ಮುಗ್ಧ ಮಕ್ಕಳು ಲೈಂಗಿಕ ಶೋಷಣೆಗೆ ಹೇಗೆ ತುತ್ತಾಗುತ್ತಾರೆ ಹಾಗೂ ಅವರನ್ನು ಅಂಥವರಿಂದ ರಕ್ಷಿಸುವುದು ಹೇಗೆ ಎಂಬುದರ ಬಗ್ಗೆ ತಿಳಿದುಕೊಳ್ಳಿ.......!

ದೆಹಲಿಯಲ್ಲಿ ನಡೆದ ಘಟನೆಯೊಂದನ್ನು ಗಮನಿಸಿ. ವಿವೇಕ್‌ ವಿಹಾರ್‌ ಪ್ರದೇಶದ ಮನನೊಂದವರ 9 ವರ್ಷದ ಹುಡುಗಿಯನ್ನು ಅದೇ ಮನೆಯಲ್ಲಿ ಬಾಡಿಗೆಗಿದ್ದ ವ್ಯಕ್ತಿಯೊಬ್ಬ ಲೈಂಗಕವಾಗಿ ಪೀಡಿಸುತ್ತಿದ್ದ. ತನ್ನೊಂದಿಗೆ ಏನು ನಡೆಯುತ್ತಿದೆ ಎಂಬುದು ಆ ಹುಡುಗಿಗೆ ಗೊತ್ತೇ ಆಗುತ್ತಿರಲಿಲ್ಲ. ಆ ಘಟನೆಯ ಬಗ್ಗೆ ಅವಳಿಗೆ ಬಹಳ ಕೆಡುಕೆನಿಸುತ್ತಿತ್ತು. ಆದರೆ ಅದು ಗೊತ್ತಾಗುತ್ತಿರಲಿಲ್ಲ. ಅದೊಂದು ದಿನ ಶಾಲೆಯಲ್ಲಿ ಟೀಚರ್‌, `ಗುಡ್‌ ಟಚ್‌ ಮತ್ತು ಬ್ಯಾಡ್‌ ಟಚ್‌'ಗಳ ಬಗ್ಗೆ ಹೇಳಿದಾಗ ಅವಳಿಗೆ ಅರಿವಾಯಿತು. ಅವಳು ತಕ್ಷಣವೇ ತನ್ನೊಂದಿಗೆ ನಡೆದ ಘಟನೆಯನ್ನು ಬಿಡಿಸಿ ಹೇಳಿದಳು. ಬಾಡಿಗೆಗಿದ್ದ ವ್ಯಕ್ತಿಯೊಬ್ಬ ಅವಳೊಂದಿಗೆ ಕೆಟ್ಟದಾಗಿ ನಡೆದುಕೊಳ್ಳುತ್ತಿರುವುದು ಅವಳಿಗೆ ಇಷ್ಟವಾಗುತ್ತಿರಲಿಲ್ಲ.

ಈ ವಿಷಯ ಪೊಲೀಸ್‌ ಸ್ಟೇಷನ್‌ತನಕ ಹೋಯಿತು. ಪೊಲೀಸರು ಬಾಲಕಿಯ ಹೇಳಿಕೆಯ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದರು. ಇದರಿಂದ ಬಹುದೊಡ್ಡ ದುರುಂತವೊಂದು ತಪ್ಪಿತು.

ರಾಷ್ಟ್ರೀಯ ಕ್ರೈಮ್ ರೆಕಾರ್ಡ್‌ ಬ್ಯೂರೊದ ಅಂಕಿ ಅಂಶಗಳ ಪ್ರಕಾರ, ಮಕ್ಕಳೊಂದಿಗೆ ನಡೆಯುವ ಲೈಂಗಿಕ ಅಪರಾಧದ ಪ್ರಕರಣಗಳ ಸಂಖ್ಯೆ ಗಮನಾರ್ಹ ಪ್ರಮಾಣದಲ್ಲಿ ಏರಿಕೆಯಾಗಿದೆ. 2010ರಲ್ಲಿ 33,353 ಇದ್ದದ್ದು 2016ರಲ್ಲಿ 98,344ಕ್ಕೇರಿತು. ಇದರಲ್ಲಿ 48,582 ಅಪಹರಣ ಹಾಗೂ ಉಳಿದ 18,862 ಬಲಾತ್ಕಾರದ ಪ್ರಕರಣವಾಗಿದ್ದ.

2016ರಲ್ಲಿ ಅತ್ಯಾಚಾರದ ಒಟ್ಟು 36,657 ಘಟನೆಗಳು ನಡೆದ. ಅವುಗಳಲ್ಲಿ 16,000 ಅತ್ಯಾಚಾರದ ಘಟನೆಗಳು ನಡೆದಿದ್ದು ಅಪ್ರಾಪ್ತರ ಮೇಲೆ ಮಕ್ಕಳೊಂದಿಗೆ ಲೈಂಗಿಕ ಶೋಷಣೆಯ ಘಟನೆಗಳು ಮನೆ, ಶಾಲೆಗಳಲ್ಲಿ ಅಥವಾ ಹೊರಗೆ ನಡೆಯಬಹುದು. ಎಷ್ಟೋ ಮಕ್ಕಳು ಸಂಕೋಚದ ಕಾರಣದಿಂದ ಅಥವಾ ಹೊಡೆಯುತ್ತಾರೆಂಬ ಭಯದಿಂದ ತಮ್ಮೊಂದಿಗೆ ನಡೆದ ಘಟನೆಯನ್ನು ಯಾರ ಮುಂದೂ ಹೇಳಿಕೊಳ್ಳುವುದಿಲ್ಲ.

ಹೆಚ್ಚಿನ ಪ್ರಕರಣಗಳಲ್ಲಿ ಶೋಷಣೆ ಮಾಡುವ ವ್ಯಕ್ತಿ ಹುಡುಗಿಯ ಮನೆಯವರಿಗೆ ತೀರಾ ವಿಶ್ವಾಸಿ ವ್ಯಕ್ತಿಯಾಗಿರುತ್ತಾನೆ. ಸುಮಾರು ಶೇ.30ರಷ್ಟು ಅಪರಾಧಿಗಳು ಹುಡುಗಿಯ ಸಂಬಂಧಿಕರೇ ಆಗಿರುತ್ತಾರೆ. ಶೇ.60ರಷ್ಟು ಜನರು ಕುಟುಂಬದ ಸ್ನೇಹಿತರು, ನೆರೆಯವರು, ಬೇಬಿ ಸಿಟರ್‌, ಟೀಚರ್‌ ಆಗಿರುತ್ತಾರೆ.

ಭಾರತ ಸರ್ಕಾರ ನಡೆಸಿದ ಒಂದು ಸಮೀಕ್ಷೆಯ ಪ್ರಕಾರ, ಮಕ್ಕಳ ಲೈಂಗಿಕ ದುರ್ವರ್ತನೆಗಳು ಸಾಮಾನ್ಯವಾಗಿ 5-12 ವರ್ಷಗಳ ವಯೋಮಿತಿಯಲ್ಲಿ ಘಟಿಸುತ್ತವೆ. ಆ ವಯಸ್ಸಿನಲ್ಲಿ ಅವರು ತಮ್ಮ ನೋವನ್ನು ಯಾರ ಮುಂದೆಯೂ ಹೇಳಿಕೊಳ್ಳಲು ಸಮರ್ಥರಾಗಿರುವುದಿಲ್ಲ. ಏಕೆಂದರೆ ಅವರಿಗೆ ಈ ವಯಸ್ಸಿನಲ್ಲಿ ಪ್ರೀತಿ ಹಾಗೂ ಶೋಷಣೆಯ ನಡುವಿನ ವ್ಯತ್ಯಾಸ ಗುರುತಿಸುವ ತಿಳಿವಳಿಕೆ ಇರುವುದಿಲ್ಲ. ಈ ಕಾರಣದಿಂದಾಗಿ ಮಕ್ಕಳ ಜೊತೆಗಿನ ಹೆಚ್ಚಿನ ಅಪರಾಧ ಪ್ರಕರಣಗಳ ಬಗ್ಗೆ ಗೊತ್ತಾಗುವುದಿಲ್ಲ ಹಾಗೂ ಅಪರಾಧವನ್ನು ಸಾಬೀತುಪಡಿಸಲು ಆಗುವುದಿಲ್ಲ. ಅದರಿಂದಾಗಿ ಅಪರಾಧಿಗಳ ಮನೋಬಲ ಹೆಚ್ಚುತ್ತದೆ.

ತಿಳಿವಳಿಕೆ ಕೊಡಿ : ಇಂತಹ ಸ್ಥಿತಿ ಬಂದಾಗ ಹೇಗೆ ರಕ್ಷಣೆ ಮಾಡಿಕೊಳ್ಳಬೇಕು ಮತ್ತು ಅವರು ಹೇಗೆ ಜಾಗರೂಕರಾಗಿರಬೇಕು  ಎಂಬುದನ್ನು ಕಲಿಸುವುದು ಮುಖ್ಯ. ಮಕ್ಕಳ ಮುಂದೆ ಮಾತುಕಥೆ ನಡೆಸುವಾಗ ಅವರ ದೇಹದ ಅಂಗಗಳ ಹೆಸರಿಗೆ ನಿಕ್‌ ನೇಮ್ ಕೊಡದೆ ವಾಸ್ತವ ಹೆಸರುಗಳನ್ನೇ ಬಳಸಿ. ಅವರಿಗೆ ತಮ್ಮ ಅಂಗಗಳ ಬಗ್ಗೆ ಮಾತನಾಡಲು ಅವಕಾಶ ಕೊಡಿ. ಹೀಗೆ ಮಾಡುವುದರ ಮೂಲಕ ಪೋಷಕರು ಮಕ್ಕಳ ಮನಸ್ಸಿನ ಹಿಂಜರಿಕೆ ಹಾಗೂ ನಾಚಿಕೆಯನ್ನು ದೂರಗೊಳಿಸಿ ಅವರೊಂದಿಗೆ ಸ್ನೇಹದ ವಾತಾವರಣದಲ್ಲಿ ಮಾತನಾಡಲು ಅವಕಾಶ ಸಿಗುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ