`ಲಂಚ್‌ಬಾಕ್ಸ್' ಹೀರೋಯಿನ್‌ ರೀತಿಯಲ್ಲಿಯೇ ನನ್ನ ಜೀವನದಲ್ಲೂ ಯಾರಾದರೂ ಹುಡುಗಿ ಪ್ರವೇಶಿಸಬಾರದೆ ಎಂದು ನೀವು ಯೋಚಿಸುತ್ತಿರಬಹುದು. ಆದರೆ ಆ ರೀತಿ ಯೋಚಿಸುವುದನ್ನು ಬಿಟ್ಟು ನೀವು ಜಾಗ್ರತೆಯಿಂದಿರುವುದು ಒಳ್ಳೆಯದು. ಏಕೆಂದರೆ ವಾಸ್ತವ ಜೀವನದಲ್ಲಿ ಆ ರೀತಿಯ ಘಟನೆಗಳು ಯಾವುದಾದರೊಂದು ಮೋಸ ಅಥವಾ ಲೂಟಿಗೆ ಕಾರಣವಾಗಬಹುದು.

ಅಮೆರಿಕ ಮೂಲದ ವಕೀಲ ಹಾಗೂ ಶಸ್ತ್ರಾಸ್ತ್ರ ವ್ಯಾಪಾರಿ ಅಭಿಷೇಕ್‌ ವರ್ಮ, ವರುಣ್‌ ಗಾಂಧಿಯವರ ವಿರುದ್ಧ ಆರೋಪ ಮಾಡುತ್ತ ಹನಿ ಟ್ರ್ಯಾಪ್‌ಗೆ ಬಲಿಬಿದ್ದು ಕ್ಲಾಸಿಫೈಡ್‌ ಡಿಫೆನ್ಸ್ ಇನ್‌ಫರ್ಮೇಶನ್‌ ಲೀಕ್‌ ಮಾಡಿದ್ದಾರೆಂದು ಹೇಳಿದರು. ಇದಕ್ಕೆ ಪುರಾವೆ ಎಂಬಂತೆ ಅವರು ಕೆಲವು ಚಿತ್ರಗಳನ್ನು ಹಾಕಿದ್ದರು. ಆ ಬಳಿಕ ವರುಣ್‌ ಗಾಂಧಿ ಈ ಆರೋಪವನ್ನು ಅಪ್ಪಟ ಸುಳ್ಳು ಎಂದು ಹೇಳಿ ತಳ್ಳಿ ಹಾಕಿದರು.

ಇಂತಹದೇ ಒಂದು ಘಟನೆ ಮೀರತ್‌ನ ಒಬ್ಬ ವ್ಯಾಪಾರಿ ಮನೋಜ್‌ ಗುಪ್ತಾ ಜೀವನದಲ್ಲೂ ಘಟಿಸಿತು. ವೃತ್ತಿಯಲ್ಲಿ ಪ್ರಾಪರ್ಟಿ ಡೀಲರ್‌ ಆಗಿರುವವರಿಗೆ ಒಂದು ಮಿಸ್ಡ್ ಕಾಲ್ ಬರುತ್ತೆ. ಆ ಮಿಸ್ಡ್ ಕಾಲ್ ಬಂದದ್ದು ಮುಗ್ಧೆಯಂತೆ ಕಂಡುಬರುವ ಮಮತಾಳಿಂದ. ಅವಳು ಗುರುಗಾಂವ್ ‌ನ ಒಂದು ಸ್ಪಾನಲ್ಲಿ ಕೆಲಸ ಮಾಡುತ್ತಿದ್ದಳು. ಅವಳ ಮನೆಯ ಪರಿಸ್ಥಿತಿ ಅಷ್ಟಕಷ್ಟೆ. ಮಿಸ್ಡ್ ಕಾಲ್‌‌ನಿಂದ ಮಾತುಕತೆಗಳು ಶುರುವಾದವು. ಅವರ ಮಾತುಕತೆ ಬಹುಬೇಗ ಸ್ನೇಹದಲ್ಲಿ ಪರಿವರ್ತನೆಗೊಂಡಿತು.

ಮಮತಾಳ ಸೌಂದರ್ಯ ಮನೋಜ್‌ ಗುಪ್ತಾರನ್ನು ಡೆಹರಾಡೂನಿನ ಫಾರ್ಮ್ ಹೌಸಿನ ತನಕ ಬರುವಂತೆ ಮಾಡಿತು. ಅಲ್ಲಿ ರಾತ್ರಿ ಹೊತ್ತು ಮಮತಾ, ಮನೋಜ್‌ ಗುಪ್ತಾರಿಗೆ ಪ್ರಜ್ಞೆ ತಪ್ಪುವ ಇಂಜೆಕ್ಷನ್‌ ಕೊಟ್ಟಳು. ಬಳಿಕ ಅವಳ ಗ್ಯಾಂಗ್‌ ನವರು ಅವರನ್ನು ಅಪಹರಣ ಮಾಡಿದರು. ಬಳಿಕ ಅವರ ಮನೆಯವರಿಂದ 1 ಕೋಟಿ ರೂ.ಗೆ ಬೇಡಿಕೆ ಸಲ್ಲಿಸಿದರು. ಬಳಿಕ ಅವರ ಬೇಡಿಕೆ 20 ಲಕ್ಷ ರೂ.ಗೆ ಇಳಿಯಿತು. ಈ ಮಧ್ಯೆ ಪೊಲೀಸರು ದಾಳಿ ಮಾಡಿ ಮಮತಾ ಹಾಗೂ ಅವಳ ಇಬ್ಬರು ಸಹಚರರಾದ ವಿಕಾಸ್‌ ಕುಮಾರ್‌ ಮತ್ತು ಅಂಬುಜ್‌ ತ್ಯಾಗಿಯರನ್ನು ಬಂಧಿಸಿದರು. ಅದೇ ರೀತಿಯ ಘಟನೆಗಳು ದೆಹಲಿಯ ಅನೇಕ ವ್ಯಾಪಾರಿಗಳ ಜೊತೆಗೂ ಘಟಿಸಿವೆ.

ಹೀಗೊಂದು ಘಟನೆ ಪ್ರಾಪರ್ಟಿ ಡೀಲರ್‌ ಮನೋಜ್‌ಗೆ ಪ್ರಾಪರ್ಟಿ ಮಾರಾಟ ಹಾಗೂ ಕೊಳ್ಳುವ ಸಲುವಾಗಿ ಅನೇಕ ಜನರ ಫೋನ್‌ ಕರೆಗಳು ಬರುತ್ತಲೇ ಇರುತ್ತವೆ. ಅದೊಂದು ದಿನ ಮಹಿಳೆಯೊಬ್ಬಳ ಕರೆ ಬಂತು. ತನ್ನ ಪ್ರಾಪರ್ಟಿ ಮಾರಾಟ ಮಾಡುವ ಕುರಿತಂತೆ ಅವಳು ಮನೋಜ್‌ಗೆ ಕರೆ ಮಾಡಿದ್ದಳು. ಆದಷ್ಟು ಬೇಗ ಬೆಲೆ ಕಡಿಮೆಯಾದರೂ ಸರಿ, ತನ್ನ ಪಾಪರ್ಟಿ ಮಾರಿ ಬೇರೆ ಊರಿಗೆ ಹೋಗಬೇಕಾಗಿದೆ ಎಂದು ಬಣ್ಣದ ಮಾತುಗಳಿಂದ ಮನೋಜ್‌ಗೆ ಹೇಳಿದಳು. ಒಂದು ಒಳ್ಳೆಯ ಬೆಲೆಯಲ್ಲಿ ಆ ಆಸ್ತಿ ಖರೀದಿಸಿದರೆ ಸಾಕಷ್ಟು ಲಾಭ ಮಾಡಿಕೊಳ್ಳಬಹುದೆಂದು ಯೋಚಿಸಿ ಮನೋಜ್‌ ಅವಳು ಹೇಳಿದ ವಿಳಾಸ ಹುಡುಕಿಕೊಂಡು ಹೋಗುತ್ತಾನೆ.

ಮುಂದೆ ಏನಾಗುತ್ತದೆಂಬ ಕಲ್ಪನೆ ಆ ವ್ಯಾಪಾರಿಗೆ ಮೀರಿದ್ದು, ಫ್ಲ್ಯಾಟ್‌ ತೋರಿಸುವ ನೆಪದಲ್ಲಿ  ಮಹಿಳೆ ಆ ಡೀಲರ್‌ಗೆ ತೀರಾ ನಿಕಟವಾಗುತ್ತಾಳೆ. ಅಷ್ಟರಲ್ಲಿಯೇ ಅಲ್ಲಿಗೆ ಪೊಲೀಸರು ಪ್ರತ್ಯಕ್ಷವಾಗುತ್ತಾರೆ. ಮಹಿಳೆಯ ಜೊತೆಗೆ ಅಸಭ್ಯತನ ಹಾಗೂ ಬಲಾತ್ಕಾರದ ಆರೋಪ ಹೊರಿಸಿ ಅವನನ್ನು ಬಂಧಿಸಲು ಪ್ರಯತ್ನಿಸುತ್ತಾರೆ. ಆ ಡೀಲರ್‌ ತನ್ನನ್ನು ಕಾಪಾಡುವಂತೆ ಗೋಗರೆಯುತ್ತಾನೆ. ಬಂಧನದಿಂದ ರಕ್ಷಿಸಿಕೊಳ್ಳಲು ಅವನಿಗೆ ಒಂದು ಅವಕಾಶ ಕೊಡಲಾಗುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ