ಕಾನೂನು ಮಾಡಿದರಷ್ಟೇ ಸಾಲದು

ಯಾವುದಾದರೂ ಹುಡುಗಿಗೆ ಒಬ್ಬ ಹುಡುಗ ತನ್ನನ್ನು ಸತತವಾಗಿ ಹಿಂಬಾಲಿಸುತ್ತಿದ್ದಾನೆಂದು ಗೊತ್ತಾದರೆ ಆಕೆಗೆ ವಿಪರೀತ ಭಯ ಆವರಿಸುತ್ತದೆ. ಮೊದ ಮೊದಲು ಅದು ಒಂದು ರೀತಿ ಸುಯೋಗ ಎನಿಸುತ್ತಿತ್ತು. ಆದರೆ ಹಿಂಬಾಲಿಸುವ ವ್ಯಕ್ತಿ ಗಂಟೆಗಟ್ಟಲೆ ರಸ್ತೆಯಲ್ಲಿ ಕಾಯುತ್ತಾ ನಿಂತಿದ್ದರೆ, ಮನೆಯೆದುರು ಟೆಂಟ್‌ ಹಾಕಿದ್ದರೆ, ಆಕೆಗೆ ಭಯ ಆವರಿಸುವುದು ಸಹಜವೇ. ಇದರಿಂದ ಅವಳಿಗೆ ಒಂದೊಂದು ಕ್ಷಣ ಕೆಂಡದ ಮೇಲೆ ಕೂತಂತೆ ಭಾಸವಾಗುತ್ತದೆ.

ಈಗ ಸರ್ಕಾರ ಒಂದು ಹೊಸ ಕಾನೂನನ್ನು ರೂಪಿಸಿದ್ದು, ಅದರನ್ವಯ ಹಿಂಬಾಲಿಸುವುದನ್ನು ಕೂಡ ಗಂಭೀರ ಆರೋಪದ ಶ್ರೇಣಿಯಲ್ಲಿ ಸೇರಿಸಲಾಗಿದೆ. ಮೊದಲು ಹಿಂಬಾಲಿಸುವಿಕೆಯನ್ನು ಯಾವುದೇ ಅಪಾಯ ಉಂಟು ಮಾಡಿರುವುದು, ಯಾವುದೇ ಅಪರಾಧ ಆಗಿರಲಿಲ್ಲ. ಆದರೆ 2013ರಲ್ಲಿ ರೂಪುಗೊಂಡ ಭಾರತೀಯ ದಂಡ ಸಂಹಿತೆಯ 354ಡಿಯ ಪ್ರಕಾರ ಹಿಂಬಾಲಿಸುವ ವ್ಯಕ್ತಿಗೆ 3 ವರ್ಷ ಶಿಕ್ಷೆ ಆಗಬಹುದು. ಆ ವ್ಯಕ್ತಿ ಆಕೆಗೆ ಯಾವುದೇ ತೊಂದರೆ ಅಪಾಯ ಮಾಡದಿದ್ದರೂ ಸಹ ಈ ಕಾನೂನು ಅನ್ವಯಿಸುತ್ತದೆ.

ಕಾನೂನು ಮಾಡುವುದು ಒಂದು ಸಂಗತಿ. ಅದನ್ನು ಅನ್ವಯಿಸುವುದು ಇನ್ನೊಂದು ಸಂಗತಿ. ಸಾಮಾನ್ಯವಾಗಿ ಒಬ್ಬ ವ್ಯಕ್ತಿ ಹುಡುಗಿಯನ್ನು ಹಿಂಬಾಲಿಸುವುದರಿಂದ ಆಕೆಯ ಕುಟುಂಬಸ್ಥರು ಅದೆಷ್ಟು ಹೆದರುತ್ತಾರೆಂದರೆ, ಪೊಲೀಸ್‌ ಠಾಣೆಗೆ ಹೋಗಲು ಕೂಡ ಧೈರ್ಯ ತೋರಿಸುವುದಿಲ್ಲ. ಯಾವಾಗಾದರೊಮ್ಮೆ ಹಿಂಬಾಲಿಸುವವರು ಒಂದೆರಡು ತಿಂಗಳಿನಲ್ಲಿಯೇ ಅವರು ತಮ್ಮ ದಾರಿ ಬದಲಿಸಿಕೊಳ್ಳುತ್ತಾರೆ. ಯಾರು ಹಿಂಬಾಲಿಸುವುದನ್ನೇ ಚಟವಾಗಿ ಮಾಡಿಕೊಂಡಿರುತ್ತಾರೋ, ಅವರು ತಮ್ಮದೇ ಆದ ಗುಂಪು ಕಟ್ಟಿಕೊಂಡಿರುತ್ತಾರೆ. ಅವರನ್ನು ನಿರ್ವಹಿಸುವುದು ಕಷ್ಟ. ಪೊಲೀಸರಿಗೆ ದೂರು ಕೊಟ್ಟರೆ ಅವರು ಆರಂಭದಲ್ಲಿ ಪೊಲೀಸ್‌ ಕಾನೂನಿನ ಹೊರತಾಗಿ ವಿಶೇಷ ಗಮನವನ್ನೇನೂ ಕೊಡುವುದಿಲ್ಲ. ಒಂದುವೇಳೆ ಪೊಲೀಸರು ಹಿಂಬಾಲಿಸುವ ವ್ಯಕ್ತಿಯನ್ನು ಬಂಧಿಸಿ ಎಚ್ಚರಿಕೆ ಕೊಟ್ಟರೂ ಯಾವುದೇ ಪ್ರಯೋಜನ ಆಗದು. ಇಂತಹದರಲ್ಲಿ ಆ ವ್ಯಕ್ತಿ ತನ್ನ ಜಾಗ ಬದಲಿಸುತ್ತಾನೆ. ಮನೆ ಇರುವ ಜಾಗದ ಬದಲು ಆಫೀಸು, ಮಾರುಕಟ್ಟೆ, ಸಂಬಂಧಿಕರ ಮನೆ ಇಂತಹ ಕಡೆ ಪ್ರತ್ಯಕ್ಷನಾಗುತ್ತಾನೆ. ಹಿಂಬಾಲಿಸುವ ದುರುಳ ವ್ಯಕ್ತಿಗೆ ಅನೇಕ ಸ್ನೇಹಿತರು ಇರುತ್ತಾರೆ. ಏಕೆಂದರೆ ಯಾವ ವ್ಯಕ್ತಿಗೆ ಹಿಂಬಾಲಿಸಲು ಸಾಕಷ್ಟು ಸಮಯ ಇರುತ್ತದೋ ಆ ವ್ಯಕ್ತಿಯ ಬಳಿ ಸಾಕಷ್ಟು ಹಣ ಇರುತ್ತದೆ. ಅಷ್ಟೇ ಅಲ್ಲ, ಗಂಟೆಗಟ್ಟಲೆ ಬಿಸಿಲು, ಮಳೆ, ಚಳಿಯನ್ನು ಸಹಿಸಿಕೊಳ್ಳುವ ಅದ್ಭುತ ದೈಹಿಕ ಶಕ್ತಿಯೂ ಇರುತ್ತದೆ. ಅವರು ಅಪರಾಧ ಎಸುಗುವುದರಲ್ಲಿ ನಿಸ್ಸೀಮರಾಗಿರುತ್ತಾರೆ. ಅವರು ಇನ್ನೊಬ್ಬರನ್ನು ಹಿಂಬಾಲಿಸುವ ಹಕ್ಕಿನ ಕುರಿತಂತೆ ಇತರರ ಜೊತೆ ಕಾದಾಡಲು ಕೂಡ ಹಿಂದೇಟು ಹಾಕುವುದಿಲ್ಲ. ಏಕೆಂದರೆ ಒಬ್ಬ ಹುಡುಗಿಯನ್ನು ಹಿಂಬಾಲಿಸುವವರನ್ನು ಬೇರೆಯವರು ಗಮನಿಸುತ್ತಾರೆ. ಅಕ್ಕಪಕ್ಕದವರು, ಅಂಗಡಿಯವರು ಹಾಗೂ ಪೊಲೀಸರು ಎಚ್ಚರಿಕೆ ಕೊಟ್ಟಾಗ್ಯೂ ಅವರು ಹಿಂಬಾಲಿಸುವುದನ್ನು ಬಿಡದೆ ಇದ್ದರೆ ಆಗ ಹುಡುಗಿಯ ಮನಸ್ಸಿನ ಮೇಲೆ ಗಾಢ ಪರಿಣಾಮ ಬೀರುತ್ತದೆ. ಹಿಂಬಾಲಿಸುವಿಕೆ ಎನ್ನುವುದು ಆ ವ್ಯಕ್ತಿಯ ಮಾನಸಿಕ ರೋಗವೇ ಆಗಿರುತ್ತದೆ. ಅದು ಹುಡುಗಿಯನ್ನು ಕೂಡ ರೋಗಿಯನ್ನಾಗಿಸುತ್ತದೆ. ಎಲ್ಲಿಯವರೆಗೆ ವ್ಯಕ್ತಿಯಿಂದ ತೊಂದರೆ ಆಗಿರುವುದಿಲ್ಲವೋ ಅಲ್ಲಿಯವರೆಗೆ ದೂರು ಕೊಡುವುದೆಂದರೆ ನಗೆಪಾಟಲು ಎನಿಸುತ್ತದೆ. ಭಾರತದಲ್ಲಿ ಈ ತೆರನಾದ ಪ್ರತಿಯೊಂದು ಪ್ರಕರಣಗಳಲ್ಲಿ ಮೊದಲ ಆಕ್ಷೇಪ ಹುಡುಗಿಯ ಮೇಲೆ ಹೊರಿಸಲಾಗುತ್ತದೆ. ಆಕೆಯೇ ಹಾಗೆ ಮಾಡಿರಬಹುದು, ಹೀಗೆ ಮಾಡಿರಬಹುದು, ಅದಕ್ಕೆಂದೇ ಆ ಹುಡುಗ ಅವಳ ಹಿಂದೆ ಬಿದ್ದಿದ್ದಾನೆ ಎಂದು ಹೇಳುತ್ತಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ