ನಾಗಶ್ರೀ ಫಣೀಂದ್ರಕುಮಾರ್

ಗಾಯತ್ತಿ ಮತ್ತು ಎಂ.ಕೆ. ಬಾಲರಾಜುರವರ ಸುಪುತ್ರಿಯಾದ ಇವರು ಸುಸಂಸ್ಕೃತ ಕೌಟುಂಬಿಕ ವಾತಾವರಣದಲ್ಲಿ ಬೆಳೆದವರು. ಚಿಕ್ಕ ಪ್ರಾಯದಿಂದಲೂ ನೃತ್ಯಕಲೆಯಲ್ಲಿ ಅಪಾರ ಆಸಕ್ತಿಯನ್ನು ಹೊಂದಿದ್ದ ಈಕೆ ಅಂದಿನಿಂದ ಇಂದಿನವರೆಗೂ ಗಣನೀಯ ಸಾಧನೆ ಮಾಡುತ್ತಾ ಸಾಗಿದ್ದಾರೆ. ಕರ್ನಾಟಕ ಶಾಸ್ತ್ರೀಯ ಸಂಗೀತ ಕ್ಷೇತ್ರದಲ್ಲಿ ಮಹತ್ಸಾಧನೆಗೈದಿರುವ ಪ್ರಖ್ಯಾತ ಕಲಾ ದಿಗ್ಗಜರಾದ ವಿದ್ವಾನ್‌ ಎಲ್. ರಾಮಶೇಷು ಹಾಗೂ ವಿದುಷಿ ಲೋಪಾಮುದ್ರಾರವರ ಮುದ್ದಿನ ಸೊಸೆಯಾದ ನಾಗಶ್ರೀ, ಪತಿ ಎಸ್‌. ಫಣೀಂದ್ರಕುಮಾರ್‌ರ ನಿರಂತರ ಪ್ರೋತ್ಸಾಹವೇ ತನ್ನ ವೈವಾಹಿಕ ಜೀವನದಲ್ಲಿನ ಸಾಧನೆಗೆ ಪೂರಕ ಹಾಗೂ ಪ್ರೇರಕವೆನ್ನುತ್ತಾರೆ.

ನಂಜನಗೂಡಿನಲ್ಲಿ ವಾಸ್ತವ್ಯ ಹೂಡಿರುವ ನೃತ್ಯಗುರು ವಿದುಷಿ ಉಷಾ ವೇಣುಗೋಪಾಲ್‌ರಿಂದ ಆರಂಭಿಕ ನಾಟ್ಯ ಶಿಕ್ಷಣ ಪಡೆದು ತದನಂತರದಲ್ಲಿ ಅರಮನೆಗಳ ನಗರಿ ಮೈಸೂರನ್ನು ಕಲಾಪ್ರೌಢಿಮೆಯಿಂದ ಶ್ರೀಮಂತಗೊಳಿಸಿರುವ ನೃತ್ಯಗುರು ವಿದುಷಿ ಕೃಪಾ ಫಡಕೆಯವರಲ್ಲಿ ನೃತ್ಯದ ಪ್ರಗತಿ ಅಭ್ಯಾಸವನ್ನು ಕೈಗೊಂಡಿದ್ದಾರೆ. ಕೃಪಾ ಫಡಕೆಯರ ಜೊತೆ ರಾಷ್ಟ್ರಾದ್ಯಂತ ಹಲವಾರು ನೃತ್ಯ ಪ್ರದರ್ಶನನ್ನು ನೀಡಿದ್ದಾರೆ.

ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷೆ ಮಂಡಳಿಯವರು ಆಯೋಜಿಸುವ ಭರತನಾಟ್ಯ ವಿದ್ವತ್‌ ಪರೀಕ್ಷೆಯಲ್ಲಿ ಉನ್ನತ ದರ್ಜೆಯಲ್ಲಿ ತೇರ್ಗಡೆ ಹೊಂದಿದ್ದಾರೆ.

ನಂಜನಗೂಡು ಶಾಲೆ ಹಾಗೂ ಮೈಸೂರಿನ ಶ್ರೀಕಾಂತ ಮಹಿಳಾ ಪದವಿಪೂರ್ವ ಕಾಲೇಜುಗಳಲ್ಲಿ ವ್ಯಾಸಂಗ ಮಾಡಿರುವ ಈಕೆ ಮೈಸೂರು ವಿಶ್ವವಿದ್ಯಾನಿಲಯದಿಂದ ಬಿ.ಎ. ಪದವಿ ಪಡೆದಿದ್ದಾರೆ. ಅಷ್ಟೇ ಅಲ್ಲದೆ, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಿಂದ ಕನ್ನಡ ಭಾಷಾ ಅಧ್ಯಯನದಲ್ಲಿ ಎಂ.ಎ. ಸ್ನಾಕೋತ್ತರ ಪದವಿ ಹಾಗೂ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶನ ಕಲೆಗಳ ವಿಶ್ವವಿದ್ಯಾನಿಲಯದಿಂದ ನೃತ್ಯ ಕ್ಷೇತ್ರದಲ್ಲಿ ಎಂ.ಎ. ಸ್ನಾತಕೋತ್ತರ ಪದವಿಗಳನ್ನು ಪಡೆದಿದ್ದಾರೆ. ಇದಲ್ಲದೇ ದಕ್ಷಿಣ ಭಾರತ ಹಿಂದೀ ಪ್ರಚಾರ ಸಭಾದಿಂದ ಹಿಂದಿ ಪ್ರವೀಣ್‌ ಪರೀಕ್ಷೆಯಲ್ಲಿ ಉತ್ತಮಾಂಕಗಳೊಂದಿಗೆ ಉತ್ತೀರ್ಣರಾಗಿದ್ದಾರೆ.

social

ಶೈಕ್ಷಣಿಕ ಹಾಗೂ ಶಿಕ್ಷಣೇತರ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿರುವ ಈಕೆ ತಾವು ಕಲಿತ ವಿದ್ಯೆಯನ್ನು ಮುಂದಿನ ಪೀಳಿಗೆಗೆ ಸುರಕ್ಷಿತವಾಗಿ ಹಸ್ತಾಂತರಿಸುವಲ್ಲೂ ಯಶಸ್ವಿಯಾಗಿದ್ದಾರೆ. ನಟರಾಜ ಪರ್ಫಾರ್ಮಿಂಗ್‌ ಆರ್ಟ್ ಸೆಂಟರ್‌ನ್ನು ಮೈಸೂರಿನಲ್ಲಿ ಸಂಸ್ಥಾಪಿಸಿ, ಕಳೆದ ಹದಿನೈದು ವರ್ಷಗಳಿಂದ ನೂರಾರು ವಿದ್ಯಾರ್ಥಿಗಳಿಗೆ ನಾಟ್ಯ ಶಿಕ್ಷಣ ನೀಡುತ್ತಿದ್ದಾರೆ. ಬಹು ಪ್ರತಿಷ್ಠಿತ ಗಾನಭಾರತೀ ಸಂಗೀತ ನೃತ್ಯ ಬೋಧಿಸುವ ಕಲಾ ಸಂಸ್ಥೆಗಳಲ್ಲದೇ ಪ್ರಗತಿ ವಿದ್ಯಾಕೇಂದ್ರ, ಪ್ರಗತಿ ಅಕಾಡೆಮಿ, ಹರಿ ವಿದ್ಯಾಲಯ, ದಿ ಪಾಲ್ ಇಂಟರ್‌ ನ್ಯಾಷನಲ್ ಶಾಲೆ, ರೋಟರಿ ಮಿಡಲ್ ಟೌನ್‌,  ಕೇಂದ್ರೀಯ ವಿದ್ಯಾಲಯ ಮುಂತಾದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲೂ ಯಶಸ್ವೀ ನೃತ್ಯ ಶಿಕ್ಷಕಿಯಾಗಿ ಕಾರ್ಯ ನಿರ್ಹಿಸಿರುವ  ಅನುಭವವನ್ನು ಹೊಂದಿರುತ್ತಾರೆ.

ಪ್ರೀತಿ, ಸೌಹಾರ್ದತೆ, ಗೌರವಗಳೊಂದಿಗೆ ಕಲೆಯನ್ನು ತಮ್ಮ ವಲಯದಲ್ಲಿ ಪಸರಿಸುವ ಈಕೆ ಹಲವಾರು ವರ್ಷಗಳ ಆಳವಾದ ಕಲಾ ಅನುಭವವನ್ನು ಹೊಂದಿದ್ದಾರೆ. ಅತ್ಯಂತ ಸಹೃದಯಿ ಕಲಾವಿದೆ ಎಂದು ಜನಮಾನಸದಲ್ಲಿ ಬೇರೂರಿದ್ದಾರೆ.

ಮಹಿಷಾಸುರ ಮರ್ದಿನಿ, ಭಕ್ತ ಪ್ರಹ್ಲಾದ, ಕರ್ನಾಟಕದ ಕಣ್ಮಣಿಗಳು, ಮೋಹಿನಿ ಭಸ್ಮಾಸುರ, ಶ್ರೀನಿವಾಸ ಕಲ್ಯಾಣ, ದಶಾವತಾರ, ರಾಮಾಯಣ, ಶ್ರೀ ಕೃಷ್ಣಲೀಲಾ ಮುಂತಾದ ನೃತ್ಯರೂಪಕಗಳನ್ನು ನಿರ್ದೇಶಿಸಿರುವ ನಾಗಶ್ರೀ ಹಲವಾರು ಶಾಲಾ ವಾರ್ಷಿಕೋತ್ಸಗಳಿಗೆ ವಿನೂತನ ನೃತ್ಯ ನಿರ್ದೇಶನ ಮಾಡಿರುತ್ತಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ