ಗುಲಾಮರನ್ನಾಗಿಸುವ ಧರ್ಮ : ಇತ್ತೀಚೆಗೆ ಇಂಡೋನೇಷ್ಯಾದಲ್ಲಿ `ಮಿಸ್‌ ವರ್ಲ್ಡ್ - 2013' ಸೌಂದರ್ಯ ಸ್ಪರ್ಧೆ ನಡೆದಾಗ, ಅಲ್ಲಿನ ಧರ್ಮಾಂಧ ಕಂದಾಚಾರಿಗಳಿಗೆ ತಮ್ಮ ದನಿ ಎತ್ತರಿಸಲು ಒಂದು ಸುವರ್ಣಾವಕಾಶ ಸಿಕ್ಕಿತು. ಅಲ್ಲಿನ ಸರ್ಕಾರ ಸೋಲೊಪ್ಪಿಕೊಂಡು ಇಡೀ ಸ್ಪರ್ಧೆಯನ್ನು ಬಾಲಿ ದ್ವೀಪಕ್ಕೆ ರವಾನಿಸಿತು. ಮಿಸ್‌ ಇಂಗ್ಲೆಂಡ್‌ ಹಾಗೂ ಮಿಸ್‌ ಯುಎಸ್‌ಕಡೆ ನೋಡಿ, ಇಂಡೋನೇಷ್ಯಾದ ಮಂದಿಗೆ ತಾವು ಇಷ್ಟಾದರೂ ಗ್ಲಾಮರ್‌ ಕಲಿಸಿದೆವಲ್ಲ ಎಂದು ಬೀಗುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಜಕಾರ್ತಾದಲ್ಲಿ ಮುಸ್ಲಿಮಾ ವರ್ಲ್ಡ್ ಕಾಂಪಿಟಿಷನ್‌ ಸಹ ಆಯೋಜಿಸಲಾಗಿತ್ತು. ಆದರಲ್ಲಿ ಬಟ್ಟೆಗಳ ಟೆಂಟ್‌ ಗಳಿಂದ ಮುಸುಕು ಧರಿಸಿದ ಯುವತಿಯರು ಮೂಢನಂಬಿಕೆಗಳ ಸಾಮ್ರಾಜ್ಯದ ನಡುವೆ ಅಂತೂ ತಮ್ಮ ಸೌಂದರ್ಯ ಪ್ರದರ್ಶನವನ್ನು ಮಾಡಿಕೊಂಡರು. ಅತ್ತ ಬಾಲಿ ದ್ವೀಪದಲ್ಲಿ ಸ್ವಾತಂತ್ರ್ಯತುಂಬಿದ್ದರೆ, ಇತ್ತ ಜಕಾರ್ತಾದಲ್ಲಿ ಗುಲಾಮಗಿರಿ ತಾಂಡವವಾಡುತ್ತಿತ್ತು! ಇದೆಂಥ ವಿಡಂಬನೆ?

ಒಂದು ಕೊಂಡರೆ ಮತ್ತೊಂದು ಉಚಿತವಲ್ಲ! :

samchar-darshan-3 (1)

ಮೊಬೈಲ್ ‌ಗಳಲ್ಲಿ ಗೇಮ್ಸ್ ಆಡುವ ಹುಚ್ಚು ದಿನೇದಿನೇ ಹೆಚ್ಚುತ್ತಿದೆ. ಹೀಗಾಗಿ ಈ ಕಂಪನಿಗಳಿಗೆ ಹೊಸ ಹೊಸ ಗೇಮ್ಸ್ ನ ಸಾಫ್ಟ್ ವೇರ್‌ ತಯಾರಿಸುವುದೇ ತಲೆನೋವಾಗಿದೆ. ಇತ್ತೀಚೆಗೆ ಇದರ ಸಲುವಾಗಿಯೇ ಟೋಕಿಯೋದಲ್ಲಿ ಹೊಸ ಸಾಫ್ಟ್ ವೇರ್‌ ಒಂದನ್ನು ಸಾಫ್ಟ್ ಸಾಫ್ಟ್ ಮಾಡೆಲ್ಸ್ ಲಾಂಚ್‌ ಮಾಡಿದರು. ಅಲ್ಲಿಗೆ ಬಂದಿದ್ದ ಗ್ರಾಹಕರಿಗೆ ಸಾಫ್ಟ್ ವೇರ್‌ ಖರೀದಿಸುವ ಅನುಮತಿ ಇತ್ತೇ ಹೊರತು, ಲೇಸ್‌ ವೇರ್‌ ಧರಿಸಿದ ಈ ಲಲನಾಮಣಿಗಳನ್ನಲ್ಲ! ಇಲ್ಲಿ ಒಂದಕ್ಕೆ ಒಂದು ಉಚಿತ ಆಗಿರಲಿಲ್ಲ.

ಆಹಾ...... ಇಂಥದ್ದು ನಮಗೂ ಸಿಗಬಾರದೇ?! :

samchar-darshan-5 (1)

ಆಹಾ..... ಇದೆಂಥ ಹೊಳಪು, ಎಂಥ ಅದ್ಭುತ ಕಟ್‌, ಕ್ಲಾರಿಟಿ, ಕಲರ್‌! ಇದನ್ನು ಮುಟ್ಟಿ ಮುದ್ದಾಡೋಣವೆಂದು ಯಾರಿಗನಿಸದು? ಈ ವಜ್ರ ಸಾಧಾರಣದ್ದಲ್ಲಿಂದು ನೋಡಿದರೇನೇ ತಿಳಿಯುತ್ತದೆ. 118.28 ಕ್ಯಾರೆಟ್‌ನ ಈ ಶ್ವೇತ ವಜ್ರಾಭರಣದ ಬೆಲೆ ಎಷ್ಟೆಂದಿರಾ? ಕೇವಲ 35 ಕೋಟಿ ಡಾಲರ್‌! ಕ್ಷಮಿಸಿ, ವಜ್ರಕ್ಕಿಂತಲೂ ಅದನ್ನು ಹಿಡಿದ ಮಾಡೆಲ್ ಹೆಚ್ಚು ಮಿಂಚುತ್ತಿದ್ದಾಳೆ ಅಂದಿರಾ? ಸುಮ್ನೆ ಡೈಮಂಡ್‌ ನೋಡಿ ಸ್ವಾಮಿ.

ಕರಿ ಕಾಗೆಗಳ ಮಧ್ಯೆ ಒಂದು ಬಣ್ಣದ ಮೈನಾ :

samchar-darshan-2 (1)

ಇತ್ತೀಚೆಗೆ ಜರುಗಿದ ಇಂಗ್ಲೆಂಡ್‌ ನ ಲೇಬರ್‌ ಪಾರ್ಟಿ ಮೀಟಿಂಗ್‌ ನ ಈ ದೃಶ್ಯ ನೋಡಿ. ಇಲ್ಲಿನ `ಪವರ್‌ ಫೋಟೋಗ್ರಾಫ್ಸ್'ನಲ್ಲಿ ಪಾಪ, ಗಂಡಸರೆಲ್ಲ ಕರಿಕೋಟು ಧರಿಸಿ ಕಾಗೆಗಳಂತೆ ಕುಳಿತಿದ್ದರೆ, ಅವರ ಮಧ್ಯೆ ಹೆಂಗಸರು ಬಣ್ಣ ಬಣ್ಣದ ದಿರಿಸಿನಲ್ಲಿ ಲಕಲಕ ಹೊಳೆಯುತ್ತಿದ್ದಾರೆ. ಪುರುಷ ಶೋಷಣೆಗೆ ಮಿತಿಯೇ ಇಲ್ಲವೇ?

ಗ್ಲಾಮರಸ್ಫ್ಯಾಷನ್ಶೋ :

samchar-darshan-7 (1)

ತಪ್ಪು ಗ್ರಹಿಸದಿರಿ, ಈಕೆ ಕೈಗೆ ಸಿಕ್ಕಿದ ಟವೆಲ್ ನ್ನು ಸೊಂಟಕ್ಕೆ ಸುತ್ತಿಕೊಂಡು ಫ್ಯಾಷನ್‌ ಶೋನಲ್ಲಿ ಮಾಲ್ ಫಂಕ್ಷನ್‌ ನಡೆಸಲೆಂದೇ ಬಂದಿದ್ದಾಳೆ ಎಂದುಕೊಳ್ಳದಿರಿ. ಇತ್ತೀಚೆಗೆ ಪ್ಯಾರಿಸ್‌ ನಲ್ಲಿ ನಡೆದ ಈ ಶೋನಲ್ಲಿ ಇದೊಂದು ರೆಡಿ ಟು ವೇರ್‌ ಕಲೆಕ್ಷನ್ನಿನ ರಾಂಪ್ ಶೋ ಸ್ಯಾಂಪಲ್ ಮಾತ್ರ. ಕನಿಷ್ಠ ಉಡುಗೆಯ ಈ ಶೋನಲ್ಲಿ ವೇರ್‌ಟೇರ್‌ ನ ಪ್ರಶ್ನೆಯೇ ಇಲ್ಲ. ಇದನ್ನು ಧರಿಸಿದವರಿಗೆ ಮುಂದೆ ವಯಸ್ಸಾದೀತೇ ಹೊರತು ಬಟ್ಟೆ ಎಂದೂ ಹರಿಯದಂತೆ!

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ