ಛೇ! ಇದರಲ್ಲಿ ಪ್ರಾಣವಿದ್ದಿದ್ದರೆ...? :  ಸಿಂಗಾಪುರ್‌ನಲ್ಲಿ ತಡರಾತ್ರಿಯವರೆಗೂ ಮೋಜುಮಸ್ತಿ ಉಡಾಯಿಸಲು ಪ್ರೋತ್ಸಾಹ ನೀಡಲಾಗುತ್ತದೆ. ಆದರೆ ಬನಾರಸ್‌ ಹಿಂದೂ ಯೂನಿವರ್ಸಿಟಿ ಹೇಳುವುದೆಂದರೆ, 6 ಗಂಟೆಯ ನಂತರ ಕೇವಲ ಗಂಡಸರು ಮಾತ್ರ ಹೊರಗಿದ್ದು ಗೋರಕ್ಷಣೆಯ ಹೆಸರಲ್ಲಿ ದಂಗೆ ದಾಂಧಲೆ ಮಾಡಿಕೊಳ್ಳಿ, ಕಾನೂನು ಉಲ್ಲಂಘಿಸುವ ಹುಡುಗಿಯರನ್ನು ಆಕ್ರಮಿಸಿ. ಸಿಂಗಾಪುರ್‌ ನೈಟ್‌ ಫೆಸ್ಟಿವ್ ‌ನಲ್ಲಿ ಸ್ವಯಂ ತಾನೇ ಹೊಳೆಯುವ ಪ್ರತಿಮೆಗಳ ಪ್ರದರ್ಶನವನ್ನು ಒಬ್ಬ ಕಲಾವಿದ ಏರ್ಪಡಿಸಿದ. ಛೇ! ಈ ಪ್ರತಿಮೆಗಳಲ್ಲಿ ರಕ್ತಮಾಂಸ ತುಂಬಿದ್ದರೆ, ಪ್ರಾಯದ ಹುಡುಗಿಯರೆಷ್ಟೋ ಮಜಾ ಪಡೆಯುತ್ತಿದ್ದರು.

ಆಸೆಯೋ... ಹುಚ್ಚೋ...? : ಬಾಡಿ ಪೇಂಟಿಂಗ್‌ ಈಗ ಒಂದು ಚಿತ್ರವಿಚಿತ್ರದ ಆಸೆಯಾಗಿ ಎಲ್ಲರಲ್ಲೂ ಕಂಡುಬರುತ್ತಿದೆ. ಯಾರು ದಿಲ್‌‌ದಾರ್‌, ಬಿಂದಾಸ್‌ಗಳೋ ಅವರು ತಮ್ಮ ಇಡೀ ದೇಹವನ್ನು ಕಲಾವಿದರ ಎದುರು ಬ್ರಶ್ಶಿನಿಂದ ಬಳಿಯಿರೆಂದು ಬಿಚ್ಚಿಡುತ್ತಾರೆ. ಈ ತರಹ ಪೇಂಟ್‌ಗೊಂಡ ತಮ್ಮ ದೇಹವನ್ನು ಸಾರ್ವಜನಿಕವಾಗಿ ಪ್ರದರ್ಶಿಸುತ್ತಾರೆ. ಕಂದಾಚಾರಿಗಳೋ ಇದನ್ನು ಕಟುವಾಗಿ ವಿರೋಧಿಸುತ್ತಾರೆ. ಆದರೆ ಮಾಡುವುದೇನು? ಏಕೆಂದರೆ ಈ ಸ್ವಾತಂತ್ರ್ಯದ ಭಾವನೆ ಸ್ವೈರತೆಯಾಗಿ ಬೆಳೆದು ನಿಂತು ಏನೇ ಆದರೂ ಬಿಟ್ಟುಹೋಗುವುದಿಲ್ಲ.

ಇಂಥ ಧೈರ್ಯ ಎಲ್ಲರಿಗುಂಟೇ? :  ಅಮೆರಿಕಾದ ಕೊಲೆರೆಡೋ ರಾಜ್ಯದಲ್ಲಿ ಒಂದು `ಗೋ ಟಾಪ್ಸ್ ಪೆರೇಡ್‌' ನಡೆಯುತ್ತದೆ. ಇದರಲ್ಲಿ ಗಂಡಸರು, ಹೆಂಗಸರು ಮೇಲುವಸ್ತ್ರ ಇಲ್ಲದೆ ಸಂಚರಿಸುತ್ತಾರೆ, ಈ ಹಕ್ಕು ಬೇಕೆಂದು ಹೆಂಗಸರು ಒತ್ತಾಯಿಸುತ್ತಾರೆ. ಪ್ರಕೃತಿ ನಮ್ಮನ್ನು ನಿರ್ಮಿಸಿರುವಂತೆ ನಾವಿರಬೇಕು, ಅದನ್ನು ಅಡಗಿಸಿಡುವ ಅಗತ್ಯವೇನು ಎನ್ನುತ್ತಾರೆ. ಯಾರಿಗೆ ಇದರಲ್ಲಿ ಆನಂದವೆನಿಸುತ್ತದೋ ಅಂಥವರು ಪ್ರತಿ ವರ್ಷ ಡ್ಯಾನ್ವರ್‌ ಎಂಬಲ್ಲಿ ನಡೆಯುವ ಈ ಪೆರೇಡ್‌ನಲ್ಲಿ ಭಾಗವಹಿಸಬಹುದು ಯಾ ವೀಕ್ಷಿಸಬಹುದು. ಅಲ್ಲಿನ ಕಲಾವಿದೆಯೊಬ್ಬಳ ಕೈಚಳಕ ನೋಡಿ!

ಮಾತನಾಡುವ ಕಲೆ : ಸ್ಟ್ರೀಟ್‌ ಆರ್ಟ್‌ ವಿಶ್ವದೆಲ್ಲೆಡೆ ನಗರಗಳ ಕೊಳಕು ಗೋಡೆಗಳನ್ನು ಜೀವಂತಗೊಳಿಸುತ್ತಿವೆ. ಸಾವಿರಾರು ಕಲಾವಿದರು ಗೋಡೆಗಳನ್ನೇ ಕ್ಯಾನ್‌ವಾಸ್‌ ಆಗಿಸಿಕೊಂಡು ನಗರಗಳನ್ನು ಸಹನೀಯವಾಗಿಸುತ್ತಿದ್ದಾರೆ. ಸುಂದರ ಭವನಗಳ ನಗರ ನ್ಯೂಯಾರ್ಕ್‌ನಲ್ಲೂ  ಇಂಥ ಗೋಡೆಗಳ ಮೇಲೆ ಕಲಾವಿದರು ತಮ್ಮ ಕೈಚಳಕ ತೋರುತ್ತಿದ್ದಾರೆ. ಇಲ್ಲಿದೆ ಅಂಥ ಒಂದು ನಮೂನೆ.

ಬರಲಿ..... ಚಪ್ಪಾಳೆ! : ಇಸ್ಲಾಮಿಕ್‌ ಕಾನೂನಿನಲ್ಲಿ ಇರುವ ಒಂದು ವ್ಯವಸ್ಥೆ ಎಂದರೆ, ಕೆಡಿಸಿದವನೇ ಆ ಹುಡುಗಿಯನ್ನು ಮದುವೆಯಾದರೆ ಅವನ ತಪ್ಪಿಗೆ ಶಿಕ್ಷೆ ಇಲ್ಲವಂತೆ. ಸಮಾನತೆಯ ಹಕ್ಕು ಬೇಡುವ ಈ ಕಾನೂನನ್ನು, ಅಪರಾಧವನ್ನು ಮನ್ನಿಸುವ ಒಂದು ಜಬರ್ದಸ್ತು ವಿಧಾನ ಎನ್ನುತ್ತಾರೆ, ಜೊತೆಗೆ ಹೆಣ್ಣನ್ನು ಪ್ರಾಪರ್ಟಿ ಎಂದು ತಿಳಿಯಲಾಗಿದೆ. ಆದರೆ ಲೆಬನಾನ್‌ನ ಒಂದು ಕೋರ್ಟ್‌ ಈ ಕಾನೂನನ್ನು ಬದಲಾಯಿಸಿದಾಗ, ಎಲ್ಲರೂ ಮುಕ್ತವಾಗಿ ಪ್ರಶಂಸಿಸಿದರು. ಈಗ ಅಲ್ಲಿ ಆ ಕೇಡಿಗ ಮದುವೆಯಾಗುತ್ತೇನೆ ಎಂದು ತಪ್ಪಿಸಿಕೊಳ್ಳುವಂತಿಲ್ಲ, ಅದರಲ್ಲೂ ಅವಳು ತಿರಸ್ಕರಿಸಿದಾಗ! ಇದು ನಿಜಕ್ಕೂ ಖುಷಿಯ ವಿಚಾರ. ಒಬ್ಬ ಆಂದೋಲನಕಾರಿ ಬೈರೂತ್‌ನಲ್ಲಿ ಇದರ ಪರ ತೀವ್ರ ಹೋರಾಡುತ್ತಿದ್ದಾರೆ.

ಒಂದು ದೊಡ್ಡ ಸಮಸ್ಯೆ ಆಗಿರುವ ಹುಡುಗಿಯರ ಟ್ರಾಫಿಕಿಂಗ್‌ :  ನಮ್ಮ ದೇಶದಲ್ಲಂತೂ ಸಾವಿರಾರು ಹುಡುಗಿಯರ ಕಿಡ್ನಾಪ್‌ ಆಗುತ್ತಲೇ ಇರುತ್ತದೆ, ಇದಕ್ಕೆ ಫ್ರಾನ್ಸ್ ಸಹ ಹೊರತಲ್ಲ. ಅಲ್ಲಿನ ಒಂದು ವಿವಾಹ ಮಂಟಪದಿಂದ ದಿಢೀರ್‌ ಎಂದು 9 ವರ್ಷದ ಒಬ್ಬ ಹುಡುಗಿ ಕಣ್ಮರೆ ಆದಳು. ಪೊಲೀಸ್‌ ನಗರವಿಡೀ ಅವಳ ಪೋಸ್ಟರ್‌ ಅಂಟಿಸಿದರೂ ಎಲ್ಲೂ ಏನೂ ಸುಳಿವು ದೊರೆಯಲಿಲ್ಲ. ಭಾರತಕ್ಕಷ್ಟೇ ಈ ಪಿಡುಗು ಸೀಮಿತವಲ್ಲ ಎಂಬುದು ನಿಜ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ