`ಬಾಬೂ ಬ್ಯಾಂಡ್‌ ಬಾಜಾ’ ಮರಾಠಿ ಚಿತ್ರಕ್ಕಾಗಿ ಅತ್ಯುತ್ತಮ ನಟಿ ರಾಷ್ಟ್ರಪ್ರಶಸ್ತಿ ಈಕೆಗೆ ಸಿಕ್ಕಿತು. 12 ವರ್ಷಗಳಿಂದ ನಟನೆಯನ್ನೇ ಪ್ರಧಾನ ವೃತ್ತಿ ಆಗಿಸಿಕೊಂಡಿರುವ ಮಿತಾಲಿ, ಒಂದೇ ಸಲ ಹಲವಾರು ಚಿತ್ರಗಳನ್ನು ಒಪ್ಪಿಕೊಳ್ಳುವ ಬದಲು ಆಯ್ದ 1-2 ಉತ್ತಮ ಚಿತ್ರಗಳಲ್ಲಿ ಮಾತ್ರ ನಟಿಸಲು ಬಯಸುತ್ತಾರೆ.

ತಮ್ಮ ಈ ಪಯಣದ ಕುರಿತು ಮಿತಾಲಿ ಹೇಳುತ್ತಾರೆ, “ಮಹಾರಾಷ್ಟ್ರದ ನಾಂದೇಡ್‌ ಜಿಲ್ಲೆಯಲ್ಲಿ ನಾನು ಹುಟ್ಟಿ ಬೆಳೆದವಳು. ಅಲ್ಲಿಯೇ ನನ್ನ ಪ್ರಾಥಮಿಕ ವಿದ್ಯಾಭ್ಯಾಸ ನಡೆಯಿತು. ಬಾಲ್ಯದಿಂದಲೇ ನಾನು ನರ್ತಕಿ ಆಗಬೇಕೆಂದು ಬಯಸಿದ್ದೆ. ನಟಿಯೇ ಆಗಬೇಕಿತ್ತು,

“ಬಾಲ್ಯದಿಂದಲೇ ನನಗೆ ನಟನೆ ಎಂದರೆ ಬಲು ಆಸಕ್ತಿ. ಹೀಗಾಗಿ ನಾನು ನಾಟಕಗಳಲ್ಲಿ ಭಾಗವಹಿಸುವ ಮೂಲಕ ಅಭಿನಯ ಆರಂಭಿಸಿದೆ. ಕಾಲೇಜಿನಲ್ಲಿ ಎಂದಿನ ಕಲಿಕೆಯ ಜೊತೆ ಡಾ. ಬಿ.ಆರ್‌. ಅಂಬೇಡ್ಕರ್‌ ಮರಾಠಾ ವಿ.ವಿ.ಯಿಂದ ನಾಟ್ಯಶಾಸ್ತ್ರದಲ್ಲಿ ಒಂದು ವರ್ಷದ ಕೋರ್ಸ್‌ ಪೂರೈಸಿದೆ. ಇಂದು `ಬಾಬು ಬ್ಯಾಂಡ್‌ ಬಾಜಾ’ ಚಿತ್ರದಲ್ಲಿ ನನ್ನ ಅಭಿನಯ ಕಂಡು ಎಲ್ಲರೂ ಪ್ರಶಂಸೆಗೆ ತೊಡಗಿದ್ದಾರೆ.

“ಆದರೆ ಈ ಫೀಲ್ಡ್ ಗೆ ಬರಲು ನಾನು ಬಹಳಷ್ಟು ಸಂಘರ್ಷಗಳನ್ನು ಎದುರಿಸಬೇಕಾಯ್ತು. ಔರಂಗಾಬಾದ್‌ನಲ್ಲಿ ನಾನು ಒಬ್ಬ ಬಾಲ ಕಲಾವಿದೆಯಾಗಿ ಬೆಳೆದು ಬಂದೆ, ನಟನೆಯ ವಿವಿಧ ಹಂತಗಳನ್ನು ತಿಳಿದುಕೊಂಡೆ. ಔರಂಗಾಬಾದ್‌ನಲ್ಲಿ ಬಹಳಷ್ಟು ನಾಟಕಗಳಲ್ಲಿ ಅಭಿನಯಿಸಲು ಅವಕಾಶ ಸಿಗತೊಡಗಿತು. ಆದರೆ ಪ್ರೊಫೆಶ್‌ನಲಿ ನಟನೆ ಬಗ್ಗೆ ಆಳವಾಗಿ ತಿಳಿದುಕೊಳ್ಳಲು ನಾನು ಮುಂಬೈಗೆ ಬರಬೇಕಿತ್ತು. ಅದನ್ನು ಬಿಟ್ಟರೆ ಬೇರೆ ವಿಕಲ್ಪ ಇರಲಿಲ್ಲ.

“ಇಲ್ಲಿಗೆ ಬರುವ ಮೊದಲು ನಾನು ನನ್ನದೇ ಆದ ಕೆಲವು ಸಿದ್ಧಾಂತಗಳನ್ನು ಹೊಂದಿದ್ದೆ. ನನ್ನ ಕೆಲಸಕ್ಕಾಗಿ ನಾನು ಯಾವುದೇ ರೀತಿಯಲ್ಲಿ ಕಾಂಪ್ರಮೈಸ್‌ ಆಗಲು ಸಿದ್ಧಳಿರಲಿಲ್ಲ.

“ಮುಂಬೈನಲ್ಲಿ ಸಹನಟರ ಜೊತೆ ಬೆರೆತು `ಅಶ್ವತ್ಥ್’ ಎಂಬ ಹೆಸರಿನ ನಾಟ್ಯಸಂಸ್ಥೆ ಆರಂಭಿಸಿದೆ. ಇದರ ಸಲುವಾಗಿ ನಾವು ಪೃಥ್ವಿ ಥಿಯೇಟರ್‌ನಲ್ಲಿ ನಾಟ್ಯ ಪ್ರಯೋಗಕ್ಕೆ ತೊಡಗಿದೆವು.

“ನನ್ನ ಪ್ರಾಯೋಗಿಕ ನಾಟಕಗಳ ಆರಂಭ `ನೋ ಎಗ್ಸಿಟ್‌’ ಎಂಬ ಹಿಂದಿ ನಾಟಕದಿಂದ ಆರಂಭವಾಯ್ತು. ಇದಾದ ನಂತರ `ಆವಿಷ್ಕಾರ್‌ ಕೇ ಲಿಯೆ,’ `ಇಂದೂ ಕಾಲೇ,’ `ಸರಳಾ ಭೊಲೋ’ ಮುಂತಾದ ಅನೇಕ ನಾಟಕಗಳ ಮುಖಾಂತರ ನಾನು ಪ್ರೇಕ್ಷಕರಿಗೆ ಹತ್ತಿರದವಳಾದೆ. ಅಪಾರ ಆತ್ಮವಿಶ್ವಾಸ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ನಟಿಯರು ಟಿ.ವಿ. ಧಾರಾವಾಹಿಗಳು ಹಾಗೂ ನಾಟಕಗಳಲ್ಲಿ ಹೆಚ್ಚು ಹೆಚ್ಚಾಗಿ ಪಾಲ್ಗೊಳ್ಳಲು ಬಯಸುತ್ತಾರೆ. ಆದರೆ ನೀವೇಕೆ ಕೆಲಸ ಮಾಡುವುದನ್ನು ಸ್ವಲ್ಪ ಕಡಿಮೆ ಮಾಡಿದಿರಿ? ಈ ಪ್ರಶ್ನೆಗೆ ಉತ್ತರಿಸತ್ತಾ ಮಿತಾಲಿ ಹೇಳುತ್ತಾರೆ, “2006ರಲ್ಲಿ ನನ್ನ ಮದುವೆ ಆದ ನಂತರ, ನಾನು ನಟನಾ ವೃತ್ತಿಯಿಂದ ತುಸು ಬ್ರೇಕ್‌ ಪಡೆದುಕೊಂಡೆ. ಈಗ ನನ್ನ ಮಗಳು ಸಹ ತುಸು ದೊಡ್ಡವಳಾಗಿದ್ದಾಳೆ.

“ನಾನೀಗ ಆಯ್ದ ಕೆಲವೇ ನಾಟಕ ಸಿನಿಮಾಗಳಲ್ಲಿ ಮಾತ್ರ ನಟಿಸುತ್ತೇನೆ. `ಬಾಬು ಬ್ಯಾಂಡ್‌ ಬಾಜಾ’ ತಾಯಿ ಮಗನ ಸೆಂಟಿಮೆಂಟ್ಸ್ ವುಳ್ಳ ಚಿತ್ರ. ಈ ಚಿತ್ರದಲ್ಲಿ ತಾಯಿಯ ವಾತ್ಸಲ್ಯದ ವಿವಿಧ ಮುಖಗಳಿವೆ.

“ಈ ಚಿತ್ರದಲ್ಲಿ ನಾನು ಒಬ್ಬ ಸಹನಾಮಯಿ ಪತ್ನಿ, ಮಮತಾಮಯಿ ತಾಯಿ, ಗಂಡ ಮನೆ ಮಕ್ಕಳಿಗಾಗಿ ತನ್ನ ಜೀವನವನ್ನೇ ಮುಡಿಪಾಗಿಡುವ ಆದರ್ಶ ಗೃಹಿಣಿಯ ಪಾತ್ರ ವಹಿಸಿದೆ.

“ನನ್ನ ತಾಯಿ ತಂದೆ ನಾನು ಔರಂಗಾಬಾದ್‌ನಿಂದ ಮುಂಬೈಗೆ ಬರುವಾಗ, `ಸ್ಮಿತಾ ಪಾಟೀಲ್‌’ರಂಥ ಪರಿಪಕ್ವ ಪಾತ್ರಗಳಲ್ಲಿ ಮುನ್ನೇರಬೇಕೆಂದು ಪ್ರೋತ್ಸಾಹಿಸಿದ್ದರು. ಬ್ಯೂಟಿ  ಬ್ರೇನ್‌ಗೆ ಸ್ಮಿತಾ ಪಾಟೀಲ್ ಆದರ್ಶ ಉದಾಹರಣೆ ಎಂಬುದು ಇಡೀ ರಾಷ್ಟ್ರಕ್ಕೇ ಗೊತ್ತು. ನನ್ನ ತಾಯಿ ತಂದೆಯವರ ಕನಸನ್ನು ನನಸಾಗಿಸುವುದೇ ನನ್ನ ಗುರಿ. ಅದಕ್ಕಾಗಿ ಶ್ರಮ ವಹಿಸುತ್ತೇನೆ,” ಎನ್ನುವ ಮಿತಾಲಿ ನಿಜ ಅರ್ಥದಲ್ಲಿ ಡೇರಿಯಲ್ ವುಮನ್‌ ಎನಿಸುತ್ತಾರೆ.

– ಜೋಶಿ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ