ಒಂದು ಕಾಲದಲ್ಲಿ ಜಗತ್ತನ್ನೇ ಸೆಳೆದ ಭಾರತೀಯ ಅಡುಗೆ ಮನೆಯ ವೈಭವ… ಇಂದು ಪ್ಯಾಕೆಟ್ಗಳಲ್ಲಿ ಬಂಧಿಯಾದ ರುಚಿ!

ಒಂದು ಕಾಲದಲ್ಲಿ ನಮ್ಮ ಮನೆಯ ಅಡುಗೆಮನೆಯೇ ಒಂದು ಪುಟ್ಟ ಮಸಾಲೆ ಕಾರ್ಖಾನೆಅಲ್ಲಿ ಮಿಕ್ಸರ್‌ನ ಸದ್ದು ಇರಲಿಲ್ಲ. ಪ್ಯಾಕೆಟ್‌ಗಳನ್ನು ಹರಿದು ಪುಡಿ ಮಾಡುವ ಆತುರವಿರಲಿಲ್ಲ. ರೆಡಿಮೇಡ್ ಸಾಂಬಾರ್ ಪುಡಿ, ಇನ್‌ಸ್ಟಂಟ್ ರಸಂ ಪುಡಿ, ಗರಂ ಮಸಾಲಾ ಎಂಬ ಬಣ್ಣಬಣ್ಣದ ಪ್ಯಾಕೆಟ್‌ಗಳ ಸಾಲುಗಳಿರಲಿಲ್ಲ. ಅದರ ಬದಲು… ಒಂದು ಮೂಲೆಯಲ್ಲಿ ಸಾರಿನ ಪುಡಿಹುಳಿ ಪುಡಿಮೆಣಸಿನ ಪುಡಿಚಟ್ನಿ ಪುಡಿವಾಂಗೀಬಾತ್ ಪುಡಿಪಲ್ಯದ ಪುಡಿಮೆಂತ್ಯದ ಹಿಟ್ಟು… ಇನ್ನೊಂದು ಕಡೆ ಚಕ್ಲಿ ಹಿಟ್ಟುಕೋಡುಬಳೆ ಹಿಟ್ಟುತೇಂಗೊಳಲು ಹಿಟ್ಟು… ಹೀಗೆ ಒಂದೊಂದು ಡಬ್ಬಿಯಲ್ಲೂ ಮನೆಯ ಹೆಂಗಸರ ಶ್ರಮ, ಕಾಳಜಿ, ಅನುಭವ ಮತ್ತು ಪ್ರೀತಿಯೇ ತುಂಬಿರುತ್ತಿತ್ತು. ಇಂದು ಆ ಮಸಾಲೆ ಡಬ್ಬಿಗಳು ಒಂದೊಂದಾಗಿ ನಮ್ಮ ಅಡುಗೆಮನೆಯಿಂದ ಕಣ್ಮರೆಯಾಗುತ್ತಿವೆ. ಬದಲಾಗಿದ್ದು ಕೇವಲ ಅಡುಗೆ ಪದ್ಧತಿಯಲ್ಲ… ಒಂದು ತಲೆಮಾರಿನ ಅಡುಗೆ ಸಂಸ್ಕೃತಿಯೇ ನಿಧಾನವಾಗಿ ಕಣ್ಮರೆಯಾಗುತ್ತಿದೆ.

🌶️ ಭಾರತೀಯ ಮಸಾಲೆ ಎಂದರೆ ಜಗತ್ತಿಗೇ ಒಂದು ಅದ್ಭುತ!

ಏಲಕ್ಕಿ, ಲವಂಗದಂತಹ ಜನಪ್ರಿಯ ಮಸಾಲೆಗಳ ಜೊತೆ ಬಳಕೆಯಲ್ಲಿದ್ದ ಆದ್ರೆ ಈಗ ದೂರ ಸರಿದಿರುವ ಈ 7 ಮಸಾಲೆಗಳನ್ನು ಬಳಸಿ ನೋಡಿ | As a popular spice use it in your cooking | ಲೈಫ್‌ಸ್ಟೈಲ್ ...

ಭಾರತದ ಇತಿಹಾಸದಲ್ಲಿ ಮಸಾಲೆಗಳಿಗೆ ಅಪಾರ ಮಹತ್ವವಿದೆ. ಮೆಣಸು, ಏಲಕ್ಕಿ, ಲವಂಗ, ದಾಲ್ಚಿನ್ನಿ, ಜೀರಿಗೆ, ಧನಿಯಾ, ಅರಿಶಿನ, ಮೆಂತ್ಯೆ ಮುಂತಾದ ಮಸಾಲೆಗಳು ಶತಮಾನಗಳಿಂದಲೇ ಭಾರತದ ವ್ಯಾಪಾರದ ಪ್ರಮುಖ ಉತ್ಪನ್ನಗಳಾಗಿದ್ದವು. ವಿಶೇಷವಾಗಿ ಕರಿಮೆಣಸು ಮತ್ತು ದಕ್ಷಿಣ ಭಾರತದ ಇತರ ಸುವಾಸನೆಯ ಮಸಾಲೆಗಳು ವಿದೇಶಿ ವ್ಯಾಪಾರಿಗಳನ್ನು ಭಾರತದತ್ತ ಸೆಳೆದವು. ಭಾರತೀಯ ಮಸಾಲೆಗಳಿಗಾಗಿ ಅರಬ್ ವ್ಯಾಪಾರಿಗಳು, ಯುರೋಪಿನ ವ್ಯಾಪಾರಿಗಳು ಹಾಗೂ ನಂತರ ಪೋರ್ಚುಗೀಸ್, ಡಚ್, ಫ್ರೆಂಚ್ ಮತ್ತು ಬ್ರಿಟಿಷ್ ಶಕ್ತಿಗಳು ಭಾರತಕ್ಕೆ ಬಂದವು.

ಹೀಗಾಗಿ ಮಸಾಲೆಗಳೇ ಭಾರತದ ಮೇಲೆ ನಡೆದ ಎಲ್ಲ ವಿದೇಶಿ ದಾಳಿಗಳಿಗೆ ಏಕೈಕ ಕಾರಣ ಎನ್ನುವುದು ಇತಿಹಾಸವನ್ನು ಅತಿಯಾಗಿ ಸರಳೀಕರಿಸಿದ ಮಾತಾಗುತ್ತದೆ. ಆದರೆ ಭಾರತದ ಮಸಾಲೆ ವ್ಯಾಪಾರವು ಜಗತ್ತಿನ ವ್ಯಾಪಾರ ಇತಿಹಾಸದಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸಿತು ಎನ್ನುವುದರಲ್ಲಿ ಅನುಮಾನವಿಲ್ಲ. ಅಂದು ವಿದೇಶಿಗರು ಹಡಗಿನಲ್ಲಿ ಮಸಾಲೆಗಳನ್ನು ಸಾಗಿಸುತ್ತಿದ್ದರು. ಇಂದು ನಾವು ಅದೇ ಮಸಾಲೆಗಳನ್ನು ಸೂಪರ್‌ಮಾರ್ಕೆಟ್‌ನ ಶೆಲ್ಫ್‌ನಲ್ಲಿ ಪ್ಯಾಕೆಟ್‌ಗಳಲ್ಲಿ ಹುಡುಕುತ್ತಿದ್ದೇವೆ!

👵 ನಮ್ಮ ತಾಯಂದಿರ ಅಡುಗೆ ಮನೆಯೇ ಒಂದು ಪ್ರಯೋಗಾಲಯ!

ನಮ್ಮ ಹಿಂದಿನ ತಲೆಮಾರಿನ ಹೆಂಗಸರು ಅಡುಗೆ ಮಾಡುತ್ತಿದ್ದರು ಎಂದರೆ ಅದು ಕೇವಲ ಹೊಟ್ಟೆ ತುಂಬಿಸುವ ಕೆಲಸವಾಗಿರಲಿಲ್ಲ. ಅದು ಒಂದು ಕಲೆಒಂದು ವಿಜ್ಞಾನ. ಒಂದು ಸಂಪ್ರದಾಯ. ಒಂದು ಕುಟುಂಬದ ಆರೋಗ್ಯದ ಜವಾಬ್ದಾರಿ. ಮಸಾಲೆ ಪುಡಿ ಮಾಡುವ ದಿನವೂ ಹಾಗೆಯೇ! ನಾಳೆ ಶುಕ್ರವಾರ… ಮಸಾಲೆ ಮಾಡೋಣ. ಮಂಗಳವಾರ ಒಳ್ಳೆಯ ದಿನ. ಇವತ್ತೇ ಎಲ್ಲ ಪದಾರ್ಥ ತಂದು ಒಣಗಿಸೋಣ.

ಎಂದು ಶುಭ ದಿನ ನೋಡಿಕೊಂಡು ಕೆಲಸ ಆರಂಭಿಸುತ್ತಿದ್ದರು. ಅಂಗಡಿಗೆ ಹೋಗಿ ಯಾವುದೋ ಪ್ಯಾಕೆಟ್ ತೆಗೆದುಕೊಂಡು ಬರುವುದಲ್ಲ. ಒಳ್ಳೆಯ ಗುಣಮಟ್ಟದ ಒಣ ಮೆಣಸಿನಕಾಯಿಧನಿಯಾ, ಜೀರಿಗೆಮೆಂತ್ಯೆಸಾಸಿವೆಕಾಳುಮೆಣಸುಚಕ್ಕೆಲವಂಗಏಲಕ್ಕಿ ಹೀಗೆ ಬೇಕಾದ ಪದಾರ್ಥಗಳನ್ನು ಒಂದೊಂದಾಗಿ ಆರಿಸುತ್ತಿದ್ದರು.

☀️ ಬಿಸಿಲಿನಲ್ಲೂ ಒಂದು ಮಮತೆ ಇತ್ತು

ಮಸಾಲೆ ಪದಾರ್ಥಗಳನ್ನು ತಂದು ಸ್ವಚ್ಛವಾಗಿ ಆರಿಸಿ, ತೊಳೆದು, ಚೆನ್ನಾಗಿ ಒಣಗಿಸಿ, ಮನೆಯ ಅಂಗಳದಲ್ಲಿ ಬಿಸಿಲಿಗೆ ಹರಡುತ್ತಿದ್ದರು. ಆ ದೃಶ್ಯವೇ ಒಂದು ನೆನಪು. ಬಿಳಿ ಬಟ್ಟೆಯ ಮೇಲೆ ಹರಡಿದ ಧನಿಯಾ ಬೀಜಗಳು… ಪಕ್ಕದಲ್ಲಿ ಒಣಗುತ್ತಿದ್ದ ಮೆಣಸಿನಕಾಯಿಗಳು… ಇನ್ನೊಂದು ಕಡೆ ಜೀರಿಗೆ… ಮತ್ತೊಂದು ಕಡೆ ಮೆಂತ್ಯೆ… ಮನೆಯ ಮಕ್ಕಳು ಅದರ ಹತ್ತಿರ ಹೋಗದಂತೆ ಅಮ್ಮನ ಎಚ್ಚರಿಕೆ! ಅದನ್ನು ಮುಟ್ಟಬೇಡ… ಚೆನ್ನಾಗಿ ಒಣಗಲಿ. ಎಂದು ಗದರಿಸುತ್ತಿದ್ದರೂ ಅದರ ಹಿಂದೆ ಎಷ್ಟು ಕಾಳಜಿ!

🔥 ನಂತರ ಬರುತ್ತಿತ್ತು ಹದವಾಗಿ ಹುರಿಯುವ ಕಲೆ

ಒಣಗಿದ ಪದಾರ್ಥಗಳನ್ನು ಹಾಗೆಯೇ ಪುಡಿ ಮಾಡುತ್ತಿರಲಿಲ್ಲ. ಯಾವ ಪದಾರ್ಥವನ್ನು ಎಷ್ಟು ಹುರಿಯಬೇಕು? ಯಾವುದನ್ನು ಮೊದಲು ಹುರಿಯಬೇಕು? ಯಾವುದನ್ನು ಕೊನೆಯಲ್ಲಿ ಸೇರಿಸಬೇಕು? ಎಷ್ಟು ಉರಿ ಇರಬೇಕು? ಇವೆಲ್ಲವೂ ಅಮ್ಮ-ಅಜ್ಜಿಯರಿಗೆ ಅನುಭವದಿಂದಲೇ ಗೊತ್ತಿತ್ತು. ಒಂದು ಪದಾರ್ಥ ಸ್ವಲ್ಪ ಹೆಚ್ಚಾಗಿ ಹುರಿದರೂ ರುಚಿ ಬದಲಾಗುತ್ತದೆ. ಒಂದು ಪದಾರ್ಥ ಕಡಿಮೆ ಹುರಿದರೂ ಅದರ ಸುವಾಸನೆ ಬರುವುದಿಲ್ಲ. ಅಳತೆಯೇ ಇರದ ಅಳತೆ! ಇದೇ ನಮ್ಮ ಹಿಂದಿನ ತಲೆಮಾರಿನ ಅಡುಗೆ ಜ್ಞಾನ. ಮನೆಯಲ್ಲಿ ಮಸಾಲೆ ಹುರಿದರೆ, ಅದರ ಘಮಲು ಎರಡು ಮೂರು ದಿನ ಇಡೀ ಮನೆಯ ತುಂಬಾ ಆವರಿಸಿರುತ್ತಿತ್ತು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ