ದಕ್ಷಿಣಕ್ಕೆ 355 ಕಿ.ಮೀ, ಪೂರ್ವದಿಂದ ಪಶ್ಚಿಮಕ್ಕೆ 60 ಕಿ.ಮೀ. ವಿಸ್ತೀರ್ಣ ಹೊಂದಿದೆ. ಇದರ ರಾಜಧಾನಿ ಪೋರ್ಟ್‌ ಬ್ಲೇರ್‌. ಇದು ಅಂಡಮಾನ್‌ನ ದಕ್ಷಿಣದಲ್ಲಿದೆ. ಅಂಡಮಾನ್‌ ಪ್ರದೇಶವನ್ನು ನಾರ್ತ್‌ ಅಂಡಮಾನ್‌,  ಮಿಡ್ಲ್ ಅಂಡಮಾನ್‌, ಸೌಂತ್‌ ಅಂಡಮಾನ್ ಹಾಗೂ ಲಿಟಲ್ ಅಂಡಮಾನ್‌ ಎಂದು ನಾಲ್ಕು ಭಾಗಗಳಾಗಿ ವಿಂಗಡಿಸಲಾಗಿದೆ.

ಅಂಡಮಾನ್‌ನಲ್ಲಿ ಪೋರ್ಟ್‌ ಬ್ಲೇರ್‌, ಬಾರಾಟಂಗ್‌, ರಂಗಟ್‌ ಮಾಯಾ ಬಂದರ್‌ ಮತ್ತು ದಿಗ್ಲಿಪುರ್‌ ಎಂಬ ನಗರಗಳಿವೆ. ಅಂಡಮಾನ್‌ ವೀಕ್ಷಣೆ ಮಾಡಲು 15 ದಿನಗಳಾದರೂ ಸಾಕಾಗುವುದಿಲ್ಲ. ಆದರೆ, ಪ್ರಮುಖವಾಗಿ ಕೆಲವು ಸ್ಥಳಗಳನ್ನು ನೋಡಬಹುದಾದರೆ 5-6 ದಿನಗಳಲ್ಲಿ ವೀಕ್ಷಣೆ ಮಾಡಬಹುದು.

ಪೋರ್ಟ್‌ ಬ್ಲೇರ್‌ ನಗರದ ಸಮೀಪದಲ್ಲಿ ರೋಸ್‌ ಐಲ್ಯಾಂಡ್‌, ವೈಪರ್‌ ಐಲ್ಯಾಂಡ್‌, ಕೋರ್‌ ಐಲ್ಯಾಂಡ್‌ (ನಾರ್ತ್‌ ಬೇ), ಜಾಲಿಬಾಯ್ ಐಲ್ಯಾಂಡ್‌, ಹ್ಯಾಮ್ ಲಾಕ್‌ ಐಲ್ಯಾಂಡ್‌ ಮತ್ತು ನೀಲ್ ‌ಐಲ್ಯಾಂಡ್‌ಗಳಿವೆ. ವಂಡೂರ್‌ ಬೀಚ್‌, ಚಿಡಿಯಾ ಟಾಪು ಬೀಚ್‌, ಕಾರ್ಬೈನ್‌ ಬೀಚ್‌ಗಳಿವೆ. ಮೌಂಟ್‌ ಹ್ಯಾರಿಯಟ್‌ ಎಂಬ ಬೆಟ್ಟವಿದೆ. ಉತ್ತರ ಅಂಡಮಾನ್‌ ಮತ್ತು ಮಿಡ್ಲ್ ಅಂಡಮಾನ್‌ನಲ್ಲಿಯೂ ಸಾಕಷ್ಟು ದ್ವೀಪಗಳು ಮತ್ತು ಬೀಚ್‌ಗಳಿವೆ.

ಪೋರ್ಟ್‌ ಬ್ಲೇರ್‌

ಇಲ್ಲಿ ಸ್ವಾತಂತ್ರ್ಯ ಹೋರಾಟಗಾರ ವೀರ ಸಾರ್‌ಕರ್‌ ಹೆಸರಿನ ವಿಮಾನ ನಿಲ್ದಾಣವಿದೆ. ಇಲ್ಲಿನ ನೋಡಬಹುದಾದ ಸ್ಥಳಗಳೆಂದರೆ ಸೆಲ್ಯೂಲರ್‌ ಜೈಲ್ ‌(ರಾತ್ರಿ ಸೌಂಡ್‌ ಅಂಡ್‌ ಲೈಟ್‌ ಶೋ ನೋಡಬಹುದು), ಸಮುದ್ರಿಕಾ ಮ್ಯೂಸಿಯಂ, ಆಂತ್ರೋ ಪೋಲಾಜಿಕ್ ಮ್ಯೂಸಿಯಂ, ಫಿಶ್‌ ಅಕ್ವೇರಿಯಂ, ಫಾರೆಸ್ಟ್ ಮ್ಯೂಸಿಯಂ, ಮಿನಿ ಝೂ, ವಾಟರ್‌ ಸ್ಪೋರ್ಟ್ಸ್ ಕಾಂಪ್ಲೆಕ್ಸ್, ಜಂಗ್ಲಿ ಘಾಟ್‌ ಜಟ್ಟಿ, ಪೋನಿಕ್ಸ್ ಬೇ, ಚಾತಮ್ ಸಾ ಮಿಲ್‌.

ರೋಸ್‌ ಐಲ್ಯಾಂಡ್‌

ಬ್ರಿಟಿಷರ ಹೆಡ್‌ ಕ್ವಾರ್ಟರ್‌ ಆಗಿದ್ದ ಈ ದ್ವೀಪದಲ್ಲಿ ಅವರ ಆಳ್ವಿಕೆಯ ಕಾಲದಲ್ಲಿ ಮನರಂಜನೆಗಾಗಿ ಕ್ಲಬ್‌ ಹಾಗೂ ಸುಂದರ ಪಾರ್ಕ್ ನಿರ್ಮಿಸಿದ್ದರು. ಒಂದು ಚರ್ಚ್‌ ಕೂಡ ಇದೆ. ಈಗ ಇವೆಲ್ಲ ಪಾಳುಬಿದ್ದಿವೆ. ವೈಪರ್‌ ಐಲ್ಯಾಂಡ್‌ ಈ ದ್ವೀಪದಲ್ಲಿ ಇಟ್ಟಿಗೆಯಲ್ಲಿ ಕಟ್ಟಿರುವ `ಗೋಳ ಗುಂಬಜ್‌’ನಂತೆ ಕಾಣುವ ತುಂಬಾ ಎತ್ತರದ ಕೆಂಪು ಬಣ್ಣದ ಕಟ್ಟಡವಿದೆ. ಇಲ್ಲಿ ಸ್ವಾತಂತ್ರ್ಯ ಹೋರಾಟಗಾರರನ್ನು ಗಲ್ಲು ಶಿಕ್ಷೆಗೆ ಹಾಕುತ್ತಿದ್ದರಂತೆ.

ಕೋರ್‌ ಐಲ್ಯಾಂಡ್‌ (ನಾರ್ತ್‌ಬೇ)

ಇಲ್ಲಿ ಮೋಟಾರ್‌ ಬೋಟ್‌ ರೈಡಿಂಗ್‌, ಸ್ಕೂಟರ್‌ ಬೋಟ್‌ರೈಡಿಂಗ್‌, ಸಮುದ್ರದ ಆಳದಲ್ಲಿರುವ ಜಲಚರಗಳನ್ನು ನೋಡಲು `ಸ್ಕೂಬಾ ಡೈವಿಂಗ್‌’ ಮಾಡಬಹುದು.

ವಂಡೂರ್‌ ಬೀಚ್‌

ಇಲ್ಲಿ ಗಾಜಿನ ತಳವಿರುವ ಮೋಟಾರ್‌ ಬೋಟ್‌ನಲ್ಲಿ ಸಮುದ್ರದ ತಳದಲ್ಲಿರುವ ಜಲಚರಗಳನ್ನು, ಹವಳದ ಜೀವಿಗಳನ್ನು ನೋಡಬಹುದು, ಇಲ್ಲಿಂದ ಜಾಲಿ ಬಾಯ್‌ ಐಲ್ಯಾಂಡ್‌ ಹತ್ತಿರವಿದೆ. ಮಹಾತ್ಮ ಗಾಂಧಿ ಪಾರ್ಕ್‌ ಕೂಡ ನೋಡಬಹುದು.

ಚಿಡಿಯಾ ಟಾಪು ಬೀಚ್

ಇದು ಸುಂದರವಾದ ಬೀಚ್‌. ಇಲ್ಲಿ ಸೂರ್ಯಾಸ್ತಮಾನ ನೋಡಬಹುದು. ಸುಂದರವಾದ ನ್ಯಾಷನಲ್ ಪಾರ್ಕ್‌ ಕೂಡ ಇದೆ.

ಮೌಂಟ್‌ ಹ್ಯಾರಿಯಟ್‌

ಪೋರ್ಟ್‌ ಬ್ಲೇರ್‌ ನಗರದ ಸಮೀಪದಲ್ಲಿ ಮೌಂಟ್‌ ಹ್ಯಾರಿಯಟ್‌ ಬೆಟ್ಟ ಹೂಗೂ ಸುಂದರವಾದ ಪಾರ್ಕ್‌ ಇದೆ. ಇದು ಅತ್ಯಂತ ಎತ್ತರದ ಪ್ರದೇಶವಾಗಿದೆ. ಚಾರಣ ಮಾಡಬಹುದು. ಪಕ್ಷಿ ವೀಕ್ಷಣೆ ಮಾಡಬಹುದು.

ಚಾತಮ್ ಸಾ ಮಿಲ್

‌ಇದು ಏಷ್ಯಾದಲ್ಲಿಯೇ ಅತಿ ದೊಡ್ಡ ಹಾಗೂ ಬಹಳ ಹಳೆಯ ಕಾಲದ ಮರ ಕೊಯ್ಯುವ ಮಿಲ್‌. ಇದನ್ನು 1883ರಲ್ಲಿ ಸ್ಥಾಪಿಸಲಾಗಿದೆ. ಪುನಃ 1950ರಲ್ಲಿ ಪುನಶ್ಚೇತನಗೊಳಿಸಲಾಗಿದೆ.

ಹ್ಯಾವ್ಲಾಕ್‌ ಐಲ್ಯಾಂಡ್‌

ಪೋರ್ಟ್‌ ಬ್ಲೇರ್‌ನಿಂದ ಹಡಗಿನಲ್ಲಿ 2 ಗಂಟೆಗಳ ಅವಧಿಯಲ್ಲಿ ಹ್ಯಾವ್ಲಾಕ್‌ ದ್ವೀಪ ತಲುಪಬಹುದು. ಇಲ್ಲಿಂದ 12 ಕಿ.ಮೀ. ದೂರದಲ್ಲಿ ರಾಧಾನಗರ ಎಂಬ ಸ್ಥಳದಲ್ಲಿ ಏಷ್ಯಾದಲ್ಲಿಯೇ ಅತಿ ಸುಂದರ ಹಾಗೂ ತಿಳಿಯಾದ ನೀರು, ನೀಲಿ ಬಣ್ಣದಲ್ಲಿ ಕಾಣುವ ಬೀಚ್‌ ಇದೆ. ಹ್ಯಾವ್ಲಾಕ್‌ ದ್ವೀಪವನ್ನು ಒಂದು ದಿನದಲ್ಲಿ ನೋಡಿ ಬರಬಹುದಾಗಿದೆ. ಹ್ಯಾವ್ಲಾಕ್‌ ದ್ವೀಪದ ಸಮೀಪದಲ್ಲಿಯೇ ನೀಲ್ ಐಲ್ಯಾಂಡ್‌ ಇದೆ. ಇಲ್ಲಿ ಸೀತಾಪುರ್‌ ಮತ್ತು ಲಕ್ಷ್ಮಣ್‌ ಪುರ್‌ ಬೀಚ್‌ಗಳಿವೆ.

ಬಾರಾಟಂಗ್

ಇದು ಪೋರ್ಟ್‌ ಬ್ಲೇರ್‌ನಿಂದ 80 ಕಿ.ಮೀ. ದೂರದಲ್ಲಿದೆ. ಬಾರಾ ಟಂಗ್‌ಗೆ ಹೋಗುವ ಕಾಡು ಮಾರ್ಗದಲ್ಲಿ ಆದಿವಾಸಿಗಳು ವಾಸ ಮಾಡುವ ಸ್ಥಳಗಳಿವೆ. ಆದ್ದರಿಂದ ಇಲ್ಲಿಗೆ ಹೋಗುವ ಬಸ್ಸು, ಕಾರು, ವ್ಯಾನ್‌ ಇತ್ಯಾದಿ ವಾಹನಗಳನ್ನು ಕಾಡು ದಾರಿ ಪ್ರಾರಂಭವಾಗುವ ಫಾರೆಸ್ಟ್ ಟೆಕ್‌ಪೋಸ್ಟ್ ನಲ್ಲಿ ನಿಲ್ಲಿಸಿ, ಒಟ್ಟಿಗೆ 30 ರಿಂದ 50 ವಾಹನಗಳನ್ನು ಪೊಲೀಸರು ಮತ್ತು ಅರಣ್ಯ ರಕ್ಷಕರ ಬೆಂಗಾವಲಿನಲ್ಲಿ ಕಳಿಸುತ್ತಾರೆ. ಸಾರ್ವಜನಿಕರಿಗೆ ಹಾಗೂ ಆದಿವಾಸಿಗಳಿಗೆ ತೊಂದರೆ ಆಗಬಾರದೆಂಬ ಉದ್ದೇಶದಿಂದ ಈ ನಿಯಮ ಮಾಡಲಾಗಿದೆ. ಒಂದು ಸಾಧಾರಣ ಊರು. ಇಲ್ಲಿಂದ 1 ಕಿ.ಮೀ. ಸಮುದ್ರದ ಹಿನ್ನೀರಿನಲ್ಲಿ ಹೋಗಿ ದಡದಲ್ಲಿಳಿದು ಪುನಃ 1 ಕಿ.ಮೀ. ಕಾಲ್ನಡಿಗೆಯಲ್ಲಿ ಸಾಗಿದರೆ, ಪ್ರಕೃತಿ ಸುಣ್ಣದ ಕಲ್ಲಿನಲ್ಲಿ ಕೊರೆದಿರುವ ಗುಹೆಗಳಿವೆ. ಸಮುದ್ರದ ನೀರಿನ ಕೊರೆತದಿಂದುಂಟಾದ ಚಿತ್ರವಿಚಿತ್ರ ಚಿತ್ತಾರಗಳು ಮೂಡಿವೆ. ಬಾರಾಟಂಗ್‌ನಿಂದ 8 ಕಿ.ಮೀ. ದೂರದಲ್ಲಿ `ಮಣ್ಣಿನ ಜ್ವಾಲಾಮುಖಿ’ ಇದೆ.

ಹಟ್‌ಬೇ ಫಾಲ್ಸ್

andman3

ಪೋರ್ಟ್‌ಬ್ಲೇರ್‌ನಿಂದ ಹಡಗಿನಲ್ಲಿ ಸುಮಾರು 6 ಗಂಟೆಗಳ ಪ್ರಯಾಣದ ದೂರದ ಲಿಟಲ್ ಅಂಡಮಾನ್‌ನಲ್ಲಿ ಹಟ್‌ಬೇ ಜಲಪಾತ (ವಿಸ್ಟರ್‌ ವೇವ್ ವಾಟರ್‌ ಫಾಲ್ಸ್) ಇದೆ. ಆನೆ ಸಫಾರಿ ಮತ್ತು ಆನೆ ತರಬೇತಿ ಕೇಂದ್ರವಿದೆ.

ಪೋರ್ಟ್‌ಬ್ಲೇರ್‌ ನಗರದಲ್ಲಿ ಸಾಕಷ್ಟು ಟೂರ್ಸ್ ಅಂಡ್‌ ಟ್ರಾವೆಲ್ಸ್ ‌ಕಂಪನಿಗಳಿವೆ. ಸಸ್ಯಾಹಾರಿ ಮತ್ತು ಮಾಂಸಾಹಾರಿ ಹೋಟೆಲ್ ಗಳಿವೆ. ವಸತಿ ಸೌಕರ್ಯಕ್ಕಾಗಿ ದುಬಾರಿ ಹಾಗೂ ಕಡಿಮೆ ವೆಚ್ಚದ ಲಾಡ್ಜ್ ಗಳು, ಕುಟೀರಗಳು ಸಿಗುತ್ತವೆ. ಇಲ್ಲಿಯ ಅಬೆರ್ಡನ್‌ಬಜಾರ್‌ನಲ್ಲಿ ಮತ್ತು ಸರ್ಕಾರಿ ಮಳಿಗೆಗಳಲ್ಲಿ `ಮುತ್ತು’ ಹಾಗೂ ಕರಕುಶಲ ವಸ್ತುಗಳನ್ನು ಕೊಳ್ಳಬಹುದು. ಇಲ್ಲಿ ಹಿಂದಿ, ಬಂಗಾಳಿ ಮತ್ತು ತಮಿಳು ಭಾಷೆ ಮಾತನಾಡುವ ಜನರು ಹೆಚ್ಚಾಗಿ ಕಂಡುಬರುತ್ತಾರೆ.

– ಡಿ.ಎಸ್‌. ಚಂದ್ರಕುಮಾರ್‌

ಅಂಡಮಾನ್‌ಗೆ ಹೋಗುವುದು ಹೇಗೆ?

ಚೆನ್ನೈನಿಂದ ಪೋರ್ಟ್‌ಬ್ಲೇರ್‌ಗೆ 2 ಗಂಟೆಗಳ ಅವಧಿಯಲ್ಲಿ (1200 ಕಿ.ಮೀ) ವಿಮಾನದಲ್ಲಿ ಪ್ರಯಾಣಿಸಬಹುದು. ಸಮುದ್ರದ ಮೂಲಕ 52 ಗಂಟೆಗಳ ಅವಧಿಯಲ್ಲಿ (1332 ಕಿ.ಮೀ) ಹಡಗಿನಲ್ಲಿ ಪ್ರಯಾಣ ಮಾಡಬಹುದು.

ಅಂಡಮಾನ್‌ ದ್ವೀಪದತ್ತ…..

ಆದಿವಾಸಿಗಳ ಜೀವನವನ್ನು ಹತ್ತಿರದಿಂದ ನೋಡಬಹುದು. ದಟ್ಟಾರಣ್ಯದಲ್ಲಿ ಅಲೆದಾಡಬಹುದು. ಸ್ವಾತಂತ್ರ್ಯ ಹೋರಾಟಗಾರರನ್ನು ಬಂಧಿಸಿಟ್ಟಿದ್ದ ಜೈಲಿನೊಳಗೂ ತಿರುಗಾಡಬಹುದು. ನಿಮ್ಮ ಮಕ್ಕಳೊಂದಿಗೆ ನೀವು ಮಕ್ಕಳಾಗಿ ಒಂದಿಷ್ಟು ಹೊತ್ತು ನಲಿಯಬಹುದು. ಹೌದು, ಕೇವಲ 355 ಕಿ.ಮೀ. ಉದ್ದ ಹಾಗೂ 60 ಕಿ.ಮೀ. ಅಗಲ ವಿಸ್ತೀರ್ಣ ವ್ಯಾಪ್ತಿ ಇರುವ ಅಂಡಮಾನ್‌ ದ್ವೀಪ ನಯನ ಮನೋಹರ. ಹೆಚ್ಚು ಖರ್ಚಿಲ್ಲದೆ ಇಡೀ ಕುಟುಂಬದೊಂದಿಗೆ ಕನಿಷ್ಠ ನಾಲ್ಕೈದು ದಿನವಾದರೂ ಆರಾಮವಾಗಿ ಕಳೆಯಬಹುದು.

ಏನೆಲ್ಲಾ ವಿಕ್ಷೀಸಬಹುದು!

ಪೋರ್ಟ್‌ಬ್ಲೇರ್‌ನಲ್ಲಿ 1896 ರಿಂದ 1908ರರೆಗೆ ಸ್ವಾತಂತ್ರ್ಯ ಹೋರಾಟಗಾರರಿಗೆಂದು ನಿರ್ಮಾಣಗೊಂಡಿದ್ದ `ಸೆಲ್ಯುಲರ್‌ ಜೈಲ್’ ಪ್ರವಾಸಿಗರ ಪ್ರಮುಖ ಆಕರ್ಷಣೆ. ಇಲ್ಲಿ ನಡೆಯುವ `ವೈಟ್‌ ಅಂಡ್‌ ಸೌಂಡ್‌ ಶೋ’ನಲ್ಲಿ, ಅಂದು ಬ್ರಿಟಿಷರು ಹೋರಾಟಗಾರರಿಗೆ ನೀಡಿದ ಶಿಕ್ಷೆ ಹಾಗೂ ಅವರು ಕಳೆದ ದಿನಗಳ ಸಂಕ್ಷಿಪ್ತ ವಿವರ ನೋಡುಗರಿಗೆ ಮೈ ಜುಮ್ಮೆನಿಸುತ್ತದೆ.

ಜಾಲಿ ಬ್ಯೊ ದ್ವೀಪದಿಂದ ವಂಡೂರ್‌ವರೆಗೆ, ಗಾಜಿನ ತಳವಿರುವ ಚಿಕ್ಕ ಹಡಗಿನಲ್ಲಿ ಸಮುದ್ರ ತಳವನ್ನು ನೋಡಬಹುದಾದ ಪ್ರಿಸ್ಟೈನ್‌ ಬೀಚ್‌, ಸುಂದರ ಸೂರ್ಯಾಸ್ತ ನೋಡಬಹುದಾದ ಚಿಡಿಯಾ ಟಾಪು ನ್ಯಾಷನಲ್ ಪಾರ್ಕ್‌, ಸಾಕಷ್ಟು ವಾಟರ್‌ ಸ್ಪೋರ್ಟ್ಸ್ ಲಭ್ಯವಿರುವ ಕಾರ್ಬೈನ್‌ ಬೀಚ್‌, ಬ್ರಿಟಷ್‌ ಹೆಡ್‌ ಕ್ವಾರ್ಟರ್‌ ಆಗಿದ್ದ ರಾಸ್‌ ದ್ವೀಪ, ಮಹಾತ್ಮ ಗಾಂಧಿ ಮರೀನ್‌ ಬೀಚ್. ಸುತ್ತಲೂ ದಟ್ಟಾರಣ್ಯದಿಂದ ಆವೃತವಾದ ಸಕ್ಕರೆಯಂತಹ ಮರಳು ಹಾಗೂ ನೀಲಿ ನೀರಿನಂತೆ ಕಾಣುವ ಸ್ಕೂಬಾ ಡೈವಿಂಗ್ ವ್ಯವಸ್ಥೆಯಿರುವ ಹ್ಯಾವ್ಲಾಕ್ ಬೀಚ್‌, ಕಾಲಾಪತ್ತರ್‌ ಬೀಚ್‌, ವೈಟ್‌ ಹೌಸ್‌ ಬಳಿಯ ನೀಲ್ ‌ದ್ವೀಪ ಹಾಗೂ ರಾಧಾನಗರ ಬೀಚ್‌ರಮಣೀಯವಾಗಿವೆ.

ಇನ್ನು ಆದಿವಾಸಿ ಜನಾಂಗ ವಾಸಿಸುವ ಬಾರಾಟಂಗ್‌ ದ್ವೀಪದಲ್ಲಿ ಸುಣ್ಣದ ಕಲ್ಲಿನ ಗುಹೆಗಳು, ಮಣ್ಣಿನ ಜ್ವಾಲಾಮುಖಿಯನ್ನು ಕಾಣಬಹುದು. ಗಿಣಿಗಳ ಹಿಂಡು ಇಲ್ಲಿದೆ. ಇದು ಮೊಸಳೆಗಳ ಆವಾಸಸ್ಥಾನ.

ಇನ್ನು ಲಿಟಲ್ ಅಂಡಮಾನ್‌ ದ್ವೀಪದಲ್ಲಿ ಆನೆ ಸಫಾರಿ ಉಂಟು. ಇಲ್ಲಿನ ಮಿಸ್ಟರ್‌ ವೇವ್ ವಾಟರ್‌ ಫಾಲ್ಸ್ ನಲ್ಲಿ ಪಿಸುಗುಡಬಹುದು. ಸಾಮುದ್ರಿಕ ಮರೀನ್‌ ಮ್ಯೂಸಿಯಂನಲ್ಲಿ ಬೃಹತ್‌ ತಿಮಿಂಗಿಲಿಂದರ ಅಸ್ಥಿಪಂಜರ ಇದೆ. ಇಲ್ಲಿಯೂ ಟ್ರಕ್ಕಿಂಗ್‌ ಮಾಡಬಯಸುವವರು ಮೌಂಟ್‌ ಹ್ಯಾರಿಯೆಟ್‌ ನ್ಯಾಷನಲ್ ಪಾರ್ಕ್‌ಗೆ ತೆರಳಬಹುದು. ಇಲ್ಲಿ ಸಫಾರಿಯೂ ಉಂಟು.

ವಿವಿಧ ಮಾರ್ಗಗಳು

ಸಮುದ್ರ ಮಾರ್ಗವಾಗಿ ಚೆನ್ನೈನಿಂದ ಪೋರ್ಟ್‌ಬ್ಲೇರ್‌ಗೆ 52 ಗಂಟೆಯಲ್ಲಿ ತೆರಳುವ ಸ್ಟೀಮರ್‌ನಲ್ಲಿ ಪ್ರಯಾಣಿಸಬಹುದು. ವಿಮಾನ ಕೂಡ ಉಂಟು.

ಸಾಕಷ್ಟು ರೆಸಾರ್ಟ್‌, ಹೋಟೆಲ್ ‌ಹಾಗೂ ಗೆಸ್ಟ್ ಹೌಸ್‌ಗಳು ಲಭ್ಯ. ಆನ್‌ಲೈನ್‌ ಬುಕ್ಕಿಂಗ್‌ ಮಾಡುವುದು ಒಳಿತು.

ದಕ್ಷಿಣ ಭಾರತೀಯ ಶೈಲಿಯ ಆಹಾರ ಹಾಗೂ ಸೀ ಫುಡ್‌ ಸಿಗುತ್ತವೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ