ನವೆಂಬರ್‌-ಡಿಸೆಂಬರ್‌ ತಿಂಗಳಲ್ಲಿ ಈ ಸ್ಥಳಗಳಿಗೆ ಭೇಟಿ ಕೊಡಲು ಸೂಕ್ತ ಸಮಯವಾಗಿದೆ. ದೀಪಾವಳಿ ಹಬ್ಬ ಮುಗಿದ 15 ದಿನಕ್ಕೆ ಇಲ್ಲಿ `ದೇವ ದೀಪಾವಳಿ' ಆಚರಿಸಲಾಗುತ್ತದೆ. ಈ ಅವಧಿಯಲ್ಲಿ ಗಂಗಾ ತೀರದ ಘಾಟ್‌ಗಳನ್ನು ಸಿಂಗರಿಸಲಾಗುತ್ತದೆ. ಈ ಹಬ್ಬ ಪ್ರವಾಸಿಗರಿಗೆ ಅತ್ಯಂತ ಆಕರ್ಷಣೆಯ ಹಬ್ಬವಾಗಿದೆ. ಈಗ ಗಂಗಾನದಿಯಲ್ಲಿ ಎಲ್ಲಿ ನೋಡಿದರಲ್ಲಿ ದೀಪಗಳು ಝಗಮಗಿಸುತ್ತಿರುವುದು ಕಂಡುಬರುತ್ತದೆ.

ಹಬ್ಬದ ದಿನದ ರಾತ್ರಿ ಇಲ್ಲಿಗೆ ಸಾವಿರಾರು ಸಂಖ್ಯೆಯಲ್ಲಿ ಜನರು ಬರುತ್ತಿರುತ್ತಾರೆ. ಜನರು ನಾವೆಯಲ್ಲಿ ಕುಳಿತುಕೊಂಡು ಗಂಗಾ ದರ್ಶನ ಮಾಡುತ್ತ, ದೀಪದಾನ ಮಾಡುವಂತಹ ಅವಕಾಶವನ್ನು ಬಿಟ್ಟುಕೊಡುವುದಿಲ್ಲ. ಕೇವಲ ಗಂಗಾ ಘಾಟ್‌ಗಳಷ್ಟೇ ಅಲ್ಲ, ಅಕ್ಕಪಕ್ಕದ ಕಟ್ಟಡಗಳು ಕೂಡ ದೀಪಾಲಂಕಾರದಿಂದ ಗಮನ ಸೆಳೆಯುತ್ತವೆ. ಬನಾರಸಿ ರೇಷ್ಮೆ ಸೀರೆಗಳು ಹಾಗೂ ಕಾರ್ಪೆಟ್‌ಗಳಿಂದಾಗಿ ಈ ನಗರ ವಿಶ್ವಪ್ರಸಿದ್ಧಿ ಪಡೆದಿದೆ. ಇಲ್ಲಿನ ಘಾಟ್‌ಗಳ ಮೇಲೆ ಮುಂಜಾನೆ ಸ್ವಲ್ಪ ಹೊತ್ತು ಕಾಲ ಕಳೆಯುವುದು ಮನಸ್ಸನ್ನು ಪ್ರಸನ್ನಗೊಳಿಸುವ ಪ್ರಕ್ರಿಯೆಯಾಗಿದೆ.

ಸಾರನಾಥ್

ವಾರಾಣಸಿಯಿಂದ ಕೇವಲ 10 ಕಿ.ಮೀ. ದೂರದಲ್ಲಿ ಈ ಸುಪ್ರಸಿದ್ಧ ತಾಣವಿದೆ. ಅದು ಬೌದ್ಧ ಧರ್ಮಿಗಳ ಪವಿತ್ರ ಸ್ಥಳ. ಬುದ್ಧ ಗಯಾದಲ್ಲಿ ಜ್ಞಾನೋದಯವಾದ ಬಳಿಕ ಬುದ್ಧ ತನ್ನ ಮೊದಲ ಉಪದೇಶವನ್ನು ಸಾರನಾಥದಲ್ಲಿ ನೀಡಿದ್ದ ಎಂದು ಹೇಳಲಾಗುತ್ತದೆ. ಈ ಸ್ಥಳವನ್ನು `ಮಹಾಧರ್ಮ ಚಕ್ರ ಪರಿವರ್ತನೆ' ಎಂಬ ಹೆಸರಿನಿಂದ ಕರೆಯಲಾಗುತ್ತದೆ. ಇಲ್ಲಿರುವ ಧರ್ಮೇಕ ಸ್ತೂಪಕ್ಕೆ ಅಪಾರ ಮಹತ್ವವಿದೆ.

ಚೌಖಂಡಿ ಸ್ತೂಪ

ಇಲ್ಲಿರುವುದು ಎಂತಹದೊಂದು ಮಹತ್ವದ ಸ್ಥಳವೆಂದರೆ ಬುದ್ಧ ಇಲ್ಲಿ ಪ್ರಥಮ ಬಾರಿಗೆ ಆಗಮಿಸಿದಾಗ ಐದು ಜನ ಶಿಷ್ಯರನ್ನು ಭೇಟಿಯಾಗಿದ್ದ. ಇಲ್ಲಿ ಧರ್ಮ ರಾಜಿಕಾ ಸ್ತೂಪ ಮತ್ತು ಮೂಲಗಂಧಿ ಕೂಟ ವಿಹಾರದಂತಹ ಪುರಾತತ್ವ ಮಹತ್ವದ ಸ್ಥಳ. ಸಾಮ್ರಾಟ್‌ ಅಶೋಕ ಕ್ರಿಸ್ತಪೂರ್ವ 273 ರಿಂದ 232ರ ಅವಧಿಯಲ್ಲಿ ಬೌದ್ಧ ಧರ್ಮದ ಸಂಕೇತದ ರೂಪದಲ್ಲಿ ವಿಶಾಲವಾದ ಸ್ತಂಭವನ್ನು ನಿರ್ಮಿಸಿದ್ದ. ಅದರ ಮೇಲಿರುವ ಸಿಂಹದ ಚಿಹ್ನೆಗಳು ರಾಷ್ಟ್ರೀಯ ಸಂಕೇತದ ರೂಪದಲ್ಲಿ ಮಾನ್ಯತೆ ಪಡೆದಿದೆ.

ವಿಂಧ್ಯಾಚಲ

ವಿಂಧ್ಯಪರ್ವತ  ಮಾಲೆಯ ನಡುವೆ ಮಿರ್ಜಾಪುರದ ಬಳಿ ಗಂಗಾ ತೀರದಲ್ಲಿ ಮತ್ತೊಂದು ತೀರ್ಥಸ್ಥಳವಿದೆ. ವಿಂಧ್ಯ ವಾಸಿನಿಯ ಶಕ್ತಿಪೀಠ ಪ್ರತಿವರ್ಷ ಲಕ್ಷಾಂತರ ಭಕ್ತರನ್ನು ಸೆಳೆಯುತ್ತದೆ. ಇದರ ಆಸುಪಾಸಿನಲ್ಲಿ ಅಷ್ಟಭುಜ ಮತ್ತು ಖೋಹ ಮಂದಿರದಂತಹ ಹಲವು ತೀರ್ಥಕ್ಷೇತ್ರಗಳಿವೆ. ಅಲ್ಲಿ ವರ್ಷವಿಡೀ ಭಕ್ತರು ಬರುತ್ತಲೇ ಇರುತ್ತಾರೆ. ಏಪ್ರಿಲ್‌ ಹಾಗೂ ನವೆಂಬರ್‌ನಲ್ಲಿ ಇಲ್ಲಿ ನಡೆಯುವ ಕಾರ್ಯಕ್ರಮಗಳು ನೋಡುವಂತಿರುತ್ತವೆ.

ಸೋನಭದ್ರ

ಇದೊಂದು ಪ್ರಾಚೀನ ಸ್ಥಳ. ಇಲ್ಲಿನ ಶಿವದ್ವಾರ ಮತ್ತು ರೇಣುಕೇಶ್ವರ ಮಂದಿರದ ಆಸುಪಾಸು ಮಹಾಭಾರತ ಕಾಲದ ಪ್ರತೀಕ  ಹಾಗೂ ಮೂರ್ತಿಗಳು ನೋಡಲು ಸಿಗುತ್ತವೆ. ವಿಜಯಗಡ ಮಹಲ್ ಈ ಭಾಗದ ರಾಜರ ಯಶೋಗಾಥೆಯನ್ನು ಸಾರುತ್ತದೆ. ಅಲ್ಲಿ ಪುರಾತತ್ವ, ಧಾರ್ಮಿಕ ಮತ್ತು ನಿಸರ್ಗಕ್ಕೆ ಸಂಬಂಧಪಟ್ಟ ಮಹತ್ವದ ಸಂಗತಿಗಳು ನೋಡಲು ಸಿಗುತ್ತವೆ. ಗುಹೆಯ ಗೋಡೆಗಳ ಮೇಲೆ ಕೆತ್ತಿದ ಮೂರ್ತಿಗಳು ಇಲ್ಲಿನ ಪ್ರಮುಖ ಆಕರ್ಷಣೆ. ನಿಸರ್ಗ ಪ್ರೇಮಿಗಳಿಗೆ ಖಲನಿಯಾ ಹಾಗೂ ಮುಕ್ತಾ ಪ್ರಪಾತ ಪ್ರಮುಖ ಸ್ಥಳಗಳಾಗಿವೆ. ಇಲ್ಲಿಗೆ ಸಮೀಪದಲ್ಲಿಯೇ ಕೈಮೂರ್‌ ಪ್ರಾಣಿ ಸಂಗ್ರಹಾಲಯ ಇದೆ. ಇಲ್ಲಿ ಅನೇಕ ಬಗೆಯ ಪ್ರಾಣಿಪಕ್ಷಿಗಳನ್ನು ನೋಡಬಹುದಾಗಿದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ