗ್‌ ಪ್ರಮೋಶನ್‌ನಲ್ಲಿ ರಾಜಕೀಯದ ಥೀಮ್ ಸಹ ಇರುತ್ತದೆ, 26ನೇ ಜನವರಿಯಂದು ಬರಿದೇ ಆತ್ಮಪ್ರಶಂಸೆ ಕೊಚ್ಚಿಕೊಳ್ಳುವವರದ್ದಲ್ಲ. ಈ ಚಿತ್ರವನ್ನೇ ಗಮನಿಸಿ, ಅಮೆರಿಕಾದ ಪ್ರೆಸಿಡೆಂಟ್‌ ಡೊನಾಲ್ಡ್ ಟ್ರಂಪ್‌ರನ್ನು ಯಾವ ತರಹ ರಷ್ಯಾದ ಕರಡಿ ಬ್ಲಾದ್ಮೀರ್‌ ಪುಟಿನ್‌ ಒತ್ತಡದಲ್ಲಿ ಹಿಂಡುತ್ತಿದ್ದಾರೆ ಎಂದು ತಿಳಿಯುತ್ತದೆ. ಇದು ಕೇವಲ ಥೀಮ್ ಗೆ ಸೀಮಿತವಷ್ಟೆ, ಅಸಲಿಗೆ ಟ್ರಂಪ್‌ ಚುನಾವಣೆ ಗೆಲ್ಲಲು ರಷ್ಯನ್ನರು ಬಹಳ ಸಹಕರಿಸಿದ್ದರಂತೆ!

ಕಿಡ್ಸ್ ಪಾರ್ಟಿಯಲ್ಲಿ ಥೀಮ್ ಫ್ಯಾಷನ್‌ ಶೋ : ಇದು ನೋಡಲೇನೋ ಚೆನ್ನಾಗಿರಬಹುದು, ಮಜಾ ಎನಿಸಬಹುದು, ಮಕ್ಕಳಲ್ಲಿ ಈ ಫ್ಯಾಷನ್‌ ಮನೋಭಾವ ಬೆಳೆದುಬಿಟ್ಟರೆ ಮುಂದೆ ಸದಾ ಹೈಫೈ ದುಬಾರಿ ಡ್ರೆಸ್ಸೇ ಬೇಕೆಂದು ಪೀಡಿಸುತ್ತಾರೆ. ಮುಂದೆಯೂ ಅದನ್ನೇ ಅನುಸರಿಸುತ್ತಾರೆ. ನಿಮ್ಮ ಮನೆಯಲ್ಲಿ ಪಾರ್ಟಿ ಇದ್ದರೆ ಅದರಲ್ಲಿ ಫ್ಯಾಷನ್‌ ಶೋದಂಥ ಥೀಮ್ ಇರಿಸಿಕೊಳ್ಳಬೇಡಿ. ಬೆಗ್ಗರ್ಸ್‌ಕಲೆಕ್ಷನ್‌ ಥೀಮ್ ಇರಿಸಿಕೊಳ್ಳಬಹುದು, ನೀವು ಅದಕ್ಕೆ ಒಪ್ಪಬೇಕಷ್ಟೆ.

ಫ್ಯಾಷನ್ನಿನ ಹೊಸ ಟ್ರೆಂಡ್‌ : ವಿದೇಶೀ ಅಜ್ಜಿಯರ ಅಚ್ಚುಮೆಚ್ಚಿನ ಆ್ಯಕ್ಸೆಸರೀಸ್‌ ಈ ಬೆಲ್ಟ್ ಬ್ಯಾಗ್ಸ್. ಇದರಲ್ಲಿ ಅವರು ತಮ್ಮ ಕನ್ನಡಕ, ಮೊಬೈಲ್‌, ದುಡ್ಡು, ಔಷಧಿ, ಫೋನ್‌ ನಂಬರ್‌ ವಿಳಾಸ ಇಟ್ಟಿರುತ್ತಾರೆ. ಆದರೆ ಇದಂತೂ ಬಲು ಪ್ರಯೋಜನಕಾರಿ. ಹೀಗಾಗಿ ಖ್ಯಾತ ಡಿಸೈನರ್‌ ಕಂಪನಿಗಳು ಇತ್ತೀಚೆಗೆ ಬಳ್ಳಿ ನಡುವಿನ ಬಾಲೆಯರಿಗೂ ಸಹ ಬೆಲ್ಟ್ ಬ್ಯಾಗ್ಸ್ ತಯಾರಿಸುತ್ತಿವೆ. ಈ ಯುವತಿಯರೋ.... ಅವತಾರದ ಮೇಲುಡುಗೆ ಜೊತೆ ಸೊಂಟಕ್ಕೆ ಇದನ್ನು ಸಿಗಿಸುತ್ತಾರೆ. ಪಿಕ್‌ ಪಾಕೆಟರ್‌ ಈ ಬೆಲ್ಚ್ ಗೆ ಮಾತ್ರ ಕೈಹಾಕಿದರೆ ಪುಣ್ಯ, ಇವರುಗಳ ಸೊಂಟಕ್ಕಲ್ಲ!

ನೀವು ಎಂಜಾಯ್‌ ಮಾಡಿ! :  ಡ್ರೆಸ್‌ ತಯಾರಕರ ಬಿಸ್‌ನೆಸ್‌ ನಡೆಯುವುದೇ ಮದುವೆ ಶಾಪಿಂಗ್‌ನಿಂದ. ದುಬಾರಿ ಡ್ರೆಸ್‌ ಧಾರಾಳ ಮಾರಾಟವಾಗುತ್ತದೆ. ನಮ್ಮಲ್ಲಿ ರೇಷ್ಮೆ ಸೀರೆ ವ್ಯಾಪಾರ ಆಗುವಂತೆ ಪಾಶ್ಚಿಮಾತ್ಯ ದೇಶಗಳಲ್ಲಿ ದುಬಾರಿ ಬ್ರೈಡಲ್ ಗೌನ್‌ನದು. ತೆಳುವಾದ ಆದರೆ ಉದ್ದಕ್ಕೆ ಹರಡಿಕೊಳ್ಳುವ ಈ ಗೌನ್‌, ನವವಧುವಿನ ಸ್ಟೇಟಸ್‌ ಸಿಂಬಲ್ ಎನಿಸಿದೆ. ಆ ವಧು ಇದನ್ನು ಮೊಮ್ಮಗಳ ಕಾಲದವರೆಗೂ ಕಾಪಾಡಿಕೊಳ್ಳುತ್ತಾಳೆ. ಮುಂದೆ ನಿಮ್ಮ ಮಗಳ ಮದುವೆ ಆದಾಗ ದುಬಾರಿ ಗೌನ್‌ ಯಾ ಸೀರೆ ಕೊಳ್ಳಲು ಜಿಪುಣತನ ತೋರಿಸಬೇಡಿ.

ಆಲ್ ಟೈಮ್ ಮಸ್ತಿ : ಡಿಸ್ನಿ ಲ್ಯಾಂಡ್‌ ವಾತಾವರಣ ಕ್ರಿಯೇಟ್‌ ಮಾಡಿ ಕಿಟಿ ಪಾರ್ಟಿಗಳ ತರಹ ಇದೀಗ ಹೋಟೆಲ್‌ಗಳೂ ಸಹ ಮಹಿಳಾ ಗ್ರಾಹಕರನ್ನು ಆಕರ್ಷಿಸಲು ಶುರು ಮಾಡಿವೆ. 10-20 ಗೆಳತಿಯರು ಕೂಡಿ ಡಿಸ್ನಿ ಥೀಮ್ ಸಹ ಡಿಮ್ಯಾಂಡ್‌ ಮಾಡಬಹುದು. ವಿಡಿಯೋ ಗೇಮ್ ಥೀಮ್, ಕಾರ್ನಿವಾಲ್ ‌ಥೀಮ್, ಪೋರ್ನ್‌ ಥೀಮ್ ಕೂಡಾ!! ಹೋಟೆಲ್ ‌ಎಲ್ಲವನ್ನೂ ವ್ಯವಸ್ಥೆ ಮಾಡುತ್ತದೆ. ಮತ್ತೇಕೆ ತಡ? ನೀವು ನಿಮ್ಮ ಹೋಟೆಲ್‌ನಲ್ಲಿ ಇಂಥದೇ ಥೀಮ್ ಆರಿಸಿಕೊಂಡು ಎಂಜಾಯ್‌ ಮಾಡಿ. ಠಾಕುಠೀಕಾಗಿ ಮೇಕಪ್‌ ಮಾಡಿಕೊಂಡು ಬಂದು ಕೆಲವು ಕಾಲ ಮೋಜು ಉಡಾಯಿಸಿ!

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ