ಖ್ಯಾತ ನಟಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಪ್ರಕರಣದಲ್ಲಿ ಮಲಯಾಳಂ ನಟ ದಿಲೀಪ್ ನಿರ್ದೋಷಿ ಎಂದು ಕೇರಳ ಕೋರ್ಟ್ ತೀರ್ಪು ನೀಡಿದೆ.

2017ರಲ್ಲಿ ಈ ಪ್ರಕರಣ ನಡೆದಿತ್ತು. ಪ್ರಕರಣದಲ್ಲಿ ದಿಲೀಪ್ 8ನೇ ಆರೋಪಿಯಾಗಿದ್ದರು. ಅಪರಾಧ ಕೃತ್ಯಕ್ಕೆ ಸಂಚು ರೂಪಿಸಿದ್ದು ಹಾಗೂ ಸಾಕ್ಷಿ ನಾಶದ ಆರೋಪ ಅವರ ಮೇಲಿತ್ತು.  ಈ ಪ್ರಕರಣದಲ್ಲಿ ದಿಲೀಪ್ ಪಾತ್ರ ಇಲ್ಲ ಎಂದು 8 ವರ್ಷಗಳ ಸುದೀರ್ಘ ವಿಚಾರಣೆ ಬಳಿಕ ಕೋರ್ಟ್  ತೀರ್ಪು ನೀಡಿದೆ.

ಇದೇ ಪ್ರಕರಣದಲ್ಲಿ 6 ಆರೋಪಿಗಳು ಅಪರಾಧ ಎಸಗಿರುವುದು ಸಾಬೀತಾಗಿದೆ. ಸಾಮೂಹಿಕ ಅತ್ಯಾಚಾರ, ಅಪಹರಣ, ಅಪರಾಧ ಕೃತ್ಯದ ಸಂಚು, ವಿವಸ್ತ್ರಗೊಳಿಸುವ ಯತ್ನ ಸೇರಿದಂತೆ ಹಲವು ಕೃತ್ಯಗಳಲ್ಲಿ 6 ಮಂದಿ ಅಪರಾಧಿಗಳು ಎಂದು ಕೋರ್ಟ್ ತೀರ್ಪು ನೀಡಿದೆ. ಈ 6 ಮಂದಿಗೆ ಡಿಸೆಂಬರ್ 12ರಂದು ಶಿಕ್ಷೆ ಪ್ರಕಟವಾಗಲಿದೆ.

ಈ ಪ್ರಕರಣ ಖುಲಾಸೆಯಾಗಿರುವುದಕ್ಕೆ ಧನ್ಯವಾದ ಹೇಳೀರುವ ದಿಲೀಪ್​,  ‘ಪ್ರಮುಖ ಆರೋಪಿ ಪಲ್ಸರ್ ಸುನಿ ಹಾಗೂ ಆತನ ಸಹಚರರ ಜೊತೆ ಪೊಲೀಸರು ಸೇರಿಕೊಂಡು, ನನ್ನ ವಿರುದ್ಧ ಕಥೆ ಕಟ್ಟಿದ್ದರು. ಕೆಲವು ಮಾಧ್ಯಮದವರ ಜೊತೆ ಕೈಜೋಡಿಸಿ ಸೋಶಿಯಲ್ ಮೀಡಿಯಾದಲ್ಲಿ ಸುಳ್ಳು ಸುದ್ದಿ ಹಬ್ಬಿಸಿದ್ದರು. ಆದರೆ ನ್ಯಾಯಾಲಯದಲ್ಲಿ ಆ ಸುಳ್ಳು ಕಥೆ ನಿಲ್ಲಲಿಲ್ಲ. ನಿಜವಾಗಿ ಸಂಚು ನಡೆದಿದ್ದು ನನ್ನ ವಿರುದ್ಧ. ಈ 9 ವರ್ಷಗಳಲ್ಲಿ ನನ್ನ ಗೌರವ ಹಾಗೂ ಜೀವನ ಹಾಳಾಗಿದೆ” ಎಂದು ಹೇಳಿದ್ದಾರೆ.

ಸೆಷನ್ಸ್ ಕೋರ್ಟ್ ನೀಡಿರುವ ಈ ತೀರ್ಪಿನ ವಿರುದ್ಧ ಮೇಲ್ಮವಿ ಸಲ್ಲಿಸಲು ಕೇರಳ ಸರ್ಕಾರ ನಿರ್ಧರಿಸಿದೆ. ಕಾನೂನು ಸಚಿವ ಪಿ. ರಾಜೀವ್ ಅವರು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಜೊತೆ ಈ ಕುರಿತು ಮಾತುಕತೆ ನಡೆಸಿದ್ದು, ಮೇಲ್ಮವಿ ಸಲ್ಲಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎನ್ನಲಾಗಿದೆ.

2017ರ ಫೆಬ್ರವರಿ 17ರಂದು ಚಲಿಸುವ ಕಾರಿನಲ್ಲಿ ನಟಿಗೆ ಲೈಂಗಿಕ ಕಿರುಕುಳ ನೀಡಲಾಗಿತ್ತು. ಸುಮಾರು 2 ಗಂಟೆಗಳ ಕಾಲ ಈ ಕೃತ್ಯ ಎಸಗಲಾಗಿತ್ತು. 2017ರ ಏಪ್ರಿಲ್​​ನಲ್ಲಿ ಚಾರ್ಜ್​ಶೀಟ್ ಸಲ್ಲಿಸಿ, ದಿಲೀಪ್​ರನ್ನು ಬಂಧಿಸಲಾಯಿತ್ತು. ಬಳಿಕ ಅವರು ಜಾಮೀನು ಪಡೆದುಕೊಂಡಿದ್ದರು. ಕಳೆದ 8 ವರ್ಷಗಳಲ್ಲಿ ಒಟ್ಟು 261 ಸಾಕ್ಷಿಗಳ ವಿಚಾರಣೆ ನಡೆಸಿದ ಬಳಿಕ ಕೋರ್ಟ್ ಈ ತೀರ್ಪು ನೀಡಿದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ