ನೀವು ಸಹ ಹೋಂ ಲೋನ್ಪಡೆಯಲು ಪ್ಲಾನ್ಮಾಡುತ್ತಿದ್ದರೆ, ಅದಕ್ಕೆ ಮೊದಲು ಮಾಹಿತಿಯತ್ತ ಒಮ್ಮೆ ಕಣ್ಣಾಡಿಸಿ….

ನಮ್ಮದೇ ಆದ ಸ್ವಂತ ಮನೆ ಹೊಂದುವ ಕನಸು ಎಂಥ ಬಡವರು, ಮಧ್ಯಮ ವರ್ಗದವರಿಗಾದರೂ ಇದ್ದೇ ಇರುತ್ತದೆ. ಆದರೆ ಇಂದಿನ ಅತಿ ತುಟ್ಟಿಯ ದಿನಗಳಲ್ಲಿ, ಅದರಲ್ಲೂ ಮಹಾನಗರಗಳಲ್ಲಿ ಮನೆ ಕೊಳ್ಳುವುದು ಎಂದರೆ ಕಷ್ಟಸಾಧ್ಯವೇ ಸರಿ. ಇಂಥ ಸಂದರ್ಭದಲ್ಲಿ ಗೃಹ ಸಾಲ ಯಾ ಹೋಂ ಲೋನ್‌ ನಮ್ಮ ಈ ಕನಸನ್ನು ನನಸಾಗಿಸಲು ನೆರವಾಗುತ್ತದೆ. ನೀವು ಸಹ ನಿಮ್ಮದೇ ಮನೆ ಕೊಳ್ಳುವ ಪ್ಲಾನಿಂಗ್‌ ನಲ್ಲಿದ್ದರೆ, ಅದಕ್ಕಾಗಿ ಹೋಂ ಲೋನ್‌ ಗೆ ಮೊರೆಹೋಗುವ ಐಡಿಯಾ ಹೊಂದಿದ್ದರೆ, ನೀವು ಈ ಕೆಳಗಿನ ಸಲಹೆಗಳನ್ನು ಅಗತ್ಯ ಪಾಲಿಸಿ, ಈ ಕುರಿತು ಡಬ್ಬಲ್ ಎಚ್ಚರಿಕೆ ವಹಿಸಿರಿ.

ಇತ್ತೀಚಿನ ದಿನಗಳಲ್ಲಿ ಹೋಂ ಲೋನ್‌ ಪಡೆಯುವುದು ಮಾಮೂಲಿ ವಿಷಯ. ಏಕೆಂದರೆ ಸರ್ಕಾರಿ ಯಾ ಖಾಸಗಿ ಬ್ಯಾಂಕ್‌ ಗಳ ಮೂಲಕ ನಿಮ್ಮ ಬಜೆಟ್‌ ಗೆ ಅನುಸಾರವಾಗಿ ಹೋಂ ಲೋನ್‌ ಪಡೆಯಬಹುದು. ಆದರೆ ಇದನ್ನು ಪಡೆಯುವ ಸಂದರ್ಭದಲ್ಲಿ ಅಗತ್ಯವಾಗಿ ಪರೀಕ್ಷಿಸಬೇಕಾದುದು ಎಂದರೆ, ನಿಮ್ಮ ಬಳಿ ಮನೆ ಕೊಳ್ಳಲು ಡೌನ್‌ ಪೇಮೆಂಟ್‌ ಮಾಡುವಷ್ಟು ಹಣ ಇದೆ ತಾನೇ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ. ಇಡೀ ಮನೆಯನ್ನು  ಹೋಂ ಲೋನ್‌ ನಲ್ಲೇ ಕೊಳ್ಳುತ್ತೇನೆಂದರೆ ಅದು ನಿಮ್ಮನ್ನು ಸಾಲದ ಕೂಪದಲ್ಲಿ ಮುಳುಗಿಸಿ ಬಿಡುತ್ತದೆ. ನೀವು ಡೌನ್‌ ಪೇಮೆಂಟ್‌ ಮೂಲಕ ಎಷ್ಟು ಗರಿಷ್ಠ ಮೊತ್ತ ಕಟ್ಟುತ್ತೀರೋ, ಸಾಲದ ಬಾಧೆಯಿಂದ ಅಷ್ಟೇ ಪಾರಾಗುವಿರಿ, ಹೊರೆ ಎಷ್ಟೋ ತಗ್ಗುತ್ತದೆ.

ಆದಾಯಕ್ಕೆ ತಕ್ಕಂತೆ ಹೋಂ ಲೋನ್‌ ಕೆಲವರು ತಮ್ಮ ಸಂಬಳದ ಗೊಡವೆ ಬಗ್ಗೆ ಲೆಕ್ಕಿಸದೆ ದೊಡ್ಡ ಮನೆಗೆ ಆಸೆ ಪಡುತ್ತಾರೆ. ಇದರಿಂದ ಅವರು ದೊಡ್ಡ ಸಾಲದ ಹೊರೆಗೆ ಸಿಲುಕುತ್ತಾರೆ. ಹೀಗಾಗಿ ನಿಮ್ಮ ಆದಾಯಕ್ಕೆ ತಕ್ಕಂತೆ ಹೋಂ ಲೋನ್‌ ಬಗ್ಗೆ ಆಲೋಚಿಸಿ. ಆಗ ಮಾತ್ರವೇ ನೀವು ಅದರ ಸುಲಭವಾಗಿ ಪಾವತಿಸಲು ಸಾಧ್ಯ. ಜೊತೆಗೆ ಮನೆಯ ಇಂಟೀರಿಯರ್ಸ್‌ ನ್ನು ಸಹ ನಿಮ್ಮ ಬಜೆಟ್‌ ಗೆ ಅನುಸಾರವೇ ಇಟ್ಟುಕೊಳ್ಳಿ.

ಈ ಕುರಿತಾಗಿ ನಗರದ ನುರಿತ ಹಣಕಾಸು ತಜ್ಞರ ಅಭಿಪ್ರಾಯದಲ್ಲಿ, ಹೋಂ ಲೋನ್‌ ಪಡೆಯಲು ವ್ಯಕ್ತಿಯ ಕ್ರೆಡಿಟ್‌ ಸ್ಕೋರ್ ಉತ್ತಮ ಆಗಿರಬೇಕು. ಯಾವುದೇ ಬ್ಯಾಂಕ್‌ ಅಥವಾ ಫೈನಾನ್ಸ್ ಸಂಸ್ಥೆ ನಿಮಗೆ ಲೋನ್‌ ನೀಡಬೇಕೆಂದರೆ, ನಿಮ್ಮ ಕ್ರೆಡಿಟ್ ಸ್ಕೋರ್‌ ಉತ್ತಮ ಆಗಿರಲೇಬೇಕು. ಅಕಸ್ಮಾತ್‌ ನಿಮ್ಮ ಕ್ರೆಡಿಟ್‌ ಸ್ಕೋರ್‌ ಉತ್ತಮ ಅಲ್ಲದಿದ್ದರೆ, ನಿಮಗೆ ಹೋಂ ಲೋನ್‌ ಸಿಗಲು ಬಹಳ ಕಷ್ಟವಾದೀತು. ಕ್ರೆಡಿಟ್‌ ಸ್ಕೋರ್‌ 700ಕ್ಕೂ ಅಧಿಕ ಆಗಿದ್ದರೆ, ಮಾಮೂಲಿ ಬಡ್ಡಿ ದರಕ್ಕಿಂತ ಕಡಿಮೆ ಬಡ್ಡಿ ದರದಲ್ಲಿ ಹೋಂ ಲೋನ್‌ ಸಿಗುತ್ತದೆ.

ಕ್ರೆಡಿಟ್ಸ್ಕೋರ್ ಮಹತ್ವ

ಕ್ರೆಡಿಟ್‌ ಸ್ಕೋರ್‌ ನ್ನು ಸಿವಿಲ್ ‌ಸ್ಕೋರ್‌ ಎಂದೂ ಹೇಳುತ್ತಾರೆ. ಇದು ಯಾವುದೇ ವ್ಯಕ್ತಿಯ ಹಣಕಾಸಿನ ಕ್ರೆಡಿಟ್‌ ಕುರಿತು ಹೇಳುತ್ತದೆ. ಅಂದ್ರೆ ಆತ ಲೋನ್‌ ಪಡೆಯಲು ಎಷ್ಟು ಅರ್ಹ ಎಂಬುದು. ಇದರಲ್ಲಿ ಆತ ಏನಾದರೂ ಈ ಮೊದಲೇ ಪರ್ಸನಲ್/ವೆಹಿಕಲ್ ಲೋನ್‌ ಪಡೆದಿದ್ದರೆ, ತಡ ಮಾಡದೆ ಅದನ್ನು ಸಮಯಕ್ಕೆ ಸರಿಯಾಗಿ ತೀರಿಸಿದ್ದರೆ, ಜೊತೆಗೆ ಕ್ರೆಡಿಟ್‌ ಕಾರ್ಡ್‌ ಸಹ ಇದ್ದರೆ, ಅದರಲ್ಲಿ ಯಾ ಸಾಲದ ಹಣ ಬಾಕಿ ಇರದಿದ್ದರೆ, ಆಗ ಮಾತ್ರ ಆ ವ್ಯಕ್ತಿಯ ಕ್ರೆಡಿಟ್‌ ಸ್ಕೋರ್‌ ಉತ್ತಮ ಆಗಲು ಸಾಧ್ಯ. ಇದನ್ನು ಬ್ಯಾಂಕ್‌ ಲೋನ್‌ ನೀಡುವ ಮೊದಲೇ ಲೆಕ್ಕ ಹಾಕುತ್ತದೆ.

ಹೋಂ ಲೋನ್ ವಿಧಗಳು

ಪ್ಲೇಟಿಂಗ್‌ ಹೋಂ ಲೋನ್‌ ನಲ್ಲಿ ಬಡ್ಡಿಯ ದರ 0‌ನಿಂದ ನಿಗದಿಪಡಿಸಲಾಗಿರುತ್ತದೆ. ಇದರಲ್ಲಿ ಏನಾದರೂ ಬದಲಾವಣೆ ಇದ್ದರೆ, ಬಡ್ಡಿ ದರ ಅದರ ಅನುಪಾತದ ಪ್ರಕಾರವೇ ಬದಲಾಗುತ್ತದೆ.

ಫಿಕ್ಸ್ಡ್ ರೇಟ್‌ ಹೋಂ ಲೋನ್‌ ಈಗ ಕ್ಲೋಸ್‌ ಆಗಿದೆ. ಏಕೆಂದರೆ ಬಹುತೇಕ ಗ್ರಾಹಕರು ಅದನ್ನು ಇಷ್ಟಪಡುವುದಿಲ್ಲ.

ಕಾಂಬಿನೇಶನ್‌ ಲೋನ್‌ ನಲ್ಲಿ, ಲೋನಿನ ಒಂದು ಭಾಗ ಫಿಕ್ಸ್ಡ್ ಬಡ್ಡಿ ದರಕ್ಕೆ ಹಾಗೂ ಬಾಕಿ ಭಾಗ ಅಡ್ಜಸ್ಟೆಬಲ್ ಯಾ ಪ್ಲೇಟಿಂಗ್ ಬಡ್ಡಿ ದರಕ್ಕೆ ತಕ್ಕಂತೆ ಸಿಗುತ್ತದೆ.

ಇದನ್ನು ಹೊರತುಪಡಿಸಿ ‌ನೀಡಿರುವ ರಾಪೋ ರೇಟ್‌ ಆಧಾರದಲ್ಲಿ ಯಾವುದೇ ಬ್ಯಾಂಕಿನ ಬಡ್ಡಿ ದರ ನಿಶ್ಚಿತವಾಗಿರುತ್ತದೆ. ಇದು ಕಡಿಮೆ ಆದ ಪಕ್ಷದಲ್ಲಿ, ಬಡ್ಡಿ ಹೆಚ್ಚು ಅಥವಾ ಕಡಿಮೆ ಆಗುವ ಸಾಧ್ಯತೆಗಳಿವೆ. ಸರ್ಕಾರಿ ಬ್ಯಾಂಕುಗಳಲ್ಲಿ ಬಡ್ಡಿ ದರಗಳು ಕಡಿತಗೊಂಡಾಗ, ಆಟೋಮೆಟಿಕಲಿ ನಿಮಗೆ ಕಡಿತ ಅನ್ವಯ ಆಗುತ್ತದೆ. ಆದರೆ ಖಾಸಗಿ ಬ್ಯಾಂಕುಗಳಲ್ಲಿ ಬಡ್ಡಿ ದರವನ್ನು ಕಡಿತಗೊಳಿಸಲು, ಹೆಚ್ಚು ಹಣ ತೆರಬೇಕಾಗುತ್ತದೆ.

ಪ್ರೋಸೆಸಿಂಗ್‌ ಫೀಸ್‌ ಪ್ರತಿ ಬ್ಯಾಂಕಿನ ಪ್ರೋಸೆಸಿಂಗ್‌ ಫೀಸ್‌ ಬೇರೆಯೇ ಆಗಿರುತ್ತದೆ. ಇದರ ಜೊತೆಯಲ್ಲೇ ಲೀಗ್‌ ಫೀಸ್‌ವ್ಯಾಲ್ಯುಯೇಶನ್‌ ಫೀಸ್‌ ಸಹ ಕೊಡಬೇಕಾದೀತು. ಇದರ ಮೊತ್ತದ ಮಾಹಿತಿಯನ್ನು ಮೊದಲೇ ತೆಗೆದುಕೊಳ್ಳಬೇಕು. ಬ್ಯಾಂಕಿನಿಂದ ಅಪ್ರೂವ್ಡ್ ಮನೆಗಾಗಿ ಲೀಗ್‌ವ್ಯಾಲ್ಯುಯೇಶನ್‌ ಫೀಸ್‌ ನೀಡಬೇಕಾಗಿಲ್ಲ.

portrait-happy-woman-holding-car-house-keys

ಅಗತ್ಯದ ದಸ್ತಾವೇಜುಗಳ ಮಾಹಿತಿ

ಲೋನ್‌ ಪಡೆಯುವ ಮೊದಲು ಕನಿಷ್ಠ 10% ಕ್ಯಾಶ್‌ ಡೌನ ಪೇಮೆಂಟ್‌ ಗಾಗಿ ರೆಡಿ ಮಾಡಿಟ್ಟುಕೊಳ್ಳಿ. ಆಗ ಮಾತ್ರ ನಿಮ್ಮ ಕೆಲಸ ಸುಲಭ ಆದೀತು. ನಿಮ್ಮ ಮನೆ 1 ಕೋಟಿ ಅಥವಾ ಅದಕ್ಕಿಂತ ಹೆಚ್ಚಾಗಿದ್ದರೆ, ಅದರ 25% ಹಣ ನಿಮ್ಮ ಬಳಿ ಇರಲೇಬೇಕು. ಬಾಕಿ ಹಣ ಮಾತ್ರ ನಿಮಗೆ ಬ್ಯಾಂಕಿನಿಂದ ಹೋಂ ಲೋನ್‌ ಆಗಿ ಸಿಗುತ್ತದೆ. ಇದರ ಹೊರತಾಗಿ ದಸ್ತಾವೇಜುಗಳ (ಡಾಕ್ಯುಮೆಂಟ್ಸ್) ಮಾಹಿತಿಯನ್ನು ಬ್ಯಾಂಕಿನಿಂದ ಮೊದಲೇ ಪಡೆದುಕೊಂಡಿರಬೇಕು. ಈ ಕುರಿತಾದ ಕೆಲವು ಅಗತ್ಯದ ಡಾಕ್ಯುಮೆಂಟ್ಸ್ ಹೀಗಿವೆ :

ವೇತನ ಪಡೆಯುವವರಿಗಾಗಿ ಅಗತ್ಯದ ಡಾಕ್ಯುಮೆಂಟ್ಸ್    3 ತಿಂಗಳ ಸ್ಯಾಲರಿ ಸ್ಲಿಪ್‌.

ಕಳೆದ 2 ವರ್ಷಗಳ ಫಾರ್ಮ್ (ಪಾರ್ಟ್‌)

ಅಪಾಯಿಂಟ್‌ ಮೆಂಟ್‌ ವೆಟರ್‌.

ಕಂಪನಿಯ ಎಂಪ್ಲಾಯಿ ಐಕಾರ್ಡ್‌.

ಕಳೆದ 6 ತಿಂಗಳ ಬ್ಯಾಂಕ್‌ ಅಕೌಂಟ್‌ ಸ್ಟೇಟ್‌ ಮೆಂಟ್‌.

ನೀವು ಅದೇ ಕಂಪನಿಯಲ್ಲಿ 2 ವರ್ಷಗಳಿಗಿಂತ ಕಡಿಮೆ ಕೆಲಸ ಮಾಡಿದ್ದರೆ, ಹಿಂದಿನ ಕೆಲಸದ ರಿಲೀವಿಂಗ್‌ ಲೆಟರ್‌.

ಪಾಸ್‌ ಪೋರ್ಟ್‌ ಸೈಜ್‌ ಫೋಟೋ.

ಆಧಾರ್‌/ಪ್ಯಾನ್‌ ಕಾರ್ಡ್‌ ಫೋಟೋಕಾಪಿ.

ಸ್ವಂತ ಬಿಸ್‌ ನೆಸ್‌ ಹೊಂದಿದವರಿಗಾಗಿ ಅಗತ್ಯ ಡಾಕ್ಯುಮೆಂಟ್ಸ್

ಸ್ವಂತ ಬಿಸ್‌ ನೆಸ್‌ ನಡೆಸುತ್ತಿರುವವರು ತಮ್ಮ ಆದಾಯದ ಮೂಲನ್ನು ಪ್ರಮಾಣೀಕರಿಸುವ ಕೆಲವು ಹೆಚ್ಚುವರಿ ಡಾಕ್ಯುಮೆಂಟ್ಸ್ ಒದಗಿಸಬೇಕಾಗುತ್ತದೆ.

ಬಿಸ್‌ ನೆಸ್‌ ವಿಳಾಸದ ಪ್ರಮಾಣ ಪತ್ರ.

ಕಳೆದ 3 ವರ್ಷಗಳ ರಿಟರ್ಟ್ಸ್.

ಕಳೆದ 3 ವರ್ಷಗಳ ಆಡಿಟ್‌ ಗೊಳಿಸಲಾದ ಬ್ಯಾಲೆನ್ಸ್ ಶೀಟ್‌, ಲಾಭಹಾನಿ ವಿವರಣೆ, ಮೂಲಕ ವಿಧಿವತ್ತಾಗಿ ಆಡಿಟ್‌ ಮಾಡಲಾಗಿದ್ದರ ದಾಖಲೆಗಳು.

ಉದ್ದಿಮೆದಾರರ ಬಿಸ್‌ ನೆಸ್‌ ಲೈಸೆನ್ಸ್ ಯಾ ಪ್ರೊಫೆಶನ್‌ ಪ್ರಾಕ್ಟೀಸ್‌ (ಡಾಕ್ಟರ್‌, ವಕೀಲರು ಇತ್ಯಾದಿ)ನ ಡಾಕ್ಯುಮೆಂಟ್ಸ್, ಅದರಲ್ಲಿ ಎಲೆಕ್ಟ್ರಿಸಿಟಿ ಬಿಲ್‌, ರೆಜಿಸ್ಟ್ರೇಶನ್‌ ಇತ್ಯಾದಿ ಇರಬೇಕು.

ಅಂಗಡಿ, ಕಾರ್ಖಾನೆ, ಕ್ಲಿನಿಕ್‌, ಆಫೀಸ್‌ ಇತ್ಯಾದಿ ಪ್ರತಿಷ್ಠಾಪನೆಗಳಿಗಾಗಿ ರೆಜಿಸ್ಟ್ರೇಶನ್‌ ಪ್ರಮಾಣದ ಪ್ರತಿಗಳು.

ಬಿಸ್‌ ನೆಸ್‌ ಖಾತಾ ವಿತರಣೆ, ಪ್ರೊಫೆಶನ್‌ ಪ್ರಾಕ್ಟೀಸ್‌ ನ ಸರ್ಟಿಫಿಕೇಟ್‌.

ಪಾಸ್‌ ಪೋರ್ಟ್‌ ಸೈಜ್‌ ಫೋಟೋಗಳಿಗಾಗಿ ಅತ್ಯಗತ್ಯ ಡಾಕ್ಯುಮೆಂಟ್ಸ್

ವೀಸಾ ಕಾಪಿ ಜೊತೆ ಪಾಸ್‌ ಪೋರ್ಟ್‌.

ಅಪಾಯಿಂಟ್‌ ಮೆಂಟ್‌ ಲೆಟರ್‌.

ವ್ಯಾಲಿಡ್‌ ಓವರ್‌ ಸೀಸ್‌ ರೆಸಿಡೆಂಟ್‌ ಪ್ರೂಫ್‌

6 ತಿಂಗಳ ಬ್ಯಾಂಕ್‌ ಅಕೌಂಟ್‌ ಸ್ಟೇಟ್‌ ಮೆಂಟ್‌.

3 ತಿಂಗಳ ಸ್ಯಾಲರಿ ಸ್ಲಿಪ್‌.

2 ವರ್ಷಗಳ ಓವರ್‌ ಸೀಸ್‌ ಇನ್‌ ಕಂ ಟ್ಯಾಕ್ಸ್ ಫೈಲ್ ‌ಗೊಳಿಸಲಾದ ಡಾಕ್ಯುಮೆಂಟ್ಸ್.

ಓವರಸೀಸ್‌ ಕ್ರೆಡಿಟ್‌ ರಿಪೋರ್ಟ್‌.

ಬ್ಯಾಂಕಿನ ಫಾರ್ಮ್ಯಾಟ್‌ ನಲ್ಲಿ ಪವರ್‌ ಆಫ್‌ ಅಟಾರ್ನಿ.

ಪಾರ್ಸ್‌ ಪೋರ್ಟ್‌ ಸೈಜ್‌ ಫೋಟೋ.

ಪ್ರಾಪರ್ಟಿಗೆ ಸಂಬಂಧಿಸಿದ ಅತ್ಯಗತ್ಯ ಡಾಕ್ಯುಮೆಂಟ್ಸ್ ಲೋನ್‌ ಕೊಡುವ ಮೊದಲು ಬ್ಯಾಂಕ್‌ ಪ್ರಾಪರ್ಟಿಗೆ ಸಂಬಂಧಿಸಿದ ಎಲ್ಲಾ ಡಾಕ್ಯುಮೆಂಟ್ಸ್ ಪರಿಶೀಲಿಸಿ, ಪ್ರಾಪರ್ಟಿ ಲೀಗಲಿ ಸರಿ ಇದೆ ಎಂದು ಖಾತ್ರಿಪಡಿಸಿಕೊಂಡು, ಗ್ರಾಹಕರಿಗೆ ಸಾಲ ತೀರಿಸಲು ಬೇರೇನೂ ಆರ್ಥಿಕ ಸಮಸ್ಯೆಗಳಿಲ್ಲ ಎಂದ ಮೇಲೆಯೇ ಲೋನ್‌ ಮಂಜೂರಾತಿ ಮಾಡುತ್ತದೆ.

ಜಿ. ಸುಮಾ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ