ಸರ್ಕಾರಗಳೇಕೆ ಮಧ್ಯೆ ಮೂಗು ತೂರಿಸಬೇಕು? :

ಸಲಿಂಗಕಾಮದ ಬಿಸಿ ಈಗ ನೇಪಾಳಕ್ಕೂ ತಟ್ಟಿದೆ. ಅಲ್ಲಿನ ಸಲಿಂಗಿಗಳೆಲ್ಲ ಸೇರಿ ಕಳೆದ ಆಗಸ್ಟ್ 22 ರಂದು ಮಹಾನ್‌ ಗೇ ಪೆರೇಡ್‌ ನಡೆಸಿದರು, ತಮ್ಮ ಹಕ್ಕೊತ್ತಾಯಗಳನ್ನು ಸರ್ಕಾರದ ಮುಂದಿಟ್ಟರು. ಇಂಥ ತೀರಾ ವೈಯಕ್ತಿಕ ವಿಷಯಗಳಿಗೂ ಸಮಾಜ, ಧರ್ಮ, ಸರ್ಕಾರಗಳೇಕೆ ಮಧ್ಯೆ ಬಂದು ಮೂಗು ತೂರಿಸಬೇಕೋ....?

.....ಯ್ಯ....ಯ್ಯೋ! ಮುಖ ಸೀಳಿತೇ?:

ಅಯ್ಯೋ...... ಇದೇನು? ಮುಖದ ಚರ್ಮವನ್ನು ಹೀಗಾ ಸೀಳುವುದು? ಆದರೆ ಈ ಹುಡುಗಿ ಏನೂ ಸದ್ದುಗದ್ದಲ ಮಾಡದೆ ಸುಮ್ಮನಿದ್ದಾಳಲ್ಲ? ಹೌದು, ಏಕೆಂದರೆ ಇದು ಮುಖಕ್ಕಾದ ಗಾಯವಲ್ಲ, ಮೇಕಪ್‌ ನ ಚಮತ್ಕಾರ! ಅಮೆರಿಕಾದ ಅಪರೂಪದ ಟ್ಯೋಲಾಬೀನ್‌ ಹಬ್ಬಕ್ಕಾಗಿ ಈ ತಯಾರಿ ನಡೆದಿದೆ. ಇದರಲ್ಲಿ ಜನ ತರತರಹದ ಮುಖವಾಡ, ಮೇಕಪ್, ಫ್ಯಾನ್ಸಿ ಡ್ರೆಸ್‌ ಧರಿಸಿ ಪರಸ್ಪರರನ್ನು ಹೆದರಿಸುತ್ತಾರೆ.

ಪ್ರೇಮಾಭಿವ್ಯಕ್ತಿಗೆ ವಿನೂತನ ಪರಿ :

ಇತ್ತೀಚೆಗೆ ಚೀನಾದಲ್ಲಿ ಲೈನಿಂಗ್‌ ಫ್ಯಾಬ್ರಿಕ್ಸ್ ನವರು ಚಿತ್ರವಿಚಿತ್ರ `ಕಿಸ್ಸಿಂಗ್‌ ಕಾಂಪಿಟಿಷನ್‌' ಏರ್ಪಡಿಸಿದ್ದರು. ಈ ಸ್ಪರ್ಧೆಯಲ್ಲಿ ಪ್ರೇಮಿಗಳು ಪರಸ್ಪರರನ್ನು ರಸ್ತೆ ನಡುಮಧ್ಯೆ ಸಿಗ್ನಲ್ಸ್ ಬಳಿ ಎಷ್ಟು ಹೊತ್ತಿನವರೆಗೂ ಭಿಡೆ ಇಲ್ಲದೆ ಚುಂಬಿಸುತ್ತಾರೆಂಬುದೇ ಪರೀಕ್ಷೆ! ಇದು 2500 ವರ್ಷಗಳಷ್ಟು ಹಿಂದಿನ ವ್ಯಾಲೆಂಟೈನ್‌ ಡೇ ನೆನಪಿಸುವಂತಿದೆಯಲ್ಲವೇ....?

ಇಂಥದ್ದಕ್ಕೆ ಮರಳಾಗದವರೂ ಉಂಟೇ :

ಸಲಿಂಗಿಗಳ ಡ್ಯಾನ್ಸ್ ಕಾಂಪಿಟಿಷನ್‌ ಈಗ ವಿಶ್ವದಲ್ಲಿ ಎಲ್ಲೆಡೆ ಜನಪ್ರಿಯವಾಗುತ್ತಿದೆ. ತಮ್ಮ ನೃತ್ಯ ಪ್ರದರ್ಶನದ ನೀತಿಸಂಹಿತೆ ಕುರಿತು ಚರ್ಚಿಸುತ್ತಿರುವ ಈ ಇಬ್ಬರು ಹುಡುಗಿಯರು, ಇತ್ತೀಚೆಗೆ ಅರ್ಜೆಂಟೈನಾದ ರಾಜಧಾನಿ ಬ್ಯೂನಸ್‌ ಐರಸ್‌ ನಗರದಲ್ಲಿ ಆಯೋಜಿಸಲಾಗಿದ್ದ ಅಂತಾರಾಷ್ಟ್ರೀಯ ನೃತ್ಯೋತ್ಸವದಲ್ಲಿ ಇವರು ಪೋಸ್‌ ನೀಡಿದ್ದು ಹೀಗೆ.

ಇದೆಂಥ ಮೂಢನಂಬಿಕೆ? :

SD-SEPT-4

ಹಿಂದಿನಿಂದಲೂ ಕಂದಾಚಾರಕ್ಕೆ ಬಲಿಯಾಗಿರುವ ಚೀನಾ, ಹಾಂಕಾಂಗ್‌, ಬಗೇರಾಗಳಲ್ಲಿ ಘೋಸ್ಟ್ ಫೆಸ್ಟಿವಲ್ ‌ಬಲು ಜನಪ್ರಿಯ. ಆ ಸಂದರ್ಭದಲ್ಲಿ ಅಲ್ಲಿನ ಜನ ತಮ್ಮ ಪೂರ್ವಿಕರ ನೆನಪಲ್ಲಿ ಅವರಿಗೆ ಕಾಗದದ ಸಂದೇಶ, ಟಿ.ವಿ., ಫ್ರಿಜ್‌, ಡಾಲರ್‌, ಕಾರ್‌ ಇತ್ಯಾದಿಗಳನ್ನು ತಲುಪಿಸಲು ಯತ್ನಿಸುತ್ತಾರೆ. ಇಂಥ ಭಾನಗಡಿಗಳ ಮಧ್ಯೆ ಮಸ್ತ್ ನಾಚ್‌ ಗಾನಾಗಳಿಗೆ ಬರವಿಲ್ಲ. ಎಲ್ಲೆಲ್ಲೂ ರಂಗುರಂಗಿನ ಹುಡುಗಿಯರು, ಮೋಜುಮಸ್ತಿಗೆ ಇಡೀ ಊರು ಸಿದ್ಧಗೊಳ್ಳುತ್ತದೆ.

ಆಹಾ.... ಮೇಡಂ ಸ್ಟೈಲ್ ನೋಡಿ :

SD-SEPT-3

ಅನಾದಿ ಕಾಲದಿಂದಲೂ ಈಜಿಪ್ಟ್ ನ ಕಂದಾಚಾರಿಗಳು ಹಾಗೂ ಆಧುನಿಕರ ಮಧ್ಯೆ ಜಗಳ ತಪ್ಪಿದ್ದಲ್ಲ. ಅದು ತಾರಕಕ್ಕೇರಿದಾಗ ರಕ್ತಪಾತಗಳೂ ನಡೆದಿವೆ. ಹೆಂಗಸರು ಎರಡೂ ಪಕ್ಷಗಳಲ್ಲಿರುತ್ತಾರೆ. ಮುಸ್ಲಿಂ ಬ್ರದರ್‌ ಹುಡ್ ಸಮರ್ಥಕರ ಹೀಗೊಂದು ಝಲಕ್‌ ನೋಡಿ.

ಮುಗ್ಧರೆಂದು ಮೋಸಹೋದೀರಿ! :

SD-SEPT-2

ಅಪರಾಧಿಗಳನ್ನು ಕೇವಲ ಮುಖ ಲಕ್ಷಣಗಳಿಂದ ಗುರುತಿಸಲಾಗದು, ಬಿಡಿ. ಇಲ್ಲಿ ನೋಡಿ, ಅಪ್ಪಟ ಮುಗ್ಧೆಯಂತೆ ಕಂಡುಬರುವ ಸೌಮ್ಯ ಮುಖದ ಮಿಶೆಲಾ ಮ್ಯಾಕ್ಕುಲಂ ಮತ್ತು ಮೆಲೀಸಾ ರೀಡ್‌ ಎಂಬ ಈ ತರುಣಿಯರು, 20 ವರ್ಷದವರೇ ಇರಬಹುದು, ಪೆರೂನಲ್ಲಿ ಇವರುಗಳು ಕೊಕೇನ್‌ ನ ಭಾರಿ ಸ್ಮಗ್ಲಿಂಗ್‌ ನಲ್ಲಿ ಶಾಮೀಲಾಗಿದ್ದು, ಈಗ ಕಂಬಿ ಎಣಿಸುತ್ತಿದ್ದಾರೆ.

ಪ್ರಾಣಿಗಳಿಲ್ಲದಿದ್ದರೇನು ನಾವಿಲ್ಲವೇ? :

SD-SEPT-1

ಈಗ ವಿಶ್ವದೆಲ್ಲೆಡೆ ಸರ್ಕಸ್‌ ಗಳಲ್ಲಿ ಪ್ರಾಣಿಗಳು ಕಡಿಮೆಯಾಗಿ, ಮನುಷ್ಯರೇ ವೀಕ್ಷಕರಿಗೆ ಮನರಂಜನೆ ಒದಗಿಸುತ್ತಿದ್ದಾರೆ. ಹೆಚ್ಚಿನ ರೋಮಾಂಚನಕ್ಕಾಗಿ ಸದಾ ಗಾಳಿಯಲ್ಲೇ ತೇಲಾಡುವಂಥ ಹಗುರ ದೇಹಿಗಳ ಭಾರಿ ಕಸರತ್ತುಗಳನ್ನು ಇತ್ತೀಚೆಗೆ ಸಿಂಗಾಪುರದಲ್ಲಿ 2 ವಾರಗಳ ಕಾಲ ಬೊಂಬಾಟಾಗಿ ಪ್ರದರ್ಶಿಸಲಾಯಿತು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ