ಬಂತಿದೋ ಅಚ್ಛೇ ದಿನ್‌!

ಯಾರು ಹೊಸ ಫ್ಲಾಟುಗಳನ್ನು ಖರೀದಿಸಿ, ಇನ್ನೇನು ನಮಗೆ ಒಳ್ಳೆಯ ದಿನಗಳು ಬಂದೇಬಿಟ್ಟವು ಎಂದು ಸಂಭ್ರಮಿಸುತ್ತಿದ್ದಾರೋ, ತಮ್ಮ ಹೂಡಿಕೆಯ ಹಣ ಹೆಚ್ಚಲಿದೆ ಅದು ಎರಡು ನಾಲ್ಕು ಪಟ್ಟು ಹಣ ತಂದುಕೊಡಲಿದೆ ಎಂದು ಹಿಗ್ಗುತ್ತಿದ್ದರೆ, ಅದೆಲ್ಲ ಮರೆತುಬಿಡಿ! ನಮ್ಮ ದೇಶದಲ್ಲಿ ಮನೆಗಳ ಬೆಲೆ ದಿನೇದಿನೇ ಎಷ್ಟು ಕುಗ್ಗುತ್ತಿದೆ ಎಂದರೆ, ಎದುರೆದುರಿಗೆ ಬಾಯಿಮಾತಿನಲ್ಲಿ ಅದರ ಕುಗ್ಗುತ್ತಿರುವ ಬೆಲೆ ಗಮನಿಸಬಹುದು. ಇದು ಪ್ರಗತಿಯ ನೆಗೆಟಿವೆ‌ ಗ್ರೋಥ್‌ ಅಂದ್ರೆ ಪತನದ ಸಂಕೇತ ಎಂದೇ ಹೇಳಬಹುದು. ಯಾರಿಗೆ ಮನೆ ಇಲ್ಲವೋ ಅವರು ಮನೆ ಖರೀದಿಸುವಷ್ಟು ಹಣ ಹೊಂದಿಸುವ ಗೊಡವೆಗೇ ಹೋಗುತ್ತಿಲ್ಲ.

ಮನೆಗಳ ಸೆಕ್ಟರ್‌ ಸುಧಾರಿಸುವ ನೆಪದಲ್ಲಿ ರಿಯಲ್ ಎಸ್ಟೇಟ್‌ ಕಾನೂನು ಮತ್ತು ರೆಜಿಸ್ಚ್ರೇಷನ್‌ ಸಹ ಶುರುವಾಗಿದೆ. ಮತ್ತೊಂದೆಡೆ ನೋಟ್‌ ಬಂದ್‌ ಹಗರಣ ಇದ್ದೇ ಇದೆ. ಈ ಗೇಮ್ ನಲ್ಲಿ ಈಗ ಹಣ ಹೂಡುವವರೇ ಇಲ್ಲ, ಯಾರೂ ಹೂಡಿದ್ದಾರೋ ಅವರು ಕೆಟ್ಟರೆಂದೇ ಅರ್ಥ. ದೆಹಲಿಯ ಹತ್ತಿರದ ಕಾರ್ಯನಿರತ ಸಮೂಹ ಈಗಾಗಲೇ ದಿವಾಳಿ ಎದ್ದಿದೆ. ಆಮ್ರಪಾಲಿ ಗ್ರೂಪ್‌ ಸಹ ಮುಳುಗಿದೆ ಎಂದೇ ಅರ್ಥ.

ಬ್ಯಾಂಕುಗಳಂತೂ ಈ ಕ್ಷೇತ್ರಕ್ಕೆ ಸಾಲ ಕೊಡುವುದನ್ನೇ ನಿಲ್ಲಿಸಿಬಿಟ್ಟಿವೆ. ಯಾರಿಗೆ ಕೊಟ್ಟಿವೆಯೋ ಅವರಿಂದ ವಸೂಲಿಗೆ ಸತತ ದುಡಿಯುತ್ತಿವೆ. ಈ ಕ್ಷೇತ್ರದಲ್ಲಿ ಕನ್‌ಸ್ಟ್ರಕ್ಷನ್‌ ಸ್ಥಿತಿಯಲ್ಲಿರುವ ಫ್ಲಾಟುಗಳಿಗೆ ಲಕ್ಷಾಂತರ ಜನ ತಮ್ಮ ಜೀವಮಾನದ ಬಂಡವಾಳವನ್ನು ಹೂಡಿದ್ದಾರೆ. ಅವರೆಲ್ಲರೂ ಈಗ ಪ್ರಗತಿಯ ಹುಚ್ಚು ಹೊಳೆಯಲ್ಲಿ ಕೊಚ್ಚಿಹೋಗಲು ಬಯಸುತ್ತಿದ್ದಾರೆ, ಆದರೆ ಅವರ ಬಂಡವಾಳವೇ ಕೊಚ್ಚಿಹೋಗುತ್ತಿದೆ.

ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದ ನ್ಯಾಷನಲ್ ಬ್ಯಾಂಕಿಂಗ್‌ ಗ್ರೂಪ್‌ನ ಮ್ಯಾನೇಜಿಂಗ್‌ ಡೈರೆಕ್ಟರ್‌ ರಜನೀಶ್‌ ಕುಮಾರ್‌ ಮಾತನಾಡಿ, ಸಾಲ ಕೊಡುವ ಬ್ಯಾಂಕ್‌ ನಮ್ಮ ನಷ್ಟ ಭರಿಸುತ್ತದೆ. ಫ್ಲಾಟುಗಳಿಗೆ ಹಣ ಹೂಡುವ ಸಾಮಾನ್ಯ ನಾಗರಿಕರ ಹಣ ಸುರಕ್ಷಿತವಾಗಿರುತ್ತದೆ ಎಂಬುದು ಕೇವಲ ಭ್ರಮೆ, ನಷ್ಟ ಇಬ್ಬರಿಗೂ ಆಗುತ್ತದೆ, ಎಂದು ಸ್ಪಷ್ಟಪಡಿಸಿದರು.

ಅಸಲಿಗೆ ನೇರವಾಗಿ ಮನೆ ಕೊಂಡವರಿಗೇ ಹೆಚ್ಚು ನಷ್ಟ. ಇವರು ಯಾರದೋ ಮಾತು ಕೇಳಿಕೊಂಡು ಅಥವಾ ಜಾಹೀರಾತಿನ ಜಾಲಕ್ಕೆ ಸಿಲುಕಿ ಹೀಗೆ ಹಣ ಹೂಡಿರುತ್ತಾರೆ. ಸರ್ಕಾರದ ಹದಗೆಟ್ಟ ಆರ್ಥಿಕ ವ್ಯವಸ್ಥೆ ಹಾಗೂ ಅದರ ನೀತಿ ನಿಯಮಾವಳಿಗಳು ಹೀಗೆ ಅತಿ ದುರ್ಬಲಗೊಂಡು ತಮ್ಮ ಬುಡಕ್ಕೇ ಕಿಚ್ಚಿಡುತ್ತದೆ ಎಂದು ಈ ಮುಗ್ಧರಿಗೆ ತಿಳಿಯಬೇಕು ಹೇಗೆ? ರಿಯಲ್ ಎಸ್ಟೇಟ್‌ನ ಕುಸಿತದಿಂದಾಗಿ ಹೂಡಿಕೆದಾರರಿಗೆ ಈ ಗತಿ ಬಂದಿದೆ.

ಬಿಲ್ಡರ್‌ ಮಹಾಶಯರು ಬೇಕಾದಷ್ಟು ಲಾಭ ಗಿಟ್ಟಿಸಿಕೊಂಡಿರುವ ಸಾಧ್ಯತೆ ತಳ್ಳಿಹಾಕುವಂತಿಲ್ಲ. ಆದರೆ ಅದಕ್ಕಾಗಿ ಅವರು ತೆಗೆದುಕೊಂಡಿರುವ ರಿಸ್ಕ್ ಸಹ ಅಷ್ಟೇ ಭಾರಿ ಇದೆ. ಅಂಥವರು ಲಾಭ ಬಿಟ್ಟಾರೆಯೇ? ಹೀಗಾಗಿಯೇ ಎಲ್ಲಾ ಬ್ಯಾಂಕುಗಳೂ ಬಿಲ್ಡರ್ಸ್‌ಗೆ ತುಂಬಿ ತುಂಬಿ ಸಾಲ ನೀಡಿದವು, ಹಾಗೆಯೇ ಇಂಥ ಫ್ಲಾಟ್‌ ಗ್ರಾಹಕರಿಗೂ ಮಾಸಿಕ ವೇತನದ ಆಧಾರದಿಂದ ಕಂತುಗಳಲ್ಲಿ ಚುಕ್ತಾ ಮಾಡಲು ಧಾರಾಳ ಸಾಲ ನೀಡಿತು. ಈ ದಂಧೆಯಲ್ಲಿ ಮೂಲಭೂತ ಕೊರತೆ ಇದ್ದಿದ್ದರೆ, ಲಕ್ಷಾಂತರ ಜನ ಇಂದು ಫ್ಲಾಟುಗಳಲ್ಲಿ ಸುಖವಾಗಿ ವಾಸಿಸಲು ಸಾಧ್ಯವಿರುತ್ತಿರಲಿಲ್ಲ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ