Untitled-7

ಉದ್ಘಾಟನಾ ಸಮಾರಂಭ : ಧಾರವಾಡದ ಜವಾಹರ ನವೋದಯ ವಿದ್ಯಾಲಯದಲ್ಲಿ ಇಂಟ್ಯಾಕ್‌ ಹೆರಿಟೇಜ್‌ ಕ್ಲಬ್‌ ಉದ್ಘಾಟಿಸಿ ಭಾರತೀಯ ಸೇನೆಯ ನಿೃತ್ತ ಜನರಲ್ ಎಸ್‌.ಸಿ. ಸರದೇಶಪಾಂಡೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಎಸ್‌.ಜಿ. ಭಾಗವತ್‌, ಪಿ. ರವಿಕುಮಾರ್‌, ಬಿ.ಆರ್‌. ಸಾರಥಿ, ಕೆ.ಎಲ್.ಎನ್‌. ರೆಡ್ಡಿ, ಗೀತಾ ಗೋಡಖಿಂಡಿ ಹಾಗೂ ವಿದ್ಯಾಲಯದ ಶಿಕ್ಷಕ ಶಿಕ್ಷಕಿಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

scan4

ರಂಜಿಸಿದ ಸಾಂಪ್ರದಾಯಿಕ ಹಾಡುಗಳು : ಪಂಚಾಮೃತ ಸುಗಮ ಸಂಗೀತ ಅಕಾಡೆಮಿಯ ತಿಂಗಳ ಸರಣಿಯ ಕಾರ್ಯಕ್ರಮದಲ್ಲಿ ಈ ಬಾರಿ ಅಪ್ಪಟ ಸಾಂಪ್ರದಾಯಿಕ ಗೀತೆಗಳನ್ನು ಹಾಡಾಯಿತು. ಗಾಯಕಿ ಜಯಶ್ರೀ, ಗಾಯತ್ರಿ ಕೇಶವ್ ನಡೆಸಿಕೊಟ್ಟ ಹಾಡುಗಾರಿಕೆಗೆ ಅಭಿಜಿತ್‌ (ಹಾರ್ಮೋನಿಯಂ), ಬಿ.ವಿ. ಅಭಿಷೇಕ್‌ (ತಬಲ), ರವಿ (ವಿಶೇಷ ಲಯ ವಾದ್ಯ) ಹಿನ್ನೆಲೆ ಸಹಕಾರ ನೀಡಿದರು.

Untitled-3

ರಂಜಿಸಿದ ಕವಿಗೋಷ್ಠಿ : ವಿಜಯಾನಂದನಗರದ ಗುರೂಜಿ ಮನೆಯಂಗಳದಲ್ಲಿ ಸಮ್ಮಿಲನ ಕಲೆ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ವತಿಯಿಂದ ನಡೆದ ಕವಿಗೋಷ್ಠಿ ಹಾಗೂ ವೆಂಕಟಾಚಲ ತುಳಸೀದಾಸ್‌ ಗುರೂಜಿಯವರಿಗೆ `ಶಾರದ ಸುಪುತ್ರ' ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ವೈ.ಎಸ್‌. ಕೃಷ್ಣಮೂರ್ತಿ ಮತ್ತು ರತ್ನಾ ವೆಂಕಟೇಶ್‌ ಗೀತಗಾಯನ ನಡೆಸಿಕೊಟ್ಟರು. ರಾಜಲಕ್ಷ್ಮಿ ಡಿ. ಚಂದ್ರಯ್ಯ, ಕುರಯಲ್ಲಪ್ಪ, ಡಿ.ಎಸ್‌. ಹನುಮಂತರಾವ್ ‌ಮುಂತಾದವರು ಉಪಸ್ಥಿತರಿದ್ದರು.

scan3

ದೆಹಲಿಯ ಕನ್ನಡ ಸಮ್ಮೇಳನ : ಹೊರನಾಡಿನಲ್ಲಿ ಮಹಿಳೆಯರು ಕನ್ನಡ ಸಂಸ್ಕೃತಿಯನ್ನು ಮುನ್ನಡೆಸಬೇಕೆಂದು `ದೆಹಲಿ ಕನ್ನಡಿಗ' ಪತ್ರಿಕೆ ಸಂಪಾದಕ ಬಾ. ಸಾಮಗ ಅವರು ದೆಹಲಿಯಲ್ಲಿ `ದೆಹಲಿ ಕನ್ನಡಿಗ' ಏರ್ಪಡಿಸಿದ್ದ 30ನೇ ರಾಷ್ಟ್ರೀಯ ಕನ್ನಡ ಸಮ್ಮೇಳನದಲ್ಲಿನ ಮಹಿಳಾ ಉತ್ಸವದಲ್ಲಿ ಕರೆ ನೀಡಿದರು.

Untitled-4

ಅದ್ಧೂರಿ ಕನ್ನಡ ರಾಜ್ಯೋತ್ಸವ : ಎಸ್‌.ಎ.ಪಿ. ಲ್ಯಾಬ್ಸ್ ಇಂಡಿಯಾ ಸಂಸ್ಥೆಯ ಸಂಕಲ್ಪ ಗೆಳೆಯರ ಬಳಗದವರು ಸಂಸ್ಥೆಯ ಸಹಕಾರದೊಂದಿಗೆ ಕನ್ನಡ ರಾಜ್ಯೋತ್ಸವವನ್ನು ಅದ್ಧೂರಿಯಿಂದ ಆಚರಿಸಿದರು. `ಕರ್ನಾಟಕ ದರ್ಶನ: ಒಂದು ರಾಜ್ಯ ಹಲವು ಜಗತ್ತುಗಳು' ಎಂಬ ಶೀರ್ಷಿಕೆಯಡಿ ಕಾರ್ಯಕ್ರಮವನ್ನು ರೂಪಿಸಲಾಗಿತ್ತು. ನಾಟಕ, ಹಾಡು, ನೃತ್ಯ, ಯಕ್ಷಗಾನ ಮುಂತಾದ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.

Untitled-13

Untitled-14

Untitled-15

Untitled-16

ಮಹಿಳಾ ಕ್ರಿಕೆಟ್ ಮೆರುಗು : ಇತ್ತೀಚೆಗೆ ಗಾಂಧಿ ಬಜಾರಿನ ಕೊಹಿನೂರ್‌ ಪಾರ್ಕ್‌ನಲ್ಲಿ ಕೌನ್ಸಿಲ್ ‌ಅಧ್ಯಕ್ಷಿಣಿ ಲಯನೆಸ್‌ ನಾಗರತ್ನಾ ಮಂಜುನಾಥ್‌ರ ನೇತೃತ್ವದಲ್ಲಿ ಲಯನೆಸ್‌ ಕ್ಲಬ್‌ನ ಮಹಿಳಾ ಕ್ರಿಕೆಟ್‌ ಪಂದ್ಯಾವಳಿ ನಡೆಸಲಾಯಿತು. ಕಿತ್ತೂರುರಾಣಿ ಚೆನ್ನಮ್ಮ, ಝಾನ್ಸಿರಾಣಿ ಹಾಗೂ ಮೈಸೂರು ಮಹಾರಾಣಿ ತಂಡಗಳು ಇದರಲ್ಲಿ ಭಾಗವಹಿಸಿದ್ದ. ಝಾನ್ಸಿರಾಣಿ ತಂಡದವರು ವಿಜೇತರಾದರು.

PAL_7281

ಕನಕದಾಸ ಜಯಂತಿ ಆಚರಣೆ  : ಕನಕದಾಸ ಜಯಂತಿಯ ಅಂಗವಾಗಿ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಬೆಳಗಾವಿಯ ಗಾಯಕ ಕಲಾವಿದರಾದ ವಿದ್ಯಾ ಮತ್ತು ಉಪೇಂದ್ರ ಜೋಶಿ ಕನಕದಾಸರ ಪದಗಳನ್ನು ಎಲ್ಲರ ಮನ ಮುಟ್ಟುವಂತೆ ಹಾಡುವುದರೊಂದಿಗೆ ಅಲ್ಲಿ ನೆರೆದಿದ್ದ ಸಭಿಕರ ಮನಸೂರೆಗೊಂಡರು.

Untitled-1

ಧ್ವನಿಸುರುಳಿ ಬಿಡುಗಡೆ ಸಮಾರಂಭ : ಸ್ನೇಹಕೂಟ ಸಾಂಸ್ಕೃತಿಕ ವೇದಿಕೆ ಹಾಗೂ ಬೆಂಗಳೂರಿನ ಕನ್ಯಾಕುಮಾರಿ ವಿದ್ಯಾಸಂಸ್ಥೆ ಸಹಯೋಗದಲ್ಲಿ ನಡೆದ ವಿಶೇಷ ಕವಿಗೋಷ್ಠಿಯಲ್ಲಿ, ಕವಿ, ಗಾಯಕ, ವೈ.ಎಸ್‌. ಕೃಷ್ಣಮೂರ್ತಿ ಸಾಹಿತ್ಯ ಮತ್ತು ಸಂಗೀತ ಸಂಯೋಜಿಸಿ `ಕನ್ಯಾಕುಮಾರಿ ವಿದ್ಯಾಸಂಸ್ಥೆ' ನಿರ್ಮಾಣ ಮಾಡಿದ `ಭಾರತಾಂಬೆ ನಮ್ಮ ತಾಯಿ' ಎಂಬ ದೇಶಭಕ್ತಿ ಗೀತೆಗಳ ಧ್ವನಿ ಮುದ್ರಿಕೆಯನ್ನು ಲೋಕಾರ್ಪಣೆಗೊಳಿಸಲಾಯಿತು. ಈ ಸಂದರ್ಭದಲ್ಲಿ ರತ್ನಾ ವೆಂಕಟೇಶ್‌, ಜಾನಕಿ ಟಿ.ಎಂ., ರೇಖಾ ಕುಮಾರ್‌, ಚಂದ್ರಮತಿ ಗಿರೀಶ್‌ ಹಾಗೂ ವಿದ್ಯಾರ್ಥಿಗಳು ಧ್ವನಿಮುದ್ರಿಕೆಯಲ್ಲಿನ ದೇಶಭಕ್ತಿ ಗೀತೆಗಳನ್ನು ಹಾಡಿ ರಂಜಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕನ್ನಡ ಪ್ರಾಧ್ಯಾಪಕ ಡಾ. ಮಧುಸೂದನ್‌ ಜೋಶಿ ವಹಿಸಿದ್ದರು. ಆರ್‌. ವಾದಿರಾಜ್‌ ಮೊದಲಾದವರು ಉಪಸ್ಥಿತರಿದ್ದರು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ