ಸ್ಪರ್ಮ್ ಡೊನೇಶನ್‌ಗೆ ಸಂಬಂಧಪಟ್ಟ ಈ ಮಾಹಿತಿ ಮಕ್ಕಳಿಲ್ಲದೆ ಕೊರಗುತ್ತಿರುವ ದಂಪತಿಗಳಿಗೆ ವರದಾನದಂತಿದೆ. ನಕಲಿ ವೈದ್ಯರು ಹಾಗೂ ಢೋಂಗಿ ಬಾಬಾಗಳ ಹತ್ತಿರ ಹೋಗಿ ಹಣ, ನೆಮ್ಮದಿ ಕಳೆದುಕೊಳ್ಳುತ್ತಿರುವವರಿಗೆ ನಿಜಕ್ಕೂ ಇದು ಒಳ್ಳೆಯ ಸುದ್ದಿಯೇ ಹೌದು.....!

ಸ್ಪರ್ಮ್ ಡೋನರ್‌ಗಳ ಹೆಚ್ಚುತ್ತಿರುವ ಟ್ರೆಂಡ್‌ನಿಂದಾಗಿ ನಕಲಿ ವೈದ್ಯರು ಹಾಗೂ ಢೋಂಗಿ ಬಾಬಾಗಳ ದಂಧೆಗೆ ಬಹುದೊಡ್ಡ ಆಘಾತ ಉಂಟಾಗಿದೆ. ಮಕ್ಕಳು ಆಗದೇ ಇದ್ದದ್ದರಿಂದ ಪುರುಷ ಹೆಸರಿನ ಮೇಲೆ ಕಳಂಕ, ಪುರುಷ ಶಕ್ತಿಯ ಕೊರತೆ ಹೀಗೆ ಏನೇನೋ ಅಪಪ್ರಚಾರ ಮಾಡಿ ರಸ್ತೆ ಬದಿಯ ನಕಲಿ ವೈದ್ಯರು ತಮ್ಮ ಜೇಬು ಭರ್ತಿ ಮಾಡಿಕೊಳ್ಳುತ್ತಿದ್ದರು. ಸ್ಪರ್ಮ್ ಡೋನರ್‌ಗಳಿಂದಾಗಿ ತಾಯಿ ಆಗಬೇಕೆನ್ನುವ ಕನಸನ್ನು ನನಸು ಮಾಡಿಕೊಂಡ ಬೆಂಗಳೂರಿನ ಮಹಿಳೆಯೊಬ್ಬಳು ಹೀಗೆ ಹೇಳುತ್ತಾಳೆ, ``ನಾನು ಹಾಗೂ ನನ್ನ ಪತಿ ಮಗು ಆಗಬೇಕೆಂದು ಅದೆಷ್ಟೊ ವೈದ್ಯರನ್ನು ಕಂಡಿದ್ದೆವು. ಆದರೆ ಯಾವುದೇ ಸಕಾರಾತ್ಮಕ ಫಲಿತಾಂಶ ಕಂಡು ಬಂದಿರಲಿಲ್ಲ. 4 ವರ್ಷಗಳಲ್ಲಿ  4 ಲಕ್ಷ ರೂ. ಖರ್ಚು ಮಾಡಿಯೂ ಯಾವುದೇ ಸಕಾರಾತ್ಮಕ ಫಲಿತಾಂಶ ಕಂಡುಬರಲಿಲ್ಲ. ಆದರೆ ಒಂದು ಫರ್ಟಿಲಿಟಿ ಸೆಂಟರ್‌ ಬಗ್ಗೆ ಒಬ್ಬರು ತಿಳಿಸಿದರು. ಅಲ್ಲಿ ಚಿಕಿತ್ಸೆ ಪಡೆದುಕೊಂಡ ಬಳಿಕ ನಮಗೆ ಮಗುವಾಯಿತು.''

ಹೆಚ್ಚಿದ ಬೇಡಿಕೆ

ಸ್ಪರ್ಮ್ ಡೋನರ್‌ಗಳ ಟ್ರೆಂಡ್‌ ಹೆಚ್ಚಿರುವುದರಿಂದ ಢೋಂಗಿ ಬಾಬಾಗಳ, ನಕಲಿ ವೈದ್ಯರ ತಂತ್ರಮಂತ್ರವಾದಿಗಳ ಅಂಗಡಿಗಳು ಮುಚ್ಚಲಾರಂಭಿಸಿವೆ. ಇತ್ತೀಚಿನ ವರ್ಷಗಳಲ್ಲಿ ವೈದ್ಯಕೀಯ ವಲಯದಿಂದ ಸ್ಪರ್ಮ್ ಡೋನರ್‌ಗಳಿಗೆ ಭಾರಿ ಪ್ರಮಾಣದಲ್ಲಿ ಬೇಡಿಕೆ ಹೆಚ್ಚಿದೆ. ಈಗ ಜನರು ಅತ್ಯಾಧುನಿಕ ತಂತ್ರಜ್ಞಾನದ ಮುಖಾಂತರ ಸ್ಪರ್ಮ್ ಡೋನರ್‌ಗಳ ಸಹಾಯ ಪಡೆದುಕೊಳ್ಳುತ್ತಿದ್ದಾರೆ. ಇದು ಡೋನರ್‌ಗಳಿಗೆ ಸಾಕಷ್ಟು ಹಣ ತಂದುಕೊಡುತ್ತಿದೆ. ಇನ್ನೊಂದೆಡೆ, ಮಕ್ಕಳಿಲ್ಲದ ಕುಟುಂಬಕ್ಕೆ ಮಗುವಿನ ನಗುವನ್ನು ತಂದುಕೊಡುವ ಕೆಲಸ ಮಾಡುತ್ತಿದ್ದಾರೆ. ಕೆಲವರು `ಸ್ಪರ್ಮ್ ಡೋನೇಶನ್‌'ನ್ನು ಅಸಹ್ಯದ ವ್ಯವಹಾರ ಎಂದು ಹೇಳುತ್ತಾರೆ. ಇನ್ನು ಕೆಲವರು ಇದನ್ನು `ವರ್ತಮಾನದ ಬೇಡಿಕೆ' ಎಂದು ಹೇಳುತ್ತಾರೆ.

ಪುರುಷರಲ್ಲಿ ಸಂತಾನೋತ್ಪತ್ತಿ ಸಾಮರ್ಥ್ಯ ಕಡಿಮೆಯಾಗುತ್ತಿರುವ ಪ್ರಕರಣಗಳ ನಡುವೆಯೇ ಸ್ಪರ್ಮ್ ಡೋನರ್‌, ಎಷ್ಟೋ ಮನೆಗಳಲ್ಲಿ ಪುರುಷರು ನಪುಂಸಕರಾಗಿರುವ ಕಹಿ ಸತ್ಯಕ್ಕೆ ಪರದೆ ಎಳೆಯುವ ಕೆಲಸದಲ್ಲೂ ಮಗ್ನರಾಗಿದ್ದಾರೆ. ಇದರಿಂದ ಎಷ್ಟೋ ಕುಟುಂಬಗಳಲ್ಲಿ ವಿವಾಹ ವಿಚ್ಛೇದನಗಳಾಗುವುದು ತಪ್ಪಿದೆ. ಅಷ್ಟೇ ಅಲ್ಲ, ಮುಗ್ಧ ದಂಪತಿಗಳನ್ನು ನಯವಂಚಕ ನಕಲಿ ವೈದ್ಯರುಗಳಿಂದ ಮೋಸ ಹೋಗುವುದನ್ನು ತಪ್ಪಿಸುತ್ತಿದ್ದಾರೆ.

ಇನ್‌ಫರ್ಟಿಲಿಟಿ ಕ್ಲಿನಿಕ್‌ಗಳು ಮತ್ತು ವೈದ್ಯರ ಮುಖಾಂತರ ನಡೆಯುವ ಸ್ಪರ್ಮ್ ಡೊನೇಶನ್‌ನ ಕೆಲಸದಲ್ಲಿ ಸಾವಿರಾರು ಯುವಕರು ಶಾಮೀಲಾಗಿದ್ದಾರೆ. ಅವರು ಅಧ್ಯಯನ ಅಥವಾ ಉದ್ಯೋಗ ಮಾಡುವುದರ ಜೊತೆ ಜೊತೆಗೆ ಸ್ಪರ್ಮ್ ಡೊನೇಟ್‌ ಮಾಡುವ ಕೆಲಸದಲ್ಲೂ ನಿರತರಾಗಿದ್ದಾರೆ. ಬೆಂಗಳೂರು, ಚೆನ್ನೈ, ದೆಹಲಿ, ಮುಂಬೈನಂತಹ ನಗರಗಳಲ್ಲಷ್ಟೇ ಅಲ್ಲ, ಚಿಕ್ಕಪುಟ್ಟ ನಗರಗಳಲ್ಲೂ ಈ ಚಟುವಟಿಕೆ ನಡೆಯುತ್ತಿದೆ. ಬೆಂಗಳೂರಿನ ಇನ್‌ಫರ್ಟಿಲಿಟಿ ಕೇಂದ್ರವೊಂದರ ವೈದ್ಯರ ಪ್ರಕಾರ, ಬೆಂಗಳೂರಿನಲ್ಲಿ 200-300ರ ಆಸುಪಾಸಿನಲ್ಲಿ ಸ್ಪರ್ಮ್ ಡೋನರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಅವರೆಲ್ಲರೂ ಬಂಜೆತನ ನಿವಾರಣಾ ಕೇಂದ್ರಗಳಲ್ಲಿ ತಮ್ಮ ಹೆಸರು ನೋಂದಾಯಿಸಿಕೊಂಡಿದ್ದಾರೆ. ಈ ಎಲ್ಲ ಕೇಂದ್ರಗಳಲ್ಲಿ ಸಾಕಷ್ಟು ಮಟ್ಟಿಗೆ ರಹಸ್ಯವನ್ನು ಕಾಪಾಡುತ್ತಾರೆ. ವೀರ್ಯ ಕೊಡುವವರು ಹಾಗೂ ಅದನ್ನು ಸ್ವೀಕರಿಸುವವರು ಪರಸ್ಪರರ ಬಗ್ಗೆ ತಿಳಿದಿರುವುದಿಲ್ಲ. ದಾನಿ ಹಾಗೂ ಅದನ್ನು ಸ್ವೀಕರಿಸುವವರ ಹೆಸರನ್ನು ಗೌಪ್ಯವಾಗಿಡಲಾಗುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ