ಮನಮೋಹಕ ನೃತ್ಯ : ರಷ್ಯಾ ದೇಶದ ಬಿಲ್ಯಾಸ್ವಾನ್‌ ಲೇಕ್‌ ಬಹು ಹಳೆಯ ಕಥೆ ಆಧರಿಸಿದ್ದು. ಇದರ ನೃತ್ಯ ಮತ್ತು ಕೋಮಲ ಮುದ್ರೆಗಳು ಇಂದಿಗೂ ವೀಕ್ಷಕರನ್ನು ಮಂತ್ರಮುಗ್ಧಗೊಳಿಸುತ್ತವೆ. ಇದಕ್ಕೆ ತರಬೇತಿ ಸಹ ಅಷ್ಟೇ ಕಷ್ಟಕರ. ಇದರಲ್ಲಿ ಹುಡುಗಿಯರು ತಮ್ಮ ಕಾಲಿನ ಬೆರಳ ತುದಿಯ ಮೇಲೇ ನಿಂತು ನರ್ತಿಸುವುದರಲ್ಲಿ ಖ್ಯಾತರು. ಇವರನ್ನು ವಿಶ್ವವಿಡೀ ಕರೆಯುತ್ತಲೇ ಇರುತ್ತಾರೆ. ಇಲ್ಲಿನ ದೃಶ್ಯ ಪ್ಯಾರಿಸ್‌ನ ಆರ್ಟ್‌ ಮ್ಯೂಸಿಯಂ ಒಂದರಲ್ಲಿ ಪ್ರದರ್ಶನಗೊಂಡದ್ದು.

ಪ್ರತಿಭೆಗೊಂದು ಸದವಕಾಶ :  ಶ್ರೀಮಂತ ಮನೆತನದ ಹುಡುಗಿಯರಿಗೆ ಇಂದಿಗೂ ಸ್ವಿಟ್ಜರ್ಲೆಂಡ್‌ನ ಫಿನಿಶಿಂಗ್‌ ಸ್ಕೂಲಿಗೆ ಕಳಿಸುವ ರೂಢಿಯಿದೆ. ಇಲ್ಲಿ ಅಡುಗೆ ತಯಾರಿ, ಬಡಿಸುವಿಕೆ, ಗೃಹಾಲಂಕಾರ, ಡ್ರೆಸ್ಸಿಂಗ್‌ ಸೆನ್ಸ್, ಶಿಷ್ಟಾಚಾರ ಇತ್ಯಾದಿ ಅನೇಕ ಉತ್ತಮ ಅಂಶಗಳನ್ನು ಕಲಿಸಲಾಗುತ್ತದೆ. ಆಗ ಆಕೆ ಮುಂದೆ ಹೈ ಸೊಸೈಟಿಯ ಕುಲೀನ ಗೃಹಿಣಿ ಎನಿಸುತ್ತಾಳೆ. ಇವರನ್ನು ನೋಡಿದರೆ ಖುಷಿಯಾಗುವುದು ನಿಜ, ಆದರೆ ಇಂಥವರ ಪತಿಯರು ಇವರನ್ನು ಸಂಭಾಳಿಸುವುದರಲ್ಲಿ ಸುಸ್ತೋ ಸುಸ್ತು!

ಫ್ಯಾಷನ್‌ ಮಸ್ತೋ ಮಾಡೆಲ್ ಮಸ್ತೋ? :  ಈ ವಿದೇಶೀ ಮಾಡೆಲ್‌ ಡಾಲ್‌ ಕೆಮರಾನ್‌ ನಮ್ಮ ಸೀರೆ ಉಟ್ಟಿದ್ದಾಳೆ ಎಂದು ಏಮಾರದಿರಿ. ಇದು 100% ಸ್ಟಿಚ್ಡ್ ಡ್ರೆಸ್‌, ಈ ನಟಿ ತನ್ನ ಹಾಲಿವುಡ್‌ ಚಿತ್ರದ ಒಂದು ಪ್ರೀಮಿಯರ್‌ಗಾಗಿ ಹೀಗೆ ಸಿದ್ಧಳಾಗಿದ್ದಾಳೆ.

ಆದರ್ಶಪ್ರಾಯ ಅನುಕರಣೆ : ಪಾಪ್‌ಸ್ಟಾರ್‌ ಮೆಡೋನಾ ಆಫ್ರಿಕಾದ ಮಾಳವಿ ದೇಶದಿಂದ ನಾಲ್ವರು ಮಕ್ಕಳನ್ನು ದತ್ತು ಪಡೆದಿದ್ದಾಳೆ.  ಕರಿಯ ಬಿಳಿಯರ ಭೇದಭಾವ ತೊಡೆದುಹಾಕಿ ತನ್ನ ಮಕ್ಕಳಂತೆಯೇ ಅವರನ್ನು ಸಾಕುತ್ತಿದ್ದಾಳೆ. ಜೊತೆಗೆ ಅಲ್ಲಿನ ಒಂದು ಮಕ್ಕಳ ಆಸ್ಪತ್ರೆಗೆ ಭಾರಿ ದೊಡ್ಡ ಮೊತ್ತದ ಹಣ ಸಹಾಯ ಮಾಡಿದ್ದಾಳೆ. ವರ್ಣಭೇದವೇ ಜೀವಾಳವಾಗಿರುವ ಇಂದಿನ ದಿನಗಳಲ್ಲಿ ಮೆಡೋನಾರಂಥ ಮಹನೀಯರು ಕತ್ತಲಲ್ಲಿ ದಾರಿದೀವಿಗೆಯಾಗಿ ನಿಂತಿದ್ದಾರೆ!

ಇವರಾರೂ ದಾನವರಲ್ಲ : ಸ್ಪೇನಿನ ಪ್ಯಾಪಿಲೋನಿಯಾದಲ್ಲಿ ವಿಶಾಲವಾದ ಕಾಗದದ ಪುತ್ಥಳಿಗಳನ್ನು ಇರಿಸಿಕೊಂಡು ಜೈಗ್ಯಾಂಟಿಕ್‌ `ಜಿಜಾಂಟೆ’ ಪೆರೇಡ್‌ ಹೊರಡುತ್ತದೆ. ಇದರಲ್ಲಿ ಪುತ್ಥಳಿಗಳ ಎದುರು ಮಾಮೂಲಿ ಜನ ಕುಳ್ಳರಂತೆ ಕಾಣಿಸುತ್ತಾರೆ!

ಟೆನ್ಶನ್‌, ಕೋಪ ಹೆಚ್ಚಿದರೆ ಕಂಡದ್ದನ್ನು ಮುರಿಯಿರಿ : ಸೋಫ್ರಾಲಜಿ ಎಂಥ ಸಬ್ಜೆಕ್ಟ್ ಅಂತೀರಾ? ನಿಮಗೆ ಹೆಚ್ಚಾದ ಟೆನ್ಶನ್‌, ಕೋಪಗಳನ್ನು ತಗ್ಗಿಸಲು ಕಂಡದ್ದನ್ನು ಮುರಿಯುವಂತೆ ಪ್ರೇರೇಪಿಸುತ್ತದೆ. ಇದನ್ನು ಅಚ್ಚುಕಟ್ಟಾಗಿ ಕ್ಲಾಸಿನಲ್ಲಿ ಕಲಿಸುತ್ತಾರೆ. ಹೆಂಡತಿಯರಿಗೆ ಕೋಪ ಹೆಚ್ಚಾಗಿ ಗಂಡಂದಿರ ತಲೆ ಬಡಿದರೆ…..? ಭಯಪಡಬೇಡಿ ಅದು `ಕ್ರುಯಾಲಿಟಿ ಟು ಅನಿಮಲ್ಸ್’ನಡಿ ಬರುತ್ತದೆಯೇ ಹೊರತು ಈ ಸಬ್ಜೆಕ್ಟ್ಸ್ ನಲ್ಲಲ್ಲ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ